ದರ ಏರಿಕೆಯ ಸಂಕಷ್ಟದಲ್ಲಿರುವ ಕರುನಾಡ ಜನತೆಗೆ ರಾಜ್ಯ ಸರ್ಕಾರವು ದರ ಇಳಿಕೆಗೆ ಸುದ್ದಿ ನೀಡಿದೆ. ರಾಜ್ಯದಲ್ಲಿ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಕುಟುಂಬಕ್ಕೆ ಈ ನೂತನ ದರ ಅನ್ವಯ ಆಗಲಿದ್ದು, ನಿಯಮಗಳು ಮತ್ತು ನೂತನ ದರ ಯಾವಾಗಿನಿಂದ ಜರುಗಲಿದೆ ಎಂದು ಪೂರ್ಣ ಮಾಹಿತಿ ಇಲ್ಲಿದೆ.
15 ವರ್ಷಗಳ ಬಳಿಕ ದರ ಇಳಿಕೆ ಆಗಿದೆ :- ಆರರಿಂದ ಎಂಟು ತಿಂಗಳ ಹಿಂದೆ ವಿದ್ಯುತ್ ದರ ಏರಿಕೆ ಆಗಿ ಜನರ ಆಕ್ರೋಶಕ್ಕೆ ಕಾರಣ ಆಗಿತ್ತು. ಆದರೆ ಈಗ ರಾಜ್ಯದ ಜನತೆಗೆ ವಿದ್ಯುತ್ ದರ ಇಳಿಕೆಯ ಸುದ್ದಿ ತಿಳಿಸಿದೆ. ಇಲ್ಲಿಯ ವರೆಗೆ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಪ್ರತಿ ಯೂನಿಟ್ ಗೆ 7 ರೂಪಾಯಿ ದರ ನಿಗದಿ ಆಗಿತ್ತು. ಆದರೆ ನೂತನ ದರ ಪಟ್ಟಿಯಲ್ಲಿ ಪ್ರತಿ ಯೂನಿಟ್ 1.10 ರೂಪಾಯಿ ಕಡಿಮೆ ಆಗಲಿದೆ. ಅಂದರೆ ಗ್ರಾಹಕರು ಪ್ರತಿ ಯೂನಿಟ್ ಗೆ ಕೇವಲ 5.90 ರೂಪಾಯಿ ನೀಡಬೇಕು. ಕಳೆದ 15 ವರ್ಷಗಳಲ್ಲಿ ವಿದ್ಯುತ್ ದರ ಇಳಿಕೆ ಆಗಿರುವುದು ಇದೆ ಮೊದಲು ಎಂದು ಹೇಳಲಾಗುತ್ತಿದೆ. ನೂತನ ದರವು ಕರ್ನಾಟಕ ರಾಜ್ಯದಲ್ಲಿ ಮಾತ್ರ ಅನ್ವಯ ಆಗಲಿದೆ.
100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದವರಿಗೆ ವಿದ್ಯುತ್ ದರ ಹೀಗಿದೆ :- 100 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದವರಿಗೆ ವಿದ್ಯುತ್ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಈ ಹಿಂದೆ ಪ್ರತಿ ಯೂನಿಟ್ 4.75 ರೂಪಾಯಿಯನ್ನು ಪಾವತಿ ಮಾಡಬೇಕಿತ್ತು. ಅದರಂತೆ ಇನ್ನೂ ಮುಂದೆಯೂ ಅದೇ ದರವು ಇರಲಿದೆ.
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಇದು ಅನ್ವಯ ಆಗುತ್ತದೆಯೇ?
ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಉಚಿತ ವಿದ್ಯುತ್ ಪಡೆಯುವವರಿಗೆ ಈ ನೂತನ ದರವು ಅನ್ವಯ ಆಗುವುದಿಲ್ಲ. ಗೃಹಜ್ಯೋತಿಯ ಫಲಾನುಭವಿಗಳು ಈ ಹಿಂದೆ ಹೇಗೆ ಹೆಚ್ಚಿನ ವಿದ್ಯುತ್ ಗೆ ಹಣ ಪಾವತಿ ಮಾಡುತ್ತಾ ಇದ್ದಾರೋ ಹಾಗೆಯೇ ಸರಾಸರಿ ಯೂನಿಟ್ ಗಿಂತ ಜಾಸ್ತಿ ಬಳಸಿದಲ್ಲಿ ಹಳೆಯ ದರದ ಅನ್ವಯ ಹಣ ಪಾವತಿ ಮಾಡಬೇಕು.
ನೂತನ ದರ ಪಟ್ಟಿ ಯಾವಾಗಿನಿಂದ ಜಾರಿಯಾಗಲಿದೆ?
ಇನ್ನೇನು ಮುಂದಿನ ತಿಂಗಳು ಲೋಕಸಭೆ ಚುನಾವಣೆ ಬರುತ್ತದೆ. ಅದರ ಬೆನ್ನಲ್ಲೇ ಈಗ ಎಲ್ಲ ವರ್ಗದ ವಿದ್ಯುತ್ ಬಳಕೆದಾರರಿಗೆ ಕರ್ನಾಟಕ ರಾಜ್ಯ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗವು ನೂತನ ದರ ಪಟ್ಟಿಯನ್ನು ಘೋಷಣೆ ಮಾಡಿದೆ. ಈ ದರವು 2024-25ನೇ ಸಾಲಿಗೆ ಅನ್ವಯವ ಆಗುತ್ತದೆ. ಈ ಪರಿಷ್ಕೃತ ದರವು ಏಪ್ರಿಲ್ 01 ರಿಂದಲೆ ಜಾರಿಯಾಗಲಿದ್ದು ನೂತನ ದರವನ್ನು ಎಲ್ಲಾ ಎಸ್ಕಾಂಗಳಿಗೂ ಈ ದರ ನಿಗದಿ ಆಗುವಂತೆ ಸೂಚನೆ ನೀಡಲಾಗಿದೆ. ಆದರೆ ನೀವು ಏಪ್ರಿಲ್ ತಿಂಗಳ ಕರೆಂಟ್ ಬಿಲ್ ನಲ್ಲಿ ಈ ದರವನ್ನು ನೋಡಲಾಗುವುದಿಲ್ಲ. ಇದು ನಿಮ್ಮ ಮೇ ತಿಂಗಳ ಕರೆಂಟ್ ಬಿಲ್ ನಲ್ಲಿ ನೂತನ ದರ ಪಟ್ಟಿಯು ಅನ್ವಯ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ನೂತನ ದರವು ಚುನಾವಣಾ ಹೊಸ್ತಿಲಲ್ಲಿ ಹಲವು ಚರ್ಚೆಗೆ ಕಾರಣವಾಗಲಿದೆ. ಏನೇ ಆದರೂ ನೂತನ ದರದಿಂದ ಹಲವು ಗ್ರಾಹಕರಿಗೆ ಇದು ಉಪಯೋಗ ಆಗಲಿದೆ. ಈಗಾಗಲೇ ಎಲ್ಲ ದಿನಸಿ , ಪೆಟ್ರೋಲ್, ಎಲ್ಲಾ ದರವು ಏರಿಕೆಯಲ್ಲಿ ಇರುವುದರಿಂದ ದರ ಇಳಿಕೆ ಆಗಿರುವುದು ಕೊಂಚ ಮಟ್ಟಿಗೆ ಸಹಾಯ ಆಗಲಿದೆ.
ಇದನ್ನೂ ಓದಿ: ರೈಲ್ವೇ ನಿಯಮದಲ್ಲಿ ದೊಡ್ಡ ಬದಲಾವಣೆ, ಪ್ರಯಾಣಿಸುವ ಮುನ್ನ ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿಗಳು!
ಇದನ್ನೂ ಓದಿ: ಇದೊಂದು ಬೈಕ್ ಇದ್ದರೆ ಸಾಕು, ಕಾಲಲ್ಲಿ ಟ್ರಕ್ ಮಾಡುವುದೇ ಬೇಡ, ಬೆಟ್ಟ ಗುಡ್ಡ ಎನು ನೋಡದೆ ಗಾಡಿ ಓಡಿಸಬಹುದು.