IPL ನಿಂದ ಬದಲಾಯ್ತು ಹಣೆಬರಹ, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ವಾಚ್ ಮ್ಯಾನ್ ಮಗ!

IPL: ಲಕ್ ಯಾವಾಗ ಯಾರಿಗೆ ಹೇಗೆ ಕೈ ಹಿಡಿಯಿತ್ತೆ ಅಥವ ಕೈ ಕೊಡುತ್ತೆ ಅಂತ ಯಾರಿಗೂ ಗೊತ್ತಾಗಲ್ಲ. ಆದ್ರೆ ಅದೃಷ್ಟ ಒಮ್ಮೆ ಖುಲಾಯಿಸಿತು ಅಂದ್ರೆ ತಿರುಕನು ಶ್ರೀಮಂತನಾಗ್ತಾನೆ ಅದೇ ಅದೃಷ್ಟ ಕೈ ಕೊಟ್ರೆ ಕೋಟ್ಯಧಿಪತಿ ಕೂಡ ಬೀದಿಲಿ ನಿಲ್ತಾನೆ… ಆದ್ರೆ ಇಲ್ಲೊಬ್ಬ ರಾತ್ರೊರಾತ್ರಿ 2ಕೋಟಿ ಗೆದ್ದು ಕೋಟ್ಯಾಧಿಪತಿಯಾಗಿದ್ದಾನೆ.. ಅಚ್ಚರಿ ಅನ್ನಿಸಿದರು ಇದು ಸತ್ಯ.

WhatsApp Group Join Now
Telegram Group Join Now

ಡ್ರೀಮ್ 11 ಈ ಆಟ ಎಲ್ಲರಿಗೂ ಗೊತ್ತೇ ಇರುತ್ತೆ. ಈ ಒಂದು ಅದಿಂದಲೇ ಈ ವ್ಯಕ್ತಿ ಇಂದು ಕೋಟ್ಯಧಿಪತಿ ಆಗಿರೋದು.. ಆಗಂತ ಈ ಆಟ ಆಡೋದು ಸರಿ ಅಂತ ಹೇಳ್ತಿಲ್ಲ.. ಈ ವ್ಯಕ್ತಿ ಗೆದ್ದ ಬಗ್ಗೆ ವಿವರಿಸೋ ಪ್ರಯತ್ನ ಮಾಡ್ತಿದ್ದೆವೆ ಅಷ್ಟೇ. ಹೌದು ಆನ್ಲೈನ್ ಆಟಗಳು ಬಹಳ ಅಪಾಯಕಾರಿ ಅಂತ ತುಂಬಾ ಜನರಿಗೆ ಗೊತ್ತಿದೆ. ಆದರೂ ಕೆಲವ್ರು ಬಂಡ ಧೈರ್ಯ ಮಾಡುದ್ರೆ ಇನ್ನೂ ಕೆಲವ್ರು ತಾವು ಗೆದ್ದೇ ಗೆಲ್ತಿವಿ ಅನ್ನೋ ನಂಬಿಕೆಯಲ್ಲೇ ಆಟವನ್ನ ಮುಂದುವರೆಸ್ತಾರೆ.. ಈಗ ಈತ ಮಾಡಿರೋದು ಅದನ್ನೇ.

ಅದೃಷ್ಟ ಖುಲಾಯಿಸಿ, ಜೀವನವೇ ಬದಲಾಗಿದ್ದು ಹೇಗೆ ನೋಡಿ?

IPL: ಹೌದು ಬಿಹಾರದ ವಾರಿಸ್​ಗರದ ಮುಕೇಶ್ ಪಾಸ್ವಾನ್ ಡ್ರೀಮ್​ 11ನಲ್ಲಿ 2 ಕೋಟಿ ರೂಪಾಯಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.ಆಗಂತ ಈತ ಒಂದೇ ಬಾರಿಗೆ ಇಷ್ಟು ದುಡ್ಡು ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ. ಹೌದು ಯೂಟ್ಯೂಬ್‌ನಲ್ಲಿ ಡ್ರೀಮ್ 11 ವಿಜೇತರ ಬಗ್ಗೆ ಮುಕೇಶ್ ವೀಕ್ಷಿಸಿ ತಾವೂ ಕೂಡ ಆಡಲು ಶುರು ಮಾಡಿದ್ದರು. ಅದರೆ ಮೂರು ನಾಲ್ಕು ವರ್ಷಗಳಿಂದ ಆಡಿದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಕೆಲವು ದಿನಗಳಿಂದ ಆಡುವುದನ್ನ ಬಿಟ್ಟಿದ್ದರು. ಆದ್ರೆ ಈಗ IPL ನಲ್ಲಿ ಅದೃಷ್ಟ ಎಂಬಂತೆ ಈಗ ಲಕ್ಷ್ಮೀದೇವಿ ಇತನಿಗೆ ಒಲಿದಿದ್ದು ಕೋಟ್ಯಧಿಪತಿಯಾಗಿದ್ದಾನೆ.

ಇನ್ನು ಕಳೆದ ವಾರ ಕೇವಲ 49 ರೂಪಾಯಿ ಹೂಡಿಕೆ ಮಾಡುವ ಮೂಲಕ ಆನ್‌ಲೈನ್ ಫ್ಯಾಂಟಿಸಿ ಗೇಮ್​ನಲ್ಲಿ ಚಾಲಕನೊಬ್ಬ 1.5 ಕೋಟಿ ರೂಪಾಯಿ ಗೆದ್ದಿದ್ದ. ಇದೀಗ ವಾಚ್ ಮೆನ್ ಮಗನಾಗಿರುವ ಮುಕೇಶ್ ಮುನ್ನವೇ 2 ಕೋಟಿ ರೂಪಾಯಿ ಗೆದ್ದಿದ್ದಾರೆ ನಿಜಕ್ಕೂ ಇದು ಅಚ್ಚರಿಯೇ ಸರಿ.., ಅಷ್ಟು ವರ್ಷಗಳಿಂದ ಆಡಿ, ಸೋತರು ಮತ್ತೆ ಗೆಲ್ತಿನಿ ಅಂತ ಆಡಿ ಗೆದ್ದಿರೋದು ಅಷ್ಟು ಸುಲಭಕ್ಕೆ ಸಾಧ್ಯವಾಗುವಂತಾದಲ್ಲ.. ಯಾಕಂದ್ರೆ ಆಡುವ ಛಲ ಇದ್ದಾರೆ ಸಾಲೋದಿಲ್ಲ ಅದನ್ನ ನಿಭಾಯಿಸೋ ಧೈರ್ಯ ಹಣ ಎರಡು ಬೇಕಾಗುತ್ತೆ.

ಇದನ್ನು ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಮುಕೇಶ್ ಪಾಸ್ವಾನ್

ಹೌದು ವಾಚ್ ಮ್ಯಾನ್​ ಮಗನಾಗಿರುವ ಮುಕೇಶ್ ಪಾಸ್ವಾನ್, 2017ರಲ್ಲೇ ಡ್ರೀಮ್ 11ನಲ್ಲಿ ತಂಡವನ್ನು ಮಾಡಲು ಶುರು ಮಾಡಿದ್ದರು, ಆದರೆ ಬಹಳ ದಿನ ಹಣ ಗೆಲ್ಲಲು ಸಾಧ್ಯವಾಗದ ಕಾರಣ ಆಡುವುದನ್ನೇ ಬಿಟ್ಟಿದ್ದರು. ಅಡ್ಡದ ಮೇಲೆ ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಜನರು ಕೋಟಿಗಟ್ಟಲೆ ಗೆದ್ದ ವೀಡಿಯೋಗಳನ್ನು ನೋಡಿದಾಗ ಅವರಿಗೆ ಮತ್ತೆ ಆಟ ಆಡುವ ಆಸೆಯಾಗಿದೆ. ಹಾಗೆ ಆಡುತ್ತಲೇ 2021ರಲ್ಲಿ 5 ಲಕ್ಷ ರೂಪಾಯಿ ಗೆದ್ದಿದ್ದರಂತೆ. ಆ ಬಳಿಕ ಇನ್ನಷ್ಟು ಧೈರ್ಯ ತಂದುಕೊಂಡು ಆಟ ಮುಂದುವರಿಸಿದ್ದಾರೆ. ಅಲ್ದೆ ಕಳೆದ ವರ್ಷ ಕೂಡ ಮುಕೇಶ್ 2 ಲಕ್ಷ ರೂಪಾಯಿ ಗೆದ್ದಿದ್ದಾರೆ. ಈ ಎರಡು ಗೆಲುವಿನಿಂದ ಮುಖೇಶ್ ಮತ್ತೆ ಆಟ ಮುಂದುವರಿಸಿ ಇದೀಗ 2 ಕೋಟಿ ರೂಪಾಯಿ ಗೆದ್ದಿದ್ದಾರೆ.

ಒಬ್ಬ ಸಾಮಾನ್ಯ ವಾಚ್ ಮೆನ್ ಮಗನಾಗಿದ್ದ ನಾನೀಗ 2ಕೋಟಿಗಳ ಒಡೆಯನಗಿರೋದು ನಂಗೆ ಖುಷಿ ತಂದಿದೆ… ಮೊದಲೆಲ್ಲ ಆಟದಲ್ಲಿ ಸೋತು ದುಡ್ಡನ್ನ ಕಳೆದುಕೊಂಡಾಗ ಅದೊಂದೇ ಬೇಡ ಅಂದುಕೊಂಡಿದ್ದೆ ಆದ್ರೆ ಮತ್ತೆ ಯೌಟ್ಯೂಬ್ ನಲ್ಲಿನ ವಿಡಿಯೋಗಳನ್ನ ನೋಡಿದಾಗ ಆಡುವ ಮನಸ್ಸು ಬಂತು ಈಗ ದೇವರ ದಯೆಯಿಂದ 2ಕೋಟಿ ಗೆದ್ದಿದೀನಿ ತುಂಬಾ ಖುಷಿಯಾಗ್ತಿದೆ ಅಂತ ಮುಖೇಶ್ ತಮ್ಮ ಖುಷಿಯನ್ನ ಸಂಭ್ರಮಿಸುತ್ತಿದ್ದಾರೆ.

ಆದರೆ ಸ್ನೇಹಿತರೆ ಒಂದನ್ನ ಮಾತ್ರ ಮರೀಬಾರದು…. ಹೇಗೆ ಒಂದು ನಾಣ್ಯದಲ್ಲಿ 2ಮುಖ ಇರುತ್ತೋ ಆಗೇ ಆಟದಲ್ಲೂ ಕೂಡ ಸೋಲು ಗೆಲುವು ಅನ್ನೋ ಮುಖ ಇರುತ್ತೆ. ಈಗ ಮುಖೇಶ್ ಅವ್ರ ವಿಚಾರದಲ್ಲಿ ನಾವು ನೋಡ್ತಿರೋದು ನಾಣ್ಯದ ಒಂದು ಮುಖ ಮಾತ್ರ.ಇನ್ನೊಂದು ಮುಖ ಬಹಳ ನೋವುಂಟು ಮಾಡುತ್ತೆ, ಎಷ್ಟೇ ಜೀವ ಜೀವನಗಳು ಹಾಳಾಗುತ್ತೆ ಅನ್ನೋದನ್ನ ಮರೆಯೋದು ಬೇಡ. ಮತ್ತೊಂದು ವಿಚಾರ ಅಂದ್ರೆ ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಒಳ್ಳೆಯದಲ್ಲ ಅಂತ ತುಂಬಾ ಜನ ಹೇಳ್ತಿರ್ತಾರೆ.ಈಗಾಗಲೇ ಇದ್ರಿಂದ ಹಲವು ಮಂದಿ ಇಂತಹ ಸಾವಿರಾರು, ಲಕ್ಷ, ಕೋಟಿಗಳ ವರೆಗೂ ಕಳೆದುಕೊಂಡಿದ್ದಾರೆ. ಇದರಿಂದಲೇ ಸಾಲದ ಸುಳಿಗೆ ಸಿಲುಕಿ ಜೀವವನ್ನು ಬಿಟ್ಟಿದ್ದಾರೆ. ಹೀಗಾಗಿ ಇವುಗಳಿಂದ ದೂರವಿರುವುದು ಒಳಿತು ಅನ್ನೋದು ಹಲವಾರ ಮಾತು.

ಇದನ್ನು ಓದಿ : ಮುಕೇಶ್ ಅಂಬಾನಿಯ ಫ್ರೀ ಐಪಿಎಲ್ ಹಿಂದಿನ ಕರಾಳ ರಹಸ್ಯ