ಸಂಜೆ ವೇಳೆ ಅಪ್ಪಿ ತಪ್ಪಿಯು ಮನೆಯಲ್ಲಿ ಈ 5 ಕೆಲಸಗಳನ್ನು ಮಾಡಬೇಡಿ! ಲಕ್ಷ್ಮೀ ಶಾಶ್ವತವಾಗಿ ಹೊರಟು ಹೋಗುತ್ತಾಳೆ..

ಸಂಜೆಯ ಸಮಯದಲ್ಲಿ ಕೆಲವೊಂದು ಕೆಲಸಗಳನ್ನ ಮಾಡಬಾರದು ಮಾಡಿದರೆ ಮನೆಗೆ(home) ದರಿದ್ರ ಅದರಲ್ಲೂ ಹೆಣ್ಣು ಮಕ್ಕಳ ವಿಚಾರದಲ್ಲಿ ಬಹಳಷ್ಟು ವಿಚಾರಗಳಿಗೆ ಆಗಾಗ ಚರ್ಚೆಗಳು ಆಗ್ತಾನೆ ಇರುತ್ತೆ. ಇನ್ನು ಸೂರ್ಯಾಸ್ತದ ನಂತರ ಇದು ಮಾಡಬೇಡ, ಅದು ಮಾಡಬೇಡ ಅಂತ ಮನೆಯ ಹಿರಿಯರು ಅನೇಕ ಬಾರಿ ಹೇಳುವುದನ್ನ ಕೇಳಿರುತ್ತೇವೆ. ಆಗ ಸಾಮಾನ್ಯವಾಗಿ ನಾವು ಅವುಗಳನ್ನ ಮೂಢನಂಬಿಕೆಗಳು ಸುಮ್ನೆ ಹೇಳ್ತಾರೆ ಬಿಡು ಅಂತ ನಿರ್ಲಕ್ಷ ಮಾಡ್ತೀವಿ ಆದರೆ ವಾಸ್ತವದಲ್ಲಿ, ಆ ವಿಷಯಗಳ ಹಿಂದೆ ಆಳವಾದ ಅರ್ಥವಿದೆ ಅನ್ನೋದನ್ನ ಮರೆಯುತ್ತೇವೆ. ಅಲ್ದೇ ಅದನ್ನು ಉಲ್ಲಂಘನೆ ಮಾಡೋದ್ರಿಂದ ಕೆಲವೊಂದು ಗಂಭೀರ ಸಮಸ್ಯೆಗಳನ್ನು ಅನುಭವಿಸುವಂತಾಗುತ್ತದೆ. ಅದರಲ್ಲೂ ಕತ್ತಲಾದ ನಂತರ ಮನೆಯಲ್ಲಿ ಕೆಲವೊಂದು ನಿಷಿದ್ಧ ಕೆಲಸಗಳನ್ನು ಮಾಡಿದರೆ, ಅದು ನಮ್ಮ ಮನೆಯ ಶಾಂತಿಯನ್ನು ಹಾಳು ಮಾಡುತ್ತದೆ. ಅಲ್ದೇ ಸಂಜೆ ವೇಳೆಯಲ್ಲಿ ಇಂತಹ ನಿಷಿದ್ದ ಕೆಲಸಗಳನ್ನ ಮಾಡಿದ್ದೆ ಆದಲ್ಲಿ ದಾರಿದ್ರ್ಯ ತಾಂಡಾವ ಆಡುತ್ತೆ, ಲಕ್ಷ್ಮೀ ದೇವಿ ಮನೆಯಿಂದ ಹೊರಗೆ ಹೋಗುತ್ತಲೇ ದರಿದ್ರ ಲಕ್ಷ್ಮೀ ಮನೆ ಪ್ರವೇಶ ಮಾಡಿ ಮನೆಯಲ್ಲಿನ ಸುಖ ಶಾಂತಿ ನೆಮ್ಮದಿ ನಾಶವಾಗಿಬಿಡುತ್ತಂತೆ.

WhatsApp Group Join Now
Telegram Group Join Now

ಹೌದು ಗೋಧೂಳಿ ಸಮಯವನ್ನು ಧರ್ಮಗ್ರಂಥಗಳಲ್ಲಿ ಬಹಳ ಶುಭ ಸಮಯವೆಂದು ಪರಿಗಣಿಸಲಾಗಿದೆ. ಈ ಮುಹೂರ್ತದಲ್ಲಿ ಮಾಡಿದ ಕೆಲಸಗಳಿಂದ ಶುಭ ಫಲಗಳನ್ನು ಪಡೆಯಬಹುದೆನ್ನುವ ನಂಬಿಕೆಯಿದೆ. ಹೀಗಾಗಿ ಮುಸ್ಸಂಜೆಯೆಂದರೆ ಏನೆಂದು ಕೆಲವರಿಗೆ ತಿಳಿದೆಯೂ ಇರಬಹುದು. ಧರ್ಮಗ್ರಂಥಗಳ ಪ್ರಕಾರ, ಮುಸ್ಸಂಜೆಯೆಂದರೆ ಸೂರ್ಯ ಮುಳುಗುವ ಸಮಯ. ಅಂದರೆ, ಸಂಜೆ 5:30 ರಿಂದ 7 ರವರೆಗಿನ ಸಮಯವನ್ನ ಗೋಧೂಳಿ ಅಥವ ಮುಸ್ಸಂಜೆ ಅಂತ ಹೇಳಲಾಗುತ್ತದೆ. ಈ ಸಮಯದಲ್ಲಿ ಹಸುಗಳನ್ನು ಹೊಲದಲ್ಲಿ ಮೇಯಿಸಿಕೊಂಡು ನಂತರ ಹಿಂತಿರುಗುವಾಗ, ಅವುಗಳ ಪಾದಗಳಿಂದ ಬೀಸುವ ಧೂಳಿನಿಂದ, ಸೂರ್ಯನು ಕೆಂಪು ಬಣ್ಣಕ್ಕೆ ತಿರುಗುತ್ತಾನೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಅಂದ್ರೆ ಈ ಸಮಯವನ್ನು ಗೋಧೂಳಿ ಸಮಯ ಎಂದು ಕರೆಯಲಾಗುತ್ತದೆ. ಅಲ್ದೇ ಯಾವುದೇ ಶುಭ ಚಟುವಟಿಕೆಗಳಿಗೆ ಈ ಸಮಯವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಸೋಮಾರಿಯಾಗಿರೋದು, ಕೆಲವೊಂದಷ್ಟು ಕೆಲಸಗಳನ್ನ ಮಾಡುವುದನ್ನ ನಿಷಿದ್ದ ಅಂತ ಹೇಳಲಾಗಿದ್ದು, ಮಾಡುದ್ರೆ ಮನೆ ಸರ್ವನಾಶವಾಗಿಬಿಡುತ್ತೆ ಅಂತ ಹೇಳ್ತಾರೆ.

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿಯನ್ನ ಹೀಗೆ ಸಲ್ಲಿಸಬೇಕು! ಎಲ್ಲಿ ಬೇಕಾದರಲ್ಲಿ ಅರ್ಜಿಸಲ್ಲಿಸೋಕಾಗಲ್ಲ!?

ಸಂಜೆ ವೇಳೆ ಈ ಕೆಲಸ ಮಾಡಿದ್ರೆ ಏಳ್ಗೆಯೇ ಆಗೋದಿಲ್ಲ

ಮೊದಲಿಗೆ ಸೂರ್ಯಾಸ್ತದ ಸಮಯದಲ್ಲಿ ಮಲಗುವುದನ್ನು ಧರ್ಮಗ್ರಂಥಗಳಲ್ಲಿ ತಪ್ಪು ಎಂದು ಪರಿಗಣಿಸಲಾಗಿದೆ. ಇದು ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಧರ್ಮಗ್ರಂಥಗಳ ಪ್ರಕಾರ, ಸಂಜೆ ಮಲಗುವುದು ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಮಲಗುವ ಮೂಲಕ ವ್ಯಕ್ತಿಯು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದು ನಂಬಿಕೆ. ಇದರಿಂದ ನಿಮ್ಮ ಮೇಲೆ ದೇವತೆಗಳೂ ಕೋಪಗೊಳ್ಳುತ್ತಾರೆ. ಅಲ್ದೇ ಮಹಾಲಕ್ಷ್ಮೀ ಪ್ರವೇಶದ ಸಮಯದಲ್ಲಿ ಮಲಗುವುದು ಬಹಳ ದುರದೃಷ್ಟಕರ ಅಂತ ನಂಬಲಾಗಿದೆ.

ದೀಪ ಹಚ್ಚಿದ ನಂತರ ಅಥವಾ ಲೈಟ್ ಆನ್ ಮಾಡಿದ ಬಳಿಕ ಮನೆಯನ್ನು(home) ಸ್ವಚ್ಛಗೊಳಿಸುವುದು ದಾರಿದ್ರ್ಯವನ್ನ ಉಂಟು ಮಾಡುತ್ತದೆ. ಹೌದು ಸಂಜೆ ಸಮಯದಲ್ಲಿ ಮನೆಯನ್ನ ಗುಡಿಸುವುದು ಅಥವಾ ಒರೆಸುವುದನ್ನು ತಪ್ಪಿಸಬೇಕು. ಶಾಸ್ತ್ರದ ಪ್ರಕಾರ ಮುಸ್ಸಂಜೆ ವೇಳೆ ಮನೆಯ ಕಸವನ್ನು ಹೊರಗೆ ಹಾಕಿದರೆ ಲಕ್ಷ್ಮಿ ದೇವಿಯೂ ಹೊರಗೆ ಹೋಗುತ್ತಾಳೆ. ಇದಾದ ನಂತರ ಕುಟುಂಬ ಸದಸ್ಯರಿಗೆ ಕೆಟ್ಟ ದಿನಗಳು ಬರಲಾರಂಭಿಸುತ್ತವೆ. ಅಲ್ದೇ ಮನೆಯಲ್ಲಿ ಅನೇಕ ಬಿಕ್ಕಟ್ಟುಗಳು ಅಂದ್ರೆ ಆರ್ಥಿಕ ಸಮಸ್ಯೆಗಳು ಬರುತ್ತವೆ.

ಜೊತೆಗೆ ಸೂರ್ಯಾಸ್ತದ ನಂತರ ತಿನ್ನುವುದನ್ನು ಅಂದ್ರೆ ಊಟ ಮಾಡುವುದನ್ನ ತಪ್ಪಿಸಬೇಕು. ಅಂದರೆ ರಾತ್ರಿಯಾಗುವುದಕ್ಕಿಂತ ಮೊದಲು ಆಹಾರವನ್ನು ತಿನ್ನಬಾರದು. ದೇವತೆಗಳು ವಿಶ್ರಾಂತಿ ಪಡೆಯುವ ಸಮಯ ಇದು. ಇದಲ್ಲದೆ, ಈ ಸಮಯದಲ್ಲಿ ದೇವರ ಪೂಜೆಯನ್ನು ಮಾಡುವಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಅದನ್ನ ಬಿಟ್ಟು ಮುಸ್ಸಂಜೆ ವೇಳೆ ನಾವು ಆಹಾರವನ್ನು ಸೇವಿಸುವುದು ದೇವರಿಗೆ ಮತ್ತು ದೇವತೆಗಳಿಗೆ ಮಾಡಿದ ಅವಮಾನವಾಗುತ್ತದೆ. ಶಾಸ್ತ್ರಗಳ ಪ್ರಕಾರ, ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ, ಇದರಿಂದಾಗಿ ಮನೆಯಲ್ಲಿ ಬಡತನ ನೆಲೆಸುತ್ತದೆ.

ರಾತ್ರಿ ಸಮಯದಲ್ಲಿ ಹಾಲು ಅಥವಾ ಮೊಸರನ್ನು ದಾನ ಮಾಡಬಾರದು. ಹೌದು ಹಾಲು, ಮೊಸರು, ಅಕ್ಕಿ, ಅರಿಷಿನವನ್ನ ದಾನ ಮಾಡಬಾರದು. ಮತ್ತು ಮುಸ್ಸಂಜೆ ವೇಳೆ ಸಾಲ ಕೊಡಬಾರದು. ಜೊತೆಗೆ ಮನೆಯಲ್ಲಿ ಕೆಟ್ಟ ಮಾತುಗಳನ್ನಾಡುವುದಾಗಲಿ, ಬೇರೆಯವರಿಗೆ ಕೇಡನ್ನು ಬಯಸುವುದಾಗಲಿ ಮಾಡಬಾರದು. ಯಾಕಂದ್ರೆ ದೀಪ ಹಚ್ಚುವ ಕಾಲ ಅಂದ್ರೆ ಸಾತ್ವಿಕ ಕಾಲ. ಈ ಕಾಲದಲ್ಲಿ ಶುಭ ಮಾತುಗಳನ್ನ ಆಡಬೇಕು. ಅಲ್ದೇ ಹಾಲು ಮತ್ತು ಮೊಸರು ಚಂದ್ರ ಮತ್ತು ಸೂರ್ಯನಿಗೆ ಸಂಬಂಧಿಸಿವೆ, ಶುಕ್ರನೊಂದಿಗೆ ಮೊಸರಿನ ಸಂಬಂಧವನ್ನು ಹೇಳಲಾಗಿದೆ. ಸೂರ್ಯಾಸ್ತದ ನಂತರ ಹಾಲು, ಮೊಸರು ದಾನ ಮಾಡುವುದರಿಂದ ಜೀವನದಲ್ಲಿ ಸುಖದ ಕೊರತೆ ಉಂಟಾಗುತ್ತದೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ.

ಕೊನೆಯದಾಗಿ ಸಂಜೆ ವೇಳೆಯಲ್ಲಿ ಕೂದಲು ಮತ್ತು ಉಗುರು ಕತ್ತರಿಸುವುದು, ಕತ್ತರಿಸಿಕೊಳ್ಳುವುದನ್ನ ಮಾಡಬಾರದು. ಇದನ್ನ ಕೂಡ ಅಶುಭ ಅಂತ ಹೇಳಲಾಗುತ್ತಿದ್ದು, ಇದರಿಂದಲೂ ತಾಯಿ ಲಕ್ಷ್ಮೀ ದೇವಿ ಮುನಿಸಿಕೊಂಡು ಹೋಗ್ತಾಳೆ ಅನ್ನೋ ನಂಬಿಕೆ ಇದೆ.

ಇದನ್ನೂ ಓದಿ: ನೀವು ಮಂಗಳವಾರ ಜನಿಸಿದ್ರೆ ಇದನ್ನ ನೀವು ತಿಳಿದುಕೊಳ್ಳಲೇಬೇಕು; ಇಂಥವರನ್ನ ಎದುರು ಹಾಕಿಕೊಂಡ್ರೆ ಆಗೋದೇ ಬೇರೆ!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram