Congress Guarantee: ಹೇಗೋ ಏನೋ 5ಗ್ಯಾರಂಟಿಗಳನ್ನ ನಾವು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದ್ರೆ ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲೆ ಅವುಗಳನ್ನ ಜಾರಿಗೊಳೋಸೋದಾಗಿ ಭರವಸೆಗಳನ್ನ ಕೊಟ್ಟಿದ್ದು, ಆದರೆ ಅವುಗಳನ್ನ ಜಾರಿಗೊಳಿಸುವಲ್ಲಿ ಮೀನಾಮೇಷ ಏಣಿಸುತ್ತ ಕೂತಿದ್ದು ರಾಜ್ಯದ ಜನರ ಕೆಂಗಣ್ಣಿಗೆ ಗುರುಯಾಗ್ತಿದೆ. ಹೌದು ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರ ಹಿಡಿದಿರೋ ಕಾಂಗ್ರೆಸ್, ಕೊನೆಗೂ ಯೋಜನೆ ಜಾರಿಗೆ ಮುಂದಾಗುತ್ತಿದೆ. ಜೂನ್ 1ರಂದು ಕ್ಯಾಬಿನೆಟ್ ನಡೆಸಿ, ಅಂದೇ ಗ್ಯಾರಂಟಿ ಘೋಷಿಸೋ ನಿರೀಕ್ಷೆ ಇದೆ. ಹೀಗಾಗಿ ಗ್ಯಾರಂಟಿಗಳ ಜಾರಿ ಸಮಸ್ಯೆ ಬಗೆಹರಿಸಲು ವಿಶೇಷ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ದೀವಿ. ಮನೆ ಯಜಮಾನಿಗೆ ಕೊಡ್ತೀವಿ ಎಂದು ಹೇಳಿದ್ದೇವೆ. ಆದರೆ ನಿಮ್ಮ ಪತ್ನಿ ಮನೆಯ ಯಜಮಾನಿಯ, ಅಮ್ಮ ಮನೆ ಯಜಮಾನಿಯ ಅಂತ ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ.
ಅಲ್ಲದೇ, ಮನೆ ಯಜಮಾನಿ ಯಾರು ಅಂತ ತೀರ್ಮಾನ ಮಾಡುವವರು ಯಾರು? ಕೊಡ್ತೀವಿ ಅಂತ ಹೇಳಿದ್ದೀವಿ. ಆದರೆ ಮನೆ ಯಜಮಾನಿ ಯಾರು ಅಂತ ತೀರ್ಮಾನ ಮಾಡ್ತಾರೆ? ಯಾರ ಖಾತೆಗೆ ದುಡ್ಡು ಹಾಕುವುದು? ಹೀಗೆ ಕೆಲವೊಂದು ಪ್ರಶ್ನೆಗಳನ್ನ ಡಿಕೆಶಿ ಮುಂದಿಟ್ಟಿದ್ದು, ಯೋಜನೆಯ ಜಾರಿಗೆ ಕೆಲವೊಂದಷ್ಟು ಕೊಕ್ಕೆಗಳಿವೆ ಅನ್ನೋದನ್ನ ಪರೋಕ್ಷವಾಗಿ ತಿಳಿಸಿದ್ದಾರೆ. ಅಲ್ಲದೇ ಕೆಲವರು ಅನಕ್ಷರಸ್ಥರು ಇದ್ದಾರೆ, ಕೆಲವರು ಗಂಡನೇ ಬರೆಯಿಸಿಕೊಳ್ಳುತ್ತಾರೆ. ಆದ್ದರಿಂದ ಯಾರು ಮನೆ ಯಜಮಾನಿಯಾಗಿದ್ದಾರೆ ಅವರಿಗೆ ಹಣ ಹೋಗಬೇಕು. ಬ್ಯಾಂಕ್ ಖಾತೆ ಇಲ್ಲ ಎಂದರೆ ಖಾತೆ ಮಾಡಿಸಬೇಕು. ಆದ್ದರಿಂದ ಸಂಸಾರ ನಡೆಸುವ ತಾಯಿ ಖಾತೆಗೆ ಹಣ ಹೋಗಬೇಕು. ಯಾರು ಯಾರಿಗೋ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ವಿವರಿಸಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ಹಲವು ಚರ್ಚೆಗಳನ್ನು ಹುಟ್ಟು ಹಾಕಿದ್ದು, ಮನೆಯ ಒಡತಿ ಯಾರು ಅಂತ ಹೇಗೆ ತೀರ್ಮಾನ ಮಾಡುತ್ತಾರೆ. ಯಾರ ಖಾತೆಗೆ ಹಣ ಹೋಗುತ್ತದೆ ಹೀಗೆ ವಿಚಿತ್ರವಾದ ಪ್ರಶ್ನೆಗಳು ಹಲವರನ್ನು ಕಾಡುತ್ತಿದೆ. ಇನ್ನು ಮನೆ ಯಜಮಾನಿಗೆ ವಿಧವಾ ವೇತನ ಅಥವಾ ವೃದ್ಧಾಪ್ಯ ವೇತನ ಬರುತ್ತಿದ್ದರೆ ಅತ್ತೆಯನ್ನು ಬಿಟ್ಟು ಸೊಸೆಗೆ ನೀಡುತ್ತಾರಾ? ಅಥವಾ ಸೊಸೆ ಮನೆ ಇಬ್ಭಾಗ ಮಾಡಿ ಹೋಗಬೇಕಾಗುತ್ತಾ ಅನ್ನುವಂತಹ ಪ್ರಶ್ನೆಗಳು ಎದುರಾಗಿದೆ. ಅಲ್ಲದೇ ಅತ್ತೆ ಕೆಲಸ ಮಾಡಿ ಸೊಸೆ ಮನೆಯಲ್ಲಿದ್ದರೆ ಯಾರಿಗೆ ಎರಡು ಸಾವಿರ ಕೊಡುತ್ತಾರೆ? ಇಬ್ಬರು ಮನೆಯಲ್ಲೇ ಇದ್ದರೆ ಯಾರಿಗೆ ಹಣ ನೀಡಲಾಗುತ್ತದೆ? ಇನ್ನು ಏನೆಲ್ಲಾ ಷರತ್ತುಗಳನ್ನು ಸರ್ಕಾರ ರಾಜ್ಯದ ಜನರ ಮುಂದಿಡುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: 75 ರೂ. ಹೊಸ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಎಲ್ಲಿ ಸೀಗುತ್ತದೆ, ಬೆಲೆ ಎಷ್ಟು?
ಕಾಂಗ್ರೆಸ್ ಗ್ಯಾರಂಟಿಗಳಿಂದ ಶುರುವಾಯ್ತು ತಲೆನೋವು!
ಇದೀಗ ಈ ರೀತಿಯ ಹೇಳಿಕೆಗಳು ಕಾಂಗ್ರೆಸ್ ಸರ್ಕಾರದ ಕಡೆಯಿಂದ ಬರುತ್ತಿರೋದನ್ನ ಗಮನಿಸುತ್ತಿರುವ ರಾಜ್ಯದ ಜನರು ಇದೆಲ್ಲಾ ಚುನಾವಣೆಗೂ ಮೊದಲು ನೆನಪಿಗೆ ಬರಲಿಲ್ವಾ, ಆಗ ಮನೆ ಒಡತಿ ಯಾರು ಅಂತ ಗೊತ್ತಿತ್ತಾ? ಅಂತೆಲ್ಲಾ ಬಾಯಿಗೆ ಬಂದ ಆಗೇ ಹೇಳುತ್ತಿದ್ದರೆ, ಜೊತೆಗೆ ವಿರೋಧ ಪಕ್ಷದವರು ಕೂಡ ಸುಳ್ಳು ಗ್ಯಾರಂಟಿಗಳನ್ನ ಕೊಟ್ಟು ಪಕ್ಷ ಅಧಿಕಾರಕ್ಕೆ ಬಂದು ಇದೀಗ ಜನೆಗೆ ಮಕ್ಮೇಲ್ ಟೋಪಿ ಹಾಕುತ್ತಿದ್ದಾರೆ. ಇವ್ರು ಸುಳ್ಳು ಗ್ಯಾರಂಟಿಯವರು ಅಂತ ಹರಿಹಯ್ದಿದ್ದಾರೆ. ಆದ್ರೆ ಡಿಕೆ ಶಿವಕುಮಾರ್ ಮಾತ್ರ ನಮ್ಮ ಪ್ರಜಾಪ್ರಭುತ್ವವಾದಿ ದೇಶದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಹೀಗಾಗಿ ಯಾರ್ಯಾರು ಮಾತಾಡ್ತಾರೋ ಮಾತಾಡ್ಲಿ ಸ್ಟೈಕ್ ಮಾಡೋರು ಮಾಡ್ಲಿ ನಮಗೇನು ತೊಂದ್ರೆ ಇಲ್ಲ ಅಂತ ನೇರವಾಗಿಯೇ ಹೇಳಿದ್ದಾರೆ.
ಒಟ್ಟಿನಲ್ಲಿ ಗ್ಯಾರಂಟಿಗಳನ್ನ ನಂಬಿ ಜನ ಮೋಸ ಹೋದ್ರ ಅಥವಾ ಸರ್ಕಾರ ಇದಕ್ಕೆ ಬೇರೆ ಏನಾದ್ರೂ ಉಪಾಯ ಹುಡುಕಿ ಜನರ ದೃಷ್ಟಿಯಲ್ಲಿ ನಂಬಿಕೆ ಉಳಿಸಿಕೊಳ್ಳುತ್ತಾ ಅನ್ನುವುದು ಈಗ ಪ್ರಶ್ನೆಯಾಗಿ ಉಳಿದಿರುವಂತದ್ದು, ಅತ್ತೆ ಸೊಸೆಯಲ್ಲಿ ಯಜಮಾನಿ ಯಾರು ಅಂತ ಹೊಸ ಜಗಳ ಸೃಷ್ಟಿ ಮಾಡಿ ಮನೆ ಇಬ್ಬಾಗವಾಗುವಂತೆ ಮಾಡಿ ಮನೆ ಒಡೆಯೋ ಕೆಲ್ಸಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿದೆ. ಅತ್ತೆಯೇ ಯಜಮಾನಿ ಅಂದ್ರೆ ಸೊಸೆ ಗಂಡನ ಜೊತೆಗೆ ಮನೆಯಿಂದ ಹೊರನಾಡೆಯುತ್ತಾಳೆ, ಅತ್ತೆ ಯಜಮಾನಿ ಅಂದ್ರೆ ಅವ್ರಿಗೆ ವೃದ್ಧಪ್ಯಾ, ವಿಧವಾ ವೇತನ ಬರ್ತಿದ್ರೆ ಅವ್ರಿಗೆ ಮತ್ತೆ 2ಸಾವಿರ ಕೊಡೋದು ಸರಿನಾ ಅನ್ನೋದು ಮತ್ತೊಂದು ವಾದ. ಒಂದೇ ಕುಟುಂಬದವರು 3-4 ಕಾರ್ಡ್ ಗಳನ್ನ ಚಿಕ್ಕ ಚಿಕ್ಕ ಸಂಸಾರಗಳಾಗಿ ವಿಭಜಿಸಿಕೊಂಡಿದ್ರೆ ಆಗ ಏನ್ ಮಾಡೋದು ಹೀಗೆ ಸಾಕಷ್ಟು ಪ್ರಶ್ನೆಗಳಿದ್ದು. ಇದಕ್ಕಾಗಿ ಸಮಿತಿಯೊಂದನನ ರಚನೆ ಮಾಡಿದ್ದು ಜೂನ್ 1ರಂದು ಇದೆಲ್ಲದಕ್ಕೂ ಅಂತ್ಯವಾಡಿ ಯೋಜನೆಯ ಅನುಷ್ಠಾನಕ್ಕೆ ಯಾವುದೇ ಗೊಂದಲಗಳಿಲ್ಲದೆ ಸರ್ಕಾರ ಮುಂದಾಗುತ್ತಾ ನೋಡ್ಬಕು.
ಇದನ್ನೂ ಓದಿ: ಛಾಯಾಸಿಂಗ್ ಕನ್ನಡ ಸಿನಿರಂಗದಿಂದ ದೂರ ಉಳಿಯಲು ನಿರ್ದೇಶಕರೊಬ್ಬರು ಹಿಯಾಳಿಸಿದ್ದೆ ಕಾರಣವಂತೆ! ಇವರ ಪತಿ ಕೂಡ ಸ್ಟಾರ್ ನಟ..
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram