Dolo 650 Shashirekha: ಡೋಲೋ 650 ಶಶಿರೇಖಾ ಈಗ ಸೋಶಿಯಲ್ ಮಿಡಿಯಾ ಸ್ಟಾರ್! ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿಯಾದ ಶಶಿರೇಖಾ

Dolo 650 Shashirekha: ಹೌದು ಕೊರೋನ ಸಂದರ್ಭದಲ್ಲಿ ಇಡಿ ದೇಶವೇ ಭಯದಲ್ಲಿದ್ದಾಗ ಬಿಸಿ ರಾಗಿ ಮುದ್ದೆ, ಡೊಲೊ 650 ಮಾತ್ರೆ ಅನ್ನೋ ಡೈಲಾಗ್ ಸಿಕ್ಕಾಪಟ್ಟೆ ಟ್ರೆಂಡ್ ಸೃಷ್ಟಿ ಮಾಡಿತ್ತು. ಮೈಸೂರು ಮೂಲದ ಶಶಿರೇಖಾ ಹೊಡೆದಿದ್ದ ಆ ಡೈಲಾಗ್ ಎಲ್ಲೆಡೆ ವೈರಲ್ ಆಗಿ ಸ್ಟಾರ್ ನಟ ನಟಿಯರು ಕೂಡ ಡಬ್ ಮಾಡಿದ್ದು, ಆ ಟೈಮ್ ಲ್ಲಿ ಈ ಶಶಿರೇಖಾ ಸಿಕ್ಕಾಪಟ್ಟೆ ಫೇಮಸ್ ಆದ್ರೂ ನಂತರ ಶಶಿರೇಖಾ ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅನಂತರ ಖಾಸಗಿ ವಾಹಿನಿಯ ಸಂದರ್ಶಕರೊಬ್ಬರೂ ಶಶಿರೇಖಾ ಅವ್ರನ್ನ ಯಾವುದೋ ಕಾರ್ಯಕ್ರಮದಲ್ಲಿ ನೋಡಿ ಪಾತ್ರೆ ತೊಳೆಯುತ್ತಿರುವಾಗ್ಲೇ ಮಾತನಾಡಿಸಿದ್ದ ವಿಡಿಯೋ ಮತ್ತೊಮೆ ಟ್ರೊಲ್ ಆಗಿ ಸಾಕಷ್ಟು ವೈರಲ್ ಆಯ್ತು.. ಇದಾದ ನಂತರ ಶಶಿರೇಖಾ ಅವ್ರ ನಸೀಬ್ ಬದಲಾದಂತೆ ಕಾಣುತ್ತಿದ್ದು, ಇದೀಗ ಶಶಿರೇಖಾ ಸ್ಟಾರ್ ಆಗಿದ್ದಾರೆ, ಹೌದು ಶಶಿರೇಖಾ ಇದೀಗ ಸ್ಟಾರ್ ಪ್ರಚಾರಕಿ ಆಗಿ ಅವ್ರ ಉಡುಗೆ ತೊಡುಗೆ ಶೈಲಿಯೇ ಬದಲಾಗಿ ಹೋಗಿದೆ.

WhatsApp Group Join Now
Telegram Group Join Now
Image Credit: Good News Kannada

ಚುನಾವಣೆ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕಿಯಾದ ಶಶಿರೇಖಾ

ಹೌದು 29 ವರ್ಷದ ಶಶಿರೇಖಾ ಎರಡು ಮಕ್ಕಳ ತಾಯಿ. ಈಕೆ ಕೊರೊನಾ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮವೊಂದಕ್ಕೆ ಬೈಟ್​ ಕೊಟ್ಟಾಗ ಅದು​ ರಾತ್ರೋರಾತ್ರಿ ವೈರಲ್ ಆಗಿದ್ದು ನಿಮಗೆಲ್ಲ ಗೊತ್ತೇ ಇರುತ್ತೆ. ಬಡವರಿಗೆ ಬಿಸಿರಾಗಿ ಮುದ್ದೆ ಡೊಲೊ 650ಮಾತ್ರೆ ಅಷ್ಟೇನೆಯ ಇನ್ನೇನು ಬೇಡ ಅಂತ ಹೇಳಿದ್ದ ಡೈಲಾಗ್ ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡಿತ್ತು. ಹೌದು ಎರಡು ವರ್ಷದ ಹಿಂದೆ ಡೋಲೋ 650ಯ ಅಂಬಾಸಿಡರ್​ ಎಂಬಂತೆ ಕರ್ನಾಟಕದ ತುಂಬಾ ಬಿಂಬಿಸಲ್ಪಟ್ಟ ಮೈಸೂರಿನ ಶಶಿರೇಖಾ ಅವರ ಕೊರೊನಾ ಡೈಲಾಗ್ ವಿನಾಕಾರಣ ಸಾಕಷ್ಟು ಟ್ರೋಲ್​ಗೆ ಒಳಗಾದ ಅವರು ಕುಗ್ಗದೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮತ್ತಷ್ಟು ಗಟ್ಟಿಯಾದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್​ ಮಾಡುವುದರ ಮೂಲಕ ತಮ್ಮ ಆಸಕ್ತಿ, ಅಭಿಲಾಶೆಗಳನ್ನು ವ್ಯಕ್ತಪಡಿಸಿದರು ಆಗಲು ಕೂಡ ಒಂದಷ್ಟು ಜನ ಶಶಿರೇಖಾ ಅವ್ರ ಕಾಲು ಎಳೆದರೂ ಕೂಡ ಶಶಿರೇಖಾ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಇಷ್ಟದನುಸಾರ ನಡೆದುಕೊಂಡು ಹೋಗಿ ಇಂದು ಸ್ಟಾರ್ ಪ್ರಚಾರಕೀಯಗಿದ್ದಾರೆ. ಡೊಲೋ 650ಮಾತ್ರೆಯಿಂದ ಹಿಡಿದು ಇಲ್ಲಿಯತನಕ ಶಶಿರೇಖಾ ಅಭಿಮಾನಿಗಳ ಜೊತೆಗೆ ಸಾಕಷ್ಟು ಅವಮಾನಗಳನ್ನು ಕೂಡ ಎದುರಿಸಿದ್ದಾರೆ, ಇವರೇನಾ ಶಶಿರೇಖಾ ಅನ್ನುವಷ್ಟರ ಮಟ್ಟಿಗೆ ಬದಲಾಗಿ ಹೋಗಿದ್ದಾರೆ.

ದುಡ್ಡಿಗಾಗಿ ಈ ರೀತಿ ಡೈಲಾಗ್ ಹೊಡೆದು ಜನರ ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾಳೆ, ಸಾಕಷ್ಟು ಹಣ ಸಂಪಾದನೆ ಮಾಡಿದ್ದಾಳೆ ಅಂತೆಲ್ಲ ಆಡಿಕೊಂಡರು ಕೂಡ ಅದ್ಯಾವುದಕ್ಕೂ ಶಶಿರೇಖಾ ಕಿವಿಗೊಡಲಿಲ್ಲ, ಇಂಥ ಯಾವ ಗಾಳಿಸುದ್ದಿಗಳಿಗೂ ಕುಗ್ಗದೆ ಆಕೆ ತನ್ನ ಪ್ರಾಮಾಣಿಕತೆಯಿಂದ ಜೀವನ ನಡೆಸಬೇಕು ಅನ್ನೋದನ್ನ ಮರೆಯದೆ ಜೀವನ ನಡೆಸುತ್ತಿರುವ ಸ್ವಾಭಿಮಾನಿ ಹೆಣ್ಣುಮಗಳು. ಹೌದು ಮಾಧ್ಯಮದವರು ಆಕೆಯ ಮನೆಬಾಗಿಲಿಗೆ ಹೋದಾಗಲೂ ಅಷ್ಟೆ ತನ್ನ ಸಮುದಾಯದವರು ಅನುಭವಿಸುತ್ತಿರುವ ಸಂಕಷ್ಟಗಳ ಪಟ್ಟಿಯನ್ನೇ ನೀಡಿದರು. ವಸತಿ ಸೌಕರ್ಯ ಕಲ್ಪಿಸಬೇಕೆಂದು ನಿರ್ಭಿತಿಯಿಂದಲೇ ಸರ್ಕಾರದ ಗಮನ ಸೆಳೆದರು. ಇನ್ನು ತಮ್ಮ ಕೂಲಿ ಕೆಲಸದ ಬಿಡುವಿನ ವೇಳೆ ಕನ್ನಡ ಚಿತ್ರಗೀತೆಗಳಿಗೆ ಅಭಿನಯಿಸಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್​ಲೋಡ್​ ಮಾಡಿದರು. ಈಕೆಯ ಜನಪ್ರಿಯತೆಯನ್ನು ಗಮನಿಸಿ ಕೆಲವರು ಈಕೆಯನ್ನು ಸಂದರ್ಶಿಸಿದರು. ಈಕೆ ಮಾತನಾಡಲು ಆರಂಭಿಸಿದರೆ ಮಾತು ಕೊನೆಗೊಳುವುದೇ ಬೇಡ ಅನ್ನುವಷ್ಟರ ಮಟ್ಟಿಗೆ ಪ್ರಬುದ್ಧತೆಯಿಂದ ಮಾತನಾಡುತ್ತಾರೆ. ಹೀಗಾಗಿ ಕೆಲ ಸ್ಥಳೀಯ ಸಂಘ ಸಂಸ್ಥೆಗಳು ಈಕೆಯ ದಿಟ್ಟತನ, ವಿಚಾರಪರತೆಯನ್ನು ಗಮನಿಸಿ ಶ್ಲಾಘಿಸಿ ಸನ್ಮಾನ ಮಾಡಿರುವ ಉದಾಹರಣೆಗಳು ಕೂಡ ಸಾಕಷ್ಟಿವೆ.

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ Dr Bro.! ಸಿನಿಮಾ ಯಾವುದು?

ಸೋಶಿಯಲ್ ಮೀಡಿಯಾ ಸ್ಟಾರ್ ಆದ ಶಶಿರೇಖಾ

ಒಟ್ಟಿನಲ್ಲಿ ಕೇವಲ ಅದೊಂದು ಡೈಲಾಗ್ ಇಂದಲೇ ಶಶಿರೇಖಾ ಫೇಮಸ್ ಆಗಿದ್ದು ಅನ್ನೋದಕ್ಕೆ ಆಗೋದಿಲ್ಲ. ಅವರಲ್ಲಿರುವ ವಿಚಾರಶೀಲ ಗುಣ, ಕೆಲವೊಂದು ವಿಷಯಗಳನ್ನ ಶಶಿರೇಖಾ ವಿಮರ್ಶೆ ಮಾಡಿ ಹೇಳಿಕೊಳ್ಳುವ ರೀತಿ ಎಲ್ಲವು ಇಂದು ಆಕೆಯನ್ನ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪುವಂತೆ ಮಾಡಿವೆ. ಹೀಗಾಗಿ ಇದೀಗ ಶಶಿರೇಖಾ ಅವ್ರನ್ನ ಮತ್ತೊಂದು ಹೆಜ್ಜೆ ಮುಂದೆಯಿಟ್ಟು ನೋಡಲು ಏಂಜೆಲ್​ ಬ್ಯೂಟಿಕೇರ್​ ಮತ್ತು ಹರಿಣಿ ಮೇಕ್​ಓವರ್ಸ್​ ಸಂಸ್ಥೆಗಳು ವಿಶೇಷ ವಸ್ತ್ರವಿನ್ಯಾಸ ಮತ್ತು ಅಲಂಕಾರದಿಂದ ಈಕೆಯ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರಗನ್ನು ಕೊಟ್ಟಿದ್ದಾರೆ. ಅದರ ಕೆಲವೊಂದಿಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಅದೇ ಕಾಸ್ಟಿಯುಮ್ ಹಾಗೂ ಮೇಕಪ್ ನಲ್ಲಿಯೇ ಶಶಿರೇಖಾ ಕೆಲವೊಂದಿಷ್ಟು ರಿಲ್ಸ್ ಗಳನ್ನ ಮಾಡಿದ್ದಾರೆ.

ಇದರಿಂದಲೇ ಗೊತ್ತಾಗುತ್ತಿದೆ ಶಶಿರೇಖಾ ಅವ್ರ ಆತ್ಮವಿಶ್ವಾಸ ಇನ್ನೂ ಒಂದು ಮೆಟ್ಟಿಲು ಏರುವಂತೆ ಈ ಸಂಸ್ಥೆಗಳು ಮಾಡಿವೆ ಅನ್ನೋದು. ಅವರೊಳಗಿನ ಕಲಾವಿದೆ ಹೊರಗೆ ಬರುತ್ತಿದ್ದು ಇದೀಗ ಡಿಜಿಟಲ್​ ಕ್ರಿಯೇಟರ್ ಆಗಿಯು ಶಶಿರೇಖಾ ಹೊರ ಹೊಮ್ಮಿದ್ದಾರೆ. ಅಲ್ಲದೆ ಶಶಿರೇಖಾ ಅವ್ರಿಗೆ ಸುಮಾರು 1,40,000 ಫಾಲೋವರ್ಸ್​ಗಳು ಇನ್​ಸ್ಟಾಗ್ರಾಂನಲ್ಲಿದ್ದಾರೆ. ಆದರೂ ಕೂಡ ಶಶಿರೇಖಾ ಇಂದಿಗೂ ಕೂಡ ಕೂಲಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ತನ್ನತನವನ್ನ ಯಾವತ್ತಿಗೂ ಬಿಟ್ಟುಕೊಡದೆ, ವಿಚಾರವಂತಿಕೆಯನ್ನು ಮೈಗೂಡಿಸಿಕೊಂಡು, ಯಾವುದೇ ಭ್ರಮೆಗೆ ಬೀಳದೆ, ದುಡಿದು ತಿಂದರಷ್ಟೇ ಬದುಕು ಎಂಬುದನ್ನು ಸ್ಪಷ್ಟವಾಗಿ ಅರಿತುಕೊಂಡು ಸ್ವಾಭಿಮಾನಿ ಹೆಣ್ಣುಮಗಳಾಗಿ ಬದುಕುತ್ತಿರುವ ಶಶಿರೇಖಾ ಎಲ್ಲರಿಗೂ ಮಾದರಿ. ಅಭಿನಯದಲ್ಲಿ ಆಸಕ್ತಿ ಇರುವ ಇವ್ರಿಗೆ ಒಳ್ಳೆಯ ಅವಕಾಶಗಳು ಸಿಕ್ಕಿ ಇವ್ರ ಜೀವನ ಬದಾಲಾಗಿ ಖುಷಿಯಿಂದ ಬದುಕಲಿ ಅನ್ನೋದು ನಮ್ಮೆಲ್ಲರ ಆಶಯ.

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆ ಸಂಭ್ರಮ.ಮೆಹಂದಿ ಶಾಸ್ತ್ರ ಹೇಗಿತ್ತು  ಮದುವೆ ಯಾವಾಗ? ಎಲ್ಲಿ? ಯಾರೆಲ್ಲ ಬರ್ತಾರೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram