ಇಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ; ಈ ರೀತಿ ರಿಸಲ್ಟ್ ಚೆಕ್ ಮಾಡಿ

First PUC result

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಇಂದು ಫಲಿತಾಂಶ ಪ್ರಕಟ ಆಗಲಿದೆ. ವಿದ್ಯಾರ್ಥಿಗಳು ಮೊಬೈಲ್ ಮೂಲಕವೇ ಫಲಿತಾಂಶ ವೀಕ್ಷಣೆ ಮಾಡಬಹುದು. ಹಾಗೂ ಇದರ ಜೊತೆಗೆ ಕಾಲೇಜ್ ನಲ್ಲಿ ಸಹ ನೋಟಿಸ್ ಬೋರ್ಡ್ ನಲ್ಲಿ ಫಲಿತಾಂಶ ಪ್ರಕಟ ಆಗಲಿದೆ. ಫಲಿತಾಂಶ ಯಾವ ಸಮಯಕ್ಕೆ ಬರುತ್ತದೆ ಮತ್ತು ಆನ್ಲೈನ್ ನಲ್ಲಿ ಫಲಿತಾಂಶ ನೋಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

2023-24 ರ ಪ್ರಥಮ ಪಿಯುಸಿ ಫಲಿತಾಂಶದ ಬಿಡುಗಡೆಯ ಸಮಯ ಯಾವುದು?: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (KSEAB) ಬಿಡುಗಡೆ ಮಾಡುವ 2023-24ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು website ನಲ್ಲಿ ಬೆಳಿಗ್ಗೆ 9 ರಿಂದ 11 ರವರೆಗೆ ವೀಕ್ಷಣೆ ಮಾಡಬಹುದು.

ಫಲಿತಾಂಶವನ್ನು ವೆಬ್ಸೈಟ್ ನಲ್ಲಿ ಹೇಗೆ ನೋಡುವುದು?

  • ಮೊದಲು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://karresults.nic.in/
  • ನಂತರ ನಿಮ್ಮ ರೋಲ್ ನಂಬರ್ ನಮೂದಿಸಿ.
  • ಫಲಿತಾಂಶವನ್ನು ವೀಕ್ಷಿಸಿ.

ಕಾಲೇಜ್ ನಲ್ಲಿಯೂ ಫಲಿತಾಂಶ ತಿಳಿಯುವ ಸಮಯ :- ಮೊಬೈಲ್ ಅಥವಾ ಲ್ಯಾಪ್ಟಾಪ್ ಇಲ್ಲದ ಮಕ್ಕಳಿಗೆ ಇಂದು 9 ಗಂಟೆಯ ನಂತರ ನಿಮ್ಮ ಕಾಲೇಜೆ ನ ನೋಟಿಸ್ ಬೋರ್ಡ್ ನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. ನೀವು ನಿಮ್ಮ ಕಾಲೇಜ್ ಗೆ ಹೋಗಿ ನಿಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 9,000 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು :-

ಪ್ರಥಮ ಪಿಯುಸಿ ಫಲಿತಾಂಶ ನೋಡಿದ ನಂತರ ನಿಮಗೆ ಹೆಚ್ಚಿನ ಅಂಕ ಬರಬೇಕು ಎಂಬ ನಂಬಿಕೆ ಇದ್ದರೆ ಅಥವಾ ನಾನು ಪಾಸ್ ಆಗುತ್ತಿದೆ ಈಗ ಫೇಲ್ ಆದೇ ಎಂದು ನೀವು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಪಿಯುಸಿ ಬೋರ್ಡ್ ಇಂದು ಫಲಿತಾಂಶ ಬಿಡುಗಡೆ ಮಾಡಿದ ನಂತರ ಅಥವಾ ಮುಂದಿನ ದಿನಗಳಲ್ಲಿ ಮರುಮೌಲ್ಯಮಾಪನದ ವಿವರಗಳನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಿದೆ. ಇಲ್ಲವಾದರೆ ನಿಮ್ಮ ಕಾಲೇಜ್ ನಲ್ಲಿ ಮರುಮೌಲ್ಯಮಾಪನದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ.

ಫಲಿತಾಂಶ ಬಿಡುಗಡೆ ಆದ ಬಳಿಕ ನಿಮಗೆ ಕಡಿಮೆ ಅಂಕ ಬಂತು ಎಂದು ಬೇಸರ ಪಡದೇ ಮುಂದೆ ಚೆನ್ನಾಗಿ ಓದಿ ಹೆಚ್ಚಿನ ಅಂಕ ಗಳಿಸುವ ಬಗ್ಗೆ ಗಮನ ಹರಿಸಿ. ನೀವು ಅಕಸ್ಮಾತ್ ಫೇಲ್ ಆಗಿದ್ದರೆ ನಿಮಗೆ ಮತ್ತೆ ಮರು ಪರೀಕ್ಷೆ ನಡೆಸಲಾಗುವುದು. ಅಲ್ಲಿ ನೀವು ಚೆನ್ನಾಗಿ ಪರೀಕ್ಷೆ ಬರೆದು ಪಾಸ್ ಆಗಬಹುದು. ಮರು ಪರೀಕ್ಷೆಯ ಬಗ್ಗೆ ಮುಂದಿನ ದಿನಗಳಲ್ಲಿ ವೆಬ್ಸೈಟ್ ನಲ್ಲಿ ಮಾಹಿತಿ ನೀಡಲಾಗುವುದು.

ಇದನ್ನೂ ಓದಿ: ಈ ಕಾರ್ಡ್ ಇದ್ರೆ ಸಾಕು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಿಲೆಂಡರ್ ಸಿಗಲಿದೆ. 

ಇದನ್ನೂ ಓದಿ: 500 ರೂಪಾಯಿಯನ್ನು ಹೂಡಿಕೆ ಮಾಡಿ 1 ಲಕ್ಷ ರಿಟರ್ನ್ ಅನ್ನು ಪಡೆಯಿರಿ, ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ