ರಾಜ್ಯದ ರೈತರು ಬರಪರಿಹಾರ ಪಡೆಯಲು ಈ ಕೆಲಸ ಮಾಡಿ; 2 ಸಾವಿರ ಬರ ಪರಿಹಾರ ಪಡೆಯಲು ತಪ್ಪದೆ ಹೀಗ್ ಮಾಡಿ

drought relief money

ಬರಗಾಲದಿಂದ ಬೆಳೆ ನಷ್ಟವಾಗಿರುವ ಪ್ರತಿ ರೈತರಿಗೆ ಈ ವಾರದ ಅಂತ್ಯದಿಂದ ಸರ್ಕಾರ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ 2,000 ರೂಪಾಯಿ ಬರ ಪರಿಹಾರವನ್ನು ನೀಡಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ್ರು ತಿಳಿಸಿದ್ರು. ಹೌದೂ ರಾಜ್ಯದಲ್ಲಿ ಎಲ್ಲ ತಾಲೂಕುಗಳನ್ನ ಬರಪಿಡೀತಾ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಎಷ್ಟೇ ಅವಳೊಂತ್ತುಕೊಂಡ್ರು ಉಪಯೋಗವಾಗಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವೇ ಬರ ಪರಿಹಾರದ ಹಣ ನೀಡಲು ಮುಂದಾಗಿದ್ದು, ಇದೀಗ ಮೊದಲ ಕಂತಿನ 2ಸಾವಿರ ರೂಪಾಯಿ ಹಣವನ್ನ ಕೂಡ ರಾಜ್ಯ ಸರ್ಕಾರ ಈಗಾಗ್ಲೇ ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now

ಹೌದು 105 ಕೋಟಿ ರೂಪಾಯಿ ಬರ ಪರಿಹಾರದ ಹಣವನ್ನ ಸರ್ಕಾರ ಬಿಡುಗಡೆ ಮಾಡಿ ಮೊದಲ ಕಂತಿನಲ್ಲಿ ರಾಜ್ಯ ವಿಪತ್ತು ಮತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಬಿಡುಗಡೆ ಮಾಡಿ ಅರ್ಹರಿಗೆ ಅಂದ್ರೆ ಅರ್ಹ ರೈತರಿಗೆ ವಿತರಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಅದ್ರಂತೆ ಈಗ ಆ ಹಣವನ್ನ ಪಡೆಯಲು ಮತ್ತೊಂದು ಕೆಲಸವನ್ನ ಮಾಡೋದು ಅಗತ್ಯವಾಗಿದ್ದು, ಅದರ ಕುರಿತಂತೆ ರಾಜ್ಯ ಸರ್ಕಾರ ಒಂದು ಹೊಸ ಅಪ್ಡೇಟ್ಸ್ ಹೊರಡಿಸಿದೆ. ಈ ಒಂದು ಕೆಲಸವನ್ನ ತಪ್ಪದೇ ಮಾಡಿದ್ದಲ್ಲಿ ಮಾತ್ರ ಬರ ಪರಿಹಾರದ ಹಣ ಸಿಗಲಿದ್ಯಂತೆ. ಹಾಗಾದ್ರೆ ಆ ಕೆಲಸ ಏನು? ಯಾವಾಗ ಮಾಡಬೇಕು ಇದರ ಕುರಿತು ಸಂಪೂರ್ಣ ಮಾಹಿತಿಯನ್ನ ನೋಡೋಣ ಬನ್ನಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ವಿಶೇಷ ಮಾಹಿತಿ

ಹೌದು ರಾಜ್ಯದ ತೀವ್ರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಿರುವ ರಾಜ್ಯ ಸರಕಾರ, ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ನೀಡಲು ಎಸ್‍ಡಿಆರ್ ಎಫ್ ಅಡಿಯಲ್ಲಿ 105 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿತ್ತು. ಇನ್ನು ರಾಜ್ಯದಲ್ಲಿನ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಮೂರು ಹಂತದಲ್ಲಿ ಬರ ಪೀಡಿತ ಎಂದು ಘೋಷಣೆ ಮಾಡಿದ್ದು, ಪರಿಹಾರದ ಹಣವನ್ನ ಕೂಡ ಬಿಡುಗಡೆ ಮಾಡಿದೆ. ಹೀಗಾಗಿ ರಾಜ್ಯದ ರೈತರಿಗೆ ಬರ ಪರಿಹಾರ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಬೆಳೆ ನಷ್ಟಕ್ಕೆ ತಾತ್ಕಾಲಿಕ ಪರಿಹಾರವಾಗಿ ರಾಜ್ಯ ಸರ್ಕಾರದಿಂದ 2 ಸಾವಿರ ರೂಪಾಯಿಗಳನ್ನು ಒದಗಿಸಲಾಗಿದೆ. ಈ ಹಣವನ್ನ ಪಡೆಯಲು ಒಂದು ಕೆಲಸ ಅತ್ಯಗತ್ಯವಾಗಿ ಮಾಡಬೇಕು. ಹೌದು ಆಧಾರ್ ಲಿಂಕ್ ಮಾಡಿದ ನಂತರ ಪರಿಹಾರದ ಹಣ ರೈತರಿಗೆ ತಲುಪಲಿದೆ. ಆಧಾರ್ ಲಿಂಕ್ ಆಗದ ರೈತರು ತಕ್ಷಣ ಲಿಂಕ್ ಮಾಡಿಸಬೇಕು ಅಂತ ಖುದ್ದು ಸಿಎಂ ಸಿದ್ದರಾಮಯ್ಯ ಅವ್ರೆ ಸ್ಪಷ್ಟನೆ ಕೊಟ್ಟಿದ್ದಾರೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಹೌದು ರಾಜ್ಯದಲ್ಲಿ ತೀವ್ರ ಸ್ವರೂಪದ ಬರಗಾಲ ಇರೋದ್ರಿಂದ ಇದೀಗ ರಾಜ್ಯ ಸರ್ಕಾರ ಪರಿಹಾರ ನೀಡಲು ಮುಂದಾಗಿದ್ದು, ಆ ಪರಿಹಾರವನ್ನ ಪಡೆದುಕೊಳ್ಳಬೇಕು ಅಂದ್ರೆ ರಾಜ್ಯದ ಎಲ್ಲ ಅರ್ಹ ರೈತರು ತಮ್ಮ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಅನ್ನ ಲಿಂಕ್ ಮಾಡಿಸುವಂತೆ ಸೂಚಿಸಿದ್ದಾರೆ. ಹೌದು ಅರ್ಹ ಎಲ್ಲ ರೈತರಿಗೂ ಪರಿಹಾರದ ಮೊತ್ತ ಸಿಗಬೇಕು ಅನ್ನೋ ಉದ್ದೇಶದಿಂದ ಇದೀಗ ರಾಜ್ಯ ಸರ್ಕಾರ ಈ ಕ್ರಮವನ್ನ ಕೈಗೊಂಡಿದ್ದು, ಇದರಲ್ಲೂ ಅನರ್ಹರು ಬರ ಪರಿಹಾರದ ಮೊತ್ತವನ್ನ ಪಡೆಯುವ ಸಂಭವ ಹೆಚ್ಚಿಗೆ ಇರೋದ್ರಿಂದ ಈ ಒಂದು ಕೆಲ್ಸಕ್ಕೆ ಮುಂದಾಗಿದ್ದು. ಬರ ಪರಿಹಾರದ ಹಣಕ್ಕಾಗಿ ಅರ್ಜಿ ಸಲ್ಲಿಸಿರುವ ಅಷ್ಟು ಅರ್ಹ ರೈತರು ಇದೀಗ ತಮ್ಮ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡಿಸುವ ಮೂಲಕ ಪರಿಹಾರದ ಹಣವನ್ನ ಪಡೆಯುವಂತೆ ಸೂಚಿಸಿದೆ. ಯಾಕಂದ್ರೆ ಈಗಾಗ್ಲೇ ರಾಜ್ಯ ಸರ್ಕಾರ ಸಂಬಂಧ ಪಟ್ಟ ಇಲಾಖೆಗೆ 105ಕೋಟಿ ಹಣವನ್ನ ವರ್ಗಾವಣೆ ಮಾಡಿದ್ದು, ಈ ವಾರದ ಒಳಗೆ ಎಲ್ಲ ಅರ್ಹ ಫಲನುಭವಿಗಳ ಖಾತೆಗೆ ಬರ ಪರಿಹಾರದ ಹಣ ಜಮೆ ಆಗಲಿದೆ. ಈ ಹಣ ಎಲ್ಲ ಅರ್ಹರಿಗೂ ಬರಬೇಕು ಅಂದ್ರೆ ರೈತರು ಈ ಒಂದು ಕೆಲಸವನ್ನ ಮಾಡುವುದು ಕಡ್ಡಾಯ ಅಂತ ಹೇಳಲಾಗಿದೆ. ಅದಕ್ಕಾಗಿ ನೀವು ಯಾರಾದ್ರೂ ಬರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ರೆ ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿದ್ಯಾ ಅನ್ನೋದನ್ನ ಒಮ್ಮೆ ಪರಿಶೀಲಿಸಿ.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಆಹಾರವನ್ನು Whatsapp ಮೂಲಕ ಆರ್ಡರ್ ಮಾಡಿ ನೀವು ಕುಳಿತಿರುವಲ್ಲೇ ತರಿಸಿಕೊಳ್ಳಬಹುದು