1 ರಿಂದ 9ನೇ ತರಗತಿಯ ಅಂಗವಿಕಲ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ವಿನಾಯಿತಿ, ಸರ್ಕಾರದಿಂದ ವಿಶೇಷವಾದ ಪ್ರೋತ್ಸಾಹ.

ಇದಾಗಲೇ ಪಿಯುಸಿ ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿನಾಯಿತಿ ಇದ್ದು, ಈಗ ರಾಜ್ಯ ಸರ್ಕಾರವು ಹೊಸ ಆದೇಶವನ್ನು ಹೊರಡಿತ್ತಿದೆ.. 1 ರಿಂದ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಇದು ಅನ್ವಯವಾಗಲಿದೆ. ವಿಕಲಚೇತನ ಮಕ್ಕಳಿಗೆ ವಿಶೇಷವಾದ ವಿನಾಯಿತಿಯ ಅವಶ್ಯಕತೆ ಇದೆ ಹಾಗೂ ಅವರಿಗೆ ತಡೆರಹಿತ ಮುಕ್ತ ವಾತಾವರಣವನ್ನು ನಿರ್ಮಿಸಿ ಕೊಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇಂತಹ ನಿರ್ಧಾರವನ್ನು ಮಾಡಿದೆ.

WhatsApp Group Join Now
Telegram Group Join Now

ವಿಕಲಚೇತನ ಮಕ್ಕಳಿಗೆ ಕಲಿಕೆಗೆ ಅವಕಾಶವನ್ನು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಈ ವಿದ್ಯಾರ್ಥಿಗಳಿಗೆ ವಿಶೇಷವಾದ ಗಮನಹರಿಸುವ ಅವಶ್ಯಕತೆ ಇದೆ. ಆದ್ದರಿಂದ ಅವರಿಗೆ ಮುಕ್ತ ವಾತಾವರಣವನ್ನ ನಿರ್ಮಿಸಬೇಕಾಗಿದೆ. ಈ ಉದ್ದೇಶವು ಇಷ್ಟು ದಿನಗಳ ಕಾಲ ಕೇವಲ ಬೋರ್ಡ್ ಎಕ್ಸಾಮ್ ಗಳಿಗೆ ಸೀಮಿತವಾಗಿತ್ತು. ಒಂದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಇರಲಿಲ್ಲ.

ಇದನ್ನರಿತ ಸರ್ಕಾರ ಎಲ್ಲ ವಿಕಲಚೇತನ ಮಕ್ಕಳಿಗೂ ಕೂಡ ಈ ಸೌಲಭ್ಯವನ್ನು ಒದಗಿಸುವಲ್ಲಿ ಮುಂದಾಗಿದೆ. ಇವರಿಗಾಗಿ ಇನ್ನೂ ಹಲವಾರು ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಗ್ರಹಿಸುವಲ್ಲಿ ಮತ್ತು ಪರೀಕ್ಷೆಯನ್ನು ಎದುರಿಸುವಲ್ಲಿ ಯಾವುದೇ ಅಡೆತಡೆ ಉಂಟಾಗಬಾರದು. ತಡೆರಹಿತ ವಾತಾವರಣವನ್ನು ನಿರ್ಮಿಸಿ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ.

ಸರ್ಕಾರದ ಆದೇಶದಂತೆ 2021 ರಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಮ್ ನಲ್ಲಿ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ 2018ರಲ್ಲಿ ವಿಶೇಷ ರೀತಿಯ ವಿನಾಯಿತಿಗಳನ್ನ ನೀಡಲಾಗಿದೆ. ಇಲ್ಲಿಯತನಕ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾರ್ಥಿಗಳಿಗೆ ಅಂದರೆ ಒಂದರಿಂದ ಒಂಬತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸೌಲಭ್ಯವು ಇರಲಿಲ್ಲ. ಹಾಗಾಗಿ ಇದಕ್ಕೆ ಅನುಗುಣ ವಾಗುವಂತೆ ನಮ್ಮ ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ. ಅಂದರೆ ಒಂದರಿಂದ ಒಂಭತ್ತನೇ ತರಗತಿಯ ಓದುತ್ತಿರುವ ಅಂಗವಿಕಲ ವಿದ್ಯಾರ್ಥಿಗಳಿಗೆ ವಿಶೇಷವಾದ ಪರೀಕ್ಷಾ ವಿನಾಯಿತಿಯನ್ನು ಒದಗಿಸುತ್ತಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಪರೀಕ್ಷಾ ವಿನಾಯಿತಿಯಲ್ಲಿ ಸರ್ಕಾರದ ಉದ್ದೇಶ

ವಿಕಲಚೇತನ ವಿದ್ಯಾರ್ಥಿಗಳ ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿನ ಗಮನದ ಅವಶ್ಯಕತೆ ಇದೆ. ಇವರಿಗೆ ಪರೀಕ್ಷೆಯಲ್ಲಿ ರಿಯಾಯಿತಿ ಮತ್ತು ವಿನಾಯಿತಿಗಳ ಅವಶ್ಯಕತೆ ತುಂಬಾ ಇದೆ. ಯಾವುದೇ ಕಾರಣಕ್ಕೂ ಇವರಿಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಅಂದರೆ ಪರೀಕ್ಷೆಯನ್ನು ಎದುರಿಸುವಲ್ಲಿ ಯಾವುದೇ ತಡೆಯು ಉಂಟಾಗಬಾರದು ಇವರಿಗೆ ಅನುಕೂಲವಾಗುವ ರೀತಿಯಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸಬೇಕು. ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಎಲ್ಲರ ಹಾಗೆ ವಿಕಲಚೇತನ ಮಕ್ಕಳು ಕೂಡ ಮುಂದೆ ಬರಬೇಕು ಸ್ವಾವಲಂಬಿಯಾಗಿ ಬದುಕು ಅಂತಾಗಬೇಕು ಅವರ ಜೀವನವನ್ನು ಅವರು ಕಟ್ಟಿಕೊಳ್ಳಬೇಕು ಅಂದರೆ ಒಂದು ಹಂತದ ಪರೀಕ್ಷೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ನೀಡಿರುವಂತೆ ಒಂದರಿಂದ 9ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೂ ಕೂಡ ಪರೀಕ್ಷೆ ವಿನಾಯಿತಿಯ ಅವಶ್ಯಕತೆ ಇದೆ ಎಂದು ರಾಜ್ಯ ಯೋಜನಾ ನಿರ್ದೇಶಕರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಅವರ ಸಮ್ಮುಖದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

ಇದೇ ನಿಟ್ಟಿನಲ್ಲಿ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ನೀಡಬೇಕಾಗಿರುವ ಪರೀಕ್ಷಾ ಅಗತ್ಯತೆ ಕುರಿತು ಹಾಗೂ ವಿದ್ಯಾರ್ಥಿಗಳು ಪರೀಕ್ಷಾ ವಿನಾಯಿತಿಯ ಸೌಲಭ್ಯವನ್ನು ಪಡೆದುಕೊಳ್ಳಲು ಬೇಕಾಗಿರುವ ಪ್ರಮಾಣ ಪತ್ರವನ್ನು ಒದಗಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ವಿಕಲಚೇತನ ವಿದ್ಯಾರ್ಥಿಗಳ ಬಗ್ಗೆ ಈ ನಿರ್ಣಯವನ್ನು ತೆಗೆದುಕೊಂಡಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವಲ್ಲಿ ತುಂಬಾ ಸಹಾಯಕವಾಗಿದೆ ಅಂತಾನೆ ಹೇಳಬಹುದು. ರಾಜ್ಯ ಬಟ್ಟೆ ಕ್ರಮದ ಅನುಸಾರ ವಿದ್ಯಾರ್ಥಿಗಳು ಪರೀಕ್ಷಾ ವಿನಾಯಿತಿಯ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರಂತೆ ಇವರು ಕೂಡ ಪರೀಕ್ಷೆಯನ್ನು ಎದುರಿಸಲು ಸಹಾಯಕವಾಗಿದೆ. 

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹಿಳೆಯರಿಗಾಗಿ 2 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ಸೌಲಭ್ಯ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ ಆದರು ನಿಮಗೆ ಯಾಕೆ ಬಂದಿಲ್ಲ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram