dr cn manjunath: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅನೇಕ ಸಾಧಕರ ಸಾರ್ಥಕ ಬದುಕಿಗೆ ಹಿಡಿದ ಕೈಗನ್ನಡಿ. ಈ ವಾರದ ಸಾಧಕರ ಕುರ್ಚಿಗೆ ಸಾರ್ಥಕವಾಗಿದ್ದು, ಆ ಕುರ್ಚಿಯ ಮೇಲೆ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವ್ರು ಕುಳಿತ ಮೇಲೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೌದು ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವ್ರ ಸಾಧನೆಯ ಜೊತೆಗೆ ಅವರ ಸಾರ್ಥಕ ಬದುಕಿನ ಅನವರಣವಾಗಿದೆ.. ಅದ್ರಲ್ಲಿ ಕೆಲವೊಂದು ಇಂಟರ್ಸ್ಟ್ಟಿಂಗ್ ಸಂಗತಿಗಳು ಹೊರಬಂದಿದ್ದು, ಸ್ವಾರಸ್ಯ ಎಂಬಂತೆ ಅವ್ರ ವೈವಾಹಿಕ ಬದುಕು ಶುರುವಾಗಿದ್ದು ಹೇಗೆ ಅನ್ನೋದು ತುಂಬಾ ವಿಭಿನ್ನ ಸ್ನೇಹಿತರೆ.
ಆಗಿದ್ರೆ ಅನುಸೂಯ ಅವ್ರನ್ನ ಮಂಜುನಾಥ ಅವ್ರು ವರಿಸಿದ್ದು ಹೇಗೆ??
ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಆಗಿದ್ದು ಸುಲಭನಾ? ಆಗಿನ ಕಾಲದಲ್ಲಿ ಇವ್ರಿಗೆ ಸಿಕ್ಕ ವರದಕ್ಷಿಣೆ ಏನು…ಎಲ್ಲವನ್ನ ನೋಡೋಣ ಬನ್ನಿ.
ಹೌದು ಈ ವಾರದ ವೀಕೆಂಡ್ ಗೆ ಅತಿಥಿಯಾಗಿ ಬಂದಿದ್ದ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರು ಸಾವಿರಾರು ಜೀವಗಳ ಉಳಿಸಿದ ವೈದ್ಯ.. ಜೊತೆಗೆ ಕರ್ನಾಟಕದ ಹೆಮ್ಮೆಯ ರಾಜಕಾರಣಿ ದೇವೇಗೌಡರ ಅಳಿಯ ಅನ್ನೋದು ಮತ್ತೊಂದು ವಿಶೇಷ..ಈ ಕಾರ್ಯಕ್ರಮದಲ್ಲಿ ಮಂಜುನಾಥ್ ಅವರ ಜೀವನದ ಇಂಟರ್ಸ್ಟ್ಟಿಂಗ್ ವಿಷಯಗಳು ತೆರೆದುಕೊಂಡವು, ಅದರಲ್ಲಿ ಅವರ ವಿವಾಹವೂ ಒಂದು..
ಪಟ್ಟುಬಿಡದೆ ಅನುಸೂಯ ಅವ್ರನ್ನ ಮಂಜುನಾಥ್ ಅವ್ರು ವರಿಸಿದ್ದೆ ರೋಚಕ!
ಹೌದು ದೇವೇಗೌಡರದ್ದು ಹಾಗೂ ವೈದ್ಯ ಮಂಜುನಾಥ್ ಅವರದ್ದು ಅಕ್ಕಪಕ್ಕದ ಊರುಗಳು. ಅಲ್ಲದೆ ದೇವೇಗೌಡರ ಕುಟುಂಬದ ಬಗ್ಗೆ ಮಂಜುನಾಥ ಅವರ ಕುಟುಂಬಕ್ಕೆ ಬಹಳ ಗೌರವವಿರುತ್ತೆ.ಹೀಗಾಗಿ ಮಂಜುನಾಥ್ ಅವರು ಮೈಸೂರಿನಲ್ಲಿ ಎಂಎಸ್ ಮಾಡುವಾಗಲೇ,ದೇವೇಗೌಡರ ಪುತ್ರಿ ಅನುಸೂಯ ಅವರೊಟ್ಟಿಗೆ ವಿವಾಹ ಮಾಡುವ ಬಗ್ಗೆ ಚರ್ಚೆಗಳು ಶುರುವಾಗಿದ್ದವಂತೆ…ಸಾಲದಕ್ಕೆ ಮಂಜುನಾಥ್ ಅವರು ದೇವೇಗೌಡರನ್ನು ಭೇಟಿ ಮಾಡಿ ಅವರ ಪುತ್ರಿಯನ್ನು ವಿವಾಹವಾಗುತ್ತೇನೆ ಅಂತಲೂ ಹೇಳ್ತಾರಂತೆ. ಆಗ ತಂದೆಯಾಗಿ ದೇವೇಗೌಡರು, ಮಂಜುನಾಥ್ ಅವರನ್ನು ಅನುಮಾನದಿಂದಲೇ ಕಾಣುತ್ತಾರೆ. ಅಲ್ದೆ ಒಂದು ಮಾತನ್ನು ಕೂಡ ಹೇಳ್ತಾರಂತೆ,”ನಾನು ವಿಧಾನಸಭೆ ಸದಸ್ಯನೂ ಅಲ್ಲ, ಏನು ಅಲ್ಲ,ನನ್ನ ಬಳಿ ಎಲ್ಐಸಿಯ 75000 ಹಣ ಬಿಟ್ಟರೆ ಬೇರೇನೂ ಇಲ್ಲ. ನನ್ನ ಹತ್ರ ಹಣ ಇದೆ ಅಂತಲೋ ಅಥವಾ ರಾಜಕೀಯ ಕುಟುಂಬ ಅಂತಲೋ ಯೋಚಿಸಿ ಮದುವೆಯಾಗಬೇಕು ಅಂತ ನೀವು ಬಂದಿದ್ರೆ ಆ ಭ್ರಮೆ ಬಿಟ್ಟು ಬಿಡಿ” ಅಂತ ಹೇಳಿದ್ರಂತೆ. ಅಲ್ಲದೆ ತಮ್ಮದೇ ಕಾರಿನಲ್ಲಿ ಮಂಜುನಾಥ ಅವರನ್ನು ಕಬ್ಬನ್ ಪಾರ್ಕ್ಗೆ ಕರೆದೊಯ್ದು ಒಂದು ಗಂಟೆ ಅವರೊಡನೆ ಮಾತನಾಡಿದರಂತೆ. ಆದರೆ ಕೊನೆಗೆ ಮಂಜುನಾಥ್ ಪಟ್ಟು ಬಿಡದೆ ಅನುಸೂಯರನ್ನು ಮದುವೆಯಾಗುವುದಾಗಿ ದೇವೇಗೌಡರನ್ನು ಒಪ್ಪಿಸಿದ್ದರು.
ಅದಾದ ಬಳಿಕ ನಿಶ್ಚಿತಾರ್ಥ ವಾಗುತ್ತೆ ಆಗಲು ಸಹ ಮನೆಯಲ್ಲಿ ಅನುಮತಿ ಪಡೆದು ನನ್ನ ಪತ್ರಕ್ಕೆ ಉತ್ತರ ಬರಿ ಅಂತ ಬಹಳ ಸಜ್ಜನಿಕೆಯಿಂದ ಅನುಸೂಯ ಅವ್ರ ಬಳಿ ಕೇಳಿಕೊಂಡಿದ್ರಂತೆ.. ಇನ್ನು ಕೊನೆಗೆ ಸರಳವಾಗಿ ಒಕ್ಕಲಿಗರ ಸಮುದಾಯ ಭವನದಲ್ಲಿ ಅನುಸೂಯ ಹಾಗೂ ಮಂಜುನಾಥ್ ಅವರ ವಿವಾಹವಾಯಿತು. ದೇವೇಗೌಡರಿಂದ ಮಂಜುನಾಥ ಅವ್ರು ನಯಪೈಸೆಯ ಉಡುಗೊರೆಯನ್ನೂ ಸ್ವೀಕರಿಸಲಿಲ್ಲ, ಅಲ್ದೆ ದೇವೇಗೌಡರು ಅಳಿಯ ಮಂಜುನಾಥ್ ಅವರಿಗಾಗಿ ಹೊಲಿಸಿದ್ದ ಸೂಟನ್ನು ಸಹ ಮಂಜುನಾಥ್ ತೆಗೆದುಕೊಂಡಿಲ್ಲವಂತೆ..ಆದರೆ ದೇವೇಗೌಡರು ಕೊಟ್ಟ ಒಂದು ಉಂಗುರವನ್ನು ಮಾತ್ರ ಮಂಜುನಾಥ್ ತೆಗೆದುಕೊಂಡಿದ್ರಂತೆ. ಅದನ್ನು ಮಂಜುನಾಥ್ ಅವರು ಈಗಲೂ ಸದಾ ಧರಿಸಿರುತ್ತಾರೆ. ಆ ಒಂದು ಉಂಗುರದ ಹೊರತಾಗಿ ಇನ್ನಾವ ಚಿನ್ನದ ಆಭರಣವನ್ನು ಮಂಜುನಾಥ್ ಧರಿಸುವುದಿಲ್ಲ.ಯಾಕಂದ್ರೆ ಈ ಉಂಗುರ ನನ್ನ ಅತ್ತೆ-ಮಾವ ಆಶೀರ್ವಾದ ಮಾಡಿ ಕೊಟ್ಟಿದ್ದಾರೆ ಅದೇ ನನ್ನ ಶ್ರೀರಕ್ಷೆ ಅನ್ನೋದು ಮಂಜುನಾಥ್ ಅವ್ರ ನಂಬಿಕೆ.
ಒಟ್ಟಿನಲ್ಲಿ ಹಣಕ್ಕಾಗಿಯೋ ಅಥವಾ ರಾಜಕೀಯ ಮಹಾತ್ವಾಕಾಂಕ್ಷೆಗೊ ಮದುವೆಯಾಗದೆ, ಇಂದಿಗೂ ತಮ್ಮದೇ ಸ್ವಂತ ತ್ಯಾಗ, ಪರಿಶ್ರಮ, ದಾನ ಧರ್ಮದಿಂದ ಜನರ ಮನಸ್ಸು ಗೆದ್ದು, ನೊಂದವರ ಪಾಲಿಗೆ ಸಾಂತ್ವನ ಹೇಳಿ, ಅವ್ರ ಬಾಳಿಗೆ ಆಶಾಕಿರಣವಾಗಿರುವ ಮಂಜುನಾಥ್ ಅವ್ರ ನೆರವು ಚಿಕಿತ್ಸೆ ಇನ್ನೊಂದಷ್ಟು ನೊಂದವರ ಹಾಗೂ ರೋಗಿಗಳ ಪಾಲಿಗೆ ಸಿಕ್ಕಿ ಅವ್ರ ಜೀವನ ಹಸನಾಗಲಿ ಅಂತ ನಾವು ನೀವು ಅಶಿಸೋಣ..
ಇದನ್ನು ಓದಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.