ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾರಾ ದುನಿಯಾ ವಿಜಿ ಮಕ್ಕಳು; ಇಂಡಸ್ಟ್ರಿಗೆ ಕಾಲಿಡುವ ಬಗ್ಗೆ ವಿಜಯ್ ಹೇಳಿದ್ದೇನು ಗೊತ್ತಾ?

ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಉಳಿದುಕೊಳ್ಳಲು ಆಗೋದಿಲ್ಲ ಅಂತ ನೊಂದುಕೊಂಡಿದ್ದ ದುನಿಯಾ ವಿಜಯ್(Duniya Vijay) ಅವ್ರ ಲಕ್ ಬದಲಾಯಿತು. ಹೌದು 2004 ರಲ್ಲಿ ತೆರೆ ಕಂಡ ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ದುನಿಯಾ ವಿಜಯ್‌, ಈಗ ನಾಯಕನಾಗಿ ಮಿಂಚುತ್ತಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ, ಸಲಗ ಸಿನಿಮಾ ಮೂಲಕ ವಿಜಯ್‌ ನಿರ್ದೇಶನಕ್ಕೂ ಇಳಿದು ಸಕ್ಸಸ್‌ ಆಗಿದ್ದಾರೆ. ತೆಲುಗು ಸಿನಿಮಾದಲ್ಲಿ ಬಾಲಕೃಷ್ಣನಂಥ ನಟನ ಎದುರು ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ದುನಿಯಾ ವಿಜಯ್‌ ಈಗಾಗಲೇ ತಮ್ಮ ಮಗ ಸಾಮ್ರಾಟ್‌ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಇದೀಗ ವಿಜಯ್‌ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನೂ ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಲು ಮುಂದಾಗಿದ್ದಾರೆ. ವಿಜಯ್‌ ಮೊದಲ ಪುತ್ರಿ ಮೋನಿಕಾ ವಿಜಯ್, ದುನಿಯಾ ವಿಜಯ್‌ 2ನೇ ಮಗಳು ಮೋನಿಷಾ ವಿಜಯ್ ಸೋಷಿಯಲ್‌ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದಾರೆ.

WhatsApp Group Join Now
Telegram Group Join Now

ಇನ್ನು ವಿಜಯ್‌ 2ನೇ ಪುತ್ರಿ ಮೋನಿಷಾ ಫೋಟೋ ನೋಡಿದವರು ಆಕೆಯೇ ಮೊದಲು ಸಿನಿಮಾ ರಂಗಕ್ಕೆ ಬರಬಹುದು ಎಂದುಕೊಂಡಿದ್ದರು. ಹೌದು ದುನಿಯಾ ವಿಜಯ್ ಅವರ ಇಬ್ಬರು ಹೆಣ್ಣು ಮಕ್ಕಳು ಸಿನಿಮಾರಂಗ ಪ್ರವೇಶಿಸೋದು ಖಚಿತ. ಇದನ್ನ ಸ್ವತಃ ವಿಜಯ್ ಘೋಷಿಸಿದ್ದಾರೆ. ಆದರೆ ನೀವು ಗೆಸ್​ ಮಾಡಿದಂತೆ ಕಿರಿ ಮಗಳು ಮೊನಿಷಾ ಮೊದಲು ಇಂಡಸ್ಟ್ರಿ ಪ್ರವೇಶಿಸುತ್ತಿಲ್ಲ. ಬದಲಿಗೆ ಮೋನಿಕಾ, ಶೀಘ್ರದಲ್ಲೇ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಎಂದು ದುನಿಯಾ ವಿಜಯ್‌ ಘೋಷಿಸಿದ್ದಾರೆ. ಹಾಗಾದ್ರೆ ಮಕ್ಕಳ ಚಿತ್ರರಂಗದ ಬಗ್ಗೆ ದುನಿಯಾ ವಿಜಯ್ ಯಾವೆಲ್ಲಾ ಕನಸ್ಸು ಕಂಡಿದ್ದಾರೆ, ಹೇಗೆಲ್ಲ ಪ್ಲಾನ್ ಮಾಡ್ತಿದ್ದಾರೆ, ಮಕ್ಕಳ ಇಂಡಸ್ಟ್ರಿ ಕನಸಿನ ಹಿಂದಿನ ಶಕ್ತಿ ಯಾರು? ಇದರ ಬಗ್ಗೆ ದುನಿಯಾ ವಿಜಯ್ ಹಾಗೂ ಇಬ್ಬರು ಮಕ್ಕಳು ಹೇಳಿದ್ದೆ ಏನು ನೋಡೋಣ ಬನ್ನಿ.

Image Credit: Bangalore Times

ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸುತ್ತಿದ್ದಾರೆ ಚೆಲುವೆಯರು

ಹೌದು ದುನಿಯಾ ವಿಜಯ್(Duniya Vijay) ಅವ್ರ ಹಿರಿಯ ಮಗಳು ಮೊನಿಕಾ ಮೊದಲು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಸದ್ಯ ಮೊನಿಕಾ ವಿಜಯ್ ಅವರ ಎಜುಕೇಷನ್ ಕಂಪ್ಲೀಟ್ ಆಗಿದೆ. ರಿಸೆಂಟ್​ ಆಗಿ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್​ ಸಹ ಮುಗಿಸಿ ಬಂದಿದ್ದಾರೆ. ಹೌದು ಮುಂಬೈನ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದು ಬಂದಿರುವ ಮೊನಿಕಾ, ಸದ್ಯ ಬೆಂಗಳೂರಿನಲ್ಲಿ ಕಲಾತಂಡವೊಂದರ ಜೊತೆ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಹಿರಿ ಮಗಳು ಮೊನಿಕಾ ಸಿನಿಮಾ ಎಂಟ್ರಿಗೆ ತಯಾರಾಗಿದ್ದು, ಶೀಘ್ರದಲ್ಲೇ ಸಿನಿಮಾ ಅನೌನ್ಸ್​ ಆಗುವ ನಿರೀಕ್ಷೆಯಿದೆ. ಆದ್ರೆ ಕಿರಿ ಮಗಳು ಮೊನಿಷಾ ಇನ್ನೂ ಎಜುಕೇಷನ್ ಮಾಡ್ತಿದ್ದು, ಈಗ ಹೆಚ್ಚಿನ ಶಿಕ್ಷಣಕ್ಕಾಗಿ ನ್ಯೂಯಾರ್ಕ್​ಗೆ ಹೋಗ್ತಿದ್ದಾರಂತೆ. ಜೊತೆಗೆ ಮೊನಿಷಾ ಸಹ ಆ್ಯಕ್ಟಿಂಗ್ ಟ್ರೈನಿಂಗ್ ಪಡೆದುಕೊಳ್ಳಲಿದ್ದು, ಅದು ಮುಗಿದು ವಾಪಸ್ ಆದ ಬಳಿಕವಷ್ಟೇ ಮೊನಿಷಾ ಬಣ್ಣದ ಜಗತ್ತಿಗೆ ಎಂಟ್ರಿ ಕೊಡಲಿದ್ದಾರಂತೆ.

ಇನ್ನು ವಿಜಯ್ ಅವರ ಇಬ್ಬರು ಮಕ್ಕಳಿಗೂ ಈಗಾಗಲೇ ತುಂಬಾ ಆಫರ್ಸ್​ ಬಂದಿದೆ. ಆದರೆ ಶಿಕ್ಷಣಕ್ಕೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಇಷ್ಟು ದಿನ ಅವರನ್ನು ಡಿಸ್ಟರ್ಬ್​ ಮಾಡಿರಲಿಲ್ಲ. ಆದ್ರೀಗ ಹಿರಿ ಮಗಳು ಸಿನಿಮಾ ಮಾಡೋ ಉದ್ದೇಶದಿಂದಲೇ ಸಕಲ ತಯಾರಿ ಮುಗಿಸಿದ್ದಾಳೆ. ಹೀಗಾಗಿ ಮೊನಿಕಾ ಲಾಂಚ್​ ಮಾಡೋಕೆ ಇದು ಸೂಕ್ತ ಸಮಯ ಅಂತ ವಿಜಯ್ ನಿರ್ಧಾರ ಮಾಡಿದ್ದಾರೆ.

ಸದ್ಯ ಮೊನಿಕಾ ಚೊಚ್ಚಲ ಸಿನಿಮಾಗೆ ಅದ್ಭುತ ಸ್ಕ್ರಿಪ್ಟ್​ ಕೂಡ ರೆಡಿಯಿದ್ದು, ಒಂದೊಳ್ಳೆ ಸಮಯ ನೋಡ್ಕೊಂಡು ಸಿನಿಮಾ ಶುರು ಮಾಡುವ ಲೆಕ್ಕಾಚಾರದಲ್ಲಿದ್ದಾರಂತೆ. ಇನ್ನು ಹಿರಿಮಗಳ ಮೊದಲ ಸಿನಿಮಾಗೆ ಸ್ವತಃ ದುನಿಯಾ ವಿಜಯ್ ಅವರೇ ಆ್ಯಕ್ಷನ್ ಕಟ್ ಹೇಳುವ ಸಾಧ್ಯತೆ ಇದೆ. ಇನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೋನಿಷಾ ವಿದೇಶಕ್ಕೆ ತೆರಳಲಿದ್ದು ಜೊತೆಗೆ ಆಕ್ಟಿಂಗ್‌ ಕೋರ್ಸ್‌ ಕೂಡಾ ಅಲ್ಲೇ ಮಾಡಿ ಬರಲಿದ್ದಾರಂತೆ. ವಿದ್ಯಾಭ್ಯಾಸ ಮುಗಿದ ಬಳಿಕವಷ್ಟೇ ಮೋನಿಷಾ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಹೀಗಾಗಿ ಎರಡನೇ ಮಗಳು ಸದ್ಯಕ್ಕೆ ಇಂಡಸ್ಟ್ರಿಗೆ ಬರೋದು ಪಕ್ಕ ಆಗಿಲ್ಲ. ವಿದ್ಯಾಭ್ಯಾಸ ಮುಗಿದ ಬಳಿಕವಷ್ಟೇ ಚಿತ್ರರಂಗದ ಪ್ರವೇಶ ಅನ್ನೋ ಲೆಕ್ಕಾಚಾರ ದುನಿಯಾ ವಿಜಯ್ ಅವ್ರದ್ದು ಅಂತ ಹೇಳಲಾಗ್ತಿದೆ. ಇನ್ನು ದುನಿಯಾ ವಿಜಯ್‌ ಈಗಾಗಲೇ ತಮ್ಮ ಹೆಣ್ಣು ಮಕ್ಕಳಿಗೆ ಚಿತ್ರರಂಗದ ಬಗ್ಗೆ ಟಿಪ್ಸ್‌ ನೀಡಿದ್ದಾಂತೆ. ವರ್ಕೌಟ್‌, ಡಯಟ್‌, ಫಿಟ್ನೆಸ್‌ ಬಗ್ಗೆ ಕೂಡಾ ಪಾಠ ಮಾಡುತ್ತಿದ್ದಾರಂತೆ. ಹೀಗಾಗಿ ಮಕ್ಕಳಿಗೆ ಅಪ್ಪ ಅಂದ್ರೆ ಪ್ರಾಣ, ಅಪ್ಪನೆ ಎಲ್ಲ ಅಂತಿದ್ದಾರೆ. ಅಲ್ದೇ ಅಪ್ಪನ ತಮ್ಮೆಲ್ಲ ವಿಚಾರಗಳನ್ನ ಡಿಸೈಡ್ ಮಾಡೋದು ಅಂತಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳ ಉಚಿತ ಅಕ್ಕಿ ಹಣ ಯಾವಾಗ ಬರುತ್ತೆ? ಎಲ್ಲರಿಗೂ ಹಣ ಬರುತ್ತಾ? ಅಥವಾ ಅಕ್ಕಿ ಕೊಡ್ತಾರಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram