ಉಚಿತ ಪ್ರಯಾಣಕ್ಕೂ ಟಿಕೆಟ್ ತಗೊಳ್ಳೆಬೇಕು! ಉಚಿತ ಬಸ್ ಪ್ರಯಾಣದ ಟಿಕೆಟ್ ಹೀಗಿರುತ್ತೆ ನೋಡಿ

ಕಾಂಗ್ರೆಸ್ ಪಕ್ಷ​ ಚುನಾವಣಾ ಪ್ರಣಾಳಿಕೆ ಘೋಷಣೆ ಮಾಡ್ತಿದ್ದಂತೆ ರಾಜ್ಯದ ಮಹಿಳೆಯರಂತು ಫುಲ್ ಫಿಧಾ ಆಗಿದ್ರು. ಕಾರಣ ಅದರಲ್ಲಿ ಮೂರು ಯೋಜನೆಗಳು ಎಲ್ಲ ಮಹಿಳೆಯರ ಗಮನ ಸೆಳೆದಿತ್ತು. ಹೌದು ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2ಸಾವಿರ ರೂಪಾಯಿ ಹಣ ಹಾಗುವುದು ಹಾಗೂ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಫುಲ್ ಸೌಂಡ್ ಮಾಡಿದ್ವು. ಹೀಗಾಗಿಯೇ ಮಹಿಳೆಯರು ಯಾರ ಮಾತು ಕೇಳದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ರು ಅನ್ನೋ ಟಾಕ್ ಕೂಡ ಸಖತ್ ವೈರಲ್ ಆಗಿತ್ತು. ಇದೀಗ ಕಾಂಗ್ರೆಸ್ ಪಕ್ಷ ಅಂದುಕೊಂಡಂತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು,ಅಧಿಕಾರಕ್ಕೆ ಬಂದ ಕೂಡಲೇ ಚುನಾವಣೆಗೂ ಮುನ್ನ ಘೋಷಿಸಿದ್ದ ಶಕ್ತಿ ಯೋಜನೆಯನ್ನು ಜಾರಿಗೆ ತರಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಕಲ್ಪಿಸುವುದು ಈ ಶಕ್ತಿ ಯೋಜನೆಯ ಉದ್ದೇಶವಾಗಿದೆ. ಹೀಗಾಗಿ ಉಚಿತ ಪ್ರಯಾಣದ ವೇಳೆ ಮಹಿಳೆರಿಗೆ ಟಿಕೆಟ್​ ಕೊಡುತ್ತಾರಾ? ಅಥವಾ ಯಾವುದಾದರೂ ದಾಖಲೆ ತೆಗೆದುಕೊಂಡು ಹೋಗಬೇಕಾ ಎಂಬ ಗೊಂದಲ ಮಹಿಳೆಯರಲ್ಲಿತ್ತು. ಆದರೆ, ಆ ಗೊಂದಲಕ್ಕೆ ಈಗ ತೆರೆಬಿದ್ದಿದೆ. ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಬಸ್​ನಲ್ಲಿ ಟಿಕೆಟ್ ಪಡೆಯುವ ಗೋಜಿಲ್ಲ ಅಂತ ಮಹಿಳೆಯರು ಅಂದುಕೊಳ್ಳಬೇಡಿ. ಏಕೆಂದರೆ, ಕಂಡಕ್ಟರ್​ ಮಹಿಳೆಯರಿಗೂ ಟಿಕೆಟ್ ಕೊಡುತ್ತಾರೆ. ಹಾಗಾದ್ರೆ ಏನಿದು ಹೊಸ ರೂಲ್ಸ್ ಟಿಕೆಟ್ ಯಾಕೆ ತಗೋಬೇಕು, ಹಣ ಕೊಡೋದ್ರಲ್ಲಿ ವಿನಾಯಿತಿ ಇದ್ಯಾ ಅಥವಾ ಸಂಪೂರ್ಣವಾಗಿ ಬಸ್ ಪ್ರಯಾಣ ಉಚಿತವಾಗಿರುತ್ತ ನೋಡೋಣ ಬನ್ನಿ.

WhatsApp Group Join Now
Telegram Group Join Now

ಉಚಿತ ಬಸ್ ಪ್ರಯಾಣಕ್ಕೆ ಕಂಡಿಷನ್ಸ್ ಏನು?

ಹೌದು ಇಡಿ ರಾಜ್ಯದ್ಯಂತ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅನುಕೂಲವಾಗುವಂತೆ ಶಕ್ತಿ ಯೋಜನೆಯನ್ನ ಇದೆ ಜೂನ್​ 11ರಂದು ಜಾರಿಗೆ ತರಲು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಹೌದು ಜೂನ್ 11ರಿಂದ ಈ ಯೋಜನೆ ಜಾರಿಗೆ ಬರಲಿದೆ. ಜೂನ್ 11ರಂದು ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂದಿನಿಂದ ಮಹಿಳೆಯರು ರಾಜ್ಯದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಈ ಒಂದು ಶಕ್ತಿ ಯೋಜನೆಗೂ ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ. ಅದೇನಂದ್ರೆ ಶಕ್ತಿ ಯೋಜನೆಯಡಿಯಲ್ಲಿ ಉಚಿತವಾದ ಈ ಬಸ್ ಸೇವೆ ನಮ್ಮ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅಲ್ಲದೇ ನಮ್ಮ ರಾಜ್ಯದ ಒಳಗೆ ಮಾತ್ರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಜೊತೆಗೆ ಎಕ್ಸ್‌ಪ್ರೆಸ್ ಬಸ್​ನಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಜೊತೆಗೆ ಬಿಎಂಟಿಸಿ ಮತ್ತು ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಅವಕಾಶ ಇದೆ. ಆದರೆ ಎಸಿ ಮತ್ತು ಐಷಾರಾಮಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರೋದಿಲ್ಲ, ಜೊತೆಗೆ ರಾಜಹಂಸ ಬಸ್​ನಲ್ಲಿಯೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಅಂತರ್ ರಾಜ್ಯ ಪ್ರಯಾಣಕ್ಕೆ ಉಚಿತ ಸೌಲಭ್ಯ ಇರುವುದಿಲ್ಲ.ಇದು ಕೇವಲ ನಮ್ಮ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯವಾಗಲಿದೆ. ಅಂದ್ರೆ ನಮ್ಮ ರಾಜ್ಯದ ಮಹಿಳೆಯರು ಮಾತ್ರ ಶಕ್ತಿ ಯೋಜನೆಗೆ ಅರ್ಹರು.. ಇಷ್ಟೆಲ್ಲ ಮಾನದಂಡವಿರುವ ಶಕ್ತಿ ಯೋಜನೆಗೆ ಬಸ್ ಟಿಕೆಟ್ ಕೊಡ್ತಾರಾ ಅಥವಾ ದಾಖಲೆಗಳಿದ್ರೆ ಸಾಕ ಅನ್ನುವ ಪ್ರಶ್ನೆ ಇದೀಗ ಉತ್ತರವು ಕೂಡ ಸಿಕ್ಕಿದೆ.

ಇದನ್ನೂ ಓದಿ: ಮುರಿದು ಬಿದ್ದ ಮದುವೆ ಬಗ್ಗೆ ನಟಿ ವೈಷ್ಣವಿ ಹೇಳಿದ್ದೇನು ಗೊತ್ತಾ? ಆಗೋದೆಲ್ಲ ಒಳ್ಳೆದಕ್ಕೆ, ನಾನು ಮುಂದೆ ಚೆನ್ನಾಗಿರುತ್ತೇನೆ

ಫ್ರೀ ಟಿಕೆಟ್ ಹೇಗಿದೆ ನೋಡಿ

ಹೌದು ರಾಜ್ಯದ ಮಹಿಳೆಯರು ಗಮನಿಸಬೇಕಾದಂತಹ ವಿಷಯ ಅದೇನಂದ್ರೆ ಸಿದ್ದು ಸರ್ಕಾರ ನಮಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ನಾವು ಬೇರೇನೂ ಮಾಡುವಂತಿಲ್ಲ ಅಂದುಕೊಳ್ಳಬೇಡಿ. ಹಾಗಾದ್ರೆ ಉಚಿತ ಪ್ರಯಾಣದ ವೇಳೆ ಮಹಿಳೆರಿಗೆ ಟಿಕೆಟ್​ ಕೊಡುತ್ತಾರಾ? ಅಥವಾ ಯಾವುದಾದರೂ ದಾಖಲೆ ತೆಗೆದುಕೊಂಡು ಹೋಗಬೇಕಾ ಎಂಬ ಗೊಂದಲ ನಿಮಗೆಲ್ಲ ಇದ್ದೆ ಇರುತ್ತೆ. ಆದರೆ, ಆ ಗೊಂದಲಕ್ಕೆ ಈಗ ತೆರೆಬಿದ್ದಿದೆ. ಹೌದು ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಬಸ್​ನಲ್ಲಿ ಟಿಕೆಟ್ ಪಡೆಯುವ ಗೋಜಿಲ್ಲ ಅಂತ ಮಹಿಳೆಯರು ಅಂದುಕೊಳ್ಳಬೇಡಿ. ಏಕೆಂದರೆ, ಕಂಡಕ್ಟರ್​ ಮಹಿಳೆಯರಿಗೂ ಟಿಕೆಟ್ ಕೊಡುತ್ತಾರೆ. ಹೌದು ಉಚಿತ ಪ್ರಯಾಣಕ್ಕೂ ಕೂಡ ನೀವು ಟಿಕೆಟ್​ ಪಡೆಯಲೇಬೇಕು. ಇದು ಕೂಡ ಒಂದು ರೀತಿಯ ಷರತ್ತು ಅಂತಲೇ ಹೇಳಬಹುದು. ಇನ್ನು ಈಗಾಗಲೇ ಯೋಜನೆ ಜಾರಿಗೂ ಮೊದಲು ನಾಲ್ಕು ನಿಗಮಗಳಲ್ಲೂ ಇದಕ್ಕಾಗಿ ಭಾರೀ ತಯಾರಿ ಕೂಡ ನಡೆಯುತ್ತಿದೆ. ಶಕ್ತಿ ಯೋಜನೆಯ ಹೊಸ ಟಿಕೆಟ್ ಈಗ ರಚನೆಯಾಗಿದ್ದು ಎಲ್ಲ ಕಡೆ ವೈರಲ್ ಆಗ್ತಿದೆ. ಹೌದು ಟಿಕೆಟ್​ ಮೇಲೆ ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ ಅಂತ ಬರೆದಿರುತ್ತಾರೆ ಮತ್ತು ಟಿಕೆಟ್​ನಲ್ಲಿ ಯಾವುದೇ ಬೆಲೆ ನಮೂದಾಗುವುದಿಲ್ಲ.ಹಾಗಂತ ನೀವು ಟಿಕೆಟ್ ಪಡೆಯದೇ ಇದ್ರೂ ನಡೆಯುತ್ತೆ ಅಂದುಕೊಂಡ್ರೆ ದಂಡ ಕಟ್ಟಬೇಕಾಗುತ್ತೆ. ಹೀಗಾಗಿ ಮಾಮೂಲಿಯಂತೆ ಕಂಡಕ್ಟರ್​ ಬಳಿ ಟಿಕೆಟ್​ ಪಡೆದುಕೊಳ್ಳಬೇಕು. ಆದರೆ, ಇಲ್ಲಿ ಸಣ್ಣ ಬದಲಾವಣೆ ಇದೆ. ಏನೆಂದರೆ ಮೊದಲೆಲ್ಲ ಹಣ ಕೊಡ್ತಿದ್ರಿ ಇವಾಗ ಹಣ ಕೊಡುವಂತಿಲ್ಲ ಅಷ್ಟೇ.

ಇದನ್ನೂ ಓದಿ: ಯುವನಿಧಿ ಯೋಜನೆ ಜಾರಿಗೆ ಅಧಿಕೃತ ಆದೇಶ – ಯಾರ್ಯಾರು ಅರ್ಹರು? ಯಾರಿಗೆಲ್ಲ ಅನ್ವಯವಾಗುತ್ತೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram