ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಾರದೆ ಇದ್ದರೆ ಹೀಗೆ ಮಾಡಿ.

PM Kisan Samman Yojana money

ಕಿಸಾನ್ ಸಮ್ಮಾನ್ ಯೋಜನೆಯ 17 ನೇ ಕಂತಿನ ಹಣ ಜಮಾ ಮೊನ್ನೆ ತಾನೇ ಆಗಿದೆ. ಈಗಾಗಲೇ ಹಲವಾರು ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಂದಿದೆ. ಕೆಲವರ ಖಾತೆಗೆ ಇನ್ನೂ ಹಣ ಜಮಾ ಆಗಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ನಿಮ್ಮ ಖಾತೆಗೆ ಹಣ ಜಮಾ ಆಗಿರದೆ ಇದ್ದರೆ ಈ ಕೆಲಸ ಮಾಡಿ.

WhatsApp Group Join Now
Telegram Group Join Now

ಕಿಸಾನ್ ಸಮ್ಮಾನ್ ಯೋಜನೆಗೆ 20,000 ಕೋಟಿ ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ :- ದೇಶದ ರೈತರಿಗೆ ಆರ್ಥಿಕ ಸಹಾಯ ನೀಡುವ ದೃಷ್ಟಿಯಿಂದ ನರೇಂದ್ರ ಮೋದಿ ಸರ್ಕಾರವು ಕಿಸಾನ್ ಸಮ್ಮಾನ್ ಯೋಜನೆಯನ್ನು ಆರಂಭ ಮಾಡಿತು. ಈಗಾಗಲೇ 17 ಕಂತಿನ ಹಣ ರೈತರ ಕೈ ಸೇರಿದೆ. ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಮೋದಿ ಅವರು ಮೊದಲ ದಿನವೇ ಕಿಸಾನ್ ಸಮ್ಮಾನ್ ಯೋಜನೆಗೆ 20,000 ಕೋಟಿ ಹಣವನ್ನು ಬಿಡುಗಡೆ ಮಾಡುವ ಕರಡು ಪ್ರತಿ ಗೆ ಸಹಿ ಹಾಕಿದ್ದರು. ಇದು ದೇಶದ ರೈತರಿಗೆ ನರೇಂದ್ರ ಮೋದಿ ಅವರು ನೀಡಿರುವ ಗೌರವ ಎಂಬುದಾಗಿ ಹಲವಾರು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

9.3 ಕೋಟಿ ಫಲಾನುಭವಿಗಳಿಗೆ 17 ನೇ ಕಂತಿನ ಹಣ ಜಮಾ ಆಗಿದೆ.:- ಭಾರತ ದೇಶದ 9.3 ಕೋಟಿ ರೈತ ಕುಟುಂಬದ ಹಿರಿಯರ ಖಾತೆಗೆ ಹಣವನ್ನು ಜಮಾ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಬರಲಿದೆ 10 ಸಾವಿರ; ವಿದ್ಯಾಧನ್ ಸ್ಕಾಲರ್ ಶಿಪ್ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ?

ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಾರದೆ ಇದ್ದರೆ ಹೀಗೆ ಮಾಡಿ :-

ಯಾವುದೇ ತಾಂತ್ರಿಕ ದೋಷಗಳಿಂದ ಅಥವಾ ಖಾತೆಯ ದೋಷಗಳಿಂದ 17 ನೇ ಕಂತಿನ ಕಿಸಾನ್ ಸಮ್ಮಾನ್ ಯೋಜನೆಯ ಹಣ ನಿಮ್ಮ ಖಾತೆಯ ಬಾರದೆ ಇದ್ದರೆ ನೀವು ಹೀಗೆ ಮಾಡಿ :-

  • ಒಮ್ಮೆ ನಿಮ್ಮ ಖಾತೆಗೆ ಯೋಜನೆಯ ಹಣ ಬಾರದೆ ಇದ್ದರೆ ನೀವು ಸಹಾಯವಾಣಿ ಸಂಖ್ಯೆ ಗೆ ಕರೆ ಮಾಡಬಹುದು. ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ – 155261 ಅಥವಾ 181155266.
  • ಕಿಸಾನ್ ಸಮ್ಮಾನ್ ಯೋಜನೆಯ ಬಗ್ಗೆ, ನಿಮಗೆ ಸರಿಯಾಗಿ ಹಣ ಬಾರದೆ ಇದ್ದರೆ ನೀವು ದೂರು ನೀಡಬಹುದು. ದೂರು ನೀಡಬೇಕಾದ ಸಹಾಯವಾಣಿ ಸಂಖ್ಯೆ – 011-24300606.
  • ಮೇಲ್ ಮೂಲಕ ನಿಮ್ಮ ದೂರುಗಳನ್ನು ಅಥವಾ ನಿಮ್ಮ ಸಮಸ್ಯೆಗಳನ್ನು ಸಲ್ಲಿಸಲು ಈ ಕೆಳಗಿನ ಮೇಲ್ ID ಗೆ ದೂರು ಕಳುಹಿಸಿ – [email protected].
  • ನಿಮ್ಮ ಬ್ಯಾಂಕ್ ಖಾತೆಗೆ EKYc ಮಾಡಿಸದೆ ಇದ್ದರೂ ಸಹ ನಿಮಗೆ ಕಿಸಾನ್ ಸಮ್ಮಾನ್ ಯೋಜನೆಯ ಹಣ ಜಾಣ ಆಗುವುದಿಲ್ಲ. ನಿಮ್ಮ ಬ್ಯಾಂಕ್ ಗೆ ತೆರಳಿ EKYc ಮಾಡಿಸಿ. ಇಲ್ಲದೆ ಇದ್ದರೆ ನಿಮ್ಮ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅಲ್ಲಿ ನಿಮಗೆ EKYc ಮಾಡಲು ಸಾಧ್ಯವಾಗುತ್ತದೆ.

ನೀವು ಪಿಎಂ ಕಿಸಾನ್ ಸಮ್ಮಾನ್ ಹಣ ಎಷ್ಟು ಕಂತು ನಿಮಗೆ ದೊರಕಿದೆ ಎಂಬ ಬಗ್ಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ pmkissan.in ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಹಾಗೂ ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಲು ಸಾಧ್ಯವಿದೆ ಹಾಗೂ ಪಿಎಂ ಕಿಸಾನ್ ಯೋಜನೆ ಯಾವಾಗ ಬಿಡುಗಡೆ ಆಗಿದೆ ಏಷ್ಟು ಕಂತಿನ ಹಣ ಬಿಡುಗಡೆ ಆಗಿದೆ. ನಿಮ್ಮ ಊರಿನ ಹಾಗೂ ನಿಮ್ಮ ನಗರದ ಏಷ್ಟು ಸದಸ್ಯರಿಗೆ ಹಣ ಜಮಾ ಆಗಿದೆ ಎಂಬುದನ್ನು ಈ ವೆಬ್ಸೈಟ್ ಮೂಲಕ ತಿಳಿಯಲು ಸಾಧ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 78000 ರೂಪಾಯಿ ಸಬ್ಸಿಡಿ ಪಡೆಯಿರಿ.