ಡ್ರೈವಿಂಗ್ ಲೈಸೆನ್ಸ್ ನ ನಿಯಮದಲ್ಲಿ ಭಾರಿ ಬದಲಾವಣೆ; ಜೂನ್ 1 ರಿಂದ ಜಾರಿ

Driving licence New Rules 2024

ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಎಂದಾದರೆ ನಾವು RTO ಆಫೀಸ್ ಗೆ ತೆರಳಿ ಡ್ರೈವಿಂಗ್ ಲೈಸೆನ್ಸ್ ಗೆ ಟೆಸ್ಟ್ ಅಟೆಂಡ್ ಆಗಿ ನಂತರ ನಮಗೆ ಡ್ರೈವ್ ಮಾಡಲು ಬರುತ್ತದೆ ಅಥವಾ ಇಲ್ಲ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ನಾವು ಟೆಸ್ಟ್ ನಲ್ಲಿ ಪಾಸ್ ಆದರೆ ಮಾತ್ರ ನಮಗೆ ಡ್ರೈವಿಂಗ್ ಲೈಸೆನ್ಸ್ ಸಿಗುತ್ತಿತ್ತು. ಈಗ ಈ ನಿಯಮದಲ್ಲಿ ಬದಲಾವಣೆ ತರುತ್ತಿದ್ದೆ. ಈ ಬದಲಾವಣೆಯಿಂದ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಎಂದಾದರೆ RTO ಆಫೀಸ್ ಗೆ ತೆರಳಬೇಕು ಎಂಬ ಹಳೆಯ ನಿಯಮ ಇರುವುದಿಲ್ಲ.

WhatsApp Group Join Now
Telegram Group Join Now

ಖಾಸಗಿ ಚಾಲನಾ ತರಬೇತಿ ಕೇಂದ್ರದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು:- ಹೊಸ ನಿಯಮ ಅನ್ವಯ ನೀವು RTO ಆಫೀಸ್ ಗೆ ಹೋಗದೆ ಖಾಸಗಿ ಚಾಲನಾ ತರಬೇತಿ ಕೇಂದ್ರದಲ್ಲಿ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಗೆ ಹೋಗಬಹುದು ಟೆಸ್ಟ್ ಪಾಸ್ ಆದರೆ ಖಾಸಗಿ ತರಬೇತಿ ಸಂಸ್ಥೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ನೀಡುತ್ತದೆ. ಆದರೆ ಇಲ್ಲವೇ ಸೂಚಿಸಿದ ತರಬೇತಿ ಕೇಂದ್ರಗಳಲ್ಲಿ ಮಾತ್ರ ಈ ಸೌಲಭ್ಯ ಇರುತ್ತದೆ. ಖಾಸಗಿ ಚಾಲನಾ ತರಬೇತಿ ಕೇಂದ್ರಗಳಿಗೆ ಸಹ ಕೆಲವು ನಿಯಮದ ಅನ್ವಯ ಡ್ರೈವಿಂಗ್ ಲೈಸೆನ್ಸ್ ನೀಡುವ ಹಕ್ಕು ಇರುತ್ತದೆ.

ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಡ್ರೈವಿಂಗ್ ಲೈಸೆನ್ಸ್ ವಿತರಣೆ ಮಾಡಲು ಇಲಾಖೆ ಕೆಲವು ನಿಯಮಗಳನ್ನು ತಿಳಿಸಿದೆ:-

ಎಲ್ಲ ಖಾಸಗಿ ಚಾಲನಾ ತರಬೇತಿ ಕೇಂದ್ರಗಳಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಅಟೆಂಡ್ ಮಾಡಲು ಸಾಧ್ಯವಿಲ್ಲ. ಖಾಸಗಿ ತರಬೇತಿ ಕೇಂದ್ರಗಳು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಹಾಗೂ ವಿತರಣೆ ಮಾಡಲು ಸರಕಾರ ಕೆಲವು ನಿಬಂಧನೆಗಳನ್ನು ತಿಳಿಸಿದೆ. ಅವು ಯಾವುದೆಂದರೆ

  1. ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಪರೀಕ್ಷಾ ಸೌಲಭಗಳನ್ನು ಹೊಂದಿರಬೇಕು.
  2. ಪರೀಕ್ಷೆ ನಡೆಸಲು ಜಾಗ ಹೊಂದಿರಬೇಕು. ಅಂದರೆ ಎರಡು ಚಕ್ರದ ವಾಹನಗಳಿಗೆ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಲೈಸೆನ್ಸ್ ಟೆಸ್ಟ್ ಮಾಡಲು ಕನಿಷ್ಠ ಒಂದು ಎಕರೆ ಇರಬೇಕು ಹಾಗೂ ಭಾರಿ ವಾಹನಗಳಿಗೆ ಹೆಚ್ಚಿನ 2 ಎಕರೆ ವಿಸ್ತೀರ್ಣ ಇರಬೇಕು.
  3. 5 ವರ್ಷಗಳ ಕಾಲ ವಾಹನ ಚಾಲನೆಯ ಅನುಭವ ಇರಬೇಕು.
  4. ಲಘು ವಾಹನ ಸವಾರರಿಗೆ 4 ವಾರಗಳಲ್ಲಿ ಎಂದರೆ ಕನಿಷ್ಠ 29 ಗಂಟೆಗಲ್ಲಿ ತರಬೇತಿ ಪೂರ್ಣ ಗೊಳಿಸಿರಬೇಕು.
  5. ತರಬೇತಿಯಲ್ಲಿ ಥಿಯರಿ ಹಾಗೂ ಪ್ರಾಯೋಗಿಕವಾಗಿ ನಡೆಸಬೇಕು. ಥಿಯರಿ ವಿಭಾಗವನ್ನು 8 ಗಂಟೆ ಕನಿಷ್ಠ ಹೇಳಿಕೊಡಬೇಕು ಹಾಗೂ ಪ್ರಾಯೋಗಿಕ 21 ಗಂಟೆ ತರಬೇತಿ ನೀಡಬೇಕು.
  6. ದೊಡ್ಡ ಮೋಟರ್ ವಾಹನ ಸವಾರರಿಗೆ 38 ಗಂಟೆಗಳ ಕಾಲ ತರಬೇತಿ ನೀಡಬೇಕು. 8 ಗಂಟೆ ಥಿಯರಿ ಕ್ಲಾಸ್ ಹಾಗೂ 31 ಗಂಟೆ ಪ್ರಾಯೋಗಿಕ ಕ್ಲಾಸ್ ಇರಬೇಕು. ಭಾರಿ ವಾಹನ ಸವಾರರಿಗೆ ತರಬೇತಿಯನ್ನು 6 ವಾರಗಳಲ್ಲಿ ಪೂರ್ಣ ಗೊಳಿಸಬೇಕು.
  7. ತರಬೇತಿ ನೀಡುವುದರ ಕನಿಷ್ಠ ಶಿಕ್ಷಣ SSLC ಆಗಿರಬೇಕು. ಹಾಗೂ ತರಬೇತುದಾರರು ಬಯೋಮೆಟ್ರಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳ ಬಗ್ಗೆ ತಿಳಿದಿರಬೇಕು.

ಶುಲ್ಕದ ವಿವರಗಳು :- ವಿವಿಧ ರೀತಿಯ ಚಾಲನಾ ಪರವಾನಗಿಗಳಿಗೆ ವಿಭಿನ್ನ ಶುಲ್ಕಗಳು ನಿಗದಿಯಾಗಿವೆ. 

  • ಕಲಿಕಾ ಪರವಾನಗಿ: 200 ರೂ.
  • ಕಲಿಕಾ ಪರವಾನಗಿ ನವೀಕರಣ: 200 ರೂ.
  • ಅಂತರಾಷ್ಟ್ರೀಯ ಪರವಾನಗಿ: 1000 ರೂ.
  • ಶಾಶ್ವತ ಪರವಾನಗಿ: 200 ರೂ.

ಇದನ್ನೂ ಓದಿ: Hurry Up ಸುಜುಕಿ ಜಿಮ್ನಿ 5-ಡೋರ್ ಹೆರಿಟೇಜ್, 500 ಅದೃಷ್ಟಶಾಲಿಗಳಿಗೆ ಮಾತ್ರ!

ಚಾಲನಾ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ :-

ಮೊದಲು, https://parivahan.gov.in ಗೆ ಭೇಟಿ ನೀಡಿ. ನಂತರ ಆನ್‌ಲೈನ್ ಸೇವೆಗಳು ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ಚಾಲಕ ಪರವಾನಿಗೆ ಎಂಬ ಆಪ್ಷನ್ ಕ್ಲಿಕ್ ಮಾಡಿ.ನಂತರ ನೂತನ ಚಾಲಕ ಪರವಾನಿಗೆ ಆಪ್ಷನ್ ಕ್ಲಿಕ್ ಮಾಡಿ ನಂತರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿಯಾಗಿ ನೋಂದಾಯಿಸಿದ ನಂತರ, ನೀವು ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಬಹುದು ಅಥವಾ ಆನ್‌ಲೈನ್‌ನಲ್ಲಿ ಭರ್ತಿ ಮಾಡಬಹುದು. ಆನ್ಲೈನ್ ನಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಮತ್ತು ಸಂಪೂರ್ಣವಾಗಿ ಭರ್ತಿ ಮಾಡಿ ಹಾಗೂ
ಫಾರ್ಮ್‌ನಲ್ಲಿ ನಮೂದಿಸಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ. ಅನ್ವಯಿಸಬಹುದಾದ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ. ನಿಮ್ಮ ಅರ್ಜಿ ಸಲ್ಲಿಸಿದ ನಂತರ, ಅಗತ್ಯವಿರುವ ದಾಖಲೆಗಳನ್ನು ಮೂಲ ಪ್ರತಿಗಳೊಂದಿಗೆ ಮತ್ತು ನಿಮ್ಮ ಚಾಲನಾ ಕೌಶಲ್ಯದ ಪುರಾವೆಗಳನ್ನು RTO ಗೆ ಒದಗಿಸಲು ಭೇಟಿ ನೀಡಿ. ಲೈಸೆನ್ಸ್ ಪಡೆಯಲು ನೀವು ಚಾಲನಾ ಪರೀಕ್ಷೆ ಮತ್ತು ದೃಷ್ಟಿ ಪರೀಕ್ಷೆಯನ್ನು ಪಾಸು ಮಾಡಬೇಕು. ಎಲ್ಲ ಪರೀಕ್ಷೆ ಪಾಸ್ ಆದ ಬಳಿಕ ಚಾಲನಾ ಪರವಾನಿಗೆ ಸಿಗುತ್ತದೆ.

ಇದನ್ನೂ ಓದಿ: ಕಾರು ಖರೀದಿಸುವ ಕನಸು ನನಸಾಗಬೇಕಾ? ಹಾಗಾದರೆ 2024 ರ ಕಡಿಮೆ ಬಡ್ಡಿದರದಲ್ಲಿ ಕಾರ್ ಲೋನ್‌ಗಳ ಬಗ್ಗೆ ತಿಳಿಯಿರಿ!