ರಾಜ್ಯದ ರೈತರು ಸಹಕಾರಿ ಬ್ಯಾಂಕ್ ನಲ್ಲಿ ಪಡೆದ ಸಾಲದ ಅಸಲನ್ನು ಈ ದಿನಾಂಕದ ಒಳಗೆ ಪಾವತಿಸಿದರೆ ಬಡ್ಡಿ ಮನ್ನಾ ಆಗುತ್ತದೆ

Farmer Loan

ರೈತ ದೇಶದ ಅತಿದೊಡ್ಡ ಆಸ್ತಿ ರೈತ ಬೆಳೆಯನ್ನು ಬೆಳೆದರೆ ಮಾತ್ರ ನಾವು ನಿತ್ಯ ಆಹಾರ ಸೇವಿಸಲು ಸಾಧ್ಯ. ರೈತನಿಗೆ ಕಷ್ಟ ಬಂದರೆ ಇಡೀ ದೇಶವೇ ಮತ್ತೊಂದು ದೇಶದಿಂದ ಸಾಲವನ್ನು ಪಡೆಯಬೇಕು. ಆದರೆ ದೇಶಕ್ಕೆ ಅನ್ನ ನೀಡುವ ರೈತನು ತಾನು ಬೆಳೆ ಬೆಳೆಯಲು ಸಾಲ ಮಾಡಬೇಕು. ರೈತನು ಸಹಕಾರ ಸಂಘಗಳಲ್ಲಿ ( ಬ್ಯಾಂಕ್ ) ಬೆಲೆ ಸಾಲ ಪಡೆದು ಸರಿಯಾದ ಸಮಯಕ್ಕೆ ಅಸಲಿನ ಪಾವತಿ ಮಾಡಿದರೆ ಬಡ್ಡಿ ಮನ್ನಾ ಆಗುತ್ತದೆ. ಸಾಲದ ಅಸಲನ್ನು ತೀರಿಸಲು ಕೊನೆಯ ದಿನಾಂಕ ಘೋಷಣೆ ಆಗಿದ್ದು, ನಿಗದಿತ ದಿನಾಂಕದ ಒಳಗೆ ಅಸಲು ತೀರಿಸಿ ಅಸಲಿಗೆ ನೀಡುವ ಬಡ್ಡಿಯಿಂದ ತಪ್ಪಿಸಿಕೊಳ್ಳಬಹುದು.

WhatsApp Group Join Now
Telegram Group Join Now

ಯಾವ ಬ್ಯಾಂಕ್ ನಲ್ಲಿ ಯಾವ ರೀತಿಯ ಸಾಲಕ್ಕೆ ಬಡ್ಡಿ ಮನ್ನಾ ಯೋಜನೆ ಸಿಗುತ್ತದೆ.?: ಸರ್ಕಾರದ ಆದೇಶದ ಅನುಸಾರ ರೈತರು ರಾಜ್ಯದ ಸಹಕಾರಿ ಸಂಘಗಳಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ, ಲ್ಯಾಂಗ್ಸ ಸಹಕಾರಿ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಪ್ರಾಥಮಿಕ ಸಹಕಾರಿ ಬ್ಯಾಂಕ್ ಹಾಗೂ ಗ್ರಾಮಾಭಿವೃದ್ಧಿ ಬ್ಯಾಂಕ್ ನಲ್ಲಿ ಕೃಷಿ ಗೆ ಸಂಬಂಧಿಸಿದ ಸಾಲ ಪಡೆದಿರಬೇಕು. ರೈತರು ಕಳೆದ ವರ್ಷ ಡಿಸೆಂಬರ್ ನಲ್ಲಿ ಪಡೆದ ಧೀರ್ಘವಧಿ ಹಾಗೂ ಮಧ್ಯಮಾವಧಿ ಸಾಲವಾಗಿದ್ದರೆ ಇದೆ ಬರುವ ಮಾರ್ಚ್ 31 ರ ಒಳಗೆ ಸಾಲದ ಅಸಲನ್ನು ಕಟ್ಟಿದರೆ ಹಾಗೂ ಸರ್ಕಾರ ಸೂಚಿಸಿದ ನಿರ್ಭಾಂಧನೆಗಳನ್ನು ಪಾಲಿಸಿದರೆ ನಿಮ್ಮ ಸಾಲದ ಬಡ್ಡಿ ಮೊತ್ತವು ಇಲ್ಲವಾಗುತ್ತದೆ.

ಈ ಹಿಂದೆ ಮರುಪಾವತಿ ಸಮಯವನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿತ್ತು!

ಕರ್ನಾಟಕ ರಾಜ್ಯ ಸರ್ಕಾರವು ಮೇಲೆ ತಿಳಿಸಿದ ಬ್ಯಾಂಕ್ ಗಳಿಂದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಆಧಾರಿತ ಸಾಲ 2023 ಡಿಸೆಂಬರ್ 31ರವರೆಗೆ ಸುಸ್ತಿಯಾಗಿದ್ದರೆ, ಆ ಸಾಲಗಳ ಕಂತುಗಳ ಅಸಲು ಮೊತ್ತವನ್ನು 2024ರ ಫೆಬ್ರುವರಿ 29 ರೊಳಗೆ ಮರು ಪಾವತಿ ಮಾಡಬೇಕು ಎಂದು ಆದೇಶ ಹೊರಡಿಸಿತ್ತು. ಆದರೆ ರೈತರ ಬೇಡಿಕೆಯ ಮೇರೆಗೆ ಆ ಆದೇಶವನ್ನು ಒಂದು ತಿಂಗಳುಗಳ ಕಾಲ ವಿಸ್ತರಣೆ ಮಾಡಿತ್ತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಡ್ಡಿಮನ್ನಾ ಮಾಡುವುದರಿಂದ ರೈತರಿಗೆ ಆಗುವ ಲಾಭಗಳು :-

  • ಆರ್ಥಿಕ ಹೊರೆ ಕಡಿಮೆ ಆಗಲಿದೆ: ಬಡ್ಡಿ ಮನ್ನಾ ಮಾಡುವುದರಿಂದ ರೈತರ ಮೇಲಿನ ಸಾಲದ ಹೊರೆಯನ್ನು ಕಡಿಮೆ ಮಾಡಲು ಸಾಧ್ಯ. ಜೊತೆಗೆ ರೈತರು ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಉತ್ಪಾದನಾ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಉತ್ತೇಜನ ಸಿಗುತ್ತದೆ.
  • ಸಾಲ ಪಡೆಯುವ ಸಾಮರ್ಥ್ಯಗಳನ್ನು: ಬಡ್ಡಿ ಮನ್ನಾ ಯೋಜನೆಯು ಭವಿಷ್ಯದಲ್ಲಿ ಸುಲಭವಾಗಿ ಸಾಲ ಪಡೆಯಲು ಸಹಾಯ ಆಗುತ್ತದೆ. ರೈತ ಬೆಳೆಯುವ ಬೆಳೆಗೆ ಅಥವಾ ಕೃಷಿ ಉಪಕರಣಗಳ ಖರೀದಿಗೆ ಬಡ್ಡಿ ಹೆಚ್ಚಾಗುವುದು ಎಂಬ ಭಯದಿಂದ ಸಾಲ ಪಡೆಯುವುದು ತಪ್ಪುತ್ತದೆ.
  • ಕೃಷಿ ಉತ್ಪಾದನೆಯ ಪ್ರಮಾಣ: ಸಾಲದ ಭಾರ ಕಡಿಮೆಯಾದರೆ ರೈತರು ಉತ್ಪಾದನಾ ಚಟುವಟಿಕೆಗಳ ಮೇಲೆ ಹೆಚ್ಚು ಗಮನ ನೀಡುತ್ತಾರೆ. ಇದರಿಂದ ಕೃಷಿ ಉತ್ಪಾದನೆಯಲ್ಲಿ ಹೆಚ್ಚಾಗುತ್ತದೆ. ಉತ್ಪಾದನೆ ಹೆಚ್ಚಾದಂತೆ ರೈತನ ಜೀವನವು ಉತ್ತಮ ಸ್ಥಿತಿಗೆ ಬರುತ್ತದೆ.
  • ಜೀವನಮಟ್ಟ ಸುಧಾರಣೆ: ಬಡ್ಡಿ ಮನ್ನಾ ರೈತರ ಆರ್ಥಿಕ ಸ್ಥಿತಿ ಸುಧಾರಿಸುವುದರಿಂದ ಅವರ ಜೀವನ ಮಟ್ಟದಲ್ಲಿ ಸುಧಾರಣೆ ಕಂಡುಬರುತ್ತದೆ. ಬಡ್ಡಿ ಕಟ್ಟಿ ದುಡಿದ ಹಣವೆಲ್ಲ ಕೈಗೆ ಸಿಗದೇ ಇರುವ ಸ್ಥಿತಿ ಇರುವುದಿಲ್ಲ.

ಇದನ್ನೂ ಓದಿ: ನಿಮ್ಮ LKG ಅಥವಾ 1ನೇ ತರಗತಿಗೆ ಉಚಿತವಾಗಿ ಪ್ರವೇಶಿಸಲು ಬಯಸುವಿರಾ? ಆರ್‌ಟಿಐ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿ!

ಇದನ್ನೂ ಓದಿ: ವಿಶೇಷವಾಗಿ ಐಪಿಎಲ್ ವೀಕ್ಷಕರಿಗೆ: ಹೊಸ ರಿಚಾರ್ಜ್ ಯೋಜನೆಯನ್ನು ಪಡೆಯಿರಿ ತಡೆರಹಿತ ವೀಕ್ಷಣೆಯನ್ನು ಆನಂದಿಸಿ