ನಾಯಿಗಿರೋ ನಿಯತ್ತು ಮನುಷ್ಯನಿಗಿಲ್ಲ ಅಂತ ದೊಡ್ಡೋರು ಗಾದೆಯನ್ನ ಸುಮ್ನೆ ಹೇಳಿಲ್ಲ. ನಂಬಿದ್ದಕ್ಕೆ ಮನುಷ್ಯರೇ ಬೆನ್ನಿಗೆ ಚೂರಿ ಹಾಕಬಹುದು, ನಂಬಿಸಿ ಕತ್ತು ಕುಯ್ಯೋ ಕೆಲಸ ಮಾಡಬಹುದು ಅದ್ರೆ ಸಾಕು ಪ್ರಾಣಿಗಳು ಪ್ರತಿ ಕ್ಷಣ ಪ್ರತಿ ಸಂದರ್ಭದಲ್ಲೂ ತುತ್ತು ಅನ್ನ ತಿಂದ ಋಣ ತೀರಿಸಲು ಹವಣಿಸುತ್ತಿರುತ್ತವೆ. ಅವಕಾಶ ಸಿಕ್ರೆ ಸಾಕು ಇನ್ನೊಬ್ಬರನ್ನ ತುಳಿದು ತಾನು ಮೆರೆಯಬೇಕು ಅನ್ನೋ ಮನುಷ್ಯನಿಗಿಂತ ಕಷ್ಟ ಕಾಲದಲ್ಲಿ ಜೊತೆ ನಿಲ್ಲೋ ಶ್ವಾನ ಅದೆಷ್ಟೋ ಮೇಲು ಅನ್ನಬಹುದು. ನಿಮಗೆಲ್ಲ ಚಾರ್ಲಿ ಸಿನಿಮಾ ಗೊತ್ತಿರಬಹುದು… ಯಾರನ್ನು ನಂಬದ ಮನುಷ್ಯ ಎಲ್ಲವನ್ನು ಕಳೆದುಕೊಂಡು ಎಲ್ಲದರಿಂದ ದೂರಾದವನು ಹೇಗೆ ಶ್ವಾನದ ಪ್ರೀತಿಗೆ ಕಟ್ಟುಬಿದ್ದು ಜೀವನದ ಪ್ರತಿಯೊಂದು ಕ್ಷಣವನ್ನು ಅನುಭವಿಸಿ ಬದುಕುತ್ತಾನೆ ಅನ್ನೋದನ್ನ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹೌದು ಒಂದು ತುತ್ತಿನ ಅನ್ನದ ಋಣ ತೀರಿಸಲು ಶ್ವಾನ ಪ್ರತಿ ಹೆಜ್ಜೆಯಲ್ಲೂ ಅನ್ನ ಹಾಕಿದವನ ಜೊತೆ ನಿಲ್ಲುತ್ತೆ. ಇವತ್ತು ನಾನು ಹೇಳ್ತಿರೋ ಘಟನೆ ಕೂಡ ಅಂತದ್ದೇ. ಮನೆಯವರು ಅರಣ್ಯ ಇಲಾಖೆಯವರು, ಪೊಲೀಸರು ಯಾರು ಹುಡುಕಲಾರದ ಮನೆ ಮಗನನ್ನ ಆ ಮನೆಯ ಶ್ವಾನ ಹುಡುಕಿ ಮನೆ ಸೇರಿಸಿದೆ.
ಹೌದು ಮಾನಸಿಕ ಅಸ್ವಸ್ಥ ಯುವಕನೋರ್ವ ಮನೆಯಿಂದ ಹೊರ ಹೋಗಿ ನಾಪತ್ತೆಯಾದವನು ವಾರ ಕಳೆದ್ರು ಪತ್ತೆಯಾಗೋದೇ ಇಲ್ಲ. ಎಲ್ಲ ಕಡೆ ಎಲ್ಲರಿಂದಲೂ ಹುಡುಕಿಸಿದ ಮಾಬೇಯವರು ಕಾದು ಪ್ರಾಣಿಯ ಬಾಯಿಗೆ ಆಹಾರವಾದ ನನ್ನ ಮಗ ಅಂದುಕೊಂಡು ಕೈ ಚೆಲ್ಲಿ ಕೂರುತ್ತಾರೆ. ಅದ್ರೆ ಇದೀಗ ಮನೆಯಿಂದ ಹೊರಗೆ ತೆರಳಿದ್ದ ಯುವಕನೋರ್ವ ವಾರಗಳ ಬಳಿಕ ಶ್ವಾನದ ಸಹಾಯದಿಂದ ವಾಪಸ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೇ. ಹೌದು ಉಡುಪಿ ಜಿಲ್ಲೆಯ ಅಮವಾಸೆ ಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂತದೊಂದ್ದು ಅಪರೂಪದ ಘಟನೆ ನಡೆದಿದೆ.
ಇನ್ನು ಮಟ್ಟಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಸೀನಾ ನಾಯ್ಕ ಮಗ ವಿವೇಕಾನಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವಿವೇಕಾನಂದ ಸೆಪ್ಟೆಂಬರ್ 16 ರಂದು ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದ. ವಾರಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದ ವಿವೇಕಾನಂದ ಅನ್ನ ಆಹಾರವಿಲ್ಲದೇ ಬರೀ ನೀರು ಕುಡಿದು ಅಲೆಯುತ್ತಿದ್ದ. ಈತನನ್ನು ಹುಡುಕುವ ಸಲುವಾಗಿ ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಸಾಕಷ್ಟು ಶೋಧ ನಡೆಸಿತ್ತು. ಈ ಭಾಗದಲ್ಲಿ ಚಿರತೆಗಳ ಕಾಟ ಜಾಸ್ತಿ ಆಗಿರುವ ಹಿನ್ನೆಲೆಯಲ್ಲಿ ಚಿರತೆಗೆ ಆಹಾರವಾಗಿರಬಹುದು ಎನ್ನುವ ಶಂಕೆ ಕೂಡ ವ್ಯಕ್ತವಾಗಿತ್ತು ಹೀಗಾಗಿ ಮನೆಯವರು ಸುಮ್ಮನಾಗಿದ್ರು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ವಾರದ ಬಳಿಕ ಮಗನನ್ನ ಕಂಡು ನಿಟ್ಟುಸಿರು ಬಿಟ್ಟ ಪೋಷಕರು..
ಆದರೆ ಆಶ್ಚರ್ಯಕರ ರೀತಿಯಲ್ಲಿ 8 ದಿನಗಳ ಬಳಿಕ ಕಬ್ಬಿನಾಲೆಯ ಸಮೀಪದ ಮನೆ ಒಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಆ ಯುವಕ ಪತ್ತೆಯಾಗಿದ್ದಾನೆ. ಕಾಡು ಸೇರಿದ್ದ ವಿವೇಕಾನಂದ ಮತ್ತೆ ಮನೆಗೆ ವಾಪಸ್ ಆಗಲು ಸಾಕಿದ್ದ ನಾಯಿ ಸಹಾಯ ಮಾಡಿದೆ. ನಿತ್ರಾಣಗೊಂಡಿರುವ ಹಿನ್ನಲೆಯಲ್ಲಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೌದು ತನಗೆ ಗೊತ್ತಿಲ್ಲದೇ ಕಾಡು ಸೇರಿದ್ದ ಯುವಕನಿಗೆ ಮನೆಗೆ ವಾಪಸ್ಸು ಬರಲು ದಾರಿ ಗೊತ್ತಾಗದೆ ದಿಕ್ಕುಗಳು ತೋಚದೆ ಕಾಡಿನಲ್ಲಿಯೇ ವಾರಗಳಲ್ಲಿ ಕಾಲ ಕಾಲ ಕಳೆದಿದ್ದಾನೆ. ತಿನ್ನಲು ಆಹಾರವಿಲ್ಲದೆ ಯುವಕ ಬಹಳಷ್ಟು ಕಷ್ಟ ಪಟ್ಟಿದ್ದಾನೆ. ಇದೆ ಸಂದರ್ಭಕ್ಕೆ ಮನೆಯ ಶ್ವಾನ ಯುವಕನನ್ನ ತಾನು ಕೂಡ ಹುಡುಕಲು ಶುರು ಮಾಡಿ ಕಾಡು ಮೇಡು ಅಲಿದಿದೆ. ಅಲ್ಲಿ ಯುವಕನನ್ನ ನೋಡಿದ ಶ್ವಾನ ಯುವಕನನ್ನ ಗ್ರಾಮದ ಸಮೀಪದ ಮನೆಯವರೆಗೂ ಕರೆತಂದಿದೆ.
ಅದ್ರೆ ಒಂದು ವಾರದಿಂದ ಯುವಕನಿಗೆ ಊಟ ತಿಂಡಿ ಏನು ಇಲ್ಲದೆ ಇದಿದ್ದರಿಂದ ಮನೆಯೊಂದರ ಬಳಿಗೆ ಹೇಗೊ ಬಂದು ನಂತರ ಅಲ್ಲಿಯೇ ಕುಸಿದು ಬಿದಿದ್ದಾನೆ. ಅದಾದ ನಂತರ ಶ್ವಾನ ಮನೆಯವರನ್ನ ಕರೆ ತಂದಿದೆ. ಸದ್ಯ ವಾರದ ನಂತರ ಮಗನನ್ನ ನೋಡಿದ ಮನೆಯವರು ತುಂಬಾ ಖುಷಿ ಪಟ್ಟಿದ್ದು, ಸದ್ಯ ಉಟೋಪಾಚಾರವಿಲ್ಲದೆ ಅಸ್ವಸ್ಥನಾಗಿದ್ದ ಮಗನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಪೊಲೀಸ್ ಇಲಾಖೆಯವರು ಅರಣ್ಯ ಇಲಾಖೆಯವರು ಮನೆಯವರು ಊರಿನವರು ಎಲ್ಲರು ಹುಡುಕಿ ಹುಡುಕಿ ಕೊನೆಗೆ ಸಾಕಾಗಿ ಸುಮ್ಮನಾಗಿದ್ರು ಅದ್ರೆ ಶ್ವಾನದ ಸಹಾಯದಿಂದ ಮಗ ಮನೆಗೆ ಸೇರಿದ್ದು ನಿಜಕ್ಕೂ ಗ್ರೇಟ್. ಇದೀಗ ಯುವಕನ ಅಪ್ಪ ಶ್ವಾನವನ್ನ ಮುದ್ದಾಡಿದ್ದು ಎಲ್ಲೆಡೆ ಫೋಟೋಗಳು ವೈರಲ್ ಆಗ್ತಿದೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾರಾ ದುನಿಯಾ ವಿಜಿ ಮಕ್ಕಳು; ಇಂಡಸ್ಟ್ರಿಗೆ ಕಾಲಿಡುವ ಬಗ್ಗೆ ವಿಜಯ್ ಹೇಳಿದ್ದೇನು ಗೊತ್ತಾ?
ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳ ಉಚಿತ ಅಕ್ಕಿ ಹಣ ಯಾವಾಗ ಬರುತ್ತೆ; ಎಲ್ಲರಿಗೂ ಹಣ ಬರುತ್ತಾ? ಅಥವಾ ಅಕ್ಕಿ ಕೊಡ್ತಾರಾ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram