Dr Bro: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡಾ ಬ್ರೋ.! ಸಿನಿಮಾ ಯಾವುದು?

Dr Bro: ಯೂಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ಡಾ ಬ್ರೋ ಚಿರಪರಿಚಿತ. ಚಿಕ್ಕ ವಯಸ್ಸಿಗೆ ದೇಶ ವಿದೇಶ ಸುತ್ತುವ ಡಾ ಬ್ರೋ ಕೆಲವೊಂದಷ್ಟು ಇಂಟರ್ಸ್ಟ್ಟಿಂಗ್ ವಿಷಯಗಳ ಜೊತೆಗೆ ಜನರ ಮುಂದೆ ಬರೋದ್ರಿಂದ ಜನರಿಗೆ ಈತನನ್ನು ಕಂಡರೆ ಸಿಕ್ಕಾಪಟ್ಟೆ ಅಚ್ಚುಮೆಚ್ಚು. ಯೂಟ್ಯೂಬರ್ ಆಗಿಯೇ ಜನರಿಗೆ ಹೆಚ್ಚು ಕನೆಕ್ಟ್ ಆಗಿರುವ ಗಗನ್ ಶ್ರೀನಿವಾಸ್ ಇದೀಗ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ, ಅದರಲ್ಲಿಯೂ ಹೊಸ ಅಲೆ ಸೃಷ್ಟಿಸಲಿದ್ದಾರೆ ಅಂತ ಹೇಳಲಾಗುತ್ತಿದ್ದೂ, ಹಾಗಾದ್ರೆ ಡಾ. ಬ್ರೋ ಚಂದನವನಕ್ಕೆ ಕಾಲಿಟ್ಟಿದ್ದಾರ? ಯಾವ ಸಿನಿಮಾ ಯಾವ ಪಾತ್ರ ಹೀಗೆ ಸಾಕಷ್ಟು ವಿಷಯಗಳು ಮುನ್ನಲೆಗೆ ಬರೋದು ನಿಜ. ಹಾಗಾದ್ರೆ ಏನಿದು ಹೊಸ ವಿಷಯ ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

WhatsApp Group Join Now
Telegram Group Join Now

ಡಾಕ್ಟರ್​​ ಬ್ರೋ ನಿಜವಾದ ಹೆಸರು ಗಗನ್ ಶ್ರೀನಿವಾಸ್. ಇವ್ರು ಮೂಲತಃ ಬೆಂಗಳೂರಿನ ಹೊರವಲಯದವರು. ಹುಟ್ಟಿ ಬೆಳದದ್ದು ಮದ್ಯಮ‌ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ. ಇನ್ನು ಇವ್ರ ತಂದೆ ಶ್ರೀನಿವಾಸ್​ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿಯ ಹೆಸರು ಪದ್ಮಾ ಅವರು ಮನೆಯಲ್ಲಿಯೆ ಇರುತ್ತಾರೆ. ಗಗನ್ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತು, ತಂದೆ ಇಲ್ಲದ ಸಮಯದಲ್ಲಿ ತಾನೇ ದೇವಸ್ಥಾನದ ಪೂಜೆ ಮಾಡುತ್ತಿದ್ದರು. ಡಾ ಬ್ರೋಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಹೀಗಾಗಿ ಯಾವಾಗಲೂ ಹಾಡು, ಡ್ಯಾನ್ಸ್​​ ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರಿಂದ ಓದಿನ ಬಗ್ಗೆ ಹೆಚ್ಚಿನ ಗಮನ ಕೊಡುತ್ತಿರಲಿಲ್ಲ. ಇನ್ನು ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ‌ಕಾರು ಓಡಿಸಲು ಶುರು ಮಾಡುತ್ತಾರೆ. ಅಲ್ಲದೆ ಭರತನಾಟ್ಯ ಕಲಿತು ಭರತನಾಟ್ಯ ಕ್ಲಾಸ್‌ ಕೂಡ ನಡೆಸುತ್ತಿದ್ದರು.

ಇನ್ನು ನಂತರದಲ್ಲಿ ಫೋಟೋಗ್ರಫಿ, ವಿಡಿಯೂ ಗ್ರಫಿ ಕಲಿಯುತ್ತಾರೆ. ಇದಾದ ನಂತರ 2016 ರಲ್ಲಿ ತನ್ನದೇ ಆದ ಡಾಕ್ಟರ್​​ ಬ್ರೋ ಅಂದರೆ ಡಾ ಬ್ರೋ. ಯೂ ಟ್ಯೂಬ್‌ ಚಾನೆಲ್ ಶುರು ಮಾಡಿದ್ರು. ಪ್ರಾರಂಭದಲ್ಲಿ ಕಾಮಿಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ ಸ್ವಲ್ಪ ಮಟ್ಟಿನ ಜನಪ್ರಿಯತೆ ಪಡೆದುಕೊಂಡ್ರು. ನಂತರ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ರು. ಇದೆಲ್ಲಾ ಆದ್ ನಂತರ ಇದೀಗ ಡಾ. ಬ್ರೋ ವಿಡಿಯೋಗಳು ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ ಕಾರಣ ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ‌ ವಿವರ ಕೊಡಲು ಶುರುಮಾಡಿ, ಅಂತರಾಜ್ಯ, ದೇಶ, ವಿದೇಶ ಸುತ್ತಿ ಅಲ್ಲಿನ ಆಚಾರ ವಿಚಾರ ಅವ್ರ ಜೀವನ ಶೈಲಿ ಆಹಾರ ಪದ್ಧತಿ ಸೇರಿದಂತೆ ಎಲ್ಲವನು ಕೂಡ ನೋಡುಗರು ಮುಂದೆ ತಂದಿಡುತ್ತಿದ್ರು. ಇದೀಗ ಇಂತ ವಿಷಯಗಳಿಂದಲೇ ಡಾ. ಬ್ರೋ ಗೆ ಅಭಿಮಾನಿ ವರ್ಗ ಹೆಚ್ಚಾಗಿದೆ. ದೇಶ ಮಾತ್ರ ಅಲ್ಲಾ ಪ್ರಪಂಚದಾದ್ಯಂತ ಇದೀಗ ಡಾ. ಬ್ರೋ ಸಕತ್ ಫೇಮಸ್ ಆಗಿದ್ದಾರೆ.

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆ ಸಂಭ್ರಮ. ಮೆಹಂದಿ ಶಾಸ್ತ್ರ ಹೇಗಿತ್ತು ಮದುವೆ ಯಾವಾಗ? ಎಲ್ಲಿ? ಯಾರೆಲ್ಲ ಬರ್ತಾರೆ ಗೊತ್ತಾ?

ಕನ್ನಡ ಸಿನಿಮಾದಲ್ಲಿ ಶುರುವಾಯ್ತಾ ಯೂಟ್ಯೂಬರ್ ಹವಾ

ನಮಸ್ಕಾರ​ ದೇವ್ರು.. ಇದನ್ನು ಕೇಳಿದ ಕೂಡಲೇ ಎಲ್ಲರ ಕಣ್ಣ ಮುಂದೆ ಬರೋದು ಡಾ. ಬ್ರೋ ಮಾತ್ರ..ಡಾ. ಬ್ರೋ ಮಾತುಗಳು, ವಿಡಿಯೋಗಳು, ಬೇರೆ ಬೇರೆ ದೇಶಗಳಲ್ಲೂ ಕನ್ನಡದ ಕಂಪು ಹರಿಸುತ್ತಿರೋ ವ್ಯಕ್ತಿ ಅಂದ್ರೆ ಅದು ಕೂಡ ಇನ್ಯಾರು ಬೇರೆ ಅಲ್ಲ ಡಾ.ಬ್ರೋ. ಹೌದು ಯುಟ್ಯೂಬ್ ನಲ್ಲಿ ಡಾ .ಬ್ರೋ ಅಂತಾನೆ ಫೇಮಸ್ ಆಗಿರುವ ಈ ಯುವಕ ಕನ್ನಡಿಗರಿಗೇ ಅಂಗೈನಲ್ಲೆ ಇಡೀ ಜಗತ್ತನೇ ತೋರಿಸುತ್ತಾನೆ. ಹೌದು ಸಾಧಿಸುವ ಛಲ ಇದ್ದರೆ ಸಾಕು ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು. ಹೆಚ್ಚಿನ ಮಂದಿ ಜೀವನದಲ್ಲಿ ಯಶಸ್ಸಿನ ಹಾಗೂ ಹಣದ ಆಸೆಯಿಂದ ಅಡ್ಡದಾರಿ ಹಿಡಿಯುತ್ತಾರೆ. ಆದರೆ ಅದರಿಂದ ಗಳಿಸಿರುವ ನೇಮ್ – ಫೇಮ್ ಏನೇ ಇದ್ದರೂ ಸ್ವಲ್ಪ‌ ಸಮಯ ಅಷ್ಟೇ. ಆದರೆ ಯಾವ ವ್ಯಕ್ತಿ ಕಷ್ಟ ಪಟ್ಟು ಮೇಲೆ ಬರುತ್ತಾನೆ ಅವನು ಸ್ಟ್ರಾಂಗ್ ಆಗಿ ಕಡೆಯವರೆಗೂ ನಿಲ್ಲುತ್ತಾನೆ.

ಈ ಸಾಲಿನಲ್ಲಿ ಡಾ. ಬ್ರೋ ಕೂಡ ನಿಲ್ಲುತ್ತಾರೆ. ಬಹಳ ಚಿಕ್ಕ ವಯಸ್ಸಿಗೆ ಈ ರೀತಿಯ ಸಾಧನೆ ಮಾಡೋದು, ಕರ್ನಾಟಕ ಯೂಟ್ಯೂಬರ್ ಗಳ್ಳಲ್ಲಿ ಮೊದಲಿಗೆ ಇವ್ರ ಹೆಸರು ಕೇಳಿಬರೋದು, ಅಷ್ಟರ ಮಟ್ಟಿಗೆ ಅಭಿಮಾನಿಗಳನ್ನ ಗಳಿಸೋದು ಅಂದ್ರೆ ಅಷ್ಟು ಸುಲಭವಲ್ಲ. ಮೊನ್ನೆ ಮೊನ್ನೆಯಷ್ಟೇ Weekend With Ramesh ಗು ಡಾ. ಬ್ರೋ ನ ಕರೆಸಬೇಕು ಅಂತ ಸಿಕ್ಕಾಪಟ್ಟೆ ಚರ್ಚೆಗಳಾಗಿ ಸಾಕಷ್ಟು ವಿವಾದಗಳಾಗಿ ಟ್ರೊಲ್ ಕೂಡ ಆಯ್ತು. ಬ್ರೋ ಪರವಾಗಿ ಸಾಕಷ್ಟು ಚರ್ಚೆ ಕೂಡ ಆಯ್ತು. ಆಗಲು ಕೂಡ ಡಾ. ಬ್ರೋ ಗೆ ಅಭಿಮಾನಿ ಬಳಗ ಹೆಚ್ಚಾಯಿತು. ಇದೀಗ ಡಾ. ಬ್ರೋ ಕುರಿತಂತೆ ಹೊಸ ಸುದ್ದಿ ವೈರಲ್ ಆಗಿದ್ದು, ಚಂದನವನಕ್ಕೆ ಡಾ. ಬ್ರೋ ಕಾಲಿಟ್ಟಿದ್ದಾರೆ ಅನ್ನೋ ಸುದ್ದಿಯಾಗ್ತಿದೆ.

ಗಗನ್ ಶ್ರೀನಿವಾಸ್ ಕಾಣಿಸಿಕೊಂಡಿರುವ ಸಿನಿಮಾ ಯಾವುದು ಗೊತ್ತಾ?

ಕೇವಲ 22 ವರ್ಷಕ್ಕೆ ಪೂರ್ತಿ ದೇಶ ಸುತ್ತಿರುವ‌ ಖ್ಯಾತಿ ಗಗನ್​ ಅವರದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್‌ ಒಂದೇ ಒಂದು ರೂಪಾಯಿಯನ್ನ ತನ್ನ‌ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ. ಯೂಟ್ಯೂಬ್ ಯಿಂದ ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ತನ್ನ ವಿಡಿಯೋಗಳಿಂದಲೇ ತಿಂಗಳಿಗೆ 1900 ಡಾಲರ್​ ಅಂದರೆ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಹಣ ಸಂಪಾದಿಸುತ್ತಾನೆ ಅಂತ ಹೇಳಲಾಗುತ್ತಿದೆ. ಇನ್ನು ಇದೀಗ ಡಾ ಬ್ರೋ ಸ್ಯಾಂಡಲ್ವುಡ್ ಗು ಕಾಲಿಟ್ಟಿದ್ದಾರೆ ಅಂತ ಹೇಳಲಾಗಿದ್ದು ಡೇರ್ ಡೆವಿಲ್ ಮುಸ್ತಫಾ ಸಿನಿಮಾ ಮೂಲಕ ಡಾ. ಬ್ರೋ ಕನ್ನಡ ಸೀನಿರಂಗ ಪ್ರವೇಶ ಮಾಡಿದ್ದಾರೆ.

ಈಗಾಗ್ಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಡಾ. ಬ್ರೋ ವಾಯ್ಸ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸುತ್ತಿದೆ. ಡೇರ್ ಡೆವಿಲ್ ಮುಸ್ತಫ ಸಿನಿಮಾದ ಟ್ರೈಲರ್ ಆರಂಭದಿಂದ ಹಿಡಿದು ಕೊನೆಯವರೆಗೂ ಕೂಡ ಗಗನ್ ಅವ್ರ ವಾಯ್ಸ್ ಟ್ರೈಲರ್ ನ ಬೇರೆ ಲೆವೆಲ್ ಗೆ ತೆಗೆದುಕೊಂಡು ಹೋಗ್ತಿದೆ. ಇಡಿ ಸಿನಿಮಾದ ಕಥಾ ಸಾರಾಂಶ ಕೇವಲ 3-4ನಿಮಿಷದ ಟ್ರೈಲರ್ ನಲ್ಲಿ ಡಾ. ಬ್ರೋ ತಮ್ಮದೇ ಶೈಲಿಯಲ್ಲಿ ಹೇಳಿ ಮುಗಿಸಿದ್ದಾರೆ. ಆದ್ರೆ ಡಾ. ಬ್ರೋ ಈ ಚಿತ್ರದಲ್ಲಿ ಯಾವುದಾದ್ರೂ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರಾ ಇಲ್ವಾ ಅನ್ನೋದು ಮಾತ್ರ ಇನ್ನು ಗೊತ್ತಾಗಿಲ್ಲ. ಮೇ 19ರಂದು ಡೇರ್ ಡೆವಿಲ್ ಮುಸ್ತಾಫ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದ್ದು. ಮೇ 19ರಂದೆ ಡಾ. ಬ್ರೋ ಸಿನಿಮಾ ಎಂಟ್ರಿ ಆಗಿದ್ಯಾ ಇಲ್ವಾ ಅನ್ನೋದು ಗೊತ್ತಾಗಲಿದೆ. ಒಟ್ಟಿನಲ್ಲಿ ಯೌಟ್ಯೂಬ್ ಮೂಲಕವೇ ಜನಮನ ಗೆದ್ದಿರುವ ಡಾ. ಬ್ರೋ ಇದೀಗ ಚಂದನವನಕ್ಕೂ ಕಾಲಿಟ್ಟರೆ ಚೆನ್ನಾಗಿರುತ್ತೆ ಅನ್ನೋದು ಅವ್ರ ಅಭಿಮಾನಿಗಳ ಆಸೆ ಹಾಗೂ ಒತ್ತಾಯ. ಏನೇ ಆಗ್ಲಿ ಗಗನ್ ಶ್ರೀನಿವಾಸ್ ಅವ್ರ ಮುಂದಿನ ಪಯಣ ಚೆನ್ನಾಗಿರಲಿ ಅವ್ರಿಗೆ ಒಳ್ಳೆಯದಾಗ್ಲಿ ಅನ್ನೋದು ಪ್ರತಿಯೊಬ್ಬರ ಆರೈಕೆ.

ಇದನ್ನೂ ಓದಿ: 2023 ರ ವಿಧಾನಸಭಾ ಚುನಾವಣೆ ಬಗ್ಗೆ ಕೊಡಿಶ್ರೀ ಹೇಳಿದ ಭವಿಷ್ಯ ಏನು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram