8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತೆ ಪುನರಾರಂಭ ಮಾಡುತ್ತಾ

Free Cycle Scheme for Students in Karnataka

ಉಚಿತ ಶಿಕ್ಷಣ ಮತ್ತು ಉಚಿತವಾಗಿ ಯೂನಿಫಾರ್ಮ್ ನೀಡುವ ಜೊತೆಗೆ ಮಕ್ಕಳಿಗೆ ಉಚಿತವಾಗಿ ಮಧ್ಯಾನ್ಹದ ಊಟವನ್ನು ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ನೀಡುತ್ತಿದೆ ಸರ್ಕಾರ. ಈ ಹಿಂದೆ ರಾಜ್ಯ ಸರ್ಕಾರವು 8 ತರಗತಿಯ ಹಿಂದುಳಿದ ಮಕ್ಕಳಿಗೆ ಉಚಿತ ಸೈಕಲ್ ನೀಡುತ್ತಿತ್ತು. ನಂತರ ಇದನ್ನು ಎಲ್ಲಾ ವರ್ಗದ ಮಕ್ಕಳಿಗೂ ನೀಡಬೇಕು ಎಂದು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿತ್ತು . ಹಲವು ಕಾರಣಗಳಿಂದ ಈ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿತ್ತು. ಈಗ ಮತ್ತೆ ಈ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತರುವ ಸಾಧ್ಯತೆ ಹೆಚ್ಚಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಸೈಕಲ್ ಭಾಗ್ಯ ಬಜೆಟ್ ನಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ.

2024 ರ ರಾಜ್ಯ ಬಜೆಟ್ ನಲ್ಲಿ ರಾಜ್ಯದ ಜನರ ಹಿತಕ್ಕೆ ಹಲವಾರು ಹೊಸ ಯೋಜನೆಗಳು ಜಾರಿ ಆಗುವ ಸಾಧ್ಯತೆಗಳು ಇವೆ. ಶಿಕ್ಷಣ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ವಿನಂತಿ ಪತ್ರ ನೀಡಿದ್ದು. ಅದರಲ್ಲಿ ಮಕ್ಕಳಿಗೆ ಉಚಿತ ಸೈಕಲ್ ಜೊತೆಗೆ ಶೂ, ರಾಗಿ ಮಾಲ್ಟ್ ಮೊಟ್ಟೆ ನೀಡಬೇಕು ಎಂದು ವಿನಂತಿಸಲಾಗಿದೆ. ಈ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಸಿದ್ಧರಾಮಯ್ಯ ನವರು ನೀಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವ ವಿಧ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಈ ಎಲ್ಲಾ ಯೋಜನೆಗಳು ಜಾರಿ ಆಗುವ ಸಾಧ್ಯತೆ ಇದೆ. ಶಿಕ್ಷಣ ಇಲಾಖೆ ಮಾಡಿರುವ ಎಲ್ಲಾ ಮನವಿಯನ್ನು ಜಾರಿಗೊಳಿಸಲು 320 ಕೋಟಿಯ ಅನುದಾನದ ಅಗತ್ಯ ಇದೆ ಎಂದು ಸರ್ಕಾರ ತಿಳಿಸಿದೆ. ಫೆಬ್ರುವರಿ 16 ರಂದು ರಾಜ್ಯ ಸರ್ಕಾರದ ಬಜೆಟ್ ಇರುವುದರಿಂದ ಅಲ್ಲಿ ಈ ಯೋಜನೆ ಜಾರಿ ಆಗುವ ಸಾಧ್ಯತೆ ಹೆಚ್ಚಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈಗಾಗಲೇ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಧು ಬಂಗಾರಪ್ಪ ಅವರು 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಿಸುವ ಯೋಜನೆಯನ್ನು ಮತ್ತೆ ಆರಂಭಿಸುವ ಬಗ್ಗೆ ಮುಂದಿನ ಬಜೆಟ್‌ನಲ್ಲಿ ಘೋಷಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸೈಕಲ್ ಭಾಗ್ಯ ಯೋಜನೆಯನ್ನು ಮತ್ತೆ ಆರಂಭಿಸುವುದರಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು ಎಂದು ತಿಳಿಸಿದರು.

ಇದನ್ನೂ ಓದಿ: ನೀವು ಪಿಯುಸಿಯನ್ನು ಮುಗಿಸಿದ್ದೀರಾ? ಶಿವಮೊಗ್ಗ ಜಿಲ್ಲೆ ಗ್ರಾಮ ಪಂಚಾಯಿತಿ ಗಳಲ್ಲಿ ನೇಮಕಾತಿ

2,320 PT teacher ನೇಮಕ ಮಾಡಿಕೊಳ್ಳಲಾಗುವುದು- ಮಧು ಬಂಗಾರಪ್ಪ:-

ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲ್ ಗಳಲ್ಲಿ 2,320 PT teacher ಹುದ್ದೆಗಳು ಖಾಲಿ ಇವೆ ಅದನ್ನು ಭರ್ತಿ ಮಾಡುವ ಕಾರ್ಯ ನಡೆಸಲಾಗುತ್ತದೆ. 41,913 ಕನ್ನಡ ಶಾಲೆಗಳಲ್ಲಿ 6,772 ದೈಹಿಕ ಶಿಕ್ಷಕ ಹುದ್ದೆಯು ಮಂಜೂರಾಗಿದೆ ಈಗಾಗಲೇ 4,127 ಹುದ್ದೆಗಳಿಗೆ ಶಿಕ್ಷಕರ ನೇಮಕ ಆಗಿದೆ ಎಂದು ತಿಳಿಸಿದರು. ಹಾಗೆಯೇ 4,844 ಹೈಸ್ಕೂಲ್ ಗಳಲ್ಲಿ 5,210 ದೈಹಿಕ ಶಿಕ್ಷಕರ ಹುದ್ದೆಯು ಈಗಾಗಲೇ ಮಂಜೂರಿ ಆಗಿದೆ. 3,589 ಮಂದಿ ಶಿಕ್ಷಕರು ಈಗಾಗಲೇ ಕೆಲಸ ಮಾಡುತ್ತಾ ಇದ್ದಾರೆ.

ದೈಹಿಕ ಚಟುವಟಿಕೆ ಮಕ್ಕಳ ಕಲಿಕೆಗೆ ಬಹಳ ಮುಖ್ಯ ಆಗುತ್ತದೆ. ಕಲಿಕೆಯಲ್ಲಿ ಆಸಕ್ತಿ ಬರಲು ಪಠ್ಯೇತರ ಚಟುವಟಿಕೆಗೆ ಬಹಳ ಮುಖ್ಯವಾಗುತ್ತದೆ. ಈ ಕಾರಣದಿಂದ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 2,120 ದೈಹಿಕ ಟೀಚರ್ ಮತ್ತು 200 high school ಟೀಚರ್ ಗಳ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರ ಬಗ್ಗೆ ಈಗಾಗಲೇ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಆರ್ಥಿಕ ಇಲಾಖೆಯು ಅನುಮತಿ ನೀಡಿದ ನಂತರ ಉಳಿದ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಇದನ್ನೂ ಓದಿ: ಭಾರತ್ ಬ್ರಾಂಡ್ ಅಕ್ಕಿಯ ಬೆಲೆ ಕೇವಲ 29 ರೂಪಾಯಿ.. ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ಅಕ್ಕಿ ಆನ್ಲೈನ್ ನಲ್ಲಿ ಸಹ ಸಿಗಲಿದೆ