Fish Farming in Cage: ಪಂಜರದಲ್ಲಿ ಮೀನು ಬೆಳೆಸುವುದು ಇದೇನಿದು ಅಂತ ಆಶ್ಚರ್ಯವಾಗುತ್ತಿದೆಯೇ? ಒಂದು ಪಂಜರದಲ್ಲಿ ಸುಮಾರು ಒಂದು ಟನ್ ಗಳಷ್ಟು ಮೀನನ್ನು ಬೆಳಸುವ ಮೂಲಕ ನೀವು ವಾರ್ಷಿಕವಾಗಿ ಉತ್ತಮ ಆದಾಯವನ್ನು ಪಡೆಯಬಹುದು. ಇದಕ್ಕೆ ಹೆಚ್ಚು ಖರ್ಚಿನ ಧಾತು ಇರುವುದಿಲ್ಲ. ಕಸದಿಂದ ರಸವನ್ನು ಉತ್ಪಾದನೆ ಮಾಡಬಹುದು, ಅಂದರೆ ಸ್ನೇಹಿತರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು (annual income)ಗಳಿಸಬಹುದು. ಈಗಾಗಲೇ ಉತ್ತರ ಕನ್ನಡದ ಕುಮಟಾದ ಹೊನ್ನಾವರದಲ್ಲಿ ಶರಾವತಿ ಮತ್ತು ಅಗನಾಶಿನಿಯಲ್ಲಿ ಈಗಾಗಲೇ ಮೀನುಗಾರರು ಈ ಕಸುಬನ್ನು ಆರಂಭಿಸಿದ್ದಾರೆ. ಒಳ್ಳೆಯ ಆದಾಯವನ್ನು ಕೂಡ ಪಡೆಯುತ್ತಿದ್ದಾರೆ. ಸಾಕಷ್ಟು ಅಭಿವೃದ್ಧಿಯನ್ನು ಹೊಂದುತ್ತಿರುವ ಈ ಉದ್ಯಮ ಕಳೆದ ಮೂರರಿಂದ ನಾಲ್ಕು ವರ್ಷದಿಂದ ನಡೆಯುತ್ತಿದೆ.
ಈ ಮೀನುಗಳಿಗೆ ಹೊರ ರಾಜ್ಯದಲ್ಲಿ ಭಾರಿ ಬೇಡಿಕೆ ಇದೆ. ಇದಕ್ಕಿಂತ ನೀವು ಹೆಚ್ಚು ಖರ್ಚು ಮಾಡಬೇಕಿಲ್ಲ ಈಗಾಗಲೇ ಕೇಂದ್ರ ಸರ್ಕಾರದಿಂದ ಆಯೋಜಿತವಾಗಿರುವ ಮುದ್ರಾ ಯೋಜನೆಯ ಅಡಿಯಲ್ಲಿ ನೀವು ಸಾಲವನ್ನು ಪಡೆದುಕೊಂಡು ಈ ಕೆಲಸವನ್ನ ಶುರು ಮಾಡಬಹುದಾಗಿದೆ. ಇದಕ್ಕೆ ತಗಲುವ ಖರ್ಚು ವೆಚ್ಚವು ಕೂಡ ಕಡಿಮೆ ಇದೆ. ನೀವು ಸುಮಾರು ವರ್ಷಕ್ಕೆ ಒಂದು ಟನ್ಗಳಷ್ಟೂ ಮೀನನ್ನ ಉತ್ಪಾದನೆ ಮಾಡಿ ಅವರ ರಾಜ್ಯಗಳಿಗೆ ಮಾರಾಟ ಮಾಡಬಹುದು. ಗೋವಾದಲ್ಲಿ ಈ ಮೀನುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಇದಕ್ಕೆ ನೀವು ಆಹಾರವನ್ನು ಬೇರೆಯಾಗಿ ತಂದು ಕೊಡಬೇಕಾಗಿಲ್ಲ. ಸತ್ತ ಚಿಕ್ಕ ಚಿಕ್ಕ ಮೀನುಗಳನ್ನೇ ಈ ಮೀನುಗಳಿಗೆ ಆಹಾರವಾಗಿ ಕೊಟ್ಟು ಖರ್ಚು ವೆಚ್ಚಗಳನ್ನು ನೀವು ಉಳಿಸಬಹುದಾಗಿದೆ. ಕುಮಟಾ ಹಾಗೂ ಹೊನ್ನಾವರದಲ್ಲಿ ಈಗಾಗಲೇ ನಡೆಯುತ್ತಿದ್ದು ಒಬ್ಬರು ಮೂರರಿಂದ ನಾಲ್ಕು ಪಂಜರದಲ್ಲಿ ಮೀನು ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಹಾಗೂ ವಾರ್ಷಿಕವಾಗಿ ಉತ್ತಮ ಆದಾಯವನ್ನು ಕೂಡ ಪಡೆಯುತ್ತಿದ್ದಾರೆ. ಇನ್ನು ಕೆಲವರು ಪಾರ್ಟ್ನರ್ ಶಿಪ್ ಮೂಲಕ ಈ ಕೆಲಸವನ್ನು ನಡೆಸುತ್ತಿದ್ದು, ಮೀನುಗಳು ಕನಿಷ್ಠ ಒಂದು ವರ್ಷದವರೆಗೂ ಕೂಡ ಸಾಕಲ್ಪಡುತ್ತದೆ. ಕುರುಡಿ ಮೀನು ಎಂಬ ಹೆಸರನ್ನು ನೀವು ಕೇಳಿರಬೇಕಲ್ಲವೇ? ಈ ಒಂದು ಮೀನು ಬೆಳೆದಾಗ ಮೂರರಿಂದ ನಾಲ್ಕು ಕೆಜಿ ಎಷ್ಟು ತೂಕ ಬರುತ್ತದೆ. ಒಂದು ಮೀನಿಗೆ 300 ರಿಂದ 400 ರೂಪಾಯಿಗಳವರೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: ಇಂದಿನ ತರಕಾರಿಗಳ ದರ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಹಸಿರುಮೆಣಸಿಕಾಯಿ ಬೆಲೆ ಎಷ್ಟಿದೆ ಗೊತ್ತಾ?
ಪಂಜರದಲ್ಲಿ ಮೀನು ಸಾಕುವ ಪ್ರಕ್ರಿಯೆ ( Fish Farming Process in Cage )
ಹೊಳೆ ಬದಿಯಲ್ಲಿ ಒಂದು ಕಬ್ಬಿಣದ ಪಂಜರವನ್ನು ಇಡಬೇಕು. ಅದರ ಮೇಲಿಂದ ಒಂದು ಬಲೆಯನ್ನು(net) ಹಾಕಬೇಕು. ಆ ಪಂಜರದಲ್ಲಿ ಮೀನಿನ ಮರಿಗಳನ್ನು ಇಟ್ಟು ಅದಕ್ಕೆ ನಿತ್ಯವೂ ಕೂಡ ಆಹಾರವನ್ನು ಹಾಕಬೇಕು ಆಹಾರ ಅಂದರೆ ಮತ್ತೇನು ಅಲ್ಲ ಸತ್ತ ಚಿಕ್ಕ ಚಿಕ್ಕ ಮೀನಿನ ಮರಿಗಳನ್ನೇ ದೊಡ್ಡ ಮೀನುಗಳಿಗೆ ಆಹಾರವಾಗಿ ಕೊಡಬೇಕು ಇದರಿಂದ ತಗಲುವ ಖರ್ಚು ವೆಚ್ಚ ಕೂಡ ಕಮ್ಮಿಯಾಗುತ್ತದೆ. ಹದಿನೈದು ದಿನಗಳಿಗೊಮ್ಮೆ ಮೀನಿನ ಗಾತ್ರದ ಆಧಾರದ ಮೇಲೆ ಮೀನುಗಳನ್ನು ಬೇರ್ಪಡಿಸಿ ಇಡಬೇಕು. ಇಲ್ಲದೆ ಹೋದರೆ ಚಿಕ್ಕ ಮೀನುಗಳನ್ನು ದೊಡ್ಡ ಮೀನು ತಿಂದುಬಿಡುತ್ತದೆ. ಇದರಲ್ಲಿ ನೀವು ಒಂದು ಎಚ್ಚರಿಕೆಯನ್ನು ವಹಿಸುವುದು ಅವಶ್ಯಕತೆ ಇದೆ. ಹೊಳೆಯ ನೀರು ಏರಿಳಿತವಾದ ಹಾಗೆ ಪಂಜರವು ಕೂಡ ನೀರಿನಲ್ಲಿ ಅಲುಗಾಡಲು ಪ್ರಾರಂಭವಾಗುತ್ತದೆ. ಇದರ ಬಗ್ಗೆ ನೀವು ಸ್ವಲ್ಪ ಎಚ್ಚರಿಕೆಯನ್ನು ವಹಿಸುವುದು ಸೂಕ್ತವಾಗಿದೆ. ಪಂಜರದಲ್ಲಿ ಇರುವ ಮೊಟ್ಟೆಗಳು ನದಿಯ ನೀರಿಗೆ ಸೇರಿದ ಸಾಧ್ಯತೆ ಇರುತ್ತದೆ ಆದ್ದರಿಂದ ಆದಷ್ಟು ಎಚ್ಚರಿಕೆಯನ್ನು ವಹಿಸಿ ಇದನ್ನು ಕೂಡ ಗಮನಿಸುವುದು ಮುಖ್ಯವಾಗಿದೆ.
ಕೇಂದ್ರ ಸರ್ಕಾರದಿಂದ ಸಿಗುವ ಮುದ್ರಾ ಸಾಲದ ಯೋಜನೆಯ ಉಪಯೋಗಿಸಿಕೊಂಡು ನೀವು ಈ ಕೃಷಿಯನ್ನು ಪ್ರಾರಂಭಿಸಬಹುದು. ಕಡಿಮೆ ಶ್ರಮದೊಂದಿಗೆ ಹೆಚ್ಚು ವಾರ್ಷಿಕ ಆದಾಯವನ್ನು ಕೂಡ ಗಳಿಸಬಹುದಾಗಿದೆ. ಇದರಿಂದ ಒಂದು ಉಪಯೋಗವೇನೆಂದರೆ ತೆರಿಗೆ ಇಲಾಖೆಗೆ ನೀವು ಆದಾಯವನ್ನು ಕಟ್ಟುವಂತಿಲ್ಲ. ಆದ್ದರಿಂದ ಇದು ಒಂದು ಉತ್ತಮವಾದ ಸರಳವಾದ ಕೃಷಿ ಅಂತಾನೆ ಹೇಳಬಹುದು. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.
ಇದನ್ನೂ ಓದಿ: ಅಕ್ಕಿ ಹಣ ನಿಮಗೆ ಬಂದಿಲ್ಲ ಅಂತಂದ್ರೆ ಹೀಗೆ ಮಾಡಿ. ಖಂಡಿತವಾಗಲೂ ನಿಮಗೆ ಹಣವನ್ನ ಪಡೆಯಲು ಸಹಾಯವಾಗುತ್ತೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram