ಚುನಾವಣೆ ಬಿಸಿ ಹೆಚ್ಚಾದಾಗಿಂದ ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು ತಿದ್ದುಪಡಿ ಮಾಡಿಸಬೇಕು ಅನ್ನೋರಿಗೆ ಸಾಕಷ್ಟು ತಲೆಬಿಸಿ ಶುರುವಾಗಿದೆ ಹೋಗಿತ್ತು. ಹೌದು ಸಾಕಷ್ಟು ಜನರು ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬೇಕು ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಬೇಕು ಎಂದು ಸಾಕಷ್ಟು ದಿನಗಳಿಂದ ಕಾಯುತ್ತಿದ್ದೀರು, ಹಾಗೂ ಈ ವಿಚಾರದಲ್ಲಿ ಸರ್ಕಾರಕ್ಕೂ ಸಹ ಬಹಳಷ್ಟು ಬಾರಿ ಬೇಡಿಕೆಯನ್ನು ನೀಡಿದ್ದಾರೆ. ಈಗ ಕರ್ನಾಟಕ ಸರ್ಕಾರವು ಈ ವಿಷಯವಾಗಿ ಕ್ರಮವನ್ನು ತೆಗೆದುಕೊಂಡಿದ್ದು ಕರ್ನಾಟಕದ ಜನರಿಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅವಕಾಶ ಮಾಡಿಕೊಟ್ಟಿದೆ. ಹೌದು ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಕೆ ದಿನಾಂಕ ಯಾವುದು? ಹೊಸ BPL ಅಥವಾ APL ಕಾರ್ಡಿಗೆ ಅರ್ಜಿ ಸಲ್ಲಿಸುವುದು ಹೇಗೆ? ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವಾಗ ಬೇಕಾಗಿರುವ ದಾಖಲಾತಿಗಳೇನು? ಹಾಗೂ ಹೊಸ ರೇಷನ್ ಕಾರ್ಡ್ ಅಥವಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಸರ್ಕಾರ ಯಾವಾಗ ಅವಕಾಶ ಮಾಡಿಕೊಟ್ಟಿದೆ ಹಾಗೂ ಯಾವ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಸರ್ಕಾರ ನೀಡಿರುವ ಕಾಲಾವಕಾಶ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನೋಡ್ತಾ ಹೋಗೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೌದು ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು 29/11/2023 ರಿಂದ 30/11/2023 ರ ವರೆಗೆ ಕಾಲಾವಕಾಶವನ್ನು ನೀಡಿತ್ತು. ಸ್ನೇಹಿತರೆ ಸರ್ಕಾರವು ಕೇವಲ ಎರಡು ದಿನಗಳ ಕಾಲಾವಕಾಶ ನೀಡಿತ್ತು, ನೀವು ಯಾವ ರೀತಿಯ ತಿದ್ದುಪಡಿ ಮಾಡಲು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆವರೆಗೂ ಸಮಯಾವಕಾಶ ನೀಡಿತ್ತು. ನೀವು ತಿದ್ದುಪಡಿಗೆ ಅರ್ಜಿಯನ್ನು ನಿಮ್ಮ ಹತ್ತಿರದ ಸೈಬರ್ಗಳಲ್ಲಿ ಅಥವಾ ಸರ್ಕಾರಿ ಇಲಾಖೆಗಳಲ್ಲಿ ಸಲ್ಲಿಸಬಹುದು ಅಂತ ಹೇಳಿತ್ತು. ಇದೀಗ ಹೊಸ ರೇಷನ್ ಕಾರ್ಡ್ ಅಥವಾ ಹೊಸ APL ಹಾಗೂ BPL ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕೆಂದರೆ ಸರ್ಕಾರ ನಿಮಗೆ 3/12/2023 ರಂದು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.
ಸರ್ಕಾರ ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಅವಕಾಶ ನೀಡಿದ್ದು ಅರ್ಜಿ ಸಲ್ಲಿಸಲು ಇಚ್ಛಿಸುವವರು ಕೇವಲ ಆ ದಿನ ಮಾತ್ರ ಅರ್ಜಿ ಸಲ್ಲಿಸಬಹುದು. ಅದೇ ರೀತಿ ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಡಿ.3ರಂದು ಒಂದು ದಿನ ಮಾತ್ರ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಕರ್ನಾಟಕ ಒನ್ ಹಾಗೂ ಗ್ರಾಮ ಒನ್‌ಗಳಲ್ಲಿಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ಒನ್ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಗ್ರಾಮ ಒನ್ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇವುಗಳನ್ನು ಹೊರತುಪಡಿಸಿ ಬೇರೆ ಇನ್ಯಾವುದೇ ಆನ್‌ಲೈನ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಯಾವುವು?
- ಇನ್ನು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದ್ರೆ ಮುಖ್ಯವಾಗಿ, ವಾಸವಿರುವ ನಗರಸಭೆ/ಪುರಸಭೆ/ನಗರ ಪಾಲಿಕೆಯ ವಾರ್ಡ್ ಸಂಖ್ಯೆ, ಗ್ರಾಮದ ಹೆಸರು.
- ಮನೆಯ ವಿದ್ಯುತ್ ಬಿಲ್.
- ನಿವಾಸದ ಪೂರ್ಣ ವಿಳಾಸ.
- ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರ.
- ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಗುರುತು, ಕುಟುಂಬದ ಸದಸ್ಯರ ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ.
- ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
- ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
- ಸಂಪರ್ಕದ ಮೊಬೈಲ್ ನಂಬರ್.
ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ, ನಿಮ್ಮ ಕುಟುಂಬದ ಅಡುಗೆ ಅನಿಲ ಸಂಪರ್ಕದ ವಿವರ ಅಂದ್ರೆ ಇತ್ತೀಚಿನ ಎಲ್.ಪಿ.ಜಿ. ಬಿಲ್ ಪ್ರತಿ ಇಷ್ಟೆಲ್ಲ ಬೇಕಾಗುತ್ತೆ. ಅಲ್ದೇ ಸ್ನೇಹಿತರೆ ನೀವೇನಾದರೂ APL ಕಾರ್ಡಿಗೆ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇರಬೇಕು ಹಾಗೂ ಅರ್ಜಿ ಸಲ್ಲಿಸಿದ ಕೂಡಲೇ ನಿಮಗೆ APL ಕಾರ್ಡ್ ಜನರೇಟ್ ಆಗುತ್ತದೆ. ಹಾಗೂ ನಿಮ್ಮ ಬಳಿ ಸೊಸೈಟಿ ಐಡಿ ಇರಬೇಕು ಮತ್ತೆ ನಿಮ್ಮ ಅಡ್ರೆಸ್ ಪ್ರೂಫ್ ಅಂದರೆ ನಿಮ್ಮ ಆಧಾರ್ ಕಾರ್ಡಿನಲ್ಲಿ ವಿಳಾಸ ಸರಿಯಾಗಿ ಇರಬೇಕು. ಈ ದಾಖಲೆಗಳು ಇದ್ದರೆ ಸಾಕು.
ನಿಮಗೆ ಏನು ಸಮಸ್ಯೆ ಇಲ್ಲದೆ APL ಕಾರ್ಡ್ ಅರ್ಜಿ ಸಲ್ಲಿಸಿದ ಕೂಡಲೇ ಜನರೇಟ್ ಆಗುತ್ತದೆ. ಒಂದು ವೇಳೆ ನೀವು BPL ಕಾರ್ಡಿಗೆ ಅರ್ಜಿ ಸಲ್ಲಿಸುತ್ತಿದ್ದರೆ ನೀವು ಈ ಎಲ್ಲಾ ದಾಖಲೆಗಳನ್ನು ಹೊಂದಿರಲೇಬೇಕು. ಆ ದಾಖಲೆಗಳೇನೆಂದರೆ ನಿಮ್ಮ ಬಳಿ ಕ್ಯಾಸ್ಟ್ ಸರ್ಟಿಫಿಕೇಟ್, ಇನ್ಕಮ್ ಸರ್ಟಿಫಿಕೇಟ್ ಹಾಗೂ ಆಧಾರ್ ಕಾರ್ಡ್ ಇರಬೇಕು. ಈ ಎಲ್ಲ ದಾಖಲೆಗಳು ಸರಿಯಾಗಿ ಚಾಲ್ತಿಯಲ್ಲಿರಬೇಕು ಹಾಗೂ ಎಕ್ಸ್ಪೈರ್ ಆಗಿರಬಾರದು ಇದನ್ನ ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸೋದು ಒಳ್ಳೆಯದು. ಸಾಧ್ಯವಾದಷ್ಟು ಎಲ್ಲಾ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಸಂಬಂಧಪಟ್ಟ ಕೇಂದ್ರಗಳಿಗೆ ಹೋಗಿ.
ಇದನ್ನೂ ಓದಿ: ರೈತರಿಗೆ ಮೊದಲ ಕಂತಿನ ಮೂಲಕ 2000 ರೂಪಾಯಿಯ ನೆರವನ್ನು ಬೆಳೆ ಪರಿಹಾರವಾಗಿ ಘೋಷಿಸಿದ ರಾಜ್ಯ ಸರ್ಕಾರ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram