DK Shivakumar Declares Assets: ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕ, ರಾಜ್ಯದ ಯುವ ಶಕ್ತಿ ಸಂಘನೆಗಳು ರಾಜ್ಯದಲ್ಲಿ ಸ್ಥಾಪನೆಯಾಗುವಲ್ಲಿ ಮಹತ್ವದ ಪಾತ್ರವಹಿಸುವುದರ ಜೊತೆಗೆ ನ್ಯಾಷನಲ್ ಎಜುಕೇಶನ್ ಫೌಂಡೇಷನ್‌ನ ಸ್ಥಾಪಕ ಅಧ್ಯಕ್ಷರಾಗಿ, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳನ್ನು ನಡೆಸುತ್ತಾ, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಮೂಲಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಹಳ್ಳಿಗಳಲ್ಲಿ ಮನೆಮಾತಾಗಿರುವ ಡಿಕೆ ಶಿವಕುಮಾರ್ ಯುವಕರ ಹಿಂದಿನ ಶಕ್ತಿ. ಆಸ್ತಿ ಮಾಡಿ ಎಷ್ಟು ಸಂಕಷ್ಟಕ್ಕೆ ಗುರಿಯಾದ್ರೋ ಅದೇ ರೀತಿ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಾ ಕನಕಪುರ ವಿಧಾನಸಭಾ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡಿ, ಕನಕಪುರದ ಮನೆ ಮಗ ಅಂತ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ ಕನಕಪುರ ವಿಧಾನ ಸಭಾ ಕ್ಷೇತ್ರಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ನಾಮಪತ್ರವನ್ನ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿಯ ವಿವರವನ್ನ ಸಲ್ಲಿಸಬೇಕು, ಅದರಂತೆ ಡಿಕೆಶಿ ಕೂಡ ತಮ್ಮ ಆಸ್ತಿಯ ವಿವರವನ್ನ ನೀಡಿದ್ದು, ಡಿಕೆಶಿ ಒಟ್ಟು ಆಸ್ತಿಯಾ ಮೌಲ್ಯ ಎಷ್ಟು ಅಂತ ತಿಳಿದ್ರೆ ಖಂಡಿತಾ ಶಾಕ್ ಆಗ್ತೀರಾ! ಹಾಗಾದ್ರೆ ಡಿಕೆ ಶಿವಕುಮಾರ್ ರ 2023ರ ಒಟ್ಟಾರೆ ಆಸ್ತಿ ಮೌಲ್ಯ ಎಷ್ಟು? ಡಿಕೆಶಿ ಕೊಟ್ಟಿರುವ ಆಸ್ತಿಯ ವಿವರವನ್ನ ನೋಡೋಣ ಬನ್ನಿ.
ಇ.ಡಿ. ಹಿಂದೆ ಬಿದ್ದಿದ್ರು ಕರಗಲಿಲ್ವಾ ಡಿಕೆ ಬ್ರದರ್ಸ್ ಇನ್ಕಮ್?
ಹೌದು ಪಕ್ಷ ಸಂಘಟನೆ ಹಾಗೂ ಪವರ್ ಪಾಲಿಟಿಕ್ಸ್‌ನಲ್ಲಿ ತಮ್ಮದೇ ಶೈಲಿಯ ರಾಜಕಾರಣದಿಂದ ರಾಜ್ಯದಲ್ಲಿ ಗುರುತಿಸಿಕೊಂಡವವರು ಡಿಕೆ ಶಿವಕುಮಾರ್. ಆದ್ರೆ ಕಳೆದ ವರ್ಷದ ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದರು. ಇನ್ನು ಇಡಿ ಪ್ರಕರಣ ಹಾಗೂ ಬಂಧನದ ಹಿನ್ನೆಲೆ ಯಲ್ಲಿ ಡಿಕೆಶಿ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ರು ಆದರೆ ಇದೆಲ್ಲದರ ಮಧ್ಯೆಯು ಡಿಕೆಶಿಗೆ ರಾಜಕೀಯವಾಗಿ ಮತ್ತಷ್ಟು ಬೆಳೆಯುತ್ತಲೇ ಹೋದ್ರು. ಹೌದು ಕಾಂಗ್ರೆಸ್ ಪಕ್ಷ ವನ್ನ ನಿಭಾಯಿಸುವ ನಿಟ್ಟಿನಲ್ಲಿ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಯ್ತು. ಈ ಬಗ್ಗೆ ಪಕ್ಷದ ಆತಂರಿಕ ವಿರೋಧದ ನಡುವೆಯೂ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ್ರು
ಇನ್ನು ಡಿಕೆಶಿ ಪಕ್ಷದಲ್ಲಿಯೇ ಸಾಕಷ್ಟು ವಿರೋಧಿ ಗಳನ್ನ ಇಟ್ಟು ಕೊಂಡೆ ರಾಜಕೀಯ ದಲ್ಲಿ ಕನಕಪುರದ ಬಂಡೆ ಅಂತಾನೆ ಫೇಮಸ್ ಆಗಿ ಬಂಡೆಯಷ್ಟೇ ಗಟ್ಟಿಯಾಗಿ ಬೆಳೆಯುತ್ತ ಬಂದವರು. ರಾಜಕೀಯ ವಿರೋಧಿಗಳಿಂದ ಇಡಿ ಕಷ್ಟಡಿಯಲಿದ್ದ ಡಿಕೆಶಿ ನಂತರ ಜೈಲಿ ನಿಂದ ಬೇಲ್ ಮೇಲೆ ಹೊರಬಂದ ಮೇಲು ಕೂಡ ಅದೇ ಹುಮ್ಮಸ್ಸಿನಿಂದ ರಾಜಕೀಯ ದಲ್ಲಿ ಬೆಳೆಯುತ್ತಿದ್ದಾರೆ. ಇದೀಗ ಕರ್ನಾಟಕದಲ್ಲಿ ವಿಧಾನಸಬಾ ಚುನಾವಣೆ ಘೋಷಣೆಯಾದ ಬೆನ್ನಲೇ ಡಿಕೆ ಹವಾ ಮತ್ತಷ್ಟು ಹೆಚ್ಚಾಗಿದೆ. ಕರ್ನಾಟಕ ದಲ್ಲಿ ಪಕ್ಷ ಸಂಘಟನೆ, ಆಂತರಿಕ ವೈಮನಸ್ಸು ಶಮನ ಮಾಡೋದ್ರಲ್ಲಿ ಜೊತೆಗೆ ಕರ್ನಾಟಕ ದಲ್ಲಿ ರಾಜಕೀಯ ವಿರೋಧಿಗಳಿಗೆ ಸೆಡ್ಡು ಹೊಡೆಯಲು ರಣತಂತ್ರವನ್ನ ರೂಪಿಸುತ್ತಿದ್ದಾರೆ. ಅಲ್ಲದೆ ಟಿಕೆಟ್ ಕೈ ತಪ್ಪಿ, ನಿರಾಶೆಯಲ್ಲಿರುವ ಅನ್ಯ ಪಕ್ಷಿಗರನ್ನ ಕಾಂಗ್ರೇಸ್ ಗೆ ಬರಮಾಡಿಕೊಂಡು ಪಕ್ಷವನ್ನ ಮತ್ತಷ್ಟು ಬಲಿಷ್ಠವಾಗಿ ಕಟ್ಟುವಲ್ಲಿ ಡಿಕೆಶಿ ಪಾತ್ರ ಬಹಳ ದೊಡ್ಡದು ಅಲ್ಲದೆ ತನ್ನದೇ ಕ್ಷೇತ್ರ ಕನಕಪುರದಲ್ಲಿ ಇದೀಗ ತನ್ನ ವಿರುದ್ಧ ನಡೀತ್ತಿರುವ ಷಡ್ಯಂತ್ರ ಎಲ್ಲವನ್ನ ಗಮನದಲ್ಲಿಟ್ಟುಕೊಂಡು, ತನ್ನ ಕ್ಷೇತ್ರದ ಗೆಲುವಿನ ಜೊತೆಗೆ ಕರ್ನಾಟಕ ದಲ್ಲಿಯೂ ಕಾಂಗ್ರೆಸ್ ನ್ನ ಅಧಿಕಾರಕ್ಕೆ ತರುವಲ್ಲಿ ಕಸರತ್ತು ನಡೆಸಿರುವ ಡಿಕೆಶಿ ನಿನ್ನೆ ಅಧಿಕೃತವಾಗಿಯೇ ನಾಮಪತ್ರ ಸಲ್ಲಿಸಿದ್ದಾರೆ..
ಇದನ್ನೂ ಓದಿ: ಉಪೇಂದ್ರ ಅವರ ಹೊಸ ಮನೆಯ ಗೃಹಪ್ರವೇಶ ಸಂಭ್ರಮ
ಕಾಂಗ್ರೆಸ್ ಪಕ್ಷದಲ್ಲಿ ಟ್ರಬಲ್ ಶೂಟರ್ ಎಂದು ಕರೆಯಲ್ಪಡುವ ಡಿ.ಕೆ ಶಿವಕುಮಾರ್ ರೆಸಾರ್ಟ್ ರಾಜಕಾರಣ ಮಾಡಿ ಸರ್ಕಾರ ಉಳಿಸುವಲ್ಲಿ ಮಹತ್ವ ಪಾತ್ರವಹಿಸಿದ್ದರು. ಅಂದಿನಿಂದ ಇಂದಿನವರೆಗೂ ಕೂಡ ಪಕ್ಷ ಸಂಘಟನೆ ಯಲ್ಲಿ ತಮ್ಮದೇ ಆದ ವರ್ಚಸ್ಸನ್ನ ಉಳಿಸಿಕೊಂಡಿದ್ದಾರೆ. ಹೌದು ಎಸ್. ಎಂ. ಕೃಷ್ಣ ಕಾಲದಲ್ಲೇ ಸಚಿವರಾಗಿದ್ದ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಲು ಎರಡು ದಶಕಗಳ ಕಾಲ ಕಾಯಬೇಕಾಗಿ ಬಂತು. ಕನಕಪುರದ ಬಂಡೆಗಳನ್ನು ದಾಟಿಕೊಂಡು ರಾಜ್ಯವ್ಯಾಪಿ ಸರ್ವ ಸಮ್ಮತ ನಾಯಕನಾಗಲು ಡಿಕೆಶಿಗೆ ಇದೀಗ ಒಳ್ಳೆಯ ಕಾಲ ಅಂತಾಲೆ ಹೇಳಬಹುದು. ಯಾಕಂದ್ರೆ ಹೈಕಮಾಂಡ್‌ನ ಆಪತ್ಬಾಂದವ, ತಾನಿದ್ದ ಜೈಲು ಕೋಣೆಗೆ ಸೋನಿಯಾರನ್ನೇ ಕರೆಸಿಕೊಂಡಿದ್ದನ್ನ ನೆನಪಿಸಿಕೊಂಡ್ರೆ ಡಿಕೆಶಿ ಎಂತಹ ಪ್ರಭಾವಿ ನಾಯಕ ಅನ್ನೋದು ಗೊತ್ತಾಗುತ್ತೆ. ಇದೀಗ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಲ್ಲಿ ಆಕಾಂಕ್ಷಿ.
5 ವರ್ಷದಲ್ಲೆ 600 ಕೋಟಿ ಆಸ್ತಿ ಹೆಚ್ಚಳವಾಗಿದ್ದು ಹೇಗೆ?
ಇನ್ನು ಇದೀಗ ಕನಕಪುರ ವಿಧಾನಸಭಾ ಕ್ಷೇತ್ರ ದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕನಕಪುರ ದಲ್ಲಿ ಲಕ್ಷಾಂತರ ಅಭಿಮಾನಿಗಳ ಮಧ್ಯೆ ರೋಡ್ ಶೋ ನಡೆಸಿ, ದೇವರಿಗೆ ಪೂಜೆ ಸಲ್ಲಿಸಿ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರವನ್ನ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲೇ ಆಸ್ತಿ ವಿವರದ ಅಫ್ಡೇವಿಟ್ ಸಲ್ಲಿಸಿದ್ದಾರೆ.. ಇದರಲ್ಲಿ ರಾಜ್ಯವೇ ಬೆಚ್ಚಿ ಬೀಳುವಂತಹ ಸುದ್ದಿ ಹೊರಬಂದಿದೆ. ಹೌದು 2018ರಲ್ಲಿ ಸಲ್ಲಿಸಿದ್ದಾರೆ ಆಸ್ತಿ ವಿವರಕ್ಕೂ ಈಗ ಸಲ್ಲಿಸಿರುವ ಆಸ್ತಿ ವಿವರಕ್ಕೂ ಅಜಾಗಜಂತರ ವ್ಯತ್ಯಾಸಗಳಿದ್ದು, ಕೇವಲ 5ವರ್ಷಗಳ ಅಂತರದಲ್ಲಿ ಬಂಡೆ ಆದಾಯ ಇಷ್ಟು ಹೆಚ್ಚಾಗಿದ್ದು ಹೇಗೆ, ಅಂತ ಬಾಯಿ ಮೇಲೆ ಬೆರಳಿಂಡುವಂತೆ ಆಗಿದೆ. ಹೌದು 5ವರ್ಷಗಳ ಅವಧಿ ಯಲ್ಲಿ 550-600ಕೋಟಿಯಷ್ಟು ಆಸ್ತಿ ಹೆಚ್ಚಾಗಿದೆ.
2018 ರಲ್ಲಿ ಡಿಕೆಶಿಯೇ ಘೋಷಣೆ ಮಾಡಿಕೊಂಡಿರುವ ಇವ್ರ ಆಸ್ತಿ ಮೌಲ್ಯ 840ಕೋಟಿ ಇತ್ತು. ಇದೀಗ 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಆಸ್ತಿ ವಿವರ ಘೋಷಿಸಿದ್ದು, ಡಿಕೆಶಿ ಅವ್ರ ಒಟ್ಟು ಆಸ್ತಿ 1414 ಕೋಟಿ. ಹೌದು ಅದರ ಲ್ಲಿ ಚರಾಸ್ತಿ 278 ಕೋಟಿಯಾದ್ರೆ, 1136 ಕೋಟಿ ಸ್ಥಿರಾಸ್ತಿ, ಒಟ್ಟಾರೆ 1414ಕೋಟಿ ಅಂತ ಹೇಳಿ ಕೊಂಡಿದ್ದಾರೆ. ಇಷ್ಟು ಪ್ರಮಾಣ ದಲ್ಲಿ ಡಿಕೆಶಿ ಆದಾಯ ಹೆಚ್ಚಾಗಿದ್ದು ಅಂತ ಅವ್ರ ರಾಜಕೀಯ ವಿರೋಧಿ ಗಳು ಇದೀಗ ಟ್ರೊಲ್ ಮಾಡ್ತಿದ್ದಾರೆ. ಇದೀಗ ಇದಕ್ಕೆ ಡಿಕೆಶಿ ಯಾವುದೇ ಪ್ರತಿಕ್ರಿಯೆ ನೀಡದೆ ಗೆಲ್ಲುವ ಬಗ್ಗೆ ಮಾತ್ರ ಹೋರಾಟ ವನ್ನ ಮಾಡ್ತಿದ್ದಾರೆ.
ಇದನ್ನೂ ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?