DK Ravi Mother: ಡಿ.ಕೆ ರವಿ ತಾಯಿ ಗೌರಮ್ಮ 80ಲಕ್ಷ ತೆಗೆದುಕೊಂಡಿರೋದು ನಿಜಾನಾ? 80ಲಕ್ಷದ ಗುಟ್ಟು ಬಿಚ್ಚಿಟ್ಟು ಗೌರಮ್ಮ ಅವ್ರು ಹೇಳಿದ್ದೇನು ಗೊತ್ತಾ?

DK Ravi Mother: ಸ್ನೇಹಿತರೆ ದಿವಂಗತ ಡಿ. ಕೆ ರವಿ ಅವ್ರ ತಾಯಿ ಗೌರಮ್ಮ 80ಲಕ್ಷ ತೆಗೆದುಕೊಂಡು ಚುನಾವಣಾ ಸಂದರ್ಭದಲ್ಲಿ ಸೊಸೆ ಕುಸುಮ ವಿರುದ್ಧವಾಗಿ ಅಪಪ್ರಚಾರ ಮಾಡಲು 80ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು ಎನ್ನಲಾದ ವಿಡಿಯೋ ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೊಂದೆರಡು ದಿನ ಇದೆ ಅನ್ನೋವಾಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು ಎಲ್ಲ ಕಡೆ ಬಹಳ ಬೇಗ ಅಂದ್ರೆ ಅತಿವೇಗವಾಗಿ ವೈರಲ್ ಆಗಿತ್ತು. ಆ ವಿಡಿಯೋ ಮಾಡಿದವರು ಯಾರು, ವೈರಲ್ ಯಾಕ್ ಮಾಡಿದ್ರು, ವಿಡಿಯೋ ಮಾಡಿದ್ದಾದ್ರೂ ಯಾವಾಗ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಗೌರಮ್ಮ ಅವ್ರನ್ನ ದಾಳವಾಗಿ ಬಲವಂತದಿಂದ ಬಳಸಿಕೊಂಡ್ರಾ? ಅಥವಾ ನಿಜಕ್ಕೂ ಗೌರಮ್ಮ ಅವ್ರು 80ಲಕ್ಷ ತೆಗೆದುಕೊಂಡ್ರಾ? ಹೀಗೆ ಸಾಕಷ್ಟು ಸಾಲು ಸಾಲು ಪ್ರಶ್ನೆಗಳು ಡಿ. ಕೆ ರವಿ ಅವ್ರ ಆಪ್ತರು ಅಭಿಮಾನಿ ವಲಯದಲ್ಲಿ ಕೇಳಿಬಂದಂತಹ ಪ್ರಶ್ನೆಗಳು. ಹೌದು ಇದೆ ಪ್ರಶ್ನೆಯನ್ನ ಹೊತ್ತು ಖಾಸಗಿ ಚಾನಲ್ ನ ಸಂದರ್ಶಕರೊಬ್ಬರೂ ಗೌರಮ್ಮ ಅವ್ರನ್ನ ಭೇಟಿ ಮಾಡಿದಾಗ ಕೆಲವೊಂದಷ್ಟು ಸತ್ಯಾಸತ್ಯತೆ ಹೊರಬಂದಿದೆ. ಹಾಗಾದ್ರೆ ತಾವು 80ಲಕ್ಷ ತೆಗೆದುಕೊಂಡಿದ್ದಾರೆ ಅನ್ನೋ ವೈರಲ್ ಆದ ಸುದ್ದಿ ಕುರಿತು ಗೌರಮ್ಮ ಹೇಳಿದ್ದೇನು? ಏನಿದು 80ಲಕ್ಷದ ಡೀಲ್ ಎಲ್ಲವನ್ನ ಕಂಪ್ಲೀಟ್ ಆಗಿ ತಿಳಿಸಿಕೊಡ್ತೀನಿ ಬನ್ನಿ.

WhatsApp Group Join Now
Telegram Group Join Now

ಸ್ನೇಹಿತರೆ ಆತ್ಮಹತ್ಯೆಗೆ ಶರಣಾದ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಈಗ ಚುನಾವನೆಯನ್ನ ಕೂಡ ಎದುರಿಸಿದ್ದಾರೆ. ಆದರೆ ವಿಧಾನಸಭಾ ಚುನಾವಣೆಗೂ ಮೊದಲೇ ಸ್ಪೋಟಕ ಆರೋಪಗಳನ್ನು ಹೊತ್ತ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹೌದು ಬಿಜೆಪಿ ಪರ ಪ್ರಚಾರ ಮಾಡಲು ಮತ್ತು ಕುಸುಮಾ ವಿರುದ್ಧ ಮಾತನಾಡಲು ಇದೆ ಡಿ.ಕೆ.ರವಿ ಅವರ ತಾಯಿ ಗೌರಮ್ಮ 80 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ವಿಡಿಯೊ ಎಲ್ಲೆಡೆ ವೈರಲ್ ಆಗ್ತಿದೆ. ಹೌದು ಬಿಜೆಪಿ ಪರ ಪ್ರಚಾರ ಮಾಡುವಂತೆ ಹಾಗೂ ಕುಸುಮಾ ವಿರುದ್ಧ ಮಾತನಾಡುವಂತೆ ಇಬ್ಬರು ವ್ಯಕ್ತಿಗಳು ಕೇಳಿಕೊಳ್ಳುತ್ತಿರುವಾಗ ಡಿ.ಕೆ.ರವಿ ತಾಯಿ ಗೌರಮ್ಮ ಈ ರೀತಿ ಮಾತನಾಡಿದ್ದಾರೆಂದು ಆರೋಪಿಸಲಾಗಿದೆ. ಈ ವಿಡಿಯೊವನ್ನು ಸೆರೆ ಹಿಡಿದಿರುವವರು ಯಾರೆಂದು ಪತ್ತೆಯಾಗಿಲ್ಲ. ಇಬ್ಬರು ಪುರುಷರು ಈ ವಿಡಿಯೊದಲ್ಲಿ ಮಾತನಾಡಿದ್ದಾರೆ. ಇದು ಹಳೆಯ ವಿಡಿಯೊವೆಂದೂ ಹೇಳಲಾಗುತ್ತಿದೆ. ಆದರೆ ಚುನಾವಣೆ ಹೊತ್ತಿನಲ್ಲಿ ವೈರಲ್ ಆಗುತ್ತಿದ್ದು, ಇದೆ ಸಂದರ್ಭದಲ್ಲಿ ಈ ವಿಡಿಯೋ ಯಾಕೆ ವೈರಲ್ ಆಯ್ತು, ವೈರಲ್ ಮಾಡಿದವರು ಯಾರು? ಆ ವಿಡಿಯೋದಲ್ಲಿ ಏನಿದೆ ಅಂತ ಎಲ್ಲರಿಗೂ ಸಾಕಷ್ಟು ಕುತೂಹಲವಿದೆ.

ಸೊಸೆ ವಿರುದ್ಧವೇ ಅಪಪ್ರಚಾರ ಮಾಡೋಕೆ ತಯಾರಾಗಿದ್ರಾ ಗೌರಮ್ಮ

ಗೌರಮ್ಮ ಅವ್ರ ಮನೆಗೆ ಯಾರೋ ಇಬ್ಬರು ಪುರುಷರು ಬಂದಿರುವಂತೆ ಕಾಣುತ್ತೆ, ಇದಕ್ಕೂ ಮೊದ್ಲೇ ಗೌರಮ್ಮ ಅವ್ರ ಜೊತೆ ಮಾತನಾಡಿರಬೇಕು ಅನ್ಸುತ್ತೆ ಗೊತ್ತಿರುವವರ ಜೊತೆ ಮಾತನಾಡುವ ರೀತಿನೇ ಗೌರಮ್ಮ ಮಾತು ಆರಂಭಿಸುತ್ತಾರೆ. ಏನ್ ಮಾಡೋಕೆ ಮಾಡಿದ್ದೀರಪ್ಪ? ಅಂತ ಕೇಳಿದಾಗ, ಅಲ್ಲಿದ್ದವರಲ್ಲಿ ಒಬ್ಬ ಮಾತಾಡ್ತಾನೆ,ಕುಸುಮಾ ವಿರುದ್ಧ ಕ್ಯಾನ್ವಾಸ್ ಮಾಡುತ್ತಿದ್ದೇವೆ. ನೀವು ಬಂದು ನಮ್ಮ ಪಕ್ಷಕ್ಕೆ ವೋಟ್ ಮಾಡುವಂತೆ ಸೆಂಟಿಮೆಂಟ್‌ನಲ್ಲಿ ಮಾತನಾಡಬೇಕು. ನಮ್ಮದೇ ಚಾನೆಲ್ ಬರುತ್ತದೆ. ಟಿವಿಯವರು ಹೇಳಿಕೊಡುತ್ತಾರೆ. ಅವರು ಹೇಳಿದಂತೆ ಅತ್ತು, ನೋವುಗಳನ್ನು ಹೇಳಿಕೊಂಡು, ಕುಸುಮಾ ಬಗ್ಗೆ ಕೆಟ್ಟದ್ದಾಗಿ ಮಾತನಾಡಬೇಕು. ನೀವು ಮಾತನಾಡಿದರೆ ಜನ ಕನ್ವಿನ್ಸ್‌ ಆಗ್ತಾರೆ ಅಂದಾಗ ಗೌರಮ್ಮ ನೀವು ಹೇಳಿದಂತೆ ಮಾಡಿದಾಗ ತಾನೇ, ನಾವು ಮಾಡೋದು ಅಂತಾರೆ. ಅದಾದ ನಂತರ ಆ ವ್ಯಕ್ತಿ ಹೇಳ್ತಾನೆ ನೀವು ಬಾಯಿ ಬಿಟ್ಟು ಹೇಳಿ. ನೀವು ಹೇಳಿದಂತೆ ಮಾಡೋಣ.ಆಗ ಗೌರಮ್ಮ ಅವತ್ತೇ ಹೇಳಿದೆವಲ್ಲ ಅಂದಾಗ ಈಗ ಸಡನ್ನಾಗಿ ರಿಜಿಸ್ಟ್ರೇಷನ್ ಮಾಡಿಸೋದು ಕಷ್ಟವಾಗುತ್ತದೆ ಅಂತ ಆ ವ್ಯಕ್ತಿ ಹೇಳ್ತಾನೆ ,ಎಲ್ಲಾ ಒಂದೇ ದಿನಕ್ಕೆ ಆಗುತ್ತದೆ ಅಂತ ಗೌರಮ್ಮ ಹೇಳ್ತಾರೆ.

ಈಗ ನಾವು ಒಂದು ಮನೆ ನೋಡಬೇಕು.ಅಣ್ಣನವರ ಹತ್ತಿರ ಒಂದು ಸಲ ಕೇಳಿಬಿಡೋಣ, ಏನ್ ಹೇಳ್ತಾರೆ ಅಂತ ಆ ವ್ಯಕ್ತಿ ಹೇಳ್ದಾಗ ಗೌರಮ್ಮ ಮೂರು ದಿನದಿಂದ ನೀವು ಮಾಡಿದ್ದು ಅದೇ ಕೆಲಸ ತಾನೇ ಅಂತಾರೆ. ಆಗ ಮತ್ತೊಬ್ಬ ವ್ಯಕ್ತಿ ಅಷ್ಟರಲ್ಲಿ ಮಾಡ್ತೀವಿ, ಇಲ್ಲ ಅಂತ ಹೇಳೋಲ್ಲ. ಆಗಲಿಲ್ಲ ಅಂದ್ರೆ ದುಡ್ಡು ಕೊಟ್ಟಿರುತ್ತೇವಲ್ಲ. ರಿಟರ್ನ್ ಮಾಡಿ, ಆಮೇಲೆ ರಿಜಿಸ್ಟರ್‌ ಮಾಡಿಸಿಕೊಳ್ಳಿ ಅಷ್ಟೇ. ಅಷ್ಟರೊಳಗೆ ಆದ್ರೆ ಮಾಡಿಸೋಣ, ತೊಂದರೆ ಇಲ್ಲ ಅಂದಾಗ ಗೌರಮ್ಮ ಹದಿನಾರನೇ ತಾರೀಖಿನೊಳಗೆ ಆದ್ರೆ ಮಾಡಿ, ಆಗಲಿಲ್ಲ ಅಂದ್ರೆ ಮನೆಗೆ ಆಗುವಷ್ಟು ಅಮೌಂಟ್‌ ತಲುಪಿಸಿ ಅಂತ ಇಲ್ಲಿಂದ ಬೇಡಿಕೆ ಶುರು ಮಾಡ್ತಾರೆ. ಆಗ ಅಮೌಂಟ್ ಅಂದ್ರೆ ಎಷ್ಟು ಕೊಡಬೇಕು ಅಂತ ನೀವು ಹೇಳಬೇಕಲ್ಲವಾ? ಅಂದಾಗ
ನಿಮಗೆ ಹೇಳಬೇಕೇ ನಾವು? ನಿಮಗೆ ಗೊತ್ತಾಲ್ಲವಾ? ಅಂತ ಗೌರಮ್ಮ ಕೇಳ್ತಾರೆ,ಆಗ ಆ ವ್ಯಕ್ತಿ ನಾವು ಅಮೌಂಟ್ ತಲುಪಿಸಬೇಕಲ್ಲ, ಅದಕ್ಕೆ. ಎಷ್ಟು ಲಕ್ಷ ಅಂತ ಹೇಳಿಬಿಟ್ರೆ ಅಂತ ಮಾತು ನಿಲ್ಲಿಸುತ್ತಾನೆ ಆ ವ್ಯಕ್ತಿ,ಆಗ ಗೌರಮ್ಮ ಮನೆಗೆ ನಲವತ್ತು, ಐವತ್ತು ಆಗುತ್ತದೆ. ಸೈಟ್‌ಗೆ ನಲವತ್ತು ಆಗುತ್ತದೆ. ಕಟ್ಟೋಕೆ ನಲವತ್ತು, ಐವತ್ತು ಬೇಕಾಗುತ್ತದೆ. ನಾವು ಹೆಂಗೆ ಮಾಡ್ತೀವಿ, ಹಂಗೆಲ್ಲ ಇರುತ್ತದೆ ಅಂದಾಗ ಗೊತ್ತಗದೆ ಏನಿಲ್ಲ ನಾಮಿನೇಷನ್ ಆಗುವುದಕ್ಕಿಂತ ಮುಂಚೆ ನಾವು ನಲವತ್ತು ಲಕ್ಷ ನೀಡಬೇಕು ಅಂತ ಆ ವ್ಯಕ್ತಿ ಹೇಳ್ದಗ ಏನ್ ಮಾಡಬೇಕು ಮಾಡಿ. ನೀವು ಹೇಳಿದ ದಿನ ರೆಡಿಯಾಗಿ ನಾನು ಬರ್ತಿನಿ ಅಂತ ಗೌರಮ್ಮ ಹೇಳ್ತಾರೆ.

80 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಗೌರಮ್ಮ

ಆಗ ಆ ವ್ಯಕ್ತಿ ನೀವು ಬಿಜೆಪಿ ಪಕ್ಷಕ್ಕೆ ಮಾತ್ರ ಮಾಡಬೇಕು, ಪಕ್ಷೇತರರಿಗೆ, ಇನ್ಯಾರಿಗೂ ಮಾಡುವಂತಿಲ್ಲ. ನಿಮ್ಮ ಪಾಸ್‌ಬುಕ್ ಕೊಡಿ. ನಾವೀಗ ಟೋಕನ್ ಅಡ್ವನ್ಸ್‌ ಅಂತ 25,000 ಕೊಟ್ಟಿರುತ್ತೇವೆ. ನೀವು ಮತ್ತೆ ಇನ್ಯಾರಿಗೂ ಒಪ್ಪಿಕೊಳ್ಳಬಾರದು ಅಷ್ಟೆ ಅಂತಾರೆ ಆಗ ಗೌರಮ್ಮ ಜಾಸ್ತಿ ಕೊಡಿ ಅಂತಾನೂ ನಾನು ಕೇಳಲ್ಲ. ಒಂದು ಮನೆಗೆ, ಒಂದು ಸೈಟಿಗೆ ಏನಾಗುತ್ತದೆ, ಅಷ್ಟು ಕೊಟ್ಟುಬಿಡಿ ಅಂತಾರೆ, ಆಗ ಆ ವ್ಯಕ್ತಿ ನೀವು ಆದಷ್ಟು ಕುಸುಮಾ ಅವರ ಇಮೇಜ್ ಡ್ಯಾಮೇಜ್ ಆಗುವಂತೆ ಸ್ಟೇಟ್‌ಮೆಂಟ್ ಕೊಡಬೇಕು. ಆಮೇಲೆ ನಾವು ಕ್ಲಿಯರ್ ಮಾಡುತ್ತೇವೆ ಅಂದಾಗ ಗೌರಮ್ಮ
ಅದನ್ನೇ ನಾನು ಮಾಡೋದು. ನೀವು ನಮಗೆ ಮಾಡಿ, ನಾನು ನಿಮಗೆ ಮಾಡ್ತೀನಿ ಅಂತಾರೆ. ಆಗ ಆ ವ್ಯಕ್ತಿ ನೀವು ಈಗ ಏನ್ ಹೇಳಿದ್ದೀರೋ ಅದನ್ನು ಮಾಡೋಕೆ ನಾವು ಒಪ್ಪಿಕೊಂಡಿದ್ದೇವೆ. ಕ್ಲಿಯರ್‌ ಮಾಡಿ ಕೊಡುತ್ತೇವೆ. ನಿಮ್ಮ ಪಾಸ್‌ಬುಕ್‌ಗೆ ಹಣ ಟ್ರಾನ್ಸ್‌ಫರ್‌ ಮಾಡ್ತೀವಿ. ನಾವು ಹೇಳೋ ಥರ ನೀವು ಅವರ ವಿರುದ್ಧವಾಗಿ ಸ್ಟೇಟ್‌ಮೆಂಟ್ ಕೊಡಬೇಕು ಅಂದಾಗ ನೋಡಪ್ಪ 40 ಮತ್ತು 40 ಕೊಡಿ. ಅಂದ್ರೆ 40 ಲಕ್ಷ ಸೈಟಿಗೆ ಕಟ್ಟೋಕೆ 40ಲಕ್ಷ ಬೇಕು ಅಂದಾಗ 80 ಪೂರ್ತಿ ಈಗಲೇ ಹಾಕಬೇಕಾ? 40 ಈಗ ಹಾಕಿ, ಇನ್ನುಳಿದ 40 ಆಮೇಲೆ ಹಾಕಬಹುದಾ? ಅಂದೇ ಎಲೆಕ್ಷನ್ ಆದಮೇಲೆ ಹಾಕ್ಬೋದಾ? ಅಂದಾಗ ಗೌರಮ್ಮ ಹೇಳ್ತಾರೆ ಇದು ಎಲೆಕ್ಷನ್ ಆದಮೇಲೆ ಹಾಕ್ತೀನಿ ಅನ್ನೋದು ಆಗೋ ಕೆಲ್ಸನಾ ಅಂತ ಕೇಳ್ತಾರೆ.

ಆಗ ಆ ವ್ಯಕ್ತಿ ಸರಿಯಮ್ಮ ಆಯ್ತು. ಇನ್ನೆರಡು ದಿನಗಳಲ್ಲಿ ನಿಮ್ಮ ಅಕೌಂಟಿಗೆ ಹಣ ಜಮಾ ಮಾಡಿಸಿ, ಆಮೇಲೆ ಟಿವಿಯವರನ್ನು ಕರೆದುಕೊಂಡು ಬಂದು ನಿಮ್ಮಿಂದ ಮಾತನಾಡಿಸುತ್ತೇವೆ. ಬೇರೆ ಚಾನೆಲ್‌ನವರು ಇಂಟರ್‌ವ್ಯೂಗೆ ಕಳಿಸಿದಾಗ ನಾವೇ ಕಾರು ಕಳಿಸುತ್ತೇವೆ. ನಾವು ಏನು ಬರೆದುಕೊಡುತ್ತೇವೆಯೋ ಅದನ್ನು ನೀವು ಟಿವಿಯವರಿಗೆ ಹೇಳಿ ಅಂದಾಗ ಅದನ್ನು ನೀವು ಏನು ಹೇಳಿಕೊಡುವುದು ಬೇಕಿಲ್ಲ ಅಂತ ನಾನು ಹೇಳುತ್ತಿದ್ದೇನೆಲ್ಲವೇ? ಅಮ್ಮ ಹೆಂಗ್ ಮಾತನಾಡ್ತಾರೆ ಅನ್ನೋದನ್ನು ಆವಾಗಾದರೂ ನೋಡಿಕೊಳ್ಳಿ. ಸರಿಯೇ? ಎಲ್ಲವನ್ನೂ ನನ್ನ ಅಕೌಂಟಿಗೆ ಹಾಕಬೇಡಿ. ಇನ್ನೊಬ್ಬರ ಅಕೌಂಟ್ ನಂಬರ್‌ ಕೂಡ ಕೊಡುತ್ತೇನೆ. ಇಬ್ಬರ ಅಕೌಂಟಿಗೂ ಹಾಕ್ಬಿಡಿ ಅಂತ ಗೌರಮ್ಮ ಹೇಳ್ತಾರೆ. ಆಗ ಆ ವ್ಯಕ್ತಿ ಸರಿಯಮ್ಮ. ಪಾಸ್‌ಬುಕ್ ಕೊಡಿ, ಫೋಟೋ ತೆಗೆದುಕೊಳ್ತೀನಿ. ಬ್ಯಾಂಕ್‌ನಿಂದ ಆರ್‌ಟಿಜಿಎಸ್‌ ಮಾಡಿಬಿಟ್ಟು ನಿಮಗೆ ಫೋನ್ ಮಾಡ್ತೀವಿ ಅಂದಾಗ ಗೌರಮ್ಮ ಹೇಳ್ತಾರೆ ಇದ್ದರೆ 40* 50 ಸೈಟ್‌ನೇ ಕೊಟ್ಟುಬಿಡಿ. ಮಿಕ್ಕಿದ್ದು ಅಕೌಂಟಿಗೆ ಹಾಕಿಬಿಡಿ ಅಂತ. ಆಗ ಅವ್ಯಕ್ತಿ ನಾವು ಅಮೌಂಟ್ ಕೊಟ್ಟಾದ ಮೇಲೆ ನಾವು ಕರೆದಲ್ಲಿಗೆ ನೀವು ಕ್ಯಾನ್ವಸ್‌ಗೆ ಬರಬೇಕಮ್ಮ. ಹೊರಗಡೆ ಏನೂ ಗೊತ್ತಾಗಬಾರದಮ್ಮ. ದುಡ್ಡು ಇಸ್ಕೊಂಡು ಸೊಸೆ ವಿರುದ್ಧ ಹೀಗೆ ಮಾತನಾಡುತ್ತಿದ್ದಾರೆಂದು ಅಂತ ಆ ವ್ಯಕ್ತಿ ಹೇಳ್ದಾಗ, ಸೌಲಭ್ಯ ಮಾಡಿ, ಇವತ್ತೇ ಕರೆದುಕೊಂಡು ಹೋಗಿ, ನನಗೇನು? ಹೊರಗಡೆ ಏನೂ ಗೊತ್ತಾಗಲ್ಲ ಅಂತ ಗೌರಮ್ಮ ಮಾತನಾಡಿರೋ ವಿಡಿಯೋ ಇದೀಗ ಸಖತ್ ವೈರಲ್ ಆಗ್ತಿದೆ.

80ಲಕ್ಷದ ಗುಟ್ಟು ಬಿಚ್ಚಿಟ್ಟು ಗೌರಮ್ಮ ಅವ್ರು ಹೇಳಿದ್ದೇನು ಗೊತ್ತಾ?

ಇನ್ನು ಇಷ್ಟೆಲ್ಲ ಮಾತಾಡಿರೋ ಸುದ್ದಿ ವೈರಲ್ ಆಗ್ತಿದ್ದಂತೆ ಖಾಸಗಿ ವಾಹಿನಿಯ ಸಂದರ್ಶಕರೊಬ್ಬರೂ ಗೌರಮ್ಮ ಅವ್ರನ್ನ ಭೇಟಿ ಮಾಡಿ ಈ ವಿಚಾರದ ಬಗ್ಗೆ ಗೌರಮ್ಮ ಅವ್ರನ್ನ ಮಾತನಾಡಿಸಿದಾಗ ಗೌರಮ್ಮ ವಿಡಿಯೋ ನಿಜ ಅಂತಾನೆ ಹೇಳ್ತಾರೆ, ಆದರೆ 80ಲಕ್ಷ ತಗೊಂಡಿದೀನಿ ಅನ್ನೋದು ಸುಳ್ಳು, ಸಂಪೂರ್ಣ ವಿಚಾರವನ್ನೇ ಉಲ್ಟಾ ಮಾಡಿ ಹೇಳ್ತಿದ್ದಾರೆ ಅಂತ ಇದೀಗ ಗೌರಮ್ಮ ಅಸಲಿಯತ್ತನ್ನ ಬಿಚ್ಚಿಟ್ಟಿದ್ದಾರೆ. ಹೌದು ರವಿ ಅವ್ರು ತೀರಿಹೋದ ನಂತರ ಅವ್ರಿಗೆ ಬರಬೇಕಿದ್ದ 40ಲಕ್ಷ ಹಣದ ಕುರಿತಂತೆ ಅತ್ತೆ ಗೌರಮ್ಮ ಹಾಗೂ ಸೊಸೆ ಕುಸುಮ ಮಧ್ಯೆ ಒಂದು ಸಣ್ಣ ಮನಸ್ತಾಪ ಏರ್ಪತ್ತಿರುತ್ತೆ. ಆಗ ಗೌರಮ್ಮ ಕೂಡ ಸಾಕಷ್ಟು ಜನರ ಬಳಿ ಹೋಗಿ ತನ್ನ ಮಗನ ದುಡ್ಡ ತನಗೆ ಕೊಡಿಸುವಂತೆ ಕೇಳಿಕೊಂಡಿರ್ತಾರೆ ಕಾರಣ ಇಷ್ಟೇ ಡಿಕೆ ರವಿ ಅವ್ರ ಸಮಾಧಿಯನ್ನ ಚೆನ್ನಾಗಿ ಕಟ್ಟಬೇಕು ಅನ್ನೋದಕ್ಕೆ, ಇದಕ್ಕೋಸ್ಕರ ಯಾರು ಎಷ್ಟು ದುಡ್ಡು ಕೊಟ್ರು ಸಹ ಕೈ ಹೊಡ್ದಿ ತೆಗೆದುಕೊಂಡಿರ್ತಾರೆ.

ಅದರಂತೆ ಆ ವಿಡಿಯೋ ದಲ್ಲಿರೋ ಇಬ್ಬರು ವ್ಯಕ್ತಿಗಳು ಮನೆಗೋಗಿ ಕುಸುಮ ವಿರುದ್ಧ ಅಪಪ್ರಚಾರ ಮಾಡಬೇಕು ಅಂದಾಗ ಆ ವಿಡಿಯೋದಲ್ಲಿ ಮಾತನಾಡುವಾಗ ಗೌರಮ್ಮ ಒಪ್ಪಿಕೊಳ್ಳುತ್ತಾರೆ ಕಾರಣ ಇಷ್ಟೇ ಗೌರಮ್ಮ ಅವ್ರಿಗೆ ಸೊಸೆ ಮೇಲೆ ಸ್ವಲ್ಪ ಕೋಪ ಇರುತ್ತೆ, ಆದರೆ ನಂತರ ಗೌರಮ್ಮ ಎಲ್ಲಿಯೂ ಕೂಡ ಸೊಸೆ ವಿರುದ್ಧವಾಗಿ ಮಾತನಾಡಿರೋದಿಲ್ಲ. ಆಮೇಲೆ 25ಸಾವಿರ ಬಿಟ್ರೆ ಒಂದು ರೂಪಾಯಿಯನ್ನು ನಾನು ತೆಗೆದುಕೊಂಡಿಲ್ಲ 80ಲಕ್ಷ ಎಲ್ಲ ಸುಳ್ಳು. ಸೊಸೆ ವಿರುದ್ಧ ಮಾತಾಡಿ ಅಂದ್ರು ನಾನು ಆಗ ಆಯ್ತು ಅಂದಿದ್ದೆ, ಆಮೇಲೆ ಫೋನ್ ಮಾಡಿ ಕ್ಯಾನ್ವಸ್ ಗೆ ಬನ್ನಿ ಅಂತ ಹಿಂಸೆ ಕೊಡೋಕೆ ಶುರು ಮಾಡಿಕೊಂಡ್ರು ಆದ್ರೆ ನಾನು ಯಾವತ್ತೂ ಅವಳ ವಿರುದ್ಧ ಹೋಗಿಲ್ಲ ಈಗ್ಲೂ ಅವ್ಳು ಗೆಲ್ಲಿ ಅಂತಾನೆ ಆಸೆ ಇದೆ. ಅವ್ಳು ಚೆನ್ನಾಗಿರಬೇಕು ಅಂತ ಕಣ್ಣೀರು ಹಾಕಿದ್ದಾರೆ ಗೌರಮ್ಮ. ಅಲ್ದೇ ಪದೇ ಪದೇ ತಾವು 80ಲಕ್ಷ ಪಡೆದಿದ್ದೀವಿ ಅಂತ ಹೇಳಿ ನನಗೆ ನೋವು ಕೊಡಬೇಡಿರಪ್ಪಾ ನಾನು ದುಡ್ಡು ತೆಗೆದುಕೊಂಡಿಲ್ಲ ಅಂತ ಕೈ ಮುಗಿದು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ OTT ರಿಲೀಸ್ ಯಾವಾಗ? ಸಿನಿಮಾದ ott ರೈಟ್ಸ್ ತೆಗೆದುಕೊಂಡಿರೋದ್ಯಾರು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram