Electric Vehicles: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಯಾವಾಗ ಏರು ಗತಿಯತ್ತ ಸಾಗುತ್ತಾ ಹೋಯಿತೋ ಅಲ್ಲಿಂದ ವಾಹನ ಸವಾರರು ಪರದಾಡುವಂತಾಯಿತು. ಹೌದು ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಸರಕು ಸಾಗಣೆಯ ಬಾಡಿಗೆ ಹಣದಿಂದಲೇ ಬದುಕು ಕಟ್ಟಿಕೊಂಡಿರುವವರು ಏನ್ ಮಾಡೋದು ಜೀವನವೇ ಸಾಕಾಗಿ ಹೋಗಿದೆ ಅಂದುಕೊಳ್ಳುವಗ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡ ತೊಡಗುತ್ತಾರೆ. ಹಾಗಾಗಿ, ದೇಶದ ಹಲವೆಡೆ ಅದ್ರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳು ಓಡಾಡಲು ಆರಂಭ ಮಾಡುದ್ವು. ಅಲ್ಲದೇ ಪೆಟ್ರೋಲ್, ಡೀಸೆಲ್ ದರವು ತುಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ರಸ್ತೆಗಿಳಿಯುತ್ತಿರುವ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಲೇ ಇದೆ. ದ್ವಿಚಕ್ರ ಮಾತ್ರವಲ್ಲ ಕಾರುಗಳಷ್ಟೇ ಅಲ್ಲ, ಸರಕು ಸಾಗಣೆ ಮಾಡುವ ಎಲೆಕ್ಟ್ರಿಕಲ್ ವಾಹನಗಳೂ ಜಾಸ್ತಿಯಾಗುತ್ತಿವೆ. ಹೀಗಾಗಿ ವಾಹನ ಸವಾರು ಯಾವಾಗ ಅತ್ಯಧಿಕವಾಗಿ ಇ -ವಾಹನಗಳನ್ನ ಬಳಸಲು ಆರಂಭಿಸಿದರೋ ಹೀಗ ಸಂಕಷ್ಟ ಇಲ್ಲಿಗೂ ಬಂದು ಒಕ್ಕರಿಸಿದೆ. ಹೌದು ಮುಂದಿನ ತಿಂಗಳಿಂದಲೇ ಎಲೆಕ್ಟ್ರಿಕಲ್ ವಾಹನಗಳ ಬೆಲೆ ಹೆಚ್ಚಾಗಳಿದ್ದು, ಸಬ್ಸಿಡಿ ಕೂಡ ಕಡಿಮೆ ದರದಲ್ಲಿ ಸಿಗುವಂತಾಗಲಿದೆ ಅಂತ ಹೇಳಲಾಗುತ್ತಿದೆ.
ನಮ್ಮ ದೇಶದಲ್ಲಿ ಆ ದಿನ ದುಡಿದು ಅಂದೇ ತಿನ್ನುವ ಶ್ರಮಿಕ ವರ್ಗದವರೇ ಹೆಚ್ಚು ಹೀಗಿರುವಾಗ ದೇಶದಲ್ಲಿ ದಿನೇ ದಿನೇ ಪೆಟ್ರೋಲ್ ಡೀಸಲ್ ಬೆಲೆ ಏರಿಕೆ ಇಂತ ವರ್ಗದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು. ಹೀಗಾಗಿ ಸರಕು ಸಾಗಣೆಯ ಬಾಡಿಗೆ ಹಣದಿಂದಲೇ ಬದುಕು ಕಟ್ಟಿಕೊಂಡಿರುವವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದರು. ಈಗ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ಕಾರು, ಬೈಕ್, ಬಸ್, ಟ್ರ್ಯಾಕ್ಟರ್‌ಗಳು, ಸರಕು ಸಾಗಣೆ ಆಟೋಗಳು ಮಾರುಕಟ್ಟೆಗೆ ಬಂದಿವೆ. ಅಲ್ಲದೇ ಇ-ಟ್ರಕ್‌ಗಳೂ ತಯಾರಾಗುತ್ತಿವೆ. ಆದರೆ, ಈವರೆಗೆ ರಸ್ತೆಗಿಳಿದಿಲ್ಲ. ಇನ್ನು ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಇ-ವಾಹನಗಳ ನಿರ್ವಹಣಾ ವೆಚ್ಚ ತುಂಬಾ ಅಗ್ಗ. ಹೀಗಾಗಿಯೇ, ಸರಕು ಸಾಗಣೆಯಲ್ಲಿ ತ್ರಿಚಕ್ರ ವಾಹನಗಳ ಬಳಕೆ ಜಾಸ್ತಿಯಾಗುತ್ತಿದೆ.
ಡೀಸೆಲ್ ಚಾಲಿತ ಸರಕು ಸಾಗಣೆ ಆಟೋಗಳು ಲೀಟರ್‌ಗೆ 10 ರಿಂದ 15 ಕಿ.ಮೀ. ಮೈಲೇಜ್ ನೀಡುತ್ತವೆ. 10 ಕಿ.ಮೀ. ಸಂಚಾರಕ್ಕೆ ಕನಿಷ್ಠ 100 ರೂ. ಖರ್ಚಾಗುತ್ತದೆ. ಇದಲ್ಲದೆ, ನಿರ್ವಹಣಾ ವೆಚ್ಚ ಬೇರೆ. ವಿದ್ಯುತ್ ಚಾಲಿತ ವಾಹನಗಳಲ್ಲಿ 10 ಕಿ.ಮೀ. ಸಂಚಾರಕ್ಕೆ ಕನಿಷ್ಠ 20 ರೂ. ವ್ಯಯವಾಗುತ್ತದೆ. ಕಿ.ಮೀ. ಗೆ 2 ರೂ. ಖರ್ಚಷ್ಟೇ ಬರುತ್ತದೆ. ನಿರ್ವಹಣಾ ವೆಚ್ಚ ಇಲ್ಲವೇ ಇಲ್ಲ. ಆದ ಕಾರಣ, ಲಘು ಭಾರದ ಪಾರ್ಸೆಲ್, ಕೊರಿಯರ್ ಸೇವೆಯಲ್ಲಿ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಬಹುಮುಖ್ಯ ಪಾತ್ರ ವಹಿಸುತ್ತಿವೆ. ಇನ್ನು ದ್ವಿಚಕ್ರ ವಾಹನ ಸವಾರರು ಕೂಡ ಇ -ವೆಹಿಕಲ್ ಕಡೆ ಹೆಚ್ಚಾಗಿ ಒಲವು ತೋರುತ್ತಿದ್ದೂ ಎಲ್ಲೆಡೆಯು ಈಗ ಇ -ದ್ವಿಚಕ್ರ ವಾಹನಗಳ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಎಲ್ಲಿ ವಸ್ತು ಗಳಿಗೆ ಬೇಡಿಕೆ ಹೆಚ್ಚಾಗುತ್ತದೆಯೇ ಅಲ್ಲಿ ತನ್ನಿಂದ ತಾನಾಗಿಯೇ ಅವುಗಳ ಬೆಲೆಯೂ ನಿಧಾನವಾಗಿ ಇರುಗತಿಯತ್ತ ಸಾಗುತ್ತದೆ ಈಗ ಇ -ವಿಹಿಕಲ್ ಬಳಕೆದಾರರಿಗೂ ಬೆಲೆ ಏರಿಕೆಯ ಬಿಸಿ ಮುಟ್ಟಲಿದೆ.
ಇದನ್ನೂ ಓದಿ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ! ಅಂಗಡಿ ಮುಂದೆ ಕ್ಯೂ ನಿಂತ ಜನ? ಹೀಗಿದೆ ಇಂದಿನ ದರ.
ಎಲೆಕ್ಟ್ರಿಕ್ ವಾಹನದ ಸಬ್ಸಿಡಿ ಎಷ್ಟು ಇಳಿದಿದೆ?
ಹೌದು ಈಗ ಎಲ್ಲರು ಕೂಡ ಎಲೆಕ್ಟ್ರಿಕಲ್ ವೆಹಿಕಲ್(Electric Vehicles) ಖರೀದಿಗೆ ಮುಂದಾಗುತ್ತಿದ್ದಾರೆ. ಒಂದು ಬಾರಿ ಬಂಡವಾಳ ಹಾಕಿದರೆ ಸಾಕು ಅನ್ನುವಂತಹ ದೃಷ್ಟಿಕೋನದಲ್ಲಿ ಜನ ಇದ್ದಾರೆ. ಹೀಗಾಗಿ ಸರ್ವೇ ಸಾಮಾನ್ಯವಾಗಿ ಇ -ವೆಹಿಕಲ್ ಗೆ ಬೇಡಿಕೆ ಸೃಷ್ಟಿಯಾಗುತ್ತಿದೆ. ಹೀಗಾಗಿ ಮುಂದಿನ ತಿಂಗಳು ಅಂದ್ರೆ ಜೂನ್ ಮೊದಲ ವಾರದಿಂದಲೇ ಇ -ವೆಹಿಕಲ್ ಗಳ ಬೆಲೆ ಸಾಕಷ್ಟು ಏರಿಕೆಯಾಗಲಿದೆ. ಈಗಿರುವಂತೆ ಕಡಿಮೆ ಬೆಲೆಗೆ ಮುಂದಿನ ತಿಂಗಳಿಂದ ಇ ವೆಹಿಕಲ್ ಗಳು ಸಿಗುವುದಿಲ್ಲ ಅಂತ ಹೇಳಲಾಗುತ್ತಿದೆ. ಎಲೆಕ್ಟ್ರಿಕಲ್ ವಾಹನಕ್ಕೆ ನೀಡುತ್ತಿದ್ದಂತ ಸಬ್ಸಿಡಿ ದರವನ್ನ ಕೂಡ ಕಡಿಮೆ ಮಾಡಲಾಗುತ್ತೆ ಅಂತ ಹೇಳಲಾಗುತ್ತಿದೆ. 40% ರಿಂದ 15% ಸಬ್ಸಿಡಿಯನ್ನು ಇಳಿಸಿದೆ. ಒಟ್ಟಿನಲ್ಲಿ ನಮ್ಮ ಆರ್ಥಿಕತೆಯೇ ಆಗೇ ಎಲ್ಲಿ ವಸ್ತುಗಳ ಬೇಡಿಕೆ ಹೆಚ್ಚಾಸಗಿ ಉತ್ಪಾದಕತೆ ಕಡಿಮೆ ಇರುತ್ತೋ ಅಲ್ಲಿ ಬೇಡಿಕೆ ಹೆಚ್ಚಾದಾಗ ಅದರ ಬೆಲೆಯೂ ಕೂಡ ದುಪ್ಪಟಾಗುತ್ತದೆ. ಹೀಗಾಗಿ ಎಲೆಕ್ಟ್ರಿಕಲ್ ವೆಹಿಕಲ್ ಮೇಲೆ ಬಂಡವಾಳ ಹಾಕಲು ನಿರ್ಧಾರಿಸಿದ್ರೆ ಒಮ್ಮೆ ಯೋಚಿಸಿ ಬೆಲೆ ಪರಿಶೀಲಿಸಿ ಮುಂದುವರೆಯುವುದು ಉತ್ತಮ.
ಇದನ್ನೂ ಓದಿ: ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ಹವಾ! ಕನ್ನಡದ ಕಂಪು ಎಲ್ಲೆಲ್ಲೂ ಹರಡಿಸುತ್ತಿರುವ ಯೂಟ್ಯೂಬರ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram