ಬಿಲ್ ಗೇಟ್ಸ್ ಒಂದೇ ಬಾರಿ ಭೇಟಿ ನೀಡಿದ್ದಕ್ಕೆ ದುಬಾರಿ ಬೆಲೆ ಕಾರ್ ಖರೀದಿ ಮಾಡಿದ ಚಾಯ್ ವಾಲಾ

Dolly Chaiwala Buy New

ಯಾರ ಅದೃಷ್ಟದ ದಿಕ್ಕು ಯಾವಾಗ ಬದಲಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಕಷ್ಟಪಟ್ಟು ದುಡಿದ ವ್ಯಕ್ತಿ ಸಿರುವಂತನಗಬಹುದು. ಅಂತೆಯೇ ನಾವು ಸಣ್ಣ ಕೆಲಸ ಎಂದು ತಿರಸ್ಕರಿಸಿದ ಕೆಲವು ಉದ್ಯಮದಿಂದ ನಮಗೆ ಹೆಚ್ಚಿನ ಲಾಭ ಗಳಿಸುವ ಸಾದ್ಯತೆ ಇರುತ್ತದೆ. ಹಾಗೆಯ ಯಾರು ನಮಗೆ ಅದೃಷ್ಟದ ರೂಪದಲ್ಲಿ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹೌದೂ ಒಬ್ಬ ಉದ್ಯಮಿ ಭೇಟಿ ನೀಡಿ ತಿಂಗಳ ಒಳಗೆ ಆತ ಬೆಲೆ ಬಾಳುವ ಕಾರು ಖರೀದಿ ಮಾಡಿದ ಎಂದರೆ ನೀವು ನಂಬಲೇಬೇಕು ಹಾಗಾದರೆ ಸಾಮಾನ್ಯ ಚಾಯ್ ವಾಲಾ ಇಂದು ದುಬಾರಿ ಕಾರ್ ತೆಗೆದುಕೊಂಡ ಹಿಂದಿನ ರೋಚಕ ಕಥೆಯನ್ನು ಇಂದು ತಿಳಿಯೋಣ.

WhatsApp Group Join Now
Telegram Group Join Now

ಚಾಯ್ ವಾಲಾ ನ ಅಂಗಡಿಗೆ ಭೇಟಿ ನೀಡಿದ್ದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ :-

ಮಹಾರಾಷ್ಟ್ರದ ನಾಗ್ಪುರದಲ್ಲಿ ಡಾಲಿ ಚಾಯ್ ವಾಲಾ ಎಂಬ ಚಹಾ ಮಾರಾಟಗಾರರೊಬ್ಬರು ಇದ್ದರೆ. ಇವರ ನಿಜವಾದ ಹೆಸರು ಸುನಿಲ್ ಪಾಟೀಲ್. ವಿಶಿಷ್ಟ ಚಹಾ ಮಾರಾಟ ಮಾಡುವ ಮೂಲಕ ಅಲ್ಲಿನ ಜನತೆಯ ಗಮನ ಸೆಳೆದು ದಿನಕ್ಕೆ 400 ರಿಂದ 500 ಕಪ್ ಚಹಾ ಮಾರಾಟ ಮಾಡುತ್ತಿದ್ದ, 3 ರಿಂದ 4 ಸಾವಿರದವರೆಗೆ ಒಂದು ದಿನಕ್ಕೆ ಸಂಪಾದನೆ ಮಾಡುತ್ತಿದ.. ತಾನು ಮಾಡಿದ ಚಹಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಿಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಫಾಲೋವರ್ಸ್ ಹೊಂದಿದ್ದಾರೆ.

ತಿಂಗಳ ಹಿಂದೆ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಇವರ ಚಹಾ ಅಂಗಡಿಗೆ ಭೇಟಿ ನೀಡಿದರು ಆದರೆ ಇವರು ಯಾರು ಎಂಬುದನ್ನು ಅರಿಯದೆ ಎಲ್ಲಾ ಗ್ರಾಹಕರಿಗೂ ಚಹಾ ನೀಡುವಂತೆ ಇವರಿಗೂ ಚಹಾ ನೀಡಿದರು. ಇವರು ಮಾಡುವ ಚಹಾವನ್ನು ವೀಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಬಿಲ್ ಗೇಟ್ಸ್ ಅವರು ಭಾರತದ ಪ್ರತಿ ಮೂಲೆಯಲ್ಲೂ ಹೊಸತನವಿದೆ. ಇಲ್ಲಿ ಸಿಗುವ ಚಹಾ ಬಹಳ ವಿಶಿಷ್ಟ ಆಗಿದೆ. ಚಹಾ ತಯಾರಿಸುವ ವೇಳೆ ಕೇಳಿಬರುವ ಟೆಕ್ಸ್ ರೂಪದ ಸಂದೇಶವು ಸಂತಸವಿದೆ ಎಂದು ತಿಳಿಸಿದರು. ಇದು ವೈರಲ್ ಅದ ಬಳಿಕ ಮಾಧ್ಯಮದವರು ಚಹಾ ವಾಲನ ಬಳಿ ಹೋಗಿ ವಿಚಾರಿಸಿದಾಗ ಈ ಬಗ್ಗೆ ಇವರಿಗೆ ಅರಿವೇ ಇಲ್ಲ ಎಂಬುದು ತಿಳಿಯಿತು.

ಬಿಲ್ ಗೇಟ್ಸ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡ ಬಳಿಕ ಚಾಯ್ ವಾಲ ನ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದ್ದು ಈಗ ಇವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ಇವರು ಮಾಡುವ ವೀಡಿಯೋ ಗಳಿಗೆ ಜನರು ಫಿದಾ ಆಗಿದ್ದರೆ. ಇವರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದರೆ. ಈಗ ಇವರು ಹೊಸದಾಗಿ ಕಾರ್ ತೆಗೆದುಕೊಂಡ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು ಅದು ಈಗ ಎಲ್ಲರ ಚರ್ಚೆಗೆ ಕಾರಣವಾಗಿದೆ. ಅವರು ತೆಗೆದುಕೊಂಡ ಕಾರ್ ಬೆಲೆ ಬರೋಬ್ಬರಿ 4 ಕೋಟಿ ಎಂದು ಹೇಳಲಾಗುತ್ತಿದೆ.

ಇನ್ನೊಂದು ಅಚ್ಚರಿಯ ವಿಷಯ ಏನೆಂದರೆ ಇವರು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವುದರಿಂದ ಈಗ ಇವರು ಚಾ ಮಾರುವ ಸ್ಥಳದಲ್ಲಿ ಇವರ ಹಿಂದೆ ಬೌನ್ಸರ್ ಗಳು ನಿಂತಿರುವುದು ವೀಡಿಯೋ ದಲ್ಲಿ ಕಾಣಬಹುದಾಗಿದೆ. ಭಾರಿ ಭದ್ರತೆಯ ನಡುವೆ ಚಹಾ ಮಾರುವ ವೀಡಿಯೋ ನೋಡಿ ನೆಟ್ಟೈಗರು ಫಿದಾ ಆಗಿದ್ದರೆ. ದಿನೇ ದಿನೇ ಇವರ ವೀಡಿಯೊಗಳು ವೈರಲ್ ಆಗುವ ಜೊತೆಗೆ ಈಗ ಹೆಚ್ಚಿನ ವ್ಯಾಪಾರವು ಆಗುತ್ತಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: 20K ಗಿಂತಲೂ ಕಡಿಮೆ ಬೆಲೆಯಲ್ಲಿ ಶಕ್ತಿಯುತ ವೈಶಿಷ್ಟ್ಯಗಳನ್ನು ಹೊಂದಿರುವ iQOO Z9 5G, ಈಗ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೊಂದಿಗೆ.