ಅನಾಮಧೇಯ ವ್ಯಕ್ತಿಗಳು ಮಾಡಿದ ಕೆಲ್ಸಕ್ಕೆ ಸರಿಯಾದ ತನಿಖೆ ನಡೆಸದೆ ನಿರಾಪರಾಧಿ ವ್ಯಕ್ತಿ ಕಳೆದ 3ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆ ಅನುಭಸುತ್ತಿರುವ ವಿಚಾರ ಇದೀಗ ಹೈ ಕೋರ್ಟ್ ಅಂಗಳ ತಲುಪಿದ್ದು, ಫೇಸ್ಬುಕ್ ಪರ ವಕೀಲನಿಗೆ ಫೇಸ್ಬುಕ್ ಬಂದ್ ಮಾಡುವ ಖಡಕ್ ಎಚ್ಚರಿಕೆ ಕೊಟ್ಟಿದೆ. ಹೌದು ನಕಲಿ ಫೇಸ್‌ಬುಕ್ ಖಾತೆ ತೆರೆದು ಅನಾಮಿಕರು ಅವಹೇಳನಕಾರಿ ಪೋಸ್ಟ್ ಹಾಕಿದ್ದರಿಂದ ಅರೇಬಿಯ ನ್ಯಾಯಾಲಯದಿಂದ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಕಳೆದ ಮೂರು ವರ್ಷಗಳಿಂದ ಜೈಲು ವಾಸ ಅನುಭವಿಸಿರುವ ಮಂಗಳೂರಿನ, ಬಿಕರ್ನಕಟ್ಟೆ ನಿವಾಸಿ ಶೈಲೇಶ್ ಕುಮಾರ್, ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿದ್ದು, ಭಾರತದಲ್ಲಿ ಫೇಸ್ಬುಕ್ ಬಂದ್ ಮಾಡುವ ನಿಲುವನ್ನ ಕೈಗೆತ್ತಿಕೊಂಡಿದ್ದು, ಒಂದು ವಾರದ ಗಡುವು ನೀಡಿ ಅಷ್ಟೊರೊಳಗೆ ಸತ್ಯಾಸತ್ಯತೆ ಹೊರಬೀಳದೆ ಹೋದರೆ ಭಾರತದಲ್ಲಿ ಫೇಸ್ಬುಕ್ ಬಂದ್ ಮಾಡುವ ಕುರಿತು ಎಚ್ಚರಿಕೆ ಕೊಟ್ಟಿದೆ.
ಏನಿದು ಪ್ರಕರಣ?
ಹೌದು ಮಂಗಳೂರಿನ ಬಿಕರನಕಟ್ಟೆ ನಿವಾಸಿ ಶೈಲೇಶ್ ಕುಮಾರ್,ಕಳೆದ 25 ವರ್ಷಗಳಿಂದ ಸೌದಿ ಅರೇಬಿಯಾದ ಅಲ್‌ಕುಬರ್ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿದ್ದು, ಪತ್ನಿ ಮತ್ತು ಮಕ್ಕಳು ಬಿಕರನಕಟ್ಟೆಯಲ್ಲಿ ವಾಸ ಮಾಡುತ್ತಿದ್ದಾರೆ. ಆದ್ರೆ 2019ರಲ್ಲಿ ಸೌದಿ ಅರೇಬಿಯಾದಲ್ಲಿ ಈ ಹಿಂದೆ ಕೇಂದ್ರ ಸರ್ಕಾರ ರೂಪಿಸಿದ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಯನ್ನು ಬೆಂಬಲಿಸಿ ಶೈಲೇಶ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದರು. ನಂತರ ಅನಾಮಿಕರಿಂದ ಬೆದರಿಕೆ ಬಂದ ಕಾರಣ ತಮ್ಮ ಫೇಸ್‌ಬುಕ್ ಖಾತೆಯನ್ನು ಶೈಲೇಶ್ ರದ್ದುಪಡಿಸಿದ್ದರು. ಆದರೆ ಅನಾಮಧೇಯ ವ್ಯಕ್ತಿಗಳು ಶೈಲೇಶ್ ಹೆಸರಿನಲ್ಲಿ 2020ರ ಫೆಬ್ರವರಿಯಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಮತ್ತು ಆತನ ಜಾತಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು.
ಈ ವಿಚಾರವನ್ನ ತಮ್ಮ ಸ್ನೇಹಿತರು ಮತ್ತು ಮಂಗಳೂರಿನ ಸಂಬಂಧಿಕರಿಗೆ ಶೈಲೇಶ್ ತಿಳಿಸಿದ್ದರು. ಆದ್ರೆ ಅಷ್ಟರಲ್ಲಿ ಶೈಲೇಶ್‌ನನ್ನು ಸೌದಿ ಪೊಲೀಸರು ಇದೇ ವೇಳೆ ಬಂಧಿಸಿತ್ತಾರೆ. ಹೌದು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿ ಕಾಯಿದೆ ಬೆಂಬಲಿಸಿ ಅನಾಮಧೇಯ ವ್ಯಕ್ತಿಗಳು ಮಂಗಳೂರು ಶೈಲೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ತೆರೆದು ಸೌದಿ ಅರೇಬಿಯಾದ ಆಡಳಿತಗಾರನ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ ಪ್ರಕರಣದ ತನಿಖೆಗೆ ಫೇಸ್ಬುಕ್ ನಿರ್ವಾಹಕರು ಸೂಕ್ತ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಕೋರ್ಟ್ ಅದೇಶಿಸಿದೆ.
ಇದನ್ನೂ ಓದಿ: ಗೆಳೆಯನ ಬರ್ತಡೇಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಧ್ರುವ ಸರ್ಜಾ..
ಫೇಸ್ ಬುಕ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಹೈ ಕೋರ್ಟ್
ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಶೈಲೇಶ್ ಪತ್ನಿ ಮಂಗಳೂರಿನಲ್ಲಿ ಘಟನೆ ಕುರಿತು ದೂರು ದಾಖಲಿಸಿದ್ದರು, ಅಲ್ಲದೇ ಈ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಪೊಲೀಸರು ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದವರ ಮಾಹಿತಿ ನೀಡುವಂತೆ ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು ಕೋರಿದ್ದರು. ಆದ್ರೆ ಪೊಲೀಸ್ ತನಿಖೆಯ ನಿಧಾನಗತಿಯನ್ನು ಆಕ್ಷೇಪಿಸಿ ಅರ್ಜಿದಾರರು 2021 ರಲ್ಲಿ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ವಿಚಾಟನೆ ಈಗ ನಡೆದಿದ್ದು, ಮಂಗಳೂರು ಪೊಲೀಸ್ ವರಿಷ್ಠ ಕುಲದೀಪ್ ಜೈನ್ ಹಾಗೂ ಪ್ರಕರಣದ ತನಿಖಾಧಿಕಾರಿಗಳು ಹಾಜರಾಗಿ ಫೇಸ್ ಬುಕ್ ನ ಅಸಹಕಾರದಿಂದ ಸೂಕ್ತ ತನಿಖೆ ನಡೆಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದಾಗ, ನ್ಯಾಯಾಧೀಶರು, ಈ ಬಗ್ಗೆ ಫೇಸ್ ಬುಕ್ ನ ಪರ ವಕೀಲರನ ಪ್ರಶ್ನಿಸಿದಾಗ, ವಕೀಲರು ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅಂತ ಹಾರಿಕೆ ಉತ್ತರವನ್ನ ಕೊಡ್ತಾರೆ.
ಇದರಿಂದ ಆಕ್ರೋಶಗೊಂಡ ನ್ಯಾಯಮೂರ್ತಿಗಳು ಪ್ರಕರಣದ ತನಿಖೆಗೆ ಸರಿಯಾಗಿ ಸಹಕರಿಸದಿದ್ದರೆ ಭಾರತದಲ್ಲಿ ಫೇಸ್ ಬುಕ್ ನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಬೇಕಾಗುತ್ತದೆ ಅಂತ ವಕೀಲರಿಗೆ ಎಚ್ಚರಿಕೆಯನ್ನ ಕೊಟ್ಟರು. ಇದರಿಂದ ಗಾಬರಿಗೊಂಡ ಫೇಸ್‌ಬುಕ್ ಪರ ವಕೀಲರು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನೀಡಲು ಒಂದು ವಾರ ಕಾಲಾವಕಾಶ ನೀಡುವಂತೆ ಕೋರಿದ್ದಾರೆ. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಜೂನ್ 22ರೊಳಗೆ ಮಾಹಿತಿ ಸಲ್ಲಿಸಲು ಗಡುವು ನೀಡಿದೆ. ಇಲ್ಲವಾದಲ್ಲಿ ಫೇಸ್ಬುಕ್ ಭಾರತದಲ್ಲಿ ಕಾರ್ಯನಿರ್ವಹಿಸಲು ಅವಕಾಶ ರದ್ದು ಮಾಡುವ ಎಚ್ಚರಿಕೆಯನ್ನ ರವಾನಿಸಿದೆ. ಒಟ್ಟಿನಲ್ಲಿ ಮಾಡದ ತಪ್ಪಿಗೆ ಮಂಗಳೂರು ಮೂಲದ ಶೈಲೇಶ್ ಗೆ ಮುಂದಿನ ಶಿಕ್ಷೆಯಿಂದ ಮುಕ್ತಿ ಸಿಕ್ಕರೆ ಸಾಕು ಅನ್ನುವಂತಾಗಿದೆ.
ಇದನ್ನೂ ಓದಿ: ಹೋಂ ಲೋನ್ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಎಚ್ಚರ, ಸ್ವಲ್ಪ ಯಾಮಾರಿದ್ರು ತೆಗೆದುಕೊಂಡ ಹಣಕ್ಕೆ ದುಪ್ಪಟ್ಟು ಪೀಕುತ್ತಾರೆ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram