ರೈತರ ಖಾತೆಗೆ ಜಮಾ ಆಗಲಿದೆ ಬೆಳೆ ಪರಿಹಾರದ ಹಣ.

Drought Relief Fund

ವರ್ಷ ಮಳೆ ಕಡಿಮೆಯಾಗಿದೆ ಇದರಿಂದ ರೈತರು ಬೆಳೆ ಬೆಳೆಯುವುದು ಬಹಳ ಕಷ್ಟ ಆಗಿದೆ. ಈಗಾಗಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣ ನೀಡಿದ್ದು, ಈಗ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಪರಿಹಾರದ ಹಣ ನೀಡಿದೆ.

WhatsApp Group Join Now
Telegram Group Join Now

ರೈತರಿಗೆ ನಾಲ್ಕು ದಿನದ ಒಳಗೆ ಬರಲಿದೆ ಬೆಳೆ ಪರಿಹಾರದ ಹಣ ಬರಲಿದೆ :- ರಾಜ್ಯದ ಒಟ್ಟು 34 ಲಕ್ಷ ರೈತರಿಗೆ ನೇರವಾಗಿ ಅವರ ಅಕೌಂಟ್ ಗೆ ಬೆಳೆ ನಷ್ಟದ ಪರಿಹಾರ ಹಣವೂ ಬಿಡುಗಡೆ ಆಗಲಿದೆ. ಇಂದು ಕೆಲವರ ಖಾತೆಗೆ ಹಣ ಜಮಾ ಆಗಿದ್ದು ಇನ್ನು ಮುಂದಿನ 3-4 ದಿನಗಳಲ್ಲಿ ರಾಜ್ಯದ ಎಲ್ಲಾ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಜಮಾ ಆಗಲಿದೆ ಎಂದು ಸರ್ಕಾರ ಹೇಳಿದೆ.

ಕೇಂದ್ರದಿಂದ ಬಿಡುಗಡೆ ಆದ ಹಣ ಏಷ್ಟು?: ಕೇಂದ್ರದಿಂದ ಒಟ್ಟು 3,454 ಕೋಟಿ ರೂಪಾಯಿಗಳು ಬಿಡಿದದೆ ಆಗಿದ್ದು. ಬಿಡುಗಡೆ ಆಗಿರುವ ಹಣವನ್ನು ರಾಜ್ಯದ ಜನರಿಗೆ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. 

ರೈತರ ಖಾತೆಗೆ ಜಮಾ ಆಗಿರುವ ಹಣ ಎಷ್ಟು?: ರಾಜ್ಯ ಸರ್ಕಾರವು ಗರಿಷ್ಠ 2,000 ರೂಪಾಯಿವರೆಗೆ ಪರಿಹಾರ ಮೊತ್ತ ನೀಡಲಿದೆ.

ಇಂದು ಎಷ್ಟು ಜನರಿಗೆ ಹಣ ಜಮಾ ಆಗಿದೆ?:  3 ಮೇ 2024 ಶುಕ್ರವಾರದಂದು ಬರೋಬ್ಬರಿ 15 ಲಕ್ಷ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ ಆಗಲಿದೆ. 

ರಾಜ್ಯ ಸರ್ಕಾರವು ಎಷ್ಟು ಹಣ ಪರಿಹಾರಕ್ಕೆ ಮನವಿ ಮಾಡಿತ್ತು?: ಕರ್ನಾಟಕ ರಾಜ್ಯ ಸರ್ಕಾರವು ಬರ ಪರಿಹಾರಕ್ಕೆ ನೀಡಿದ ಮನವಿಯಲ್ಲಿ ಕೇಳಿದ ಮೊತ್ತವು 18,172 ಕೋಟಿ ರೂಪಾಯಿ ಹಣ ಕೇಳಿತ್ತು. ಆ ಹಣದಲ್ಲಿ 566 ಕೋಟಿ ರೂಪಾಯಿಗಳನ್ನು ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಹಾಗೂ 363 ಕೋಟಿ ರೂಪಾಯಿ ಜಾನುವಾರುಗಳ ಆಹಾರಕ್ಕೆ ಹಾಗೂ ಬೆಳೆ ಪರಿಹಾರಕ್ಕೆ ಹಣ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಮನವಿಯಲ್ಲಿ ಕೇಂದ್ರಕ್ಕೆ ಹೇಳಿತ್ತು. ಹಾಗೂ ಅವರು ಸಲ್ಲಿಸಿದ ಮನವಿಯಲ್ಲಿ ಶೀಘ್ರ 8,177ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವಂತೆ ಸಹ ಮನವಿ ಮಾಡಿತ್ತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೈತರಿಗೆ ಟ್ರ್ಯಾಕ್ಟರ್ ಗಿಫ್ಟ್ ನೀಡಿದ ಸೌತ್ ಇಂಡಸ್ಟ್ರಿಯ ಖ್ಯಾತ ನಟ. ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣಗಳು:

  1. ರಾಜ್ಯದ ಬರಗಾಲದ ತೀವ್ರತೆ: ರಾಜ್ಯವು ಈ ಬಾರಿ ಬಹಳ ಬರಗಾಲವನ್ನು ಎದುರಿಸುತ್ತಿದೆ. ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗೂ ಬೆಳೆಗಳು ಭಾರಿ ಹಾನಿಗೊಳಗಾಗಿವೆ.
  2. ಕೇಂದ್ರ ಸರ್ಕಾರದ ಸಹಾಯದ ಅಸಮರ್ಪಕತೆ: ರಾಜ್ಯವು 18,172 ಕೋಟಿ ರೂಪಾಯಿ ಪರಿಹಾರ ಕೋರಿತ್ತು. ಕೇಂದ್ರ ಸರ್ಕಾರ ಕೇವಲ 3,454 ಕೋಟಿ ರೂಪಾಯಿ ನೀಡಿತು ಇದು ಸಿಎಂ ಅಸಮಾಧಾನ ವ್ಯಕ್ತಪಡಿಸಲು ಕಾರಣ.
  3. ಬರಗಾಲದಿಂದ ಉಂಟಾದ ಹಾನಿ: ಈಗ ರಾಜ್ಯದ 48 ಲಕ್ಷ ಹೆಕ್ಟೇರ್ ಪ್ರದೇಶ ಬಿಸಿಲಿನಿಂದ ನಷ್ಟ ಆಗಿದೆ. ಇದರಿಂದ ಒಟ್ಟು 35 ಸಾವಿರ ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ.
  4. ಸಿದ್ದರಾಮಯ್ಯ ಅವರ ಒತ್ತಾಯ: ಕೇಂದ್ರ ಸರ್ಕಾರ ರಾಜ್ಯಕ್ಕೆ ತಕ್ಷಣ ಸಹಾಯ ಮಾಡಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಅವರು ಕೇಳಿದ್ದಾರೆ. ಬರಗಾಲ ಪರಿಹಾರ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ ಆದರೂ ಅವರು ಹೇಳಿದ ಹಣ ನೀಡದಿರುವುದು ಇವರ ಅಸಮಾಧಾನಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ಮನೆ ಸಾಲವನ್ನು ಮುಂಚಿತವಾಗಿ ಮರುಪಾವತಿ ಮಾಡುವಾಗ ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಿ