ಮೊದಲ ಬಾರಿಗೆ ಮತದಾನ ಮಾಡುತ್ತಿದ್ದರೆ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ

First Time Voters

ಇನ್ನೇನು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಾವಿದ್ದೇವೆ. ದೇಶದ ಪ್ರಧಾನಿ ಅಭ್ಯರ್ಥಿಯ ಅರಿಸುವ ಜವಾಬ್ದಾರಿ ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನ ಮೇಲಿದೆ. ದೇಶದ ಮುಂದಿನ ಪ್ರಗತಿಗೆ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಈಗಾಗಲೇ ಮತದಾನ ಮಾಡಿರುವವರಿಗೆ ಯಾರಿಗೆ ಓಟ್ ಹಾಕಬೇಕು ಎಂಬ ಯೋಚನೆ ಆದರೆ ಮೊದಲ ಬಾರಿಗೆ ಮತದಾನ ಮಾಡುವವರಿಗೆ ಮತದಾನ ಹೇಗೆ ಮಾಡಬೇಕು ಹಾಗೂ ಮತದಾನ ಮಾಡುವಾಗ ಮತಗಟ್ಟೆಗೆ ಏನೇನು ಕೊಂಡೊಯ್ಯಬೇಕು ಎಂಬ ಯೋಚನೆ ಇರುತ್ತದೆ. ಹೊಸದಾಗಿ ಮತದಾನ ಮಾಡುವವರು ಒಂದಿಷ್ಟು ಅಂಶಗಳನ್ನು ನೆನೆಪಿಟ್ಟುಕೊಳ್ಳಬೇಕು. ಅವುಗಳ ಬಗ್ಗೆ ಸಂಪುರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಮತದಾನ ಮಾಡಲು ಕನಿಷ್ಠ ವಯಸ್ಸು :- ಭಾರತದ ಸಂವಿಧಾನದ ನಿಯಮದ ಪ್ರಕಾರ ಭಾರತದಲ್ಲಿ ಯಾವುದೇ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಚುನಾವಣಾ ಆಯೋಗದಿಂದ ನೀಡುವ ವೋಟರ್ ಕಾರ್ಡ್ ಪಡೆಯಲು ಕನಿಷ್ಠ 18ವರ್ಷ ವಯಸ್ಸಾಗಿರಬೇಕು. 

ಮತದಾನಕ್ಕೆ ತೆರಳುವ ಮೊದಲು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು :-

1) ಮತದಾನ ಪಟ್ಟಿಯಲ್ಲಿ ಹೆಸರು ಸೇರ್ಪಡೆ :- ನಿಮ್ಮ ಹೆಸರು ನಿಮ್ಮ ಕ್ಷೇತ್ರದ ಮತದಾನ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಣಿ ಆಗಿದೆಯೇ ಎಂಬುದರ ಬಗ್ಗೆ ನಿಮ್ಮ ಚುನಾವಣಾ ಅಧಿಕಾರಿಗಳ ಬಳಿ ಕೇಳಿ ತಿಳಿದುಕೊಳ್ಳುವುದು ಉತ್ತಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

2) ಮತದಾನ ಪ್ರಕ್ರಿಯೆ ಬಗ್ಗೆ ಮಾಹಿತಿ :- ನೀವು ಮೊದಲ ಬಾರಿಗೆ ಮತದಾನ ಮಾಡುತ್ತಾ ಇದ್ದಲ್ಲಿ ನಿಮ್ಮ ಬುತ್ ಯಾವುದು ನೀವು ಮತದಾನಕ್ಕೆ ಹೋಗುವಾಗ ಯಾವ ಯಾವ ಗುರುತಿನ ಚೀಟಿಗಳು ಅವಶ್ಯವಾಗಿ ಕೊಂಡೊಯ್ಯಬೇಕು ಎಂಬ ಮಾಹಿತಿಗಳನ್ನು ಅರಿತು ಮತದಾನಕ್ಕೆ ಹೋಗಬೇಕು.

3) ನಿಮ್ಮ ಕ್ಷೇತ್ರದಲ್ಲಿ ಇರುವ ಅಭ್ಯರ್ಥಿಗಳ ವಿವರ: ನಿಮ್ಮ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಯಾವ ಅಭ್ಯರ್ಥಿ ಸೂಕ್ತ ವ್ಯಕ್ತಿ ಎಂಬ ಬಗ್ಗೆ ತಿಳಿದವರಿಂದ ನಿಮ್ಮ ಮನೆಯ ಹಿರಿಯ ಸದಸ್ಯರಿಂದ ಮಾಹಿತಿಯನ್ನು ಕೇಳಿ ಪಡೆಯುವುದು ಸೂಕ್ತ.

4) ಸುಳ್ಳು ಮಾಹಿತಿಗಳಿಂದ ದೂರ ಇರಿ :- ಮತಗಟ್ಟೆಯಲ್ಲಿ ಅಥವಾ ಮತದಾನ ಮಾಡುವ ಪ್ರಕ್ರಿಯೆಯ ಬಗ್ಗೆ ಸುಳ್ಳು ಮಾಹಿತಿಗಳನ್ನು ಯಾರಾದರೂ ನೀಡಬಹುದು ಅದರ ಬಗ್ಗೆ ಅರಿತು ಮುಂದುವರೆಯಿರಿ. ಚುನಾವಣಾ ಆಯೋಗ ಅಥವಾ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ನೋಡಿದ ಮಾಹಿತಿಯನ್ನು ಮಾತ್ರ ನಂಬಿ.

5) ಮತದಾರರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿ :- ನಿಮ್ಮ ನೆರೆ ಹೊರೆಯ ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನೀವು ಮಾಡ್ಬೇಕು.ಯಾಕೆ ಎಂದರೆ ಒಂದು ಮತವು ಒಬ್ಬ ನಿಷ್ಠಾವಂತ ಅಭ್ಯರ್ಥಿಯ ಸೋಲಿಗೆ ಕಾರಣ ಆಗಬಹುದು.

6) ಗುರುತಿನ ಚೀಟಿ ತೆಗೆದುಕೊಂಡು ಹೋಗಿ :- ಮತದಾನಕ್ಕೆ ತೆರಳುವಾಗ ನಿಮ್ಮ ವೋಟರ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ ಅಂತಹ ಯಾವುದೇ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು.

7) ಸಾಲಾಗಿ ಹೋಗಿ :- ಮತದಾನ ಮಾಡಲು ತೆರಳುವಾಗ ನೂಕು ನುಗ್ಗಲು ಮಾಡದೆಯೇ ಸರತಿ ಸಾಲಿನಲ್ಲಿ ಮೌನವಾಗಿ ತೆರಳಿ ಮತದಾನ ಮಾಡಬೇಕು. ಮತದಾನ ನಡೆಯುವ ಸ್ಥಳದಲ್ಲಿ ಯಾವುದೇ ಅಹಿತ ಕರ ಘಟನೆ ನಡೆಯದಂತೆ ಎಚ್ಚರಿಗೆ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ.

8) ಮೊಬೈಲ್ ತೆಗೆದುಕೊಂಡು ಹೋಗಬಾರದು :- ಮತದಾನಕ್ಕೆ ತೆರಳುವಾಗ ನಿಮ್ಮ ಮೊಬೈಲ್ ಫೋನ್ ಮನೆಯಲ್ಲೇ ಇಟ್ಟು ಹೋಗಿ ಹಾಗೂ ಮೊಬೈಲ್ ತೆಗೆದುಕೊಂಡು ಹೋದರು ಸಹ ಯಾವುದೇ ಫೋಟೋ ವಿಡಿಯೋ ಮಾಡುವಂತೆ ಇಲ್ಲ. ನೀವು ಫೋಟೋ ತೆಗೆಯುವಾಗ ಸಿಕ್ಕಿ ಬಿದ್ದಲ್ಲಿ ನಿಮಗೆ ಶಿಕ್ಷೆ ನೀಡುವ ಸಾಧ್ಯತೆ ಇರುತ್ತದೆ.

9) ಇವಿಎಂ ಮಾಹಿತಿ ತಿಳಿಯಿರಿ :- ಇವಿಎಂ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಮತದಾನ ಸ್ಥಳಕ್ಕೆ ತೆರಬೇಕು.

ಇದನ್ನೂ ಓದಿ: 5000 mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿರುವ IQOO Z9 5G ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್.