Government Jobs: ಸರಕಾರಿ ಹುದ್ದೆಗೆ ಸೇರಿಕೊಳ್ಳಬೇಕು ಅಂತ ಎಲ್ಲರೂ ಪ್ರಯತ್ನಿಸುತ್ತಿರುತ್ತಾರೆ, ಆದರೆ ಅದೃಷ್ಟವೆಂಬಂತೆ ಅದು ಕೆಲವೇ ಜನರಿಗೆ ಮಾತ್ರ ಮೀಸಲಾಗುತ್ತದೆ. ಹಾಗಾದ್ರೆ ಸರ್ಕಾರಿ ಹುದ್ದೆಗೆ ಸೇರಬೇಕಾದರೆ ಯಾವೆಲ್ಲ ದಾಖಲಾತಿಗಳು ಬೇಕು ಅಂತ ತಿಳಿದುಕೊಳ್ಳೋಣ. ದಾಖಲಾತಿಗಳನ್ನ ಹೇಗೆ ರೆಡಿ(Ready) ಮಾಡಿ ಇಟ್ಟುಕೊಳ್ಳುವುದು? ಒಂದು ವೇಳೆ ಅದು ಸಿಗದಿದ್ದರೆ ಅದನ್ನ ಹೇಗೆ ತರಿಸಿಕೊಳ್ಳುವುದು? ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಒಬ್ಬ ಮನುಷ್ಯ ಒಂದು ಕೆಲಸವನ್ನು ಪಡೆಯಬೇಕಾದರೆ ಹರಸಾಹಸ ಮಾಡುತ್ತಾನೆ. ಎಷ್ಟು ದಿನಗಳಿಂದ ಎಷ್ಟು ತಿಂಗಳುಗಳಿಂದ ಹುಡುಕಿ ಒಂದು ಕೆಲಸವನ್ನು ಪಡೆಯಬೇಕಾಗುತ್ತದೆ. ಸ್ಪರ್ಧಾತ್ಮಕ ಈ ಯುಗದಲ್ಲಿ ಕೆಲಸವನ್ನು ಹುಡುಕೋದು ಅಷ್ಟು ಸುಲಭವಲ್ಲ. ದಾಖಲಾತಿಗಳು ಸರಿಯಾಗಿರದೆ ಇದ್ದಲ್ಲಿ ಅದು ಕೂಡ ವ್ಯರ್ಥವಾಗುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲಾತಿಗಳು:
ಸರಕಾರಿ ಕೆಲಸಕ್ಕೆ(Government Jobs) ನೀವು ಅರ್ಜಿಯನ್ನು ಸಲ್ಲಿಸುವುದು ಇದ್ದರೆ ಅಥವಾ ಯಾವುದೇ ಕೆಲಸಕ್ಕೆ ನೀವು ಯಾವುದೇ ಕಂಪನಿಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕಾದರೆ ನಿಮಗೆ ಮೊದಲು ಕೇಳುವುದು ಆಧಾರ್ ಕಾರ್ಡ್(Aadhaar Card). ಹಾಗಾದ್ರೆ ಈ ಆಧಾರ್ ಕಾರ್ಡನ್ನು ಎಲ್ಲ ಕಂಪನಿಗಳಲ್ಲೂ ಏಕೆ ಕೇಳುತ್ತಾರೆ, ಅಂದ್ರೆ ಒಂದು ಅಭ್ಯರ್ಥಿಗೆ ಒಂದು ಕಂಪನಿಯಲ್ಲಿ ಒಂದು ಬಾರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಒಂದು ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಬಾರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರೊಟೆಕ್ಷನ್ ಸಲುವಾಗಿ ಮತ್ತು ಆ ವ್ಯಕ್ತಿಯ ಐಡೆಂಟಿಟಿ(Identity) ಸಲುವಾಗಿ ಆಧಾರ್ ಕಾರ್ಡನ್ನು ಕೇಳುತ್ತಾರೆ. ಆಧಾರ್ ಕಾರ್ಡ್ ಮೂಲಕ ಎಲ್ಲ ನಿಮ್ಮ ಡಾಕ್ಯುಮೆಂಟ್ ಕೂಡ ವೆರಿಫಿಕೇಷನ್ ಮಾಡಬಹುದು. ಹಾಗೂ ನಿಮ್ಮ ಎಲ್ಲಾ ಬಯೋಡೇಟಾ ವನ್ನು ಕಂಡು ಹಿಡಿಯಬಹುದು. ಆದ್ದರಿಂದ ಎಲ್ಲಾ ಕಂಪನಿಗಳಲ್ಲೂ ಕೂಡ ಮೊದಲ ದಾಖಲಾತಿಯಾಗಿ ಆಧಾರ್ ಕಾರ್ಡ್ನ ಕೇಳುತ್ತಾರೆ.
ಆಧಾರ್ ಕಾರ್ಡ್ ಎನ್ನುವುದು ಎಲ್ಲರ ಹತ್ತಿರವು ಇದ್ದೇ ಇರುತ್ತೆ, ಒಮ್ಮೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇಲ್ಲ ಅಂತಾದ್ರೆ ಅಥವಾ ಡಿ ಆಕ್ಟಿವೇಟ್ ಆಗಿದೆ ಅಂತಾದರೆ ನಿಮ್ಮ ಹತ್ತಿರವಿರುವ ಆಧಾರ್ ಸೇವ ಕೇಂದ್ರಕ್ಕೆ ಹೋಗಿ ಭೇಟಿ ಕೊಡಿ ಹಾಗೆ ಆಧಾರ್ ಕಾರ್ಡನ್ನು ತಿದ್ದುಪಡಿ ಮಾಡಿಕೊಳ್ಳಿ. ಎರಡನೆಯದಾಗಿ ಕನ್ನಡ ಭಾಷಾ ಪ್ರಮಾಣ ಪತ್ರ. ಇದು ಕೂಡ ನೀವು ಸರ್ಕಾರಿ ಕೆಲಸಕ್ಕೆ ಸೇರ್ಬೇಕು ಅಂದ್ರೆ ಇದು ಪ್ರಮುಖವಾದ ದಾಖಲಾತಿ ಅಂತಾನೆ ಹೇಳಬಹುದು.
ಒಂದರಿಂದ 10ನೇ ತರಗತಿಯವರೆಗೆ ಓದಿದ ಶಾಲೆಯಿಂದ ಮಾತೃಭಾಷಾ ಮಾಧ್ಯಮದ (kannada) ಪ್ರಮಾಣ ಪತ್ರ ಪ್ರಮುಖವಾಗಿರುತ್ತದೆ. ಒಂದು ವೇಳೆ ನೀವು ಒಂದನೇ ಕ್ಲಾಸಿನಿಂದ ಒಂಬತ್ತನೇ ಕ್ಲಾಸಿನವರೆಗೆ ಕನ್ನಡದಲ್ಲಿ ಓದಿ, ಒಂದು ವರ್ಷ ಅಂದರೆ ಹತ್ತನೇ ಕ್ಲಾಸನ್ನು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದರೆ ನಿಮಗೆ ಕನ್ನಡ ಮಾಧ್ಯಮದ ಪ್ರಮಾಣ ಪತ್ರ ಸಿಗುವುದಿಲ್ಲ. ಇದರಿಂದ ನೀವು ಸಮಸ್ಯೆಗೆ ಒಳಗಾಗಬೇಕಾಗುತ್ತದೆ ನೀವು ಶಿಕ್ಷಣ ಸಂಸ್ಥೆಗೆ ಭೇಟಿ ಕೊಟ್ಟು ಸಿಇಓ (CEO) ಅನ್ನು ಭೇಟಿ ಮಾಡಿ, ಪ್ರಮಾಣ ಪತ್ರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಗ್ರಾಮೀಣ ಪ್ರಮಾಣ ಪತ್ರವೂ ಬೇಕಾಗುತ್ತದೆ. ಒಂದು ವೇಳೆ ನೀವು ಗ್ರಾಮೀಣ ಶಾಲೆಯಲ್ಲಿ ಓದಿದರೆ, ಅಲ್ಲಿ ಹೋಗಿ ಈ ಪ್ರಮಾಣ ಪತ್ರವನ್ನು ಕಲೆಕ್ಟ್ ಮಾಡಿಕೊಳ್ಳಬಹುದು.. ಒಂದರಿಂದ 10ನೇ ಕ್ಲಾಸಿನಲ್ಲಿ ನೀವು ಒಂದು ವರ್ಷ ನಗರದ ಶಾಲೆಯಲ್ಲಿ ಓದಿದರೂ ಕೂಡಾ ಗ್ರಾಮೀಣ ಪ್ರಮಾಣ ಪತ್ರವು ಸಿಗುವುದಿಲ್ಲ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಇದು ಕೂಡ ಸರ್ಕಾರಿ ನೌಕಾರಿಯನ್ನು ನೀವು ಬಯಸಿದ್ದರೆ ಈ ದಾಖಲಾತಿಯು ಕೂಡ ಕಡ್ಡಾಯವಾಗಿರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.