ಬಿಗ್ ಬಾಸ್(Big boss) ಶುರುವಾಗಿ ಆಗಲೇ ಎರಡು ವಾರಗಳು ಕಳೆದಿವೆ. ಅಷ್ಟರೊಳಗಡೆ ಮನೆಯಲ್ಲಿ ಕೋಲಾಹಲ ಉಂಟಾಗಿದೆ ಒಬ್ಬೊಬ್ಬರ ಮುಖವು ಒಂದೊಂದು ದಿಕ್ಕಾಗಿದೆ. ಇಷ್ಟು ದಿನ ಬಿಗ್ ಬಾಸ್ ನಲ್ಲಿ ಸುಮಾರು ಒಂದು ತಿಂಗಳ ನಂತರ ಮನೆಯಲ್ಲಿ ಜಗಳ ಶುರುವಾಗಿತ್ತು. ಆದರೆ ಇದೀಗ ಇನ್ನೂ ಎರಡು ವಾರ ಆಗುವುದರೊಳಗೆ ದಿನನಿತ್ಯ ಜಗಳಗಳು ಶುರುವಾಗಿವೆ. ಇನ್ನು ಮನೆಯಲ್ಲಿ ವಿನಯ್ ಗೌಡ ಅವರು ಎಲ್ಲರನ್ನೂ ತಮ್ಮ ಕಂಟ್ರೋಲ್ ಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಮನೆಯವರೆಲ್ಲರೂ ಅಂದುಕೊಂಡಿದ್ದಾರೆ. ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳಲ್ಲಿ ವಿನಯ್ ಗೌಡ ಅವರು ಸ್ವಲ್ಪ ಬೇರೆ ರೀತಿಯಾಗಿದ್ದಾರೆ. ಎಲ್ಲವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಳ್ಳುತ್ತಿದ್ದಾರೆ ಪ್ರತಿಯೊಂದು ಸಮಯದಲ್ಲೂ ಯುದ್ಧಕ್ಕೆ ನಿಲ್ಲುತ್ತಾರೆ ಈ ವ್ಯವಸ್ಥೆ ಮನೆಯವರಿಗೆ ಬೇಸರವನ್ನು ಉಂಟು ಮಾಡಿದೆ.
ಇನ್ನು ಡ್ರೋನ್ ಪ್ರತಾಪ್ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ, ಯಾರೋ ಮಾಡಿದನ್ನ ತಾನು ಮಾಡಿದೆ ಎಂದು ಹೇಳಿಕೊಂಡು ತಿರುಗಿ ನಂತರ ಸಿಕ್ಕಿಹಾಕಿಕೊಂಡ ಮೇಲೆ ಯಾರಿಗೂ ಮುಖವನ್ನು ತೋರಿಸಲಾಗದೆ ಜನರಿಂದ ಸ್ವಲ್ಪ ದೂರನೇ ಉಳಿದಿದ್ದರು. ಈಗ ಬಿಗ್ ಬಾಸ್ ಮನೆಗೆ ಬಂದಿದ್ದು ಒಂದಿಲ್ಲೊಂದು ಕಾಂಟ್ರವರ್ಸಿಯಲ್ಲಿ ಇವರು ಎಡವಟ್ಟು ಮಾಡಿಕೊಳ್ಳುತ್ತಾನೆ ಇದಾರೆ. ಇನ್ನು ಪ್ರತಾಪ ಅವರು ಬಿಗ್ ಬಾಸ್ ಮನೆಯಲ್ಲಿ ವಿನಯ್ ಗೆ ಏನೋ ಹೇಳಿದ್ದರು ಅದು ವಿನಯ್ ಗೆ ಗೊತ್ತಾಗಿ ಪ್ರತಾಪ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿಯಾಗಿ ಒಂದಲ್ಲ ಒಂದು ರೀತಿಯಲ್ಲಿ ಅಲ್ಲಿ ಗಲಾಟೆ ನಡೆಯುತ್ತಲೇ ಇದೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಅಷ್ಟು ವಿಷಕಾರಿ ವಾತಾವರಣ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸೃಷ್ಟಿಯಾಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಕಣ್ಣೀರಿಟ್ಟ ಡ್ರೋನ್ ಪ್ರತಾಪ್
ಬಿಗ್ ಬಾಸ್(Big boss) ಮನೆಯವರು ವಿನಯ್ ವರಿಗೆ ಮತ್ತು ಪ್ರತಾಪ್ ಅವರಿಗೆ ಆರೋಪ ಮಾಡುತ್ತಿದ್ದಾರೆ. ಮನೆಯಲ್ಲಿ ಇವರಿಬ್ಬರೇ ಹೊರತು ಬೇರೆ ಯಾರ ಜೊತೆಗೂ ಕೂಡ ಬೆರೆಯುತ್ತಿಲ್ಲ, ಮೊದಲು ಸಮರ್ಥರು ಮತ್ತು ಅಸಮರ್ಥರು ಎನ್ನುವ ಎರಡು ಗುಂಪುಗಳನ್ನು ಮಾಡಿ ಆಟ ಆಡಿಸಿದ್ದಾಯಿತು. ಇದೀಗ ಆ ಗ್ರೂಪನ್ನು ತೆರೆವುಗೊಳಿಸಲಾಗಿದೆ. ಆದರೂ ಸಹಿತ ಇವರಿಬ್ಬರೇ ಹೊರತು ಬೇರೆ ಯಾರ ಜೊತೆಗೂ ಕೂಡ ಇವರು ಮಾತನಾಡುತ್ತಿಲ್ಲ ಬೆರೆಯುತ್ತಿಲ್ಲ. ಇದರಿಂದ ಮನೆಯವರು ವಿನಯ್ ಮತ್ತು ಪ್ರತಾಪ್ ಮೇಲೆ ಆಕ್ಷೇಪಣೆ ನಡೆಸುತ್ತಿದ್ದಾರೆ. ಇವರಿಬ್ಬರೂ ಯಾವಾಗ ಇನ್ನೊಬ್ಬರ ಹಿಂದೆ ಮಾತನಾಡುತ್ತಾರೆ ಎದುರುಗಡೆ ಬಂದು ಮಾತನಾಡಬಹುದಲ್ಲ ಎಂದು ಬಿಗ್ ಬಾಸ್ ಮನೆಯವರು ಕೆಂಡಮಂಡಲವಾಗಿದ್ದಾರೆ. ನಮ್ಮ ತಂಟೆಗೆ ಬಂದರೆ ಅಷ್ಟೇ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಮಾತನಾಡುವುದಿದ್ದರೆ ಎದುರುಗಡೆ ಮಾತನಾಡಿ ಇಲ್ಲದೆ ಹೋದರೆ ಸುಮ್ಮನಿರಿ ಎಂದು ಬೈದಿದ್ದಾರೆ.
ಈಗಾಗಲೇ ಮನೆಯ ವಾತಾವರಣ ಹದಗೆಟ್ಟಿದ್ದು ಮನೆಯ ಸದಸ್ಯರೆಲ್ಲರೂ ವಿನಯ್ ಮತ್ತು ಪ್ರತಾಪ್ ಮೇಲೆ ಕೆಂಡವನ್ನು ಕಾರುತ್ತಿದ್ದಾರೆ. ಇವರಿಬ್ಬರನ್ನು ಕಂಡರೆ ಮನೆಯ ಸದಸ್ಯರಿಗೆ ಕೋಪ ಬರುತ್ತಿದೆ. ಹಾಗೆ ವಿನಯ್ ಮತ್ತು ಪ್ರತಾಪ್ ಕೂಡ ಅಷ್ಟೇ ಮನೆಯ ಸದಸ್ಯರನ್ನು ಕಂಡರೆ ಮಾತನಾಡದೆ ಮುಖ ತಿರಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ವಾತಾವರಣ ಹದಗೆಡುತ್ತಿದ್ದು ಒಬ್ಬರ ಮನಸ್ಥಿತಿಯೂ ಕೂಡ ಸರಿ ಇಲ್ಲದಂತಾಗಿದೆ. ಹೊಂದಾಣಿಕೆ ಎನ್ನುವುದು ಮರೀಚಿಕೆಯಾಗಿದೆ. ಮನೆಯಲ್ಲಿ ಬರೀ ಅಸಮಾಧಾನ ಕಾಣಿಸಿಕೊಳ್ಳುತ್ತಿದೆ. ಮಾತಿಗೆ ಮಾತು ಬೆಳೆಯುತ್ತಿದೆ. ಬಿಗ್ ಬಾಸ್ ಸೀಸನ್ 10 ಇಷ್ಟು ಸೀಸನ್ ಗಳಿಗಿಂತ ವಿಭಿನ್ನವಾಗಿದೆ ಅಂತ ಹೇಳಬಹುದು. ಮುಂದೇನಾಗುತ್ತದೆ ಯಾರು ಮನೆಯಲ್ಲಿ ಇರುತ್ತಾರೆ ಯಾರು ಆಚೆ ಬರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸದ್ಯದಲ್ಲೇ ಲಾಂಚ್ ಆಗಲಿವೆ ಐದು ಮಾಡೆಲ್ ಟಾಟಾ ಎಲೆಕ್ಟ್ರಿಕ್ ಕಾರುಗಳು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಇದನ್ನೂ ಓದಿ: ಹೊಸ ವಿನ್ಯಾಸದೊಂದಿಗೆ ಹೋಂಡಾ ಶೈನ್ 125, ಮಾರುಕಟ್ಟೆಯಲ್ಲಿ ಭಾರಿ ಮೈಲೇಜ್ ನೊಂದಿಗೆ ಮಿಂಚಲಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram