DK Shivakumar: ವೀಕೆಂಡ್ ವಿಥ್ ರಮೇಶ್ ಸೀಸನ್ 5 ಶೋಗೆ 100ನೇ ಅತಿಥಿಯಾಗಿ ಆಗಮಿಸಿದ ಡಿಕೆಶಿ ಅವರ 2ದಿನದ ಎಪಿಸೋಡ್ ಮುಕ್ತಾಯವಾಗಿದೆ. ಈ 2ದಿಂದ ಸಂಚಿಕೆಯಲ್ಲಿ ಡಿಕೆಶಿ ಅವ್ರ ಬಾಲ್ಯ, ಕುಟುಂಬ, ರಾಜಕೀಯ ಜೀವನ, ಹೋರಾಟಗಳ ಬಗ್ಗೆ ಚರ್ಚೆ ಆಗಿದ್ದು ಒಂದೊಂದೇ ವಿಷಯಗಳು ತೆರೆದುಕೊಂಡಿದೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈ ಮೊದಲು ಪ್ರೊಮೊಗಳ ಮೂಲಕವೇ ಸಾಕಷ್ಟು ಸದ್ದು ಮಾಡಿತ್ತು. ಹೌದು ಸೋಶಿಯಲ್ ಮೀಡಿಯಾದಲ್ಲಿ ಡಿಕೆಶಿ ಅವರ ಪ್ರೋಮೋ ಹಂಚಿಕೊಂಡ ಜೀ ಕನ್ನಡ ವಾಹಿನಿ ರಾಜ್ಯ ಕಂಡ ಪ್ರಚಂಡ ರಾಜಕಾರಣಿ, ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರ ಬದುಕಿನ ಜರ್ನಿ ಅನಾವರಣ” ಎಂಬ ಶೀರ್ಷಿಕೆ ನೀಡಿ ಸಾಕಷ್ಟು ಪ್ರೊಮೊಗಳನ್ನ ರಿಲೀಸ್ ಮಾಡುತ್ತಾ ಕರ್ನಾಟಕದ ಜನತೆ ಡಿಕೆಶಿ ಶಿವಕುಮಾರ್ ಅವ್ರ ಕುರಿತಾದ ಸಂಚಿಕೆ ಯಾವಾಗ ಪ್ರಸಾರವಾಗುತ್ತದೋ ಅಂತ ಕಾಯುತ್ತ ಕುಳಿತ್ತಿದ್ರು.
ಇದೀಗ ನಿನ್ನೆ ಮೊನ್ನೆ ಎರಡು ದಿನಗಳ ಕಾಲ ಸುದೀರ್ಘವಾಗಿ ಡಿಕೆ ಶಿವಕುಮಾರ್(DK Shivakumar) ಕುರಿತಾದ ಸಂಚಿಕೆಗಳು ಪ್ರಸಾರ್ವಾಗಿದ್ದು ಡಿಕೆ ಶಿವಕುಮಾರ್ ಅವರ ಕುರಿತಾದ ಸಾಕಷ್ಟು ವಿಚಾರಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಒಬ್ಬ ರಾಜಕಾರಣಿಯಾಗಿ ಮನೆಯಲ್ಲಿ ತಂದೆಯಾಗಿ ಎರಡನ್ನು ಒಟ್ಟಿಗೆ ನಿಭಾಯಿಸೋದು ಎಷ್ಟು ಕಷ್ಟವಾಯಿತು. ಆ ಸಂದರ್ಭದಲ್ಲಿ ಮಡದಿ ಯಾವ ರೀತಿ ಬೆನ್ನೆಲುಬಾಗಿ ನಿಂತ್ರು, ಮೂವರು ಮಕ್ಕಳ ಜೀವನ ಶಿಕ್ಷಣ ಎಲ್ಲವನ್ನ ಹೇಗೆ ನಿಭಾಯಿಸಿಕೊಂಡು ಹೋದ್ರು ಅನ್ನೋದನ್ನೆಲ್ಲ ಹೇಳಿಕೊಂಡಿದ್ದಾರೆ. ಹೌದು ವೀಕೆಂಡ್ ವಿಥ್ ರಮೇಶ್ ಸೀಸನ್ 5 ಕಾರ್ಯಕ್ರಮ ನನ್ನ ಬದುಕಿನ ಪಯಣವನ್ನು ಪ್ರಪಂಚಕ್ಕೆ ಪರಿಚಯಿಸುವ ಪ್ರಯತ್ನ ಮಾಡಿದೆ. ನನ್ನ ಜೀವನದ ಪ್ರತಿಯೊಂದು ಹಂತದ ಸಣ್ಣ ಸಣ್ಣ ವಿಷಯಗಳನ್ನ ಬಹಳ ಅದ್ಭುತವಾಗಿ ನೆನಪಿಸಿದೆ ಅಂತ ಕುಟುಂಬ ರಾಜಕೀಯ ನೋವು ನಲಿವು ಸೋಲು ಗೆಲುವಿನ ಪ್ರತಿಯೊಂದು ವಿಚಾರವನ್ನು ಕೂಡ ಡಿಕೆಶಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಮೂರು ಕಡೆ ಅರ್ಜಿ ಸಲ್ಲಿಸಬಹುದು, ಪತಿ ಸಾವಾಗಿದ್ರೆ ಅಂತಹ ಮಹಿಳೆಯರು ಏನ್ ಮಾಡ್ಬೇಕು?
ಮೂವರು ಮಕ್ಕಳ ಬಗ್ಗೆ ಡಿಕೆಶಿ ಅವರು ಹೇಳಿದ್ದೇನು
ಹೌದು ಇದರಲ್ಲಿ ಡಿಕೆ ಶಿವಕುಮಾರ್(DK Shivakumar) ಅವ್ರ ಕೌಟುಂಬಿಕ ಜೀವನದ ವಿಷಯಗಳು ಎಷ್ಟೋ ಜನರಿಗೆ ಗೊತ್ತಿರಲಿಲ್ಲ. ಅದರಲ್ಲೂ ಡಿಕೆಶಿ ಅವ್ರ ದೊಡ್ಡ ಮಗಳು ಐಶ್ವರ್ಯ ಅವ್ರ ಬಗ್ಗೆ ಗೊತ್ತಿದ್ದಷ್ಟು ಅವ್ರ ಕಿರಿಯ ಮಗಳು ಆಭರಣ ಅವ್ರ ಬಗ್ಗೆ ಗೊತ್ತಿರಲಿಲ್ಲ. ಆದ್ರೆ ಇದೀಗ ಆಭರಣ ಅವರ ಬಗ್ಗೆ ಅವ್ರ ವಿದ್ಯಾಭ್ಯಾಸದ ಕುರಿತು ಡಿಕೆಶಿ ಮಾತನಾಡಿದ್ದಾರೆ. ಹೌದು ವೀಕೆಂಡ್ ವೇದಿಕೆಗೆ ಆಭರಣ ಅವ್ರು ಬಂದಿಲ್ಲ ಆದ್ರೆ ಅವ್ರ ಬಗ್ಗೆ ಕೆಲವೊಂದಷ್ಟು ವಿಷಯಗಳನ್ನ ಪ್ರಸ್ತಾಪಸಲಾಗಿದೆ. ಅಲ್ಲದೇ ಕರೆ ಮಾಡಿ ಕೂಡ ಆಭರಣ ಅವ್ರ ಜೊತೆ ವೇದಿಕೆಯಲ್ಲಿಯೇ ಮಾತನಾಡಲಾಗಿದೆ. ಆದರೆ ಅದಕ್ಕೂ ಮೊದಲು ಪತ್ನಿ ಉಷಾ ಹಾಗೂ ದೊಡ್ಡ ಮಗಳು ಐಶ್ವರ್ಯ ಬಂದಿದ್ದಾರೆ. ಆಗ ಮಕ್ಕಳ ಬಗ್ಗೆ ಡಿಕೆಶಿ ತೆಗೆದುಕೊಳ್ಳುತ್ತಿದ್ದ ಕೇರ್ ಸಮಯ ಹಾಗೂ ಪ್ರೀತಿ ಕೊಡಲು ಸಾಧ್ಯವಾಗದಿದ್ರೂ ಮಕ್ಕಳ ಜೀವನವನ್ನ ಕಟ್ಟುವಲ್ಲಿ ಡಿಕೆಶಿ ಪಾತ್ರ, ಹಾಗೂ ಅಪ್ಪನಿಂದ ಮಕ್ಕಳು ಕಲಿತ ಜೀವನದ ಪಾಠ ಇದೆಲ್ಲವನ್ನು ಕೂಡ ಮಕ್ಕಳು ಹಾಗು ಪತ್ನಿ ಉಷಾ ಹಂಚಿಕೊಂಡಿದ್ದಾರೆ. ಆಗ ಮಗಳು ಆಭರಣ ಬಗ್ಗೆಯೂ ಕೆಲವೊಂದಷ್ಟು ವಿಚಾರಗಳನ್ನ ಮಾತನಾಡಿದ್ದಾರೆ. ಹೌದು ಡಿಕೆ ಶಿವಕುಮಾರ್ ಅವ್ರ ಎರಡನೇ ಮಗಳು ಆಭರಣ ಇದೀಗ ಇಂಜಿನಿಯರ್ ಓದುತ್ತಿದ್ದಾರೆ. ಆದ್ರೆ ಮಗಳಿಗೆ ಡಾಕ್ಟರ್ ಆಗಬೇಕು ಅನ್ನೋ ಆಸೆ ಇತ್ತಂತೆ. ಆದ್ರೆ ಮಕ್ಕಳ ವಿದ್ಯಾಭ್ಯಾಸ ಡಿಕೆ ಶಿವಕುಮಾರ್ ಅವ್ರು ಅಂದುಕೊಂಡಂತೆಯೇ ಆಗ್ತಿದ್ಯಂತೆ.
ಮೊದಲ ಮಗಳು ತಮ್ಮ ಶಿಕ್ಷಣ ಸಂಸ್ಥೆಯಲ್ಲೇ ಓದಬೇಕು ಅಂತ ಹೇಳುದ್ರಂತೆ ಐಶ್ವರ್ಯ ಸಹ ತಮಗೆ ಕಷ್ಟವಾದ್ರೂ ಅಲ್ಲಿಯೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ರಂತೆ. ಮಗನನ್ನು ಸಹ ಲಾಯರ್ ಮಾಡಬೇಕು ಅನ್ನೋ ಹಂಬಲ ಇಟ್ಟುಕೊಂಡಿದ್ದ ಡಿಕೆಶಿ ಆಸೆಯನ್ನ ಮಗನು ಕೂಡ ಈಡೇರುಸುತ್ತಿದ್ದೂ, ಲಾ ಓದುತ್ತಿದ್ದಾನೆ. ಇತ್ತ ಕಡೆ ಆಭರಣ ಅವ್ರಿಗೂ ಕೂಡ ಡಾಕ್ಟರ್ ಆಗಬೇಕು ಅನ್ನುವ ಆಸೆಯಿಂತ್ತಂತೆ ಆದರೆ ಅಪ್ಪನ ಆಸೆಯಂತೆ ಇದೀಗ ಮಗಳು ಕೂಡ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಡಿಕೆಶಿ ಅವ್ರು ನನ್ನ ಮಕ್ಕಳು ನಾನು ಅಂದುಕೊಂಡಂತೆ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾರೆ. ನನ್ನ ಮಾತಿಗೆ ಬೆಲೆ ಕೊಡ್ತಾರೆ. ರಾಜಕಾರಣಿಗಳ ಮಕ್ಕಳ ಜೀವನ ಬಹಳ ಮುಖ್ಯ. ರಾಜಕಾರಣಿಗಳ ಮಕ್ಕಳ ಬಗ್ಗೆ ಟಾಕ್ ಗಳು ಸರ್ವೇ ಸಾಮಾನ್ಯ ಹೀಗಾಗಿ ನನ್ನ ಮಕ್ಕಳು ವಿದ್ಯಾಭ್ಯಾಸ ತುಂಬಾನೇ ಮುಖ್ಯ ಅದರ ಬಗ್ಗೆ ಗಮನ ಕೊಡುವಂತೆ ಹೇಳಿದ್ದೀನಿ ಅದರಂತೆ ಮಕ್ಕಳು ಕೂಡ ನಡೆದುಕೊಳ್ಳುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆಯನ್ನ ಕೊಡ್ತಾರೆ ನನ್ನ ಆಸೆಯಂತೆಯೇ ನಡೆಯುತ್ತಿದ್ದಾರೆ. ಎರಡನೇ ಮಗಳು ಆಭರಣ ಕೂಡ ಡಾಕ್ಟರ್ ಆಗಬೇಕು ಅಂತ ಹೇಳುದ್ಲು ಅಂದ್ರೆ ನಾನು ಸಿವಿಲ್ ಇಂಜಿನಿಯರ್ ಮಾಡ್ಲೇಬೇಕು ಅಂದೇ ಯಾಕಂದ್ರೆ ಅದು ದೇಶ ಕಟ್ಟುವ ಕೆಲಸ ಹಾಗಾಗಿ ನನ್ನ ಮಗಳಿಗೆ ಹೇಳಿದ್ದಕ್ಕೆ ಅವ್ಳು ಕೂಡ ಅದನ್ನೇ ಓದುತ್ತಿದ್ದಾಳೆ ಅಂತ ಹೆಮ್ಮೆಯಿಂದ ಮಕ್ಕಳ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸೈಲೆಂಟ್ ಆಗಿ ರಿಜಿಸ್ಟರ್ ಮದುವೆಯಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram