ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ಟೂಲ್ ಗೇಟ್ ಗಳು ಇರುವುದು ಸಾಮಾನ್ಯ. ಟೂಲ್ ಗೇಟ್ ಗಳಿಗೆ ಒಬ್ಬೊಬ್ಬ ವಾಹನ ಸವಾರರ ಟೋಲ್ ಶುಲ್ಕ ನೀಡುತ್ತಾ ಇರುವಾಗ ಟ್ರಾಫಿಕ್ ಜಾಮ್ ಆಗುತ್ತದೆ. ಸಮಯ ಉಳಿಸಲು ಈಗ ಕಾರ್ ನಂಬರ್ ಗೆ ಬ್ಯಾಂಕ್ ಖಾತೆಗೆ ಅಥವಾ ಪ್ರಿಪೇಯ್ಡ್ ಕಾರ್ಡ್ ಗೆ ಕಾರಿನ ವಿಂಡ್‌ಸ್ಕ್ರೀನ್‌ಗೆ ಟ್ಯಾಗ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದರಿಂದ ವಾಹನ ಸವಾರರ ಸಮಯದ ಜೊತೆಗೆ ಟ್ರಾಫಿಕ್ ಜಾಮ್ ಸಹ ಕಡಿಮೆ ಆಗಲಿದೆ. ಈಗ ಫಾಸ್ಟ್ ಟ್ಯಾಗ್ ವ್ಯವಸ್ಥೆಗೆ ekyc ನವೀಕರಣ ಮಾಡಿಸಲು ಇಲಾಖೆ ನಿಯಮ ಜಾರಿ ಮಾಡಿದೆ. ekyc ಮಾಡಿಸಲು ಕೊನೆಯ ದಿನಾಂಕ ಜನವರಿ 31-2024. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಫಾಸ್ಟ್ ಟ್ಯಾಗ್ ಇಕೆವೈಸಿ ಚೆಕ್ ಮಾಡುವ ವಿಧಾನ ಹೇಗೆ?
- ಫಾಸ್ಟ್ ಟ್ಯಾಗ್ ಗೆ ನೀವು ನಮೂದಿಸಿದ ಮೊಬೈಲ್ ಸಂಖ್ಯೆಯನ್ನು ಹಾಗೂ password ಬಳಸಿ ಫಾಸ್ಟ್ ಟ್ಯಾಗ್ ವೆಬ್ಸೈಟ್ ಗೆ ಹೋಗಿ ನೀವು ಲಾಗ್ ಇನ್ ಆಗಬೇಕು.
- ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ಹಾಕಬೇಕು.
- ನಂತರ ಮೈ ಪ್ರೊಫೈಲ್ ಎಂಬ ಆಪ್ಷನ್ ಕ್ಲಿಕ್ ಮಾಡಿ ನಿಮ್ಮ ಇಕೆವೈಸಿ ಆಪ್ಷನ್ ಕ್ಲಿಕ್ ಮಾಡಿ.
- ನಂತರ ನಿಮ್ಮ ಇಕೆವೈಸಿ ಅಪ್ಡೇಟ್ ಬಗ್ಗೆ ತಿಳಿಯಬಹುದು. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
FASTag ಗಾಗಿ ನಿಮ್ಮ KYC ಅನ್ನು ನವೀಕರಿಸುವುದು ಹೇಗೆ?
- ಅಧಿಕೃತ FASTag ವೆಬ್‌ಸೈಟ್‌ಗೆ ಹೋಗಿ,
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಫೋನ್‌ಗೆ ಬರುವ OTP ಹಾಕಿ ಲಾಗಿನ್ ಮಾಡಬೇಕು.
- ಮುಖಪುಟದಲ್ಲಿ, “ನನ್ನ ಪ್ರೊಫೈಲ್” ಆಯ್ಕೆಗೆ ಹೋಗಿ ಮತ್ತು KYC ಟ್ಯಾಬ್ ಕ್ಲಿಕ್ ಮಾಡಿ.
- ಅಗತ್ಯವಿರುವ ಎಲ್ಲಾ ವಿವರಗಳನ್ನು( ಹೆಸರು ,ಆಧಾರ್ ಕಾರ್ಡ್, ನಿಮ್ಮ ವಯಸ್ಸು ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ ) ಹಾಕಿ.
- ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ
- ನಿಮ್ಮ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಹಾಕಿ.
- ಸುಬ್ಮಿಟ್ ಬಟನ್ ಕ್ಲಿಕ್ ಮಾಡಿ.
FASTag ಗೆ KYC ಮಾಡಲು ಬೇಕಾಗಿರುವ ದಾಖಲೆಗಳು :-
- ವಾಹನ ನೋಂದಣಿ ಪ್ರಮಾಣಪತ್ರ.
- ಗುರುತಿನ ಪುರಾವೆ( ನಿಮ್ಮ ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್ ಇತ್ಯಾದಿ)
- ವಿಳಾಸ ಪುರಾವೆ ( ಆಧಾರ್ ಕಾರ್ಡ್ ,ಓಟರ್ ಕಾರ್ಡ್).
- ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ.
ಫಾಸ್ಟ್ ಟ್ಯಾಗ್ ವ್ಯವಸ್ಥೆಯ ಲಾಭಗಳು :-
-
ಫಾಸ್ಟ್ಯಾಗ್ ವ್ಯವಸ್ಥೆಯಿಂದ ಟೋಲ್ ಗೇಟ್ ಗಳಲ್ಲಿ ನಿಮ್ಮ ವಾಹನದ ವೇಗವನ್ನು ಕಡಿಮೆ ಮಾಡಿ ನೀವು ಟೋಲ್ ಗೇಟ್‌ಗಳಲ್ಲಿ ಟೋಲ್ ಕಟ್ಟಬೇಕು ಎಂದು ಬೇಸರ ಪಡುವ ಅಗತ್ಯ ವಿಲ್ಲ ಗಿಲ್ ಗೇಟ್ ನಲ್ಲಿ ನಿಲ್ಲಿಸದೆಯೇ ನಿಮ್ಮ ಟೋಲ್ ನಿಮ್ಮ ಅಕೌಂಟ್ ನಿಂದ ಹಣ ಕಡಿತವಾಗುತ್ತದೆ. ಹಣ ಕಟ್ಟಾದ ಬಗ್ಗೆ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತದೆ.
- ಟೋಲ್ ಗೇಟ್ ನಲ್ಲಿ ಹಣ ಒಬ್ಬೊಬ್ಬರು ನೀಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಇದನ್ನು ತಡೆಗಟ್ಟಲು ಫಾಸ್ಟ್ ಟ್ಯಾಗ್ ವ್ಯವಸ್ಥೆ ಬಹಳ ಅನುಕೂಲ.
- ಹಣ ನೀಡಲು ಚಿಲ್ಲರೆ ಇಲ್ಲ ಎಂಬ ಟೆನ್ಶನ್ ಇಲ್ಲ. ಅಥವಾ ಪಾವತಿಯ ಹಣ ನೀಡಿ ಚಿಲ್ಲರೆ ಹಣಕ್ಕಾಗಿ ಕಾಯುವ ಅಗತ್ಯವಿಲ್ಲ.
- ಕಾಗದ ಮತ್ತು ಇಂಧನ ಉಳಿಯುವ ಈ ವ್ಯವಸ್ಥೆಯಿಂದ ವಾಯುಮಾಲಿನ್ಯ ಕಡಿಮೆ ಆಗಲಿದೆ.
- ಒಮ್ಮೆ ನೋಂದಣಿ ಮಾಡಿದ ನಂತರ 5ವರ್ಷಗಳ ಮಾನ್ಯತೆ ಹೊಂದಿದೆ. ಇದರಿಂದ 5ವರ್ಷಗಳ ಧೀರ್ಘ ಅವಧಿಯವರೆಗೆ ಯಾವುದೇ ಅಡೆತಡೆ ಇಲ್ಲದೆ ನೀವು ಟೂಲ್ ಪಾವತಿ ಮಾಡಬಹುದು.
ಇದನ್ನೂ ಓದಿ: ಹೋಂಡಾ ಡಿಯೊದ ವಿನ್ಯಾಸ ಮತ್ತು ಶಕ್ತಿಯುತ ಎಂಜಿನ್ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಜನ, ಪೂರ್ತಿ ಮಾಹಿತಿಯನ್ನು ಪಡೆಯಿರಿ
ಇದನ್ನೂ ಓದಿ: 6 ಲಕ್ಷದ ಘಟಕದೊಂದಿಗೆ ನೆಕ್ಸನ್ ಹೊಸ ವೈಶಿಷ್ಟ್ಯಗಳನ್ನು ಕೇಳಿದರೆ ಆಶ್ಚರ್ಯಗೊಳ್ಳುತ್ತೀರ!