ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚಿನ ಬರಗಾಲ ಉಂಟಾಗಿದೆ. ರಾಜ್ಯದಲ್ಲಿ ಏರಿಕೆ ಆಗಿರುವ ತಾಪಮಾನ ಮತ್ತು ಬರಗಾಲದಿಂದ ರಾಜ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ರಾಜ್ಯದ ರೈತರು ಬೆಳೆದ ಬೆಳೆಗಳ ಹಾಳಾಗುತ್ತಿವೆ. ಈಗ ರಾಜ್ಯ ಸರ್ಕಾರದ ಬೇಡಿಕೆಯ ಮೇರೆಗೆ ಕೇಂದ್ರ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಅದರಂತೆ ಬರ ಪರಿಹಾರದ ಹಣದ ಬಗ್ಗೆ ಈಗ ಜನರಿಗೆ ಒಂದು ಬಿಗ್ ಅಪ್ಡೇಟ್ ದೊರೆತಿದೆ.
ಏನಿದು ಗುಡ್ ನ್ಯೂಸ್?: ರಾಜ್ಯದಲ್ಲಿ ಮುಕ್ಕಾಲು ಭಾಗ ರೈತರು ಬರದಿಂದ ತತ್ತರಿಸಿರುವುದರಿಂದ ರಾಜ್ಯ ಸರಕಾರ ನೀಡುವ ಬರ ಪರಿಹಾರದ ಬಗ್ಗೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಜನರ ಕಾಯುವಿಕೆಗೆ ಈಗ ಕಂದಾಯ ಸಚಿವರು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಅದೇನೆಂದರೆ ಸಣ್ಣ ಮತ್ತು ಅತಿ ಸಣ್ಣ ಬೇಸಾಯ ಮಾಡುವ ರೈತರಿಗೆ ಮೂರು ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನಕ್ಕೆ ಆಧಾರ ಆಗಲಿದೆ ಎಂದು ತಿಳಿಸಿದರು.
ಬೆಳೆ ವಿಮೆ ಬಗ್ಗೆ ಮಾಹಿತಿ :-
ಸಹಾಯ ಧನ ನೀಡುವ ಜೊತೆಗೆ ರೈತರಿಗೆ ಬೆಲೆ ವಿಮೆ ಹಣವನ್ನು ನೀಡುವ ಬಗ್ಗೆ ಸಚಿವರು ಮಾತನಾಡಿ ರಾಜ್ಯದ ರೈತರಿಗೆ ಅರ್ಹತೆಯ ಆಧಾರದ ಮೇರೆಗೆ ಬೆಲೆ ವಿಮೆ ನೀಡಲಾಗುವುದು ಎಂದು ತಿಳಿಸಿದರು. ರಾಜ್ಯದ 32.12 ಲಕ್ಷ ರೈತರಿಗೆ ಸಂಪೂರ್ಣವಾಗಿ ವೇಳೆ ವಿಮೆಯ ಮೊತ್ತವನ್ನು ಜಮಾ ಮಾಡಲಾಗಿದೆ ಎಂದು ತಿಳಿಸಿದರು. ಅದಲ್ಲದೆ ಇನ್ನೂ ಎರಡು ಲಕ್ಷ ರೈತರಿಗೆ ಪರಿಹಾರದ ಹಣವನ್ನು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಮಳೆ ಆಧಾರಿತ ಬೆಳೆಗಳಿಗೆ ಬರ ಪರಿಹಾರ :- ಮಳೆಯನ್ನು ಅವಲಂಬಿಸಿ ಬೆಳೆಯುವ ರೈತರಿಗೆ ಬೆಳೆಯ ನಷ್ಟದ ಪ್ರಮಾಣದ ಮೇಲೆ ಬೆಲೆ ಪರಿಹಾರ ನೀಡಲಾಗುವುದು. ರೈತರು ಅರ್ಜಿ ಸಲ್ಲಿಸಿದ ನಂತರ ಮಳೆ ಅವಲಂಬನೆ ಇರುವ ಬೆಳೆಗಳ ನಷ್ಟಕ್ಕೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಸಚಿವರು ತಿಳಿಸಿದರು.
ನೀರಾವರಿ ಪ್ರದೇಶದ ರೈತರಿಗೂ ಬೆಳೆ ಪರಿಹಾರ ನೀಡಲಾಗುವುದು :- ಈ ಬಾರಿಯ ಬರಗಾಲ ಯಾವ ಪ್ರಮಾಣದಲ್ಲಿ ಇದೆ ಎಂದರೆ ಹೆಚ್ಚಿನ ಪ್ರಮಾಣದ ನೀರಾವರಿ ಪ್ರದೇಶದಲ್ಲಿ ಸಹ ಬೆಳೆ ನಾಶವಾಗಿದೆ. ಆದ್ದರಿಂದ ನೀರಾವರಿ ಪ್ರದೇಶದಲ್ಲಿ ಬೆಲೆ ಬೆಳೆಯುವ 1.63 ಲಕ್ಷ ರೈತರಿಗೆ ಬೆಲೆ ಪರಿಹಾರ ನೀಡಲಾಗುವುದು.
ಇದನ್ನೂ ಓದಿ: SSLC ನಂತರ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಯೋಚನೆಯೇ ಹಾಗಾದರೆ ಈ ಲೇಖನವನ್ನು ನೋಡಿ
ಬೆಳೆ ಪರಿಹಾರದಿಂದ ರೈತರಿಗೆ ಆಗುವ ಲಾಭಗಳು :-
- ಉತ್ಪಾದನೆ ಹೆಚ್ಚಳ ಸಾಧ್ಯತೆ :- ಬೆಳೆ ಪರಿಹಾರವು ರೈತರಿಗೆ ಸರಿಯಾದ ಬೀಜಗಳು, ಗೊಬ್ಬರಗಳು, ಕೀಟನಾಶಕಗಳು ಮತ್ತು ಇತರ ಕೃಷಿ ಇನ್ಪುಟ್ಗಳನ್ನು ಆಯ್ಕೆ ಮಾಡಲು ಸಹಾಯ ಆಗುತ್ತದೆ. ಇದರಿಂದ ಉತ್ಪಾದನೆ ಹೆಚ್ಚಾಗುತ್ತದೆ.
- ಜೀವನ ನಿರ್ವಹಣೆ ಸುಧಾರಿಸುವುದು: ರೈತರಿಗೆ ನಷ್ಟದಿಂದ ಅವರ ಜೀವನ ನಿರ್ವಹಣೆ ಕಷ್ಟ ಆಗುತ್ತದೆ. ಆದ್ದರಿಂದ ಸರ್ಕಾರ ನೀಡುವ ಹಣವೂ ದಿನನಿತ್ಯದ ಜೀವನ ನಿರ್ವಹಣೆಗೆ ಸಹಾಯ ಆಗಲಿದೆ.
- ರೈತರಿಗೆ ಭರವಸೆ ಹೆಚ್ಚುವುದು :- ಬರಗಾಲ ಮತ್ತು ಬೆಲೆ ನಷ್ಟದಿಂದ ರೈತರು ಜೀವನದ ಬಗ್ಗೆ ಭರವಸೆ ಕಳೆದುಕೊಂಡು ಇರುತ್ತಾರೆ. ಇಂತ ಸಮಯದಲ್ಲಿ ನೀಡುವ ಸಹಾಯ ಧನ ಅಥವಾ ಬೆಲೆ ಪರಿಹಾರವೂ ರೈತರಿಗೆ ಭರವಸೆ ನೀಡುತ್ತದೆ. ಇದರಿಂದ ಇನ್ನಷ್ಟು ಬೆಲೆ ಬೆಳೆಯಲು ಉತ್ತೇಜನ ನೀಡಿದಂತೆ ಆಗುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆ ಇದೆಯಾ? ಚಿಂತಿಸಬೇಡಿ! ಈ ಸಲಹೆಗಳೊಂದಿಗೆ ಸುಲಭವಾಗಿ ಸಾಲ ಪಡೆಯಿರಿ!