ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುವ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಸತ್ಯಾಂಶ ತಿಳಿಸಿದ ಸರ್ಕಾರ..

Pm kisan Tractor Yojana

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗಳಲ್ಲಿ ಸುಳ್ಳು ಸುದ್ದಿಗಳೇ ಹೆಚ್ಚು. ಸುಳ್ಳು ಸುದ್ದಿಗೆ ಜನರು ಬೇಗ ಮರುಳಾಗಿ ಬಿಡುತ್ತಾರೆ. ಸ್ವಲ್ಪ ದಿನಗಳಿಂದ ಕೇಂದ್ರ ಸರ್ಕಾರ ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುತ್ತದೆ ಎಂದು ಒಂದು ವೆಬ್ಸೈಟ್ ನಲ್ಲಿ ಸುದ್ದಿ ಬಿತ್ತರವಾಗಿತ್ತು. ಇದನ್ನು ನಂಬಿದ ಜನರು ಇದನ್ನು ರೈತರಿಗೆ ತಿಳಿಸಿದ್ದರು ಆದರೆ ಈಗ ಇದರ ಸತ್ಯಾಂಶ ಬಯಲಾಗಿದೆ.

WhatsApp Group Join Now
Telegram Group Join Now

ವೆಬ್ಸೈಟ್ ನಲ್ಲಿ ಹಬ್ಬಿಸಲಾಗಿರುವ ಸುಳ್ಳು ಸುದ್ದಿ ಏನು?: ಕೇಂದ್ರ ಸರ್ಕಾರವು ಈಗಾಗಲೇ ಪಿಎಂ ಕಿಸಾನ್ ಯೋಜನೆಯನ್ನು ರೈತರಿಗೆ ನೀಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಅದರಂತೆಯೇ ಪಿಎಂ ಟ್ರ್ಯಾಕ್ಟರ್ ಯೋಜನೆ ಕೇಂದ್ರ ಸರ್ಕಾರವು ಆರಂಭ ಮಾಡಿದೆ. ಇದರಲ್ಲಿ ರೈತರಿಗೆ 50% ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ನೀಡುತ್ತದೆ ಎಂದು ಸುದ್ದಿ ಹಬ್ಬಿತ್ತು. ಇದು ಬಡ ರೈತರಿಗೆ ಉತ್ತಮ ಯೋಜನೆ ಆಗಿದೆ. ನೇರವಾಗಿ ಸಬ್ಸಿಡಿ ಹಣವನ್ನು ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದೆಲ್ಲ ಸುದ್ದಿ ಹಬ್ಬಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರವು ಸ್ಪಷ್ಟವಾಗಿ ಉತ್ತರವನ್ನು ನೀಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರ ನೀಡಿದ ಸ್ಪಷ್ಟ ಉತ್ತರವೇನು?: ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಜನರನ್ನು ದಾರಿ ತಪ್ಪಿಸುವ ದೃಷ್ಠಿಯಿಂದ ಈ ಸುದ್ದಿಯನ್ನು ಹಬ್ಬಿಸಲಾಗಿದೆ. ಪಿಎಂ ಟ್ರ್ಯಾಕ್ಟರ್ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಸುದ್ದಿಗಳು ಸುಳ್ಳು. ಕೇಂದ್ರ ಸರ್ಕಾರದಿಂದ ಈ ರೀತಿಯ ಯೋಜನೆಗಳು ಜಾರಿಗೆ ಬಂದಿಲ್ಲ. ನಿಮಗೆ ಈ ರೀತಿಯ ಮೆಸೇಜ್ ಅಥವಾ ಯಾವುದೇ ವೆಬ್ಸೈಟ್ ಲಿಂಕ್ ಬಂದರೆ ದಯವಿಟ್ಟು ಅದನ್ನು ಓಪನ್ ಮಾಡಬೇಡಿ. ಅದು ಸಂಪೂರ್ಣ ನಕಲಿ ಆಗಿದ್ದು. ಸ್ಕ್ಯಾಮ್ ಮಾಡುವ ಜನರಿಂದ ನಡೆದಿರಬಹುದಾದ ಕೃತ್ಯ ಇದಾಗಿದೆ ಎಂದು ತಿಳಿಸಿದ್ದಾರೆ. 

ರಾಜ್ಯ ಮತ್ತು ಕೇಂದ್ರ ಸರ್ಕಾರವು ರೈತರಿಗೆ ಕೆಲವು ಮಶಿನರಿ ವಸ್ತುಗಳ ಮೇಲೆ ಸಬ್ಸಿಡಿ ನೀಡುವುದು ನಿಜ ಆದರೆ ಇದು ಸಂಪೂರ್ಣ ಸತ್ಯಕ್ಕೆ ದೂರವಾದ ಸುದ್ದಿ.

ಯಾವುದೇ ವೆಬ್ಸೈಟ್ ನಲ್ಲಿ ಸುದ್ದಿ ಬಂದರೆ ಅನುಸರಿಸುವ ಮುನ್ನೆಚ್ಚರಿಕೆ ಕ್ರಮಗಳು:-

  • ಸರ್ಕಾರದ ವೆಬ್ಸೈಟ್ ಹೊರತು ಪಡಿಸಿ. ಯಾವುದೇ ವೆಬ್ಸೈಟ್ ನಲ್ಲಿ ಸುದ್ದಿಗಳು ಪ್ರಸರವಾದರೆ ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿಯನ್ನು ಪರಿಶೀಲನೆ ಮಾಡಬೇಕು. ಸರ್ಕಾರದ ವೆಬ್ಸೈಟ್ ನಲ್ಲಿ ಯಾವುದೇ ಮಾಹಿತಿ ಇಲ್ಲದೆ ಇದ್ದರೆ ಸುಳ್ಳು ಸುದ್ದಿ ಎಂದು ತಿಳಿದುಕೊಳ್ಳಬೇಕು.
  • ವೆಬ್ಸೈಟ್ ಬಗ್ಗೆ ಪೂರ್ಣ ಮಾಹಿತಿಯನ್ನು ಗೂಗಲ್ ನಲ್ಲಿ ಪಡೆದುಕೊಳ್ಳಬೇಕು. ವೆಬ್ಸೈಟ್ ಅಧಿಕೃತವಾಗಿ ಇದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ಪಡೆದ ನಂತರವೇ ಲಿಂಕ್ ಓಪನ್ ಮಾಡಬೇಕು.
  • ಸರ್ಕಾರದ ಅಥವಾ ಯಾವುದೇ ಸಾಮಾಜಿಕ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ಬಂದರೆ ಸಂಬಂದಿಸಿದ ಇಲಾಖೆಗೆ ತೆರಳಿ ಮಾಹಿತಿಯನ್ನು ತಿಳಿಯುವುದು ಉತ್ತಮ.
  • ಯಾವುದೇ ಅನುಮಾನ ಕಂಡುಬಂದಲ್ಲಿ ಮೊದಲು ಪೊಲೀಸ್ ಇಲಾಖೆ ಅಥವಾ ಸೈಬರ್ ಕ್ರೈಮ್ ವಿಭಾಗಕ್ಕೆ ಕಂಪ್ಲೇಂಟ್ ನೀಡಬೇಕು.
  • ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಮಾಹಿತಿಗಳು ಆಧಾರ್ ಸಂಖ್ಯೆ, ಫೋಟೋ, ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ಯಾವುದೇ ಹೊಸ ವೆಬ್ಸೈಟ್ ಗೆ ನೀಡಬಾರದು.
  • ಯಾವುದೇ ಲಿಂಕ್ ಅಥವಾ ಅಪ್ಲಿಕೇಶನ್ ಓಪನ್ ಮಾಡಿದಾಗ ನಿಮ್ಮ ಮೊಬೈಲ್ ಮಾಹಿತಿಯ ಬಳಕೆಗೆ permission ಕೇಳುತ್ತದೆ. ನಿಖರವಾದ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಗಳಿಗೆ ಮಾತ್ರ permission ನೀಡಬೇಕು. ನಿಮ್ಮ ಮೊಬೈಲ್ ಮಾಹಿತಿಗಳನ್ನು ಕದಿಯುವ ಜಾಲತಾಣಗಳ ಸಂಖ್ಯೆ ಇಂದು ಹೆಚ್ಚಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ಪ್ಯೂನ್, ಟೈಪಿಸ್ಟ್, ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ 

ಇದನ್ನೂ ಓದಿ: ಭಾರತದ ಡ್ರೈವಿಂಗ್ ಲೈಸೆನ್ಸ್ ಇದ್ದರೆ ವಿಶ್ವದ ಯಾವ ಯಾವ ದೇಶಗಳಲ್ಲಿ ವಾಹನ ಓಡಿಸಬಹುದು