ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಹುಬೇಗ ರಾಶಿಚಕ್ರದ ಚಿಹ್ನೆಯನ್ನು ಬದಲಿಸುವ ಗ್ರಹ ಎಂದರೆ ಅದುವೇ ಬುಧ ಗ್ರಹವಾಗಿದೆ. ಹಲವಾರು ಸಮಯಗಳ ನಂತರ ಧನಸ್ಸು ರಾಶಿಯನ್ನು ಪ್ರವೇಶಿಸುತ್ತಿರುವ ಬುಧ ಗ್ರಹವು ಯಾವ ರಾಶಿಗೆ ಶುಭವನ್ನು ತರಲಿದೆ ಹಾಗೂ ಯಾವ ರಾಶಿಗೆ ಅಶುಭವನ್ನು ಉಂಟು ಮಾಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನು ತಪ್ಪದೇ ಓದಿ.
ಬುಧ ಗ್ರಹ ಎಂದರೆ ಬುದ್ಧಿಕಾರಕ ಅಂತ ಹೇಳ್ತಿವಿ, ಬುದ್ಧಿವಂತಿಕೆಯನ್ನು ಕೊಡುವವನು ಬುಧ ಗ್ರಹ, ಸಂಪತ್ತು ವ್ಯವಹಾರಗಳನ್ನ ನಿರ್ಣಯಿಸುವವನು ಕೂಡ ಆಗಿದ್ದಾನೆ ನವೆಂಬರ್ 27 ನೇ ತಾರೀಖಿನಂದು ಬುಧನು ಧನಸ್ಸು ರಾಶಿಯನ್ನು ಪ್ರವೇಶ ಮಾಡಲಿದ್ದಾನೆ ಇದರ ಪ್ರಭಾವ 12 ರಾಶಿಗಳ ಮೇಲು ಬೀಳುತ್ತದೆ ಆದರೆ ಕೆಲವೊಂದು ರಾಶಿಗೆ ಬೋನಸ್ ಎನ್ನುವಂತೆ ತುಂಬಾ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತದೆ. ಅದರಲ್ಲೂ ಕೂಡ ಈ ಮೂರು ರಾಶಿಗಂತೂ ತುಂಬಾನೇ ಮಂಗಳಕರ ಅಂತಾನೆ ಹೇಳಬಹುದು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಬುಧ ಗ್ರಹದ ಶುಭಫಲಗಳನ್ನು ಪಡೆಯುವ ಮೂರು ರಾಶಿಗಳು
ಈ ಮೂರು ರಾಶಿಗಳವರಿಗೆ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಹಾಗೂ ವೃತ್ತಿಯ ಜೀವನದಲ್ಲಿ ಇವರು ತುಂಬಾ ಅಭಿವೃದ್ಧಿಯನ್ನು ಕಾಣುತ್ತಾರೆ ಹಾಗಾದರೆ ಆ ರಾಶಿಗಳು ಯಾವವು ಅಂತ ತಿಳಿದುಕೊಳ್ಳೋಣ. ಮೊದಲನೆಯ ರಾಶಿ ಮೇಷ ರಾಶಿ, ಮೇಷ ರಾಶಿಯವರು ಬಹಳ ಪರಾಕ್ರಮಶಾಲಿಗಳು, ಇವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ ಅಂದರೆ ಇವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತದೆ ಆರ್ಥಿಕವಾಗಿ ತುಂಬಾ ಅಭಿವೃದ್ಧಿಯನ್ನು ಕಾಣುತ್ತೀರಾ ಹಾಗೂ ನಿಮಗೆ ಅಚಾನಕ್ಕಾಗಿ ಹಣ ಹರಿದು ಬರುವ ಸಾಧ್ಯತೆ ಇದೆ ಹಾಗೂ ಪಿತ್ರಾರ್ಜಿತ ಆಸ್ತಿ ದೊರೆಯುತ್ತದೆ. ನಿಮ್ಮ ಕೆಲಸವನ್ನು ಬದಲಾಯಿಸುವ ಸಾಧ್ಯತೆ ಇದೆ ಆದರೆ ನೀವು ಅಂದುಕೊಂಡ ಕೆಲಸ ನಿಮಗೆ ಸಿಕ್ಕೇ ಸಿಗುತ್ತದೆ. ನೀವು ಉತ್ತಮವಾದ ಧಾರ್ಮಿಕ ಕೆಲಸಗಳನ್ನು ಮಾಡುತ್ತೀರಿ ಇದರಿಂದ ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ.
ಇನ್ನು ಎರಡನೆಯದಾಗಿ ಕನ್ಯಾ ರಾಶಿ, ನಿಮ್ಮ ಕೌಟುಂಬಿಕ ಕಲಹಗಳೆಲ್ಲವೂ ದೂರವಾಗಿ ಸಂಸಾರದಲ್ಲಿ ಸುಖ ಸಂತೋಷ ಉಂಟಾಗುತ್ತದೆ ಸಂಗಾತಿಯ ಮೇಲೆ ಪ್ರೀತಿ ಹೆಚ್ಚುತ್ತದೆ ಮಕ್ಕಳಿಂದ ಸಂತೋಷದ ಸುದ್ದಿ ಕೇಳಿ ಬರುತ್ತದೆ. ಎಷ್ಟು ದಿನಗಳಿಂದ ನೀವು ಕಂಡಂತ ಕನಸು ನನಸಾಗುವ ಸಮಯ ಬಂದಿದೆ ಮನೆ ಖರೀದಿ ಆಸ್ತಿ ಖರೀದಿ ಹಾಗೂ ವಾಹನ ಯೋಗಗಳು ಕೂಡಿಬಂದಿವೆ. ನೀವು ಯಾವ ಉದ್ಯೋಗವನ್ನು ಮಾಡುತ್ತಿದ್ದೀರಾ ಆ ಉದ್ಯೋಗದಿಂದ ನಿಮಗೆ ಬಹಳಷ್ಟು ಆರ್ಥಿಕ ಲಾಭ ಉಂಟಾಗಲಿದೆ ಐಷಾರಾಮಿ ವಸ್ತುಗಳನ್ನು ಖರೀದಿಸಲು ಇದು ತುಂಬಾ ಒಳ್ಳೆಯ ಸಮಯ ಅಂತ ಹೇಳಬಹುದು. ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುವವರಿಗೆ ಇದು ತುಂಬಾನೇ ಒಳ್ಳೆಯ ಸಮಯ ಅಂತ ಹೇಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ಕನ್ಯಾ ರಾಶಿಯವರಿಗೆ ಇದು ತುಂಬಾ ಸುಖಮಯವಾದ ಶುಭ ಸಮಯ ಅಂತ ಹೇಳಬಹುದು.
ಇನ್ನು ಕೊನೆಯದಾಗಿ ಕುಂಭ ರಾಶಿ, ಬುಧನ ಪ್ರವೇಶ ಧನು ರಾಶಿಗೆ ಇದರಿಂದ ಕುಂಭ ರಾಶಿಯವರ ಆದಾಯ ಹೆಚ್ಚುತ್ತದೆ ಯಾವು ಯಾವುದು ಮೂಲಗಳಿಂದ ನಿಮಗೆ ಆದಾಯ ಬಂದು ದೊರಕುತ್ತದೆ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಆರ್ಥಿಕವಾಗಿ ತುಂಬಾ ಲಾಭವನ್ನು ಪಡೆಯಲಿದ್ದೀರಿ ಹೊಸ ಹೊಸ ಮೂಲಗಳಿಂದ ಹಣವು ನಿಮ್ಮೆಡೆಗೆ ಹರಿದು ಬರುತ್ತದೆ. ನಿರಂತರವಾಗಿ ಹಣಕಾಸು ಹರಿದು ಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಎಲ್ಲಿಯಾದರೂ ಹೂಡಿಕೆ ಮಾಡಿದ್ದಲ್ಲಿ ಬಹಳಷ್ಟು ದೊಡ್ಡ ಮಟ್ಟದ ಲಾಭವನ್ನು ಪಡೆಯುತ್ತೀರಿ ಹಾಗೂ ನೀವು ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರೂ ಕೂಡ ನಿಮ್ಮ ಕೆಲಸವನ್ನು ಪ್ರಶಂಸೆಗೊಳಿಸುತ್ತಾರೆ ಎಲ್ಲ ರೀತಿಯಿಂದಲೂ ಕುಂಭ ರಾಶಿಯವರಿಗೆ ಇದು ಅದೃಷ್ಟದ ಸಮಯ ಅಂತಾನೆ ಹೇಳಬಹುದು.
ಇದನ್ನೂ ಓದಿ: ಮಹಿಳೆಯರಿಗೆ ಸಿಹಿಸುದ್ದಿ: ಇನ್ನುಂದೆ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತೋರಿಸಿದರೆ ಸಾಕು ಪ್ರಯಾಣಿಸಲು ಅವಕಾಶ
ಇದನ್ನೂ ಓದಿ: ಯುವನಿಧಿ ಯೋಜನೆ ಜಾರಿಗೆ ವೇದಿಕೆ ಸಜ್ಜು; ಅರ್ಜಿ ಸಲ್ಲಿಸಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram