ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಭಾರಿ ಬದಲಾವಣೆ! ಹೊಸ ನಿಯಮಗಳನ್ನು

Driving license New Rules

ಈಗ ವಾಹನ ಚಲಾವಣೆಗೆ ವಯಸ್ಸಿನ ಮಿತಿ ಕೇವಲ ರೂಲ್ಸ್ ಬುಕ್ ನಲ್ಲಿ ಇದ್ದಂತೆ ಆಗಿದೆ. 5, 6 ತರಗತಿಯಲ್ಲಿ ಓದುತ್ತಿರುವ ಮಕ್ಕಳ ಸಹ ತಂದೆ ತಾಯಿಯ ಬೈಕ್ ಪಡೆದು ಓಡಿಸುತ್ತಾರೆ. ಆದರೆ ನಿಯಮದ ಪ್ರಕಾರ ಇದು ಅಪರಾಧ ಇಂತಹ ಹಲವು ಪ್ರಕರಣವು ಸರಕಾರದ ಗಮನಕ್ಕೆ ಬಂದಿರುವುದರಿಂದ ಈಗ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ತರುತ್ತಿದೆ.

WhatsApp Group Join Now
Telegram Group Join Now

ಜೂನ್ 1 ರಿಂದ ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಿದರೆ ದಂಡ ವಿಧಿಸಲಾಗುತ್ತದೆ :- 18 ವರ್ಷಗಳ ಒಳಗಿನವರು ವಾಹನ ಚಾಲನೆ ಮಾಡಿದರೆ ಅವರಿಗೆ 25,000 ರೂಪಾಯಿಯ ವರೆಗೆ ದಂಡ ವಿಧಿಸಲಾಗುತ್ತದೆ. ಜೊತೆಗೆ ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ ಸಹ ರದ್ದಾಗಿತ್ತದೆ. ಹಾಗೂ ಅಪ್ರಾಪ್ತ ವಯಸ್ಕರಿಗೆ 25 ವರ್ಷ ವಯಸ್ಸು ಆಗುವ ತನಕ ಚಾಲನಾ ಪರವಾನಿಗೆ ಸಿಗುವದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಇನ್ಮುಂದೆ ಚಾಲನಾ ತರಬೇತಿ ಕೇಂದ್ರಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತದೆ:- ಇಲ್ಲಿಯವರೆಗೆ ಚಾಲನಾ ಪರವಾನಿಗೆ ಪತ್ರ ಪಡೆಯಬೇಕು ಎಂದರೆ ನಾವು ನೇರವಾಗಿ R T O ಆಫೀಸ್ ಗೆ ತೆರಳಿ ಮೊದಲು L L R ಪಡೆದುಕೊಂಡು ನಂತರ ಲೈಸೆನ್ಸ್ ಪಡೆಯಲು ಚಾಲನಾ ಪರೀಕ್ಷೆ ಗೆ RTO ಕಚೇರಿಗೆ ತೆರಳಿ ಪರೀಕ್ಷೆಯಲ್ಲಿ ತೇರ್ಗಡೆ ಆದರೆ ನಮಗೆ ಡ್ರೈವಿಂಗ್ ಲೈಸೆನ್ಸ್ ಸಿಗುತ್ತಿತ್ತು. ಆದರೆ ಇನ್ನೂ ಮುಂದೆ ಡ್ರೈವಿಂಗ್ ಲೈಸೆನ್ಸ್ ಪಡೆಯಲು R T O ಕಚೇರಿಗೆ ತೆರಳಬೇಕು ಎಂಬುದಿಲ್ಲ. ಇಲಾಖೆ ಸೂಚಿಸಿದೆ ಪ್ರೈವೇಟ್ ಡ್ರೈವಿಂಗ್ ಸ್ಕೂಲ್ ಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಿದೆ. ಆದರೆ ಇಲ್ಲಿಯೂ ನೀವು ಡ್ರೈವಿಂಗ್ ಟೆಸ್ಟ್ ಗೆ ಅಟೆಂಡ್ ಆಗಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಜೂನ್ ಒಂದರಿಂದ ಸಾರಿಗೆ ಇಲಾಖೆಯ ನಿಯಮಗಳು ಏನು?

ಜೂನ್ ಒಂದರಿಂದ ಸಾರಿಗೆ ಇಲಾಖೆ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಅದೇನೆಂದರೆ :-

  • ವೇಗದ ವಾಹನ ಚಾಲನೆ :- ವೇಗವಾಗಿ ವಾಹನ ಚಲಾಯಿಸಿದರೆ 1,000 ರೂಪಾಯಿಯಿಂದ 2,000 ರೂಪಾಯಿಯ ವರೆಗೆ ದಂಡ ವಿಧಿಸಲಾಗುತ್ತದೆ.
  • ಲೈಸೆನ್ಸ್ ಇಲ್ಲದಿರುವುದು :- ಡ್ರೈವಿಂಗ್ ಲೈಸೆನ್ಸ್ ಇಲ್ಲದೆಯೇ ವಾಹನ ಚಾಲನೆ ಮಾಡಿದರೆ 500 ರೂಪಾಯಿ ದಂಡ ವಿಧಿಸಲಾಗುವುದು.
  • ಹೆಲ್ಮೆಟ್ ಮತ್ತು ಸಿಟ್ ಬೆಲ್ಟ್ :- ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದು ವಾಹನ ಸವಾರರ ಸುರಕ್ಷತೆಗೆ ಸರಕಾರ ಕಡ್ಡಾಯವಾಗಿ ನಿಯಮ ರೂಪಿಸಿದೆ. ಒಂದು ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ಇದ್ದರೆ 100 ರೂಪಾಯಿ ದಂಡ ಕಟ್ಟಬೇಕು. ಹಾಗೂ ನಾಲ್ಕು ಚಕ್ರ ವಾಹನ ( ಕಾರ್ ) ಸವಾರರು ಸಿಟ್ ಬೆಲ್ಟ್ ಧರಿಸದೆ ಇದ್ದರೆ 100 ರೂಪಾಯಿ ದಂಡ ಕಟ್ಟಬೇಕು.

ಚಾಲನಾ ಪರವಾನಿಗೆ ನೀಡುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ಯಾವ ನಿಯಮಗಳು ಇವೆ?: ತರಬೇತಿ ಸಂಸ್ಥೆ ಚಾಲನೆ ಪರವಾನಿಗೆ ನೀಡಬೇಕು ಎಂದರೆ ಪರೀಕ್ಷಾ ಸೌಲಭ್ಯಗಳನ್ನು ಹೊಂದಿರಬೇಕು. ದ್ವಿಚಕ್ರ ವಾಹನ ಪರವಾನಿಗೆ ನೀಡಲು ಸಂಸ್ಥೆ ಒಂದು ಎಕರೆ ಪ್ರದೇಶ ಹಾಗೂ ದೊಡ್ಡ ವಾಹನಗಳಿಗೆ ಕನಿಷ್ಠ ಎರಡು ಎಕರೆ ವಿಸ್ತೀರ್ಣ ದ ಪ್ರದೇಶ ಹೊಂದಿರಬೇಕು. ಪರವಾನಿಗೆ ನೀಡುವವರು 5 ವರ್ಷ ಚಾಲನಾ ಅನುಭವ ಹೊಂದಿರಬೇಕು ಹಾಗೂ ತರಬೇತುದಾರ ಕನಿಷ್ಠ SSLC. ಉತ್ತೀರ್ಣ ಆಗಿರಬೇಕು. ಪರವಾನಿಗೆ ನೀಡುವ ಸಂಸ್ಥೆ ಲಘು ವಾಹನ ಸವಾರರಿಗೆ 4 ವಾರಗಳು ಹಾಗೂ ಭಾರಿ ಗಾತ್ರದ ವಾಹನಗಳಿಗೆ 6 ವಾರಗಳ ಕಾಲ ತರಬೇತಿ ನೀಡಬೇಕು.

ಇದನ್ನೂ ಓದಿ: ಬಜಾಜ್ ಪ್ಲಾಟಿನಾ100; ಕೈಗೆಟುಕುವ ಬೆಲೆ, ಉತ್ತಮ ಮೈಲೇಜ್, ಬೆಂಗಳೂರಿನಲ್ಲಿ ಇದರ ಬೆಲೆ ಎಷ್ಟು?