ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಜಾರಿ! ಉಚಿತವಾಗಿ ಸಿಗಲಿದೆ ಹೃದಯ ಸಂಬಂಧಿ ಚಿಕಿತ್ಸೆ..

ಸ್ನೇಹಿತರೆ ಕೊರೋನ ಮಹಾಮಾರಿ ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ರೀತಿಯ ಆಟವಾಡಿ ಬಿಡ್ತು. ಅದರಲ್ಲೂ ಕೊರೊನಾ ನಂತರ ದಿನಗಳಲ್ಲಿ ಹೃದ್ರೋಗ ಹೆಚ್ಚಳವಾಗುತ್ತಿದ್ದು, ಯುವ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಏಕಾಏಕಿ ಹೃದಯಾಘಾತ, ಹೃದಯ ಸ್ತಂಭನಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹೃದ್ರೋಗಗಳಿಗೆ ಉಂಟಾಗುತ್ತಿರುವ ಜೀವ ಹಾನಿ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೃದಯ ಜ್ಯೋತಿ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸುತ್ತಿದೆ. ಇದೇ ಹೃದ್ರೋಗ ಸಮಸ್ಯೆಯಿಂದ ಕೋಟ್ಯಾಂತರ ಅಭಿಯಾನಿಗಳನ್ನು ತೊರೆದ ನಟ ಪುನೀತ್‌ ರಾಜ್‌ಕುಮಾರ್‌ ಅವರ ಹೆಸರಿನಲ್ಲಿಯೇ ಈ ಯೋಜನೆಯು ಜಾರಿಗೆ ಬರುತ್ತಿರೋದು ಬಹಳ ವಿಶೇಷ. ಈ ಮೂಲಕ ಜನರಿಗೆ ಹೃದ್ರೋಗ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಚಿಕಿತ್ಸೆ ವ್ಯವಸ್ಥೆಯನ್ನು ಬಲಪಡಿಸಿ ತ್ವರಿತ ಚಿಕಿತ್ಸೆಯನ್ನು ನೀಡುವ ಉದ್ದೇಶವನ್ನು ರಾಜ್ಯ ಆರೋಗ್ಯ ಇಲಾಖೆ ಹೊಂದಿದೆ. ಇನ್ನು ಇದೆ ನವೆಂಬರ್‌ನಿಂದ ಈ ಯೋಜನೆಗೆ ಚಾಲನೆ ದೊರೆಯುತ್ತಿದೆ.

WhatsApp Group Join Now
Telegram Group Join Now

ಹೌದು ರಾಜ್ಯ ಸರ್ಕಾರವು ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿ ಹೃದ್ರೋಗ ಸಾವಿನ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ಹಲವು ಕ್ರಮಗಳು, ಸೌಲಭ್ಯ, ಚಿಕಿತ್ಸಾ ವ್ಯವಸ್ಥೆ ಕಲ್ಪಿಸುತ್ತಿದೆ. ಹಾಗಾದ್ರೆ ಏನಿದು ಯೋಜನೆ? ಯಾವೆಲ್ಲಾ ಚಿಕಿತ್ಸೆ ಲಭ್ಯ ಇವೆ ಇದೆಲ್ಲವನ್ನ ನೋಡ್ತಾ ಹೋಗೋಣ.

 

ಹೃದಯಾಘಾತಕ್ಕೆ ಒಳಗಾದವರಿಗೆ ಸುವರ್ಣ ಸಮಯ, ಈ ಸಮಯ ಒಳಗೆ ಚಿಕಿತ್ಸೆ ಕೊಡುವುದು ಬಹಳ ಮುಖ್ಯ. ಇದರಿಂದ ಹೃದಯಾಘಾತ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಜೀವಗಳನ್ನ ಉಳಿಸಬಹುದು. ಗೋಲ್ಡನ್ ಟೈಮ್‌ ಒಳಗೆ ಸಮೀಪದಲ್ಲಿಯೇ ಸೂಕ್ತ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯು ಚಿಕಿತ್ಸೆಯನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಎರಡು ರೀತಿಯಲ್ಲಿ ಕಾರ್ಯಕ್ರಮ ಜಾರಿಗೆ ತರಲಾಗ್ತಿದೆ. ಹಬ್‌ ಅಂಡ್ ಸ್ಪೋಕ್‌ ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನಗಳಗಳನ್ನ ಅಳವಡಿಸುವುದು. ಹಬ್‌ ಮತ್ತು ಸ್ಪೋಕ್‌ ಕೇಂದ್ರಗಳ ಮಾದರಿ, ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. 85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನ ಸ್ಪೋಕ್‌ ಕೇಂದ್ರಗಳನ್ನಾಗಿ ರೂಪಿಸುತ್ತಿದ್ದೇವೆ.

ಜಯದೇವಾ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ಹಬ್‌ ಗಳನ್ನ ರಚಿಸಲಾಗಿದೆ. ಯಾರಿಗೇ ಎದೆನೋವು ಕಾಣಿಸಿಕೊಂಡ್ರೂ, ಅವರು ನಮ್ಮ ಸ್ಪೋಕ್‌ ಕೇಂದ್ರಗಳಿಗೆ ಭೇಟಿ ನೀಡಿದರೆ ತಕ್ಷಣ ಇಸಿಜಿ(ECG) ಮಾಡಲಾಗುತ್ತೆ. ಜೊತೆಗೆ ಎಐ(AI) ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಕ್ರಿಟಿಕಲ್ ಇದೆಯಾ, ಇಲ್ವಾ ಅನ್ನೋದನ್ನ ಸ್ಥಳದಲ್ಲಿಯೇ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತೆ. ಇದಕ್ಕಾಗಿ ಖಾಸಗಿ ಸಂಸ್ಥೆಯವರ ಎಐ ತಂತ್ರಜ್ಞಾನದ ಸಹಾಯ ಪಡೆದು ಕ್ರಿಟಿಕಲ್ ಅಥವಾ ನಾನ್ ಕ್ರಿಟಿಕಲ್ ಅನ್ನೋದನ್ನ ಪತ್ತೆ ಹಚ್ಚುವ ವ್ಯವಸ್ಥೆ ಕಲ್ಪಿಸಲಾಗಿದೆ ಅಂತ ಅರೋಗ್ಯ ಇಲಾಖೆ ತಿಳಿಸಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ

ಈ ಸೌಲಭ್ಯವು ರಾಜ್ಯದ ಎಲ್ಲ ಪಡಿತರ ಚೀಟಿ ಹೊಂದಿರುವವರಿಗೆ ಸಿಗಲಿದೆ. ಹೀಗಾಗಿ ರಾಜ್ಯ ಸರ್ಕಾರವು ಬಿಪಿಎಲ್ ಸೇರಿ ಎಲ್ಲಾ ಪಡಿತರ ಚೀಟಿದಾರರಿಗೆ ಒಂದು ಸಿಹಿಸುದ್ದಿ ನೀಡಿದೆ ಅಂತಲೇ ಹೇಳಬಹುದು. ಯಾಕಂದ್ರೆ ಹೃದಯಾಘಾತಕ್ಕೆ ಒಳಗಾದವರಿಗೆ ತಕ್ಷಣ ಚಿಕಿತ್ಸೆ ನೀಡುವ ಉದ್ದೇಶದ ಡಾ. ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ ಯೋಜನೆಯನ್ನು ನವೆಂಬರ್ ನಲ್ಲಿ ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇನ್ನು ಈ ಯೋಜನೆಯನ್ನ ನವೆಂಬರ್ ಅಂತ್ಯಕ್ಕೆ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಹೆಸರಿನಲ್ಲಿ ಚಾಲನೆ ನೀಡಲಿದ್ದು, ರಾಜ್ಯದ 16 ಸೂಪರ್ ಸ್ಪೆಷಾಲಿಟಿ, 85 ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಾಗಲಿದೆ ಅಂತ ಹೇಳಲಾಗುತ್ತಿದೆ. ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿರುವ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಜಾರಿಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ಸ್ಪೋಕ್ ಕೇಂದ್ರಗಳಾಗಿ, 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹಬ್ ಗಳನ್ನಾಗಿ ರೂಪಿಸಲಾಗುತ್ತಿದೆ ಅಂತ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇನ್ನು ಎದೆ ನೋವು ಕಾಣಿಸಿಕೊಂಡವರು ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದ ಕೂಡಲೇ ಅವರಿಗೆ ಇಸಿಜಿ ಮಾಡಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಪರಿಸ್ಥಿತಿ ಅವಲೋಕಿಸಿ ಗಂಭೀರ ಪರಿಸ್ಥಿತಿ ಇದ್ದರೆ ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ನೀಡಲಾಗುವುದು. ಅಲ್ಲಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತದೆ. ಟೆನೆಕ್ಟ್ ಪ್ಲಸ್ ಇಂಜೆಕ್ಷನ್ ಗೆ 35 ರಿಂದ 40 ಸಾವಿರ ರೂ. ಖರ್ಚಾಗಲಿದ್ದು, ಸ್ಪೋಕ್ ಕೇಂದ್ರಗಳಲ್ಲಿ ಇದನ್ನು ಉಚಿತವಾಗಿ ನೀಡಲಾಗುತ್ತದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಯೋಜನೆ ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲಿದ್ಯೋ ಕಾದು ನೋಡಬೇಕಿದೆ.

ಇದನ್ನೂ ಓದಿ: 2024ರಲ್ಲಿ ಶನಿಯ ಕೃಪೆಯಿಂದಾಗಿ ಈ ಮೂರು ರಾಶಿಗಳಿಗೆ ಅದೃಷ್ಟ

ಇದನ್ನೂ ಓದಿ: ವಿಶಿಷ್ಟ ವಿನ್ಯಾಸದಿಂದ ಗ್ರಾಹಕರಿಗೆ ಮೈ ಬಿಸಿ ಏರಿಸುವ ಟಾಟಾ ಅವಿನ್ಯಾ ಸದ್ಯದಲ್ಲೇ ಲಾಂಚ್ ಆಗಲಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram