Dr Bro: ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ಹವಾ, ಕನ್ನಡದ ಕಂಪು ಎಲ್ಲೆಲ್ಲೂ ಹರಡಿಸುತ್ತಿರುವ ಯೂಟ್ಯೂಬರ್?

Dr Bro: ಡಾ. ಬ್ರೋ ಅಂತಲೇ ಇದೀಗ ಇಡೀ ದೇಶದಾದ್ಯಂತ ಹವಾ ಸೃಷ್ಟಿ ಮಾಡ್ತಿರೋ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಎಲ್ಲೆಲ್ಲೂ ಕನ್ನಡದ ಕಂಪು ಚೆಲ್ಲುವತ್ತ ತಮ್ಮ ಚಿತ್ತವನ್ನಿಟ್ಟಿದ್ದಾರೆ. ಹೌದು ಡಾ. ಬ್ರೋ ಅನ್ನೋದು ಕನ್ನಡದ ಪ್ರಸಿದ್ಧ ಯುಟ್ಯೂಬ್ ಚಾನೆಲ್, ಈ ಚಾನೆಲ್ ನಲ್ಲಿ ಕಾಣಿಸಿಕೊಳ್ಳುವಾ ಗಗನ್ ಶ್ರೀನಿವಾಸ್ ತಮ್ಮದೇ ಆದ ಶೈಲಿಯಲ್ಲಿ ದೇಶ ಸುತ್ತಿ ಅಲ್ಲಿನ ಆಚಾರ ವಿಚಾರ ಪದ್ಧತಿ ನಂಬಿಕೆ, ಆಹಾರ ಕ್ರಮ ಪ್ರತಿಯೊಂದನ್ನ ಕೂಡ ಇಡೀ ದೇಶಕ್ಕೆ ತಿಳಿಸುವ ಮೂಲಕ ತನ್ನೊಬ್ಬ ಹೆಮ್ಮೆಯ ಕನ್ನಡಿಗ ಅಂತ ಹೇಳಿಕೊಂಡು ಕನ್ನಡಾಂಬೆಯ ಸೇವೆ ಮಾಡುತ್ತಿದ್ದಾರೆ. ಡಾ. ಬ್ರೋ ಅಂತಲೇ ಫೇಮಸ್ ಆಗಿರುವ ಗಗನ್ ಶ್ರೀನಿವಾಸ್ ಹುಟ್ಟಿದ್ದು 1999 ರಲ್ಲಿ ಬೆಂಗಳೂರಿನ ಹೊರವಲಯದ ಬ್ರಾಹ್ಮಣ ಸಮುದಾಯದಲ್ಲಿ. ಡಾ. ಬ್ರೋ ಅವರದ್ದು ಮಿಡಲ್ ಕ್ಲಾಸ್ ಫ್ಯಾಮಿಲಿ ಇವರ ತಂದೆ ದೇವಸ್ಥಾನದಲ್ಲಿ ಅರ್ಚಕರು. ಇನ್ನು ಡಾ. ಬ್ರೋ ಪಿಯುಸಿ ಅಲ್ಲಿ ವಿಜ್ಞಾನ ವಿಷಯವನ್ನು ತೆಗೆದುಕೊಂಡು ಪ್ರಥಮ ಪಿಯುಸಿಯಲ್ಲಿ ಫೇಲಾಗಿದ್ದರು, ನಂತರ ವಿಜ್ಞಾನ ವಿಷಯ ಬೇಡ ಎಂದು ಕಾಮರ್ಸ್ ತೆಗೆದುಕೊಂಡರು. 2021 ರಲ್ಲಿ ಬಿಕಾಂ ಡಿಗ್ರಿಯನ್ನು ಮುಗಿಸಿದ್ದರು. ಇದರ ಜೊತೆ ಜೊತೆಗೆ ಬ್ರಾಹ್ಮಣ ಸಮುದಾಯದ ಪೌರೋಹಿತ್ಯ, ಜಪತಪ , ಧ್ಯಾನ ಹೀಗೆ ಎಲ್ಲವನ್ನು ರೂಡಿಸಿಕೊಂಡಿದ್ದರು. ಇನ್ನು ತಾನು ಸ್ವಂತವಾಗಿ ಏನಾದ್ರೂ ಮಾಡಬೇಕು ಅಂದುಕೊಂಡ ಗಗನ್ ಕೈ ಹಿಡಿದದ್ದು, ಅವರೇ ಆರಂಭಿಸಿದ ಡಾ. ಬ್ರೋ ಅನ್ನೋ ಯುಟ್ಯೂಬ್ ಚಾನಲ್. ಇದೀಗ ಗಗನ್ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದ್ದಾರೆ ಅಂದ್ರೆ ತೆಲುಗು ಸುದ್ದಿ ವಾಹಿನಿಗಳಲ್ಲೂ ಡಾ. ಬ್ರೋ ಅವರದ್ದೇ ಹವಾ.

WhatsApp Group Join Now
Telegram Group Join Now

ಇನ್ನು ಡಾ. ಬ್ರೋ ಅವರಿಗೆ ಭರತನಾಟ್ಯ ಎಂದರೆ ತುಂಬಾ ಇಷ್ಟ ಹಾಗಾಗಿ ಭರತನಾಟ್ಯವನ್ನು ಕಲಿತರು ಹಾಗೂ ಭರತನಾಟ್ಯದ ಗುರುವು ಕೂಡ ಆದರು. ಡಾ. ಬ್ರೋ ಅವರಿಗೆ ಚಿಕ್ಕ ವಯಸ್ಸಿನಿಂದಲೇ ವಿಡಿಯೋ ಗ್ರಾಫಿ ಹುಚ್ಚು, ಆದ್ದರಿಂದ ಕೇವಲ ತಮಗೆ 18 ವರ್ಷ ಇದ್ದಾಗಲೇ ಯುಟ್ಯೂಬ್ ಚಾನೆಲ್ ಶುರು ಮಾಡುತ್ತಾರೆ. ಆರಂಭದಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಹಾಕುತ್ತಿದ್ದರು. ಸ್ವಲ್ಪ ದಿನಗಳು ಕಳೆದ ಬಳಿಕ ಕಾಮಿಡಿ ವಿಡಿಯೋಗಳನ್ನು ಬಿಟ್ಟು ಬೆಂಗಳೂರು ಎಕ್ಸ್ಪ್ಲೋರ್ ಮಾಡುವ ವಿಡಿಯೋಗಳನ್ನು ಹಾಕುತ್ತಿದ್ದರು. ಇದಾದ ನಂತರ ಕರ್ನಾಟಕದ ಪ್ರವಾಸಿ ತಾಣಗಳ ಹತ್ತಿರ ಹೋಗಿ ಅಲ್ಲಿಯ ಜಾಗಗಳನ್ನು ತೋರಿಸುತ್ತಿದ್ದರು. ಇದೀಗ ಹೊರದೇಶಕ್ಕೆ ಕಾಲಿಟ್ಟ ಗಗನ್ ಮೊದಲು ಹೋಗಿದ್ದೆ ಪಾಕಿಸ್ತಾನಕ್ಕೆ. ಹೌದು 2022 ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಬಹಳ ಸುದ್ದಿ ಮಾಡಿದ್ರು. ಇದಾದ ನಂತರ ಒಂದೊಂದೇ ದೇಶವನ್ನು ಸುತ್ತುತ್ತ ಕನ್ನಡಿಗರ ಮನೆ ಮಾತಾಗಿದ್ದರು. ಇನ್ನು ಕಳೆದ 2022 ರಲ್ಲಿ 10 ದೇಶಗಳ ಸುತ್ತಾಟವನ್ನು ಮಾಡಿರುವ ಡಾ. ಬ್ರೋ ಅವರ ಗುರಿ, ಕನ್ನಡಿಗರಿಗೆ ಇಡೀ ಜಗತ್ತನ್ನು ತೋರಿಸಬೇಕು ಅನ್ನೋದು ಹೀಗಾಗಿ ದೇಶ ವಿದೇಶಗಳ ಪರ್ಯಟನೆ ಮುಂದುವರಿಸಿಕೊಂಡು ಹೋಗುದ್ದಾರೆ.

ಇದನ್ನೂ ಓದಿ: ರಸ್ತೆ ಕಾಮಗಾರಿಗೆ ಮೊದಲ ಆದ್ಯತೆ, ಅಧಿಕಾರಿಗಳಿಗೆ ಫುಲ್ ಕ್ಲಾಸ್!”ಪ್ರದೀಪ್ ಈಶ್ವರ್” ಜನಮೆಚ್ಚಿದ ನಾಯಕ ಅಂತಿದ್ದಾರೆ ಜನ.

ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ವಿಡಿಯೋ

ಗಗನ್ ಶ್ರೀನಿವಾಸ್ ತಮ್ಮಲ್ಲಿದ್ದ ವಿಡಿಯೋಗ್ರಪಿ ಹುಚ್ಚಿನಿಂದ ಬಹಳ ಚಿಕ್ಕ ವಯಸ್ಸಿಗೆ ಯೂಟ್ಯೂಬರ್ ಆಗಿ ಹೊರಹೊಮ್ಮತ್ತಾರೆ. ಆದರೆ ಅದರಿಂದಲೂ ತಮಗೆ ಆದಾಯ ಇದೆ, ಒಳ್ಳೆಯ ಹಣ ಮಾಡಬಹುದು ಅನ್ನೋ ಐಡಿಯಾನೇ ಇರಲಿಲ್ಲ. ಹೌದು ಯೂಟ್ಯೂಬ್ ಚಾನೆಲ್ ಇಂದ ಮೊದಲ ಬಾರಿ ಡಾ. ಬ್ರೋ(Dr Bro) ಅವರು 7800 ರೂಪಾಯಿ ಹಣವನ್ನ ಪಡೆಯುತ್ತಾರೆ, ನಂತರ ಎರಡನೇ ಬಾರಿ ಇವರಿಗೆ ಹಣ ಬಂದಿದ್ದು ಆಗಸ್ಟ್ 2020ರಲ್ಲಿ 21 ಸಾವಿರ ರೂಪಾಯಿ. ಮೂರನೇ ಬಾರಿ ಇವರಿಗೆ 8,600 ರೂಪಾಯಿ ಹಣ ಬಂದಿತ್ತು. ಈಗ ಒಂದು ಅಂದಾಜಿನ ಪ್ರಕಾರ ಯೂಟ್ಯೂಬ್ ಚಾನಲ್ ಇಂದ ಇವರಿಗೆ ಅಂದಾಜು ಮೂರರಿಂದ ನಾಲ್ಕು ಲಕ್ಷ ಹಣ ಬರುತ್ತಿದೆ ಎನ್ನಲಾಗುತ್ತಿದೆ. ಹೌದು ಇದು ಖಂಡಿತಾವಾಗಿಯೂ ಸತ್ಯ. ಯೂಟ್ಯೂಬ್ ನಿಂದ ಇಷ್ಟೆಲ್ಲ ದುಡಿಬಹುದಾ ಅನ್ನೋರಿಗೆ ಡಾ. ಬ್ರೋ ಒಂದು ಕಿವಿ ಮಾತನ್ನ ಹೇಳಿದ್ರು, ಯೂಟ್ಯೂಬ್ ಅನ್ನ ಹವ್ಯಾಸಕ್ಕೆ ಅಂತ ಇಟ್ಟುಕೊಳ್ಳಿ ಇದರ ಜೊತೆಗೆ ಸೇಫ್ಟಿಗೆ ಮತ್ತೊಂದು ಕೆಲಸ ಇರಲಿ, ಅಂದುಕೊಂಡಷ್ಟು ಬೇಗ ನಿಮಗೆ ಇದರಲ್ಲಿ ಆದಾಯ ಸಿಗೋಲ್ಲ ಸಾಕಷ್ಟು ಪ್ರಯತ್ನ ಪರಿಶ್ರಮ ಇದ್ದಾರೆ ಮಾತ್ರ ಸಾಧನೆ ಸಾಧ್ಯ ಅಂದಿದ್ರು. ಇದು ಡಾ. ಬ್ರೋ ವಿಚಾರದಲ್ಲಿ ಸಕ್ಸಸ್ ತಂದುಕೊಟ್ಟಿದೆ. ಮಾತ್ರವಲ್ಲ ರಾಜ್ಯ ಹೊರ ರಾಜ್ಯ ದೇಶ ವಿದೇಶಗಳ ಜನರಿಗೂ ಈಗ ಡಾ. ಬ್ರೋ ಬಗ್ಗೆ ಮಾಹಿತಿ ಇದೆ.

ಹೌದು ತೆಲುಗು ಸುದ್ದಿ ವಾಹಿನಿಯೊಂದು ಡಾ. ಬ್ರೋ(Dr Bro) ಕುರಿತಾದ ಕಾರ್ಯಕ್ರಮ ಒಂದನ್ನ ತಮ್ಮ ಚಾನಲ್ ನಲ್ಲಿ ಪ್ರಸಾರ ಮಾಡಿದೆ. ಇದರ ವಿಡಿಯೋ ಮಾಡಿಕೊಂಡ ಡಾ ಬ್ರೋ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ತೆಲುಗು ವಾಹಿನಿಯೊಂದರಲ್ಲಿ ನನ್ನ ವಿಡಿಯೋ ಅಂತ ಕ್ಯಾಪ್ಶನ್ ಕೊಟ್ಟು ಖುಷಿಯಿಂದ ಶೇರ್ ಮಾಡಿಕೊಂಡಿದ್ದಾರೆ. ಬೇರೆ ಭಾಷೆಯ ಸುದ್ದಿ ವಾಹಿನಿಗಳಲ್ಲಿ ನಮ್ಮ ಕನ್ನಡಿಗರು, ಅವ್ರ ಸುದ್ದಿಗಳು ಬರುವುದು ಅಷ್ಟು ಸುಲಭವಲ್ಲ, ಅದಕ್ಕೆ ಸಾಕಷ್ಟು ತಾಳ್ಮೆ, ಶ್ರಮ, ಪರಿಶ್ರಮದ ಅವಶ್ಯಕತೆ ತುಂಬಾ ಇರುತ್ತೆ, ಇವತ್ತು ನಮ್ಮ ಕನ್ನಡದ ಯೂಟ್ಯೂಬರ್ ಆ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದ್ರೆ ಅದು ಕಡಿಮೆ ಸಾಧನೆಯಲ್ಲ. ಯೂಟ್ಯೂಬರ್ ಡಾ. ಬ್ರೋ ಇನ್ನಷ್ಟು ಬೆಳೆಯಲಿ, ನಮ್ಮ ಕರುನಾಡು ಇನ್ನಷ್ಟು ದೇಶಗಳಲ್ಲಿ ಪ್ರಚಾರವಾಗಲಿ ಅನ್ನೋದು ನಮ್ಮೆಲ್ಲರ ಆಶಯ.

ಇದನ್ನೂ ಓದಿ: ಕೊನೆಗೂ ಮಗಳ ಮುಖ ರಿವಿಲ್ ಮಾಡಿದ ಧ್ರುವ ಸರ್ಜಾ, ಧ್ರುವ ಪ್ರೇರಣಾ ದಂಪತಿಯ ಪುಟ್ಟ ರಾಜಕುಮಾರಿ ಹೇಗಿದ್ದಾಳೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram