ನಿವೃತ್ತಿಯ ನಂತರ ನಮ್ಮ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ನಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪ ಮೊತ್ತ ಕಡಿತ ಆಗುತ್ತದೆ. ನೌಕರಿಯಲ್ಲಿ ಕಡಿತವಾಗುವ ಮೊತ್ತವನ್ನು ನಾವು ನಿವೃತ್ತಿಯ ನಂತರ ಪಡೆಯಬಹುದು. ಆದರೆ ನೀವು ಇಲಾಖೆಯು ಸೂಚಿಸಿರುವ ಕೆಲವು ಷರತ್ತುಗಳನ್ನು ಪೂರೈಸಿದ್ದರೆ ನೀವು ಬರೋಬ್ಬರಿ 50,000 ರೂಪಾಯಿ ಬೋನಸ್ ಹಣವನ್ನು ಪಡೆಯುತ್ತೀರಿ. ಹಾಗಾದರೆ ಷರತ್ತುಗಳ ಬಗ್ಗೆ ತಿಳಿಯೋಣ.
ಬೋನಸ್ ಪಡೆಯಲು ಇರುವ ಷರತ್ತು ಏನು?: 50,000 ರೂಪಾಯಿ ಬೋನಸ್ ಹಣವನ್ನು ಪಡೆಯಬೇಕು ಎಂದರೆ ಮೊದಲು ನಾವು ಪಿಎಫ್ ಖಾತೆಯಲ್ಲಿ ನಿರಂತರವಾಗಿ 20 ವರ್ಷಗಳ ಕಾಲ ಹಣ ನೀಡಬೇಕು. ಈ ನಿಯಮಕ್ಕೆ ಇಲಾಖೆ ನೀಡಿರುವ ಹೆಸರು ಲಾಯಲ್ಟಿ-ಕಮ್-ಲೈಫ್ ಬೆನಿಫಿಟ್ ನಿಬಂಧನೆ ಎಂದು.
ಯಾವ ವೇತನ ಶ್ರೇಣಿಗೆ ಏಷ್ಟು ಲಾಭ ಸಿಗುತ್ತದೆ?: ನಮ್ಮ ಮೂಲ ವೇತನ 5,000 ರೂಪಾಯಿ ಆಗಿದ್ದರೆ ನೀವು 30,000 ರೂಪಾಯಿ ಹೆಚ್ಚುವರಿ ಲಾಭವನ್ನು ಪಡೆಯುತ್ತೀರಿ. ನಿಮ್ಮ ಮೂಲ ವೇತನ 5,001 ರಿಂದ 10,000 ರೂಪಾಯಿ ವರೆಗೆ ಇದ್ದರೆ ನೀವು 40,000 ರೂಪಾಯಿ ಲಾಭ ಪಡೆಯುತ್ತೀರಿ. ನಿಮ್ಮ ಮೂಲ ವೇತನ 10,000 ರೂಪಾಯಿಕ್ಕಿಂತ ಹೆಚ್ಚಿದ್ದಾರೆ ನೀವು ಲಾಯಲ್ಟಿ-ಕಮ್-ಲೈಫ್ ಬೆನಿಫಿಟ್ ನಿಬಂಧನೆ ಅಡಿಯಲ್ಲಿ ರೂ 50,000 ರೂಪಾಯಿ ಬೋನಸ್ ಹಣ ಪಡೆಯುತ್ತೀರಿ. ಆದರೆ ನೀವು ನಿಯಮದ ಪ್ರಕಾರ 20 ವರ್ಷ ನಿರಂತರವಾಗಿ ಪಿಎಫ್ ಖಾತೆಗೆ ಹಣ ಹೂಡಿಕೆ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಪ್ರಯೋಜನ ಪಡೆಯಲು ನೌಕರರು ಏನು ಮಾಡಬೇಕು?
ಪಿಎಫ್ ಬೋನಸ್ ಹಣವನ್ನು ಪಡೆಯಬೇಕು ಎಂದರೆ ನೀವು ಒಂದೇ ಕೆಲಸದಲ್ಲಿ ಕೆಲಸ ಮಾಡುತ್ತಿಲ್ಲ ಎಂದರು ಸಹ ನೀವು ಕೆಲಸ ಬದಲಿಸಿದರು ನಿಮ್ಮ ಹಳೆಯ ಪಿಎಫ್ ಖಾತೆಗೆ ಹಣ ಹೂಡಿಕೆ ಮಾಡಬೇಕು. ಆಗ ನಿಮ್ಮ ಹೂಡಿಕೆ ನಿರಂತರವಾಗಿ ಇರುತ್ತದೆ. ಹಾಗೂ ನೀವು 50,000 ರೂಪಾಯಿಗಳ ವರೆಗೆ ಬೋನಸ್ ಹನ್ ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ: ಈ ದಿನದಂದು ಬಿಡುಗಡೆಯಾಗಲಿರುವ ಬಜಾಜ್ CNG ಬೈಕ್ ನ ವಿಶೇಷತೆ ಏನು ಗೊತ್ತ?
ಈ ಯೋಜನೆಯ ಪ್ರಯೋಜನ ಏನು?
1) ಹೂಡಿಕೆ ಮಾಡಲು ಪ್ರೋತ್ಸಾಹ :- ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಪ್ರೋತ್ಸಾಹ ನೀಡುವುದು ಮೂಲ ಉದ್ದೇಶ ಆಗಿದೆ. ನಿರಂತರವಾಗಿ ಹೂಡಿಕೆ ಮಾಡಿದವರಿಗೆ ಹೆಚ್ಚಿನ ಮಾನ್ಯತೆ ಇರುವುದರಿಂದ ಎಲ್ಲರೂ ಪಿಎಫ್ ಖಾತೆಯಲ್ಲಿ ಹೆಚ್ಚು ಹೂಡಿಕೆ ಮಾಡಲು ಮುಂದಾಗುತ್ತಾರೆ.
2) ಹೆಚ್ಚಿನ ಲಾಭ :- ಬೇರೆ ಎಲ್ಲಿಯಾದರೂ ಹೂಡಿಕೆ ಮಾಡಿದರೆ ನಮಗೆ ಹೂಡಿಕೆಯ ಮೊತ್ತದ ಮೇಲೆ ಬಡ್ಡಿದರ ಸಿಗುತ್ತದೆ. ಆದರೆ ಲಾಯಲ್ಟಿ-ಕಮ್-ಲೈಫ್ ಬೆನಿಫಿಟ್ ನಲ್ಲಿ ಹೂಡಿಕೆ ಮಾಡಿದರೆ ನೀವು ಬಡ್ಡಿದರದ ಜೊತೆಗೆ ಹೆಚ್ಚಿನ ಬೋನಸ್ ಹಣವನ್ನು ಸಹ ಪಡೆಯಲು ಸಾಧ್ಯ.
3) ನಿವೃತ್ತಿ ಜೀವನಕ್ಕೆ ಆಧಾರ :- ನೀವು ಹೆಚ್ಚಿನ ಹೂಡಿಕೆ ಮತ್ತು ನಿರಂತರತೆ ಕಾಪಾಡಿಕೊಂಡು ನೀವು ಹೂಡಿಕೆ ಮಾಡಿದರೆ ನಿಮಗೆ ಸಿಗುವ ಹೆಚ್ಚಿನ ಬೋನಸ್ ಹಣವೂ ನಿಮ್ಮ ನಿವೃತ್ತಿ ಜೀವನಕ್ಕೆ ಹೆಚ್ಚಿನ ಆಧಾರ ನೀಡುತ್ತದೆ. ನಿಮ್ಮ ನಿವೃತ್ತಿಯ ಜೀವನವನ್ನು ಸುಖವಾಗಿ ಕಳೆಯಲು ಇದು ಬಹಳ ಸಹಕಾರಿ.
4) ತೆರಿಗೆ ಪ್ರಯೋಜನ :- ನಿಮಗೆ ಸಿಗುವ ಬೋನಸ್ ಹಣ ಮತ್ತು ನಿರಂತರ ಹೂಡಿಕೆಯ ಮೊತ್ತಕ್ಕೆ ನೀವು ಹೆಚ್ಚಿನ ತೆಗರಿಗೆ ಪ್ರಯೋಜನ ಪಡೆಯಲು ಸಾಧ್ಯವಿದೆ.
ಈ ಯೋಜನೆಯ ಹೂಡಿಕೆಗೆ ಹಾಗೂ ಬೋನಸ್ ಹಣ ಪಡೆಯಲು ನೀವು EPFO ಇಲಾಖೆಯನ್ನು ಸಮ್ ಸಂಪರ್ಕಿಸಿ.
ಇದನ್ನೂ ಓದಿ: ಮುಂಬರುವ ಜೂನ್ ತಿಂಗಳಿಂದ APL ಪಡಿತರ ಚೀಟಿ ವಿತರಣೆಗೆ ಮರುಚಾಲನೆ ದೊರೆಯಲಿದೆ