ಮಾತು ಕೊಟ್ಟಂತೆ ಬಿಗ್ ಬಾಸ್ ನಲ್ಲಿ ಬಹುಮಾನವಾಗಿ ನೀಡಿದ ಎಲೆಕ್ಟ್ರಿಕ್ ಬೈಕ್ ಬಡ ಯುವಕನಿಗೆ ನೀಡಿದ ಡ್ರೋನ್ ಪ್ರತಾಪ್

Drone Prathap Electric Scooter

ಬಿಗ್ ಬಾಸ್ ಬಹುದೊಡ್ಡ ರಿಯಾಲಿಟಿ ಶೋ. ಲಕ್ಷಾಂತರ ಮಂದಿ ಬಿಗ್ ಬಾಸ್ ಶೋ ಫಾಲೋ ಮಾಡುತ್ತಾರೆ. ತಮ್ಮ ನೆಚ್ಚಿನ ಆಟಗಾರನಿಗೆ ಹೆಚ್ಚಿನ ಸಂಖ್ಯೆಯ ವೋಟ್ ಮಾಡಿ ಗೆಲ್ಲಿಸುತ್ತಾರೆ. ಬಿಗ್ ಬಾಸ್ ಆರಂಭ ಆಗುವ ಮೊದಲೇ ಯಾರು ಯಾರು ಸ್ಪರ್ಧಿಗಳು ಎಂಬ ಚರ್ಚೆ ಎಲ್ಲೆಡೆ ಕೇಳಿ ಬರುತ್ತದೆ. ಇನ್ನು ಬಿಗ್ ಬಾಸ್ ಶುರುವಾದ ಮೇಲೆ ದಿನವೂ ಪ್ರತಿಯೊಬ್ಬ ಸ್ಪರ್ಧಿಯ ಮೇಲೆ ಆರೋಪ ಪ್ರತ್ಯಾರೋಪಗಳು ನೆಚ್ಚಿನ ಸ್ಪರ್ಧಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಸಾಮಾನ್ಯವಾಗಿ ಇರುತ್ತದೆ. ಹಾಗೆಯೇ ಬಿಗ್ ಬಾಸ್ ಶೋ ಮುಗಿದ ಮೇಲೂ ಸಹ ಅವರ ಬಗ್ಗೆ ಅಲ್ಲಿ ಇಲ್ಲಿ ಸುದ್ದಿಗಳು ಹರಿದಾಡುತ್ತವೆ.

WhatsApp Group Join Now
Telegram Group Join Now

ಸ್ವಲ್ಪ ದಿನಗಳ ಹಿಂದೆ ಅಷ್ಟೇ ಕನ್ನಡದ ಬಿಗ್ ಬಾಸ್ ಸೀಸನ್ 10ರ ಗ್ರ್ಯಾಂಡ್ ಫೈನಲ್ ಕಾರ್ಯಕ್ರಮ ನಡೆಯಿತು. ಬಿಗ್ ಬಾಸ್ ಸೀಸನ್ 10 ರ winner ಆಗಿ ಕಾರ್ತಿಕ್ ಅವರು ಹೊರಹೊಮ್ಮಿದರು. ಇನ್ನು ಫಸ್ಟ್ ರನ್ನರ್ ಅಪ್ ಡ್ರೋನ್ ಪ್ರತಾಪ್. ಎಲ್ಲಾ ಸೀಸನ್ ಗಳಂತೆಯೆ ಕಿಚ್ಚ ಸುದೀಪ ಅವರು ಈ ಸೀಸನ್ ನ ನಿರೂಪಣೆ ಮಾಡಿದರು. ಗ್ರ್ಯಾಂಡ್ ಫಿನಲೇ ವೇದಿಕೆಯ ಮೇಲೆ ಡ್ರೋನ್ ಪ್ರತಾಪ್ ಅವರೂ ನನಗೆ ಬಂದ ಬಹುಮಾನವನ್ನು ನಾನು ಬಳಸುವುದಿಲ್ಲ ಬದಲಾಗಿ ಅಗತ್ಯ ಇರುವ ಬಡವರಿಗೆ ನೀಡುತ್ತೇನೆ ಎಂದು ಹೇಳಿದ್ದರು. ಎಲ್ಲಾ ಸೆಲೆಬ್ರಿಟಿ ಗಳು ಮಾತು ಕೊಡುತ್ತಾರೆ. ಆದರೆ ಆಮೇಲೆ ತಮ್ಮ ಮಾತನ್ನು ಮರೆತು ನಡೆಯುತ್ತಾರೆ ಎಂದು ಜನರು ಅಂದುಕೊಂಡಿದ್ದರು. ಆದರೆ ಆ ಮಾತುಗಳನ್ನು ಸುಳ್ಳು ಮಾಡಿ ಈಗ ಅವರು ನುಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಪ್ರತಾಪ್ ಅವರು ತಮ್ಮ instagarm ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರತಾಪ್ ಅವರ instagarm ಖಾತೆಯಲ್ಲಿ ಹೇಳಿದ ವಿಷಯ ಏನು?

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬಹುಮಾನವಾಗಿ ಬಂದ ಬೈಕ್ ಅನ್ನು ರಾಜು ಎಂಬುವವರಿಗೆ ನೀಡಿದ್ದೇನೆ. ಇವರು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾರೆ. ರಾಜು ಅವರು ಸ್ನೇಹಿತರ ಹೆಸರಿನಲ್ಲಿ ಸಾಲ ಪಡೆದು ಬೈಕ್ ತೆಗೆದುಕೊಂಡು ಹಗಲು ರಾತ್ರಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿ ಪ್ರತಿ ತಿಂಗಳು ಗಾಡಿಯ ಬಾಡಿಗೆ ಕಟ್ಟುತ್ತಾ ಇದ್ದರೂ. ಆದರೆ ಸ್ನೇಹಿತ ಮಾಡಿದ ಮೋಸದಿಂದ ಇವರ ಬೈಕ್ ಬ್ಯಾಂಕ್ ನವರು ಸೀಜ್ ಮಾಡಿದರು. ಇವರಿಗೆ ಬೈಕ್ ಅವಶ್ಯಕತೆ ಇದೆ ಎಂದು ತಿಳಿಸಿ ನಂಗೆ ಬಹುಮಾನವಾಗಿ ಬಂದ ಎಲೆಕ್ಟ್ರಿಕ್ ಬೈಕ್ ನ ಇವರಿಗೆ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ ಹಾಗೂ instagarm ನಲ್ಲಿ ರಾಜು ಅವರಿಗೆ ಬೈಕ್ ನೀಡಿದ ಬಗ್ಗೆ ಫೋಟೋ ಸಹ ಹಾಕಿದ್ದಾರೆ.

ಪ್ರತಾಪ್ ಅವರ ಈ ಕೆಲಸವನ್ನು ಜನರು ಮೆಚ್ಚಿಕೊಂಡಿದ್ದಾರೆ. ನಿಮಗೆ ಓಟ್ ಹಾಕಿದ್ದಕ್ಕೆ ಸಾರ್ಥಕ ಆಯಿತು. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಿರಿ ಎಂದು ಪ್ರತಾಪ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಬಿಗ್ ಬಾಸ್ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್ ಅವರಿಗೆ ಸಿಕ್ಕ ಬಹುಮಾನ ಏನು? ಫಸ್ಟ್ ರನ್ನರ್ ಅಪ್ ಆದ ಪ್ರತಾಪ್ ಅವರಿಗೆ ಹತ್ತು ಲಕ್ಷ ನಗದು ಬಹುಮಾನ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ Sponcer ಕೊಡುವ ಬಹುಮಾನಗಳು ಸಿಕ್ಕಿವೆ. ಈಗ ಸದ್ಯ ಪ್ರತಾಪ್ ಅವರೂ ಕಲರ್ಸ್ ಕನ್ನಡದ ಇನ್ನೊಂದು ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿಯ ಸ್ಪರ್ಧಿ ಆಗಿದ್ದರೆ. ಇದು ಪ್ರತಿ ಶನಿವಾರ ಮತ್ತು ಭಾನುವಾರ 9 ಗಂಟೆಯಿಂದ ಪ್ರಸಾರ ಆಗಲಿದೆ.

ಇದನ್ನೂ ಓದಿ: BBMP ಉಚಿತ ಲ್ಯಾಪ್ ಟಾಪ್ ಗೆ ಮತ್ತೊಮ್ಮೆ ದಾಖಲೆ ಸಲ್ಲಿಸಲು 10 ದಿನಗಳ ಅವಕಾಶ

ಇದನ್ನೂ ಓದಿ: ಕಾರು ನಿರ್ವಹಣೆ ಸಲಹೆ: ಈ ಅಗತ್ಯ ಸಲಹೆಗಳೊಂದಿಗೆ ನಿಮ್ಮ ಕಾರಿನ ಇಂಧನ ದಕ್ಷತೆಯನ್ನು ಹೇಗೆ ಸುಧಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.