ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದ ಕೂಡಲೇ ನಮಗೆ ಸಾಲ ಸಿಗುವುದಿಲ್ಲ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರು ಸಹ ನಾವು ಕೆಲವು ಮಾರ್ಗಗಳನ್ನು ಅನುಸರಿಸಿ ಸಾಲ ಪಡೆಯಲು ಸಾಧ್ಯವಿದೆ. ಹಾಗಾದರೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಾಲ ಪಡೆಯುವ ಮಾರ್ಗಗಳು ಯಾವುದು ಎಂಬ ಮಾಹಿತಿಯನ್ನು ತಿಳಿಯೋಣ.
ಕ್ರೆಡಿಟ್ ಸ್ಕೋರ್ ಎಷ್ಟಿದ್ದರೆ ಸುಲಭವಾಗಿ ಸಾಲ ಸಿಗುತ್ತದೆ?: ಕ್ರೆಡಿಟ್ ಸ್ಕೋರ್ 300 ರಿಂದ 900 ಅಂಕಗಳವರೆಗೆ ಇರುತ್ತದೆ. ಕ್ರೆಡಿಟ್ ಸ್ಕೋರ್ನಲ್ಲಿ 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೆ ಸುಲಭವಾಗಿ ಸಾಲವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಅದಕ್ಕಿಂತ ಕಡಿಮೆ ಸ್ಕೋರ್ ಹೊಂದಿದ್ದರೆ ಸಾಲ ಸಿಗುವ ಸಂಭಾವ್ಯತೆ ಕಡಿಮೆ ಆಗುತ್ತದೆ. ಕೆಲವು ಬ್ಯಾಂಕ್ ಗಳಲ್ಲಿ ಸಾಲ ನೀಡಿದರೂ ಸಹ ನಿಮಗೆ ಹೆಚ್ಚಿನ ಬಡ್ಡಿದರವನ್ನು ಹಾಕಲಾಗುತ್ತದೆ.
ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಾಲ ಪಡೆಯಬಹುದಾದ ವಿಧಾನಗಳು :-
1) ಬ್ಯಾಂಕ್ ನಲ್ಲಿ ಮಾಹಿತಿ ಪಡೆಯಿರಿ:- ಸಾಲ ನೀಡಲು ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ನಿಯಮಗಳು ಇರುತ್ತವೆ. ಕೆಲವು ಬ್ಯಾಂಕ್ ನಲ್ಲಿ ಕ್ರೆಡಿಟ್ ಸ್ಕೋರ್ ವಿವರ ಕೇಳದೆಯೇ ನಿಮಗೆ ಸಾಲ ನೀಡುವ ಸಾಧ್ಯತೆ ಇರುತ್ತದೆ. ಹಾಗು ಕೆಲವು ಬ್ಯಾಂಕ್ ನಲ್ಲಿ ಕ್ರೆಡಿಟ್ ಸ್ಕೋರ್ ಮುಖ್ಯವಾದ ಅಂಶ ಆಗಿರುತ್ತದೆ. ಹಾಗಿದ್ದಾಗ ನೀವು ಬ್ಯಾಂಕ್ ನಲ್ಲಿ ವಿಚಾರಿಸಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಿಮಗೆ ಸಾಲ ಸಿಗುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪೂರ್ಣ ಮಾಹಿತಿ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
2) ಡೌನ್ ಪೇಮೆಂಟ್ ಹೆಚ್ಚು ನೀಡುವ ಭರವಸೆ ನೀಡಿ :- ಬ್ಯಾಂಕ್ ನಲ್ಲಿ ಸಾಲ ಪಡೆಯುವಾಗ ನೀವು ಬ್ಯಾಂಕ್ ಸಿಬ್ಬಂದಿಗೆ ಹೆಚ್ಚಿನ ಡೌನ್ ಪೇಮೆಂಟ್ ನೀಡುತ್ತೇನೆ ಎಂದು ವಿಶ್ವಾಸ ನೀಡಿ. ಹಾಗಿದ್ದಾಗ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಹ ನಿಮ್ಮ ಸಾಲ ಸೌಲಭ್ಯವನ್ನು ಬ್ಯಾಂಕ್ ನೀಡುವ ಸಾಧ್ಯತೆ ಇರುತ್ತದೆ.
3) ಜಂಟಿ ಸಾಲ ಪಡೆಯಿರಿ :- ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ನೀವು ನಿಮ್ಮ ಸ್ನೇಹಿತರ ಅಥವಾ ನಿಮ್ಮ ಮನೆಯ ಇನ್ನೊಬ್ಬ ಸದಸ್ಯರ ಬಳಿ ಕ್ರೆಡಿಟ್ ಸ್ಕೋರ್ ಜಾಸ್ತಿ ಇದ್ದರೆ ಮಾತನಾಡಿ ಅವರ ಜೊತೆಗೆ ಸೇರಿ ಜಂಟಿ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದು. ಆಗ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಸಹ ನಿಮಗೆ ಸಾಲ ಸಿಗುತ್ತದೆ.
4) ಹೆಚ್ಚಿನ ದಾಖಲೆ ನೀಡಿ :- ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದೆ ನಿಮಗೆ ಸಾಲ ಸಿಗುತ್ತಿಲ್ಲ ಎಂದಾದರೆ ನಿಮ್ಮ ಬಳಿ ಇರುವ ಇನ್ನಿತರೆ ದಾಖಲೆಗಳನ್ನು ಸಲ್ಲಿಸಬೇಕು. ಅಂದರೆ ನಿಮ್ಮ ಆದಾಯದ ಬಗ್ಗೆ ಪೂರ್ಣ ಮಾಹಿತಿ , ಅಥವಾ ನಿಮ್ಮ ಉದ್ಯೋಗದ ಬಗ್ಗೆ ಭರವಸೆಯ ಮಾಹಿತಿ , ಇಲ್ಲವೇ ನಿಮ್ಮ ಬಳಿ ಇರುವ ಸೈಟ್, ಮನೆ , ಅಥವಾ ನಿಮ್ಮ ಆಸ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪ್ರಯತ್ನಿಸಿ ಆಗ ನೀವು ಸಾಲ ಮರುಪಾವತಿ ಮಾಡಲು ಶಕ್ತರು ಎಂಬ ಕಾರಣಕ್ಕೆ ನಿಮ್ಮ ಅರ್ಜಿಯನ್ನು ಬ್ಯಾಂಕ್ ಪರಿಗಣಿಸಿ ನೀವು ಕೇಳಿದ ಸಾಲದ ಮೊತ್ತವನ್ನು ನಿಮಗೆ ನೀಡುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನೀವು ನೀಡಿದ ದಾಖಲೆಗಳ ಪರಿಶೀಲನೆ ಮಾಡಿ ಸಾಲ ನೀಡುತ್ತಾರೆ.
ಇದನ್ನೂ ಓದಿ: 65 ವರ್ಷಕ್ಕಿಂತ ಮೇಲ್ಪಟ್ಟ ಜನರು ಈಗ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಬಹುದು; ಹೊಸ ನಿಯಮಗಳ ಬಗ್ಗೆ ತಿಳಿದಿರಲಿ!
ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆಯೇ UPI payment ಮಾಡಲು ಈ ಮಾರ್ಗವನ್ನು ಅನುಸರಿಸಿ