ಹೊಸ ರೇಷನ್ ಕಾರ್ಡ್ ಪಡೆಯಲು ಈ ದಾಖಲಾತಿಗಳು ಬೇಕೆ ಬೇಕು

new ration card

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸರ್ಕಾರ ಅಪ್ಲಿಕೇಶನ್ ಲಿಂಕ್ ಓಪನ್ ಮಾಡಲು ಇಲಾಖೆ ಮುಂದಾಗಿದೆ. ಎಲ್ಲಾ ವರ್ಗದ ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಕೆಲವು ದಾಖಲೆಗಳನ್ನು ನೀಡಲೇಬೇಕು. ಹಾಗಾದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಯಾವ ಯಾವ ದಾಖಲಾತಿಗಳನ್ನು ನೀಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

ಯಾವಾಗಿನಿಂದ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು?: ಏಪ್ರಿಲ್ ಮತ್ತು ಮೇ ತಿಂಗಳು ಎಲೆಕ್ಷನ್ ನಡೆಯುತ್ತಿದ್ದು ಎಲೆಕ್ಷನ್ ಫಲಿತಾಂಶ ಬಿಡುಗಡೆ ಅದ ನಂತರ ಜೂನ್ ಮೊದಲನೇ ಅಥವಾ ಎರಡನೇ ವಾರದಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಓಪನ್ ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಯಾವ ಯಾವ ದಾಖಲೆಗಳನ್ನು ನೀಡಬೇಕು?

ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಾಗ ನೀವು ನಿಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ನೀಡಲೇಬೇಕು. ಹಾಗೂ ನಿಮ್ಮ ಕುಟುಂಬ ಸದಸ್ಯರ ಫೋಟೋ ನೀಡಬೇಕು. ಹಾಗೂ ನಿಮ್ಮ ಕುಟುಂಬ ಸದಸ್ಯರ ವಯಸ್ಸಿನ ಪೂರಾವೆ ನೀಡಬೇಕು. ಹಾಗೂ ನಿಮ್ಮ ಕುಟುಂಬ ಬಿಪಿಎಲ್ ಕಾರ್ಡ್ ಪಡೆಯುವ ಅರ್ಹತೆ ಹೊಂದಿದ್ದರೆ ನೀವು ನಿಮ್ಮ ಕುಟುಂಬದ ಆದಾಯ ಪ್ರಮಾಣ ಪತ್ರವನ್ನು ನೀಡಬೇಕು. ನಿಮ್ಮ ಕುಟುಂಬ ಸದಸ್ಯರ ಫೋನ್ ನಂಬರ್ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ದಿನವೂ 45 ರೂಪಾಯಿ ಹೂಡಿಕೆ ಮಾಡಿ 25 ಲಕ್ಷ ಲಾಭ ಪಡೆಯುವ LIC ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸುವುದು ಹೇಗೆ?: 

ನೀವು ನಿಮ್ಮ ಅರ್ಜಿಯನ್ನು ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ನಿಮ್ಮ ಪಡಿತರ ಕೇಂದ್ರಕ್ಕೆ ಹೋಗಿ ಸಲ್ಲಿಸಬಹುದು ಇಲ್ಲವೇ ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ತೆರಳಿ ಮುಖಪುಟದಲ್ಲಿ ಕಾಣುವ ಇ-ಸೇವೆಗಳು ವಿಭಾಗದಲ್ಲಿ ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಎಂಬ ಆಯ್ಕೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಪೂರ್ಣ ವಿಳಾಸವನ್ನು ಆಯ್ಕೆ ಮಾಡಬೇಕು. ನಂತರ ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ವಯಸ್ಸಿನ ವಿವರಗಳನ್ನು ನೀಡಬೇಕು. ಹಾಗೂ ನಿಮ್ಮ ಕುಟುಂಬದ ಆದಾಯದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಬೇಕು. ನಂತರ ಅಗತ್ಯವಿರುವ ಎಲ್ಲ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. ನಂತರ ನಿಮ್ಮ ಕುಟುಂಬದ ಸದಸ್ಯರ ಫೋಟೋ ದಾಖಲಾತಿ ನೀಡಬೇಕು ನಂತರ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು.

ಒಂದು ವರೆ ವರ್ಷದಿಂದ ರೇಷನ್ ಕಾರ್ಡ್ ವಿತರಣೆ ಮತ್ತು ಹೊಸ ಅರ್ಜಿ ಸಲ್ಲಿಸುವುದನ್ನು ಸ್ಥಗಿತ ಗೊಳಿಸಲಾಗಿತ್ತು:- 2023 ಎಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಇತ್ತು. ಆಗ ಚುನಾವಣೆಯ ಕಾರಣದಿಂದ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಆದರೆ ನಂತರ ಬಂದ ಕಾಂಗ್ರೆಸ್ ಸರಕಾರ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೆ ಲಿಂಕ್ ಓಪನ್ ಮಾಡಲೇ ಇಲ್ಲ. ತಾಂತ್ರಿಕ ದೋಷ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ರೇಷನ್ ಕಾರ್ಡ್ ವಿತರಣೆ ಆಗಬೇಕು ಎಂಬ ನೆಪ ಹೇಳುತ್ತಾ ಮತ್ತೆ ಮರು ನೋಂದಣಿಗೆ ಅವಕಾಶ ನೀಡಲಿಲ್ಲ. ಈಗ ಬರುವ ಜೂನ್ ತಿಂಗಳಿಂದ ಮತ್ತೆ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಆಹಾರ ಸರಬರಾಜು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಬಹುಬೇಡಿಕೆಯ ಪಾರ್ಲೆ-ಜಿ ಬಿಸ್ಕತ್ ನ ಬೆಲೆ, ಬೇರೆ ಬೇರೆ ದೇಶಗಳಲ್ಲಿ ಎಷ್ಟಿದೆ ಗೊತ್ತಾ? ತುಂಬಾ ದುಬಾರಿ!