ನನ್ನ ಅಂತಾರಾಳ ಕೆಲವರಿಗೆ ಗೊತ್ತಿಲ್ಲ, ನಾವು ಮೂವರು ಒಟ್ಟಿಗೆ ಇರೋಕಾಗಿಲ್ಲ! ಅವನು ತಮ್ಮ ಅಲ್ಲ ನನ್ನ ಮಗ. ಕಣ್ಣೀರಿಟ್ಟ ಡಿ.ಕೆ ಶಿವಕುಮಾರ್

Weekend With Ramesh 5: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ 5ನೇ ಸೀಸನ್‌ನಲ್ಲಿ 100ನೇ ಎಪಿಸೋಡ್ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು, ಸಾಕಷ್ಟು ಜನ ವೀಕೆಂಡ್ ಗಾಗಿ ಕಾಯುತ್ತಿದ್ದಾರೆ. ಇದುವರೆಗೂ ಅನೇಕ ಸೆಲಬ್ರಿಟಿಗಳು ಸಾಧಕರ ಖುರ್ಚಿಯಲ್ಲಿ ಕೂತು, ತಮ್ಮ ಜೀವನದ ನೋವು ನಲಿವಿನ ದಿನಗಳನ್ನು ನೆನೆದಿದ್ದಾರೆ. ವೀಕ್ಷಕರು ಕೂಡಾ ತಮ್ಮ ಮೆಚ್ಚಿನ ಸೆಲೆಬ್ರಿಟಿಗಳ ಎಪಿಸೋಡ್‌ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಶನಿವಾರ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಾಧಕರ ಸೀಟ್‌ನಲ್ಲಿ ಕೂರಲಿದ್ದಾರೆ. ವಾಹಿನಿಯು ಈ ವಾರದ ಪ್ರೋಮೋವನ್ನು ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದೆ. ಪ್ರೋಮೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಡಿಕೆಶಿ ಟೀಚರ್‌, ತಾಯಿ, ಪತ್ನಿ ಉಷಾ, ಮಗಳು ಐಶ್ವರ್ಯ, ಸಿಹಿ ಕಹಿ ಚಂದ್ರು, ಸ್ನೇಹಿತರು ಸೇರಿದಂತೆ ಅನೇಕರು ಭಾಗವಹಿಸಿ ಡಿಕೆಶಿ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಡಿಕೆಶಿ ತನ್ನ ಅಪ್ಪ ಅಮ್ಮ ಮತ್ತು ತಮ್ಮನ ಬಗ್ಗೆ ಬಹಳ ಭಾವುಕರಾಗಿದ್ದು, ಅವ್ರು ಮಾತನಾಡುವಾಗ ಕಣ್ಣಂಚಲ್ಲಿ ಅವ್ರಿಗೆ ಅರಿಯದಂತೆ ಕಣ್ಣೀರು ಜಾರಿದೆ.

WhatsApp Group Join Now
Telegram Group Join Now

ವಿಕೇಂಡ್ ವಿತ್ ರಮೇಶ್ ನಲ್ಲಿ ಡಿಕೆಶಿ ಕುಟುಂಬ

ಸ್ನೇಹಿತರೆ ಕನಕಪುರ ಕ್ಷೇತ್ರದಲ್ಲಿ ಆ ಮಟ್ಟಿಗಿನ ಜನಪ್ರಿಯತೆ, ಪ್ರೀತಿ, ಇಡಿ ಕರ್ನಾಟಕದಲ್ಲಿ ಡಿಕೆಶಿ ಶಿವಕುಮಾರ್ ಅವ್ರಿಗಿರುವ ಅಭಿಮಾನಿಗಳು ಬಹುಷಃ ಯಾವ ಕಾಂಗ್ರೆಸ್ ನಾಯಕರಿಗೂ ಇಲ್ಲ ಅಂತಲೇ ಹೇಳಬಹುದು ಹೀಗಾಗಿಯೇ ಡಿಕೆಶಿಯನ್ನ ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಅಂತಲೇ ಕರೆಯುತ್ತಾರೆ. ಪಕ್ಷಕ್ಕೆ ಸಣ್ಣ ಕಂಟಕ ಎದುರಾಗಳು ಕೂಡ ಡಿಕೆಶಿ ಬಿಡೋದಿಲ್ಲ ಅಷ್ಟು ಪಕ್ಷ ನಿಷ್ಟತೆ ಅಂದಿನಿಂದ ಇಂದಿನ ವರೆಗೂ ಆಗಿಯೇ ಇದೆ. ಇನ್ನು ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಅವ್ರ ಪೂರ್ತಿ ಹೆಸರು ದೊಡ್ಡಹಳ್ಳಿ ಕೆಂಪೇಗೌಡ ಶಿವಕುಮಾರ್‌ ಅಂತ, ಇವ್ರು ರಾಮನಗರ ಜಿಲ್ಲೆ ಕನಕಪುರದಲ್ಲಿ ಕೆಂಪೇಗೌಡ ಹಾಗೂ ಗೌರಮ್ಮ ದಂಪತಿಯ ಮಗನಾಗಿ ಮೇ 15 1962ರಲ್ಲಿ ಜನಿಸುತ್ತಾರೆ.

ಇನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ. ಶಿವಕುಮಾರ್ ಹಾಗೂ ಡಿಕೆ ಸುರೇಶ ಅಣ್ಣ ತಮ್ಮಂದಿರು. ಮೈಸೂರಿನ ಮುಕ್ತ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾದಲ್ಲಿ ಎಂಎ ಸ್ನಾತಕೋತ್ತರ ಪದವಿ ಗಳಿಸಿರುವ ಡಿಕೆ ಶಿವಕುಮಾರ್‌ 1993ರಲ್ಲಿ ಉಷಾ ಅವ್ರನ್ನ ಮದುವೆಯಾದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾರೆ. ಹಿರಿಯ ಪುತ್ರಿ ಹೆಸರು ಐಶ್ವರ್ಯ, ಎರಡನೇ ಮಗಳ ಹೆಸರು ಆಭರಣ. ಮಗನ ಹೆಸರು ಆಕಾಶ್.‌ ಇವರೆಲ್ಲರೂ ಕೂಡ ಈ ಒಂದು ಎಪಿಸೋಡ್ ನಲ್ಲಿ ಕಾಣಿಸಿಕೊಂಡು ಡಿಕೆಶಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅದೊಂದು ವಿಚಾರ ಮಾತನಾಡುವಾಗ ಭಾವುಕರಾಗುತ್ತಾರೆ ಅವ್ರ ತಾಯಿಯವರು ವೇದಿಕೆ ಮೇಲೆ ಬರ್ತಾರೆ ಆಗ ಏನಾಗುತ್ತೆ ಅನ್ನೋ ಕುತೂಹಲವನ್ನು ಈಗ ರಿಲೀಸ್ ಆಗಿರೋ ಪ್ರೋಮೊ ಕುತೂಹಲ ಮೂಡಿಸುತ್ತಿದೆ.

ಇದನ್ನೂ ಓದಿ: ಅಭಿ ಹಾಗೂ ಅವಿವಾ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ? ಉಡುಗೊರೆಯಾಗಿ ಸೊಸೆಗೆ ಕೋಟಿ ಕೋಟಿ ಬೆಲೆಬಾಳುವ ವಜ್ರಾಭರಣ

ತಮ್ಮನ ಮೇಲಿನ ಪ್ರೀತಿ ವ್ಯಕ್ತಪಡಿಸಿದ ಡಿ.ಕೆ ಶಿವಕುಮಾರ್

ಹೌದು ಡಿಕೆಶಿ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಟ್ರಬಲ್ ಶೂಟರ್, ಹಂಟರ್, ಖಡಕ್ ರಾಜಕಾರಣಿ ಆದ್ರೆ ಕೌಟುಂಬಿಕ ಜೀವನಾ ಅಂತ ಬಂದ್ರೆ ಬಹಳಷ್ಟು ಭಾವುಕ ಜೀವಿ. ಸ್ನೇಹಿತರೆ ನೀವು ಇನ್ನೊಂದು ವಿಚಾರವನ್ನ ಬಹಳಷ್ಟು ಸ್ಪಷ್ಟವಾಗಿ ಗಮನಿಸಿರುತ್ತಿರಿ, ಇಲ್ಲಿಯವರೆಗೂ ಡಿಕೆ ಶಿವಕುಮಾರ್ ಅವ್ರಿಗೆ ಬೆನ್ನೆಲುಬಾಗಿ ಅಣ್ಣನಿಗೆ ಲಕ್ಷ್ಮಣನಾಗಿ ಜೊತೆಯಲ್ಲಿ ನಿಂತಿರುವ ಡಿಕೆ ಸುರೇಶ್ ಯಾವತ್ತಿಗೂ ಅಣ್ಣನ್ನ ಬಿಟ್ಟುಕೊಟ್ಟಿಲ್ಲ, ಪ್ರತಿಯೊಂದು ಕ್ಷಣದಲ್ಲಿಯೂ ಅಣ್ಣನ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿಯೇ ಡಿಕೆ ಶಿವಕುಮಾರ್ ಅವ್ರು ಈಗ ರಿಲೀಸ್ ಆಗಿರುವ ಪ್ರಮೋದಲ್ಲಿ ಒಂದು ಮಾತನ್ನ ಹೇಳಿದ್ದಾರೆ ಅದೇನೆಂದ್ರೆ ಸುರೇಶ ನನ್ನ ತಮ್ಮ ಅಲ್ಲ ನನ್ನ ಮಗ ಅಂತ.

ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತ ದಾಯಾದಿಗಳು ಅಂತ ಹೇಳ್ತಾರೆ ಆದ್ರೆ ಇವರಿಬ್ಬರು ಆಧುನಿಕ ರಾಮ ಲಕ್ಷ್ಮಣರು ಅಂದ್ರೆ ತಪ್ಪಾಗಲ್ಲ. ಇನ್ನು ಈ ಪ್ರಮೋದಲ್ಲಿ ನನ್ನ ತಂದೆ ತಾಯಿನ ಬಹಳ ನೆನೆಸಿಕೊಳ್ಳಬೇಕು, ಓದು ಓದು ಅಂತ ತುಂಬಾ ಕೇಳ್ಕೊಂಡ್ರು ಆದ್ರೆ ನಾನು ಸರಿಯಾಗಿ ಓದೋಕಾಗಿಲ್ಲ ಅಂತ ಹೇಳುತ್ತಿರುವಾಗಲೇ ಅವ್ರ ತಾಯಿ ಗೌರಮ್ಮ ಹಾಗೂ ಒಂದಷ್ಟು ಜನ ಸಂಬಂಧಿಕರು ಬರ್ತಾರೆ. ವೇದಿಕೆಗೆ ಬಂದಂತಹ ಗೌರಮ್ಮ ಒಂದು ಮಾತು ಹೇಳ್ತಾರೆ ನಮಗೆ 2ವರ್ಷ ಮಕ್ಕಳು ಇರಲಿಲ್ಲ ಹರಕೆ ಕಟ್ಟಿಕೊಂಡ ಮೇಲೆ ಶಿವಕುಮಾರ ಹುಟ್ಟಿದ್ದು ಅಂತಾರೆ. ನಂತರ ಡಿಕೆಶಿ ಮಾತು ಮುಂದುವರೆಸಿ ನನ್ನ ಅಂತರಾಳ ಯಾರಿಗೂ ಗೊತ್ತಿಲ್ಲ, ಅದೇನೋ ಗೊತ್ತಿಲ್ಲ ನಾವು ಮೂವರು ಒಟ್ಟಿಗೆ ಇರೋಕಾಗಲಿಲ್ಲ, ಆದ್ರೆ ಅವ್ನು ನನ್ನ ತಮ್ಮ ಅಲ್ಲಾ ನನ್ನ ಮಗ ಅಂತ ಹೇಳ್ತಾ ಭಾವುಕರಾಗಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ಅವ್ರ ವೀಕೆಂಡ್ ಸಂಚಿಕೆ ಬಹಳಷ್ಟು ಅದ್ಭುತವಾಗಿ ಬಂದಿರುವಂತೆ ಕಾಣ್ತಿದೆ. ಪ್ರೊಮೊಗಳೇ ಕುತೂಹಲವನ್ನ ಹೆಚ್ಚಿಸುತ್ತಿದ್ದು, ವೀಕೆಂಡ್ ಗಾಗಿ ಎಲ್ಲರು ಕಾಯ್ತಿರುವುದು ಸುಳಲ್ಲ.

ಇದನ್ನೂ ಓದಿ: ಫ್ರೀ ಬಸ್ ಪಾಸ್ ಗೆ ರೆಡಿಯಾಗ್ತಿದೆ ಸ್ಮಾರ್ಟ್ ಕಾರ್ಡ್! ಕಾರ್ಡ್ ಪಡೆಯೋದು ಹೇಗೆ ಏನ್ ಮಾಡಬೇಕು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram