ಮಹಿಳಾ ಸಬಲೀಕರಣಕ್ಕೆ ಕೇಂದ್ರದಿಂದ ಮತ್ತೊಂದು ಹೆಜ್ಜೆ; ಯಾರಿಗೆಲ್ಲ ಉಚಿತ ಸಿಲಿಂಡರ್ ಸಿಗುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣದ ಉದ್ದೇಶದಿಂದ ಉಚಿತ ಎಲ್.ಪಿ.ಜಿ ವಿತರಣೆ ಮಾಡಲಾಗುತ್ತದೆ. ಉಜ್ವಲ್ ಯೋಜನೆಯಡಿ ಮೂರನೇ ಹಂತದ ಎಲ್.ಪಿ.ಜಿ ಸಂಪರ್ಕ ಪಡೆಯುವ ಗ್ರಾಹಕರಿಗೆ ಎರಡು ಬರ್ನರ್ ಸ್ಟೌವ್, 14.2 ಕೆ.ಜಿ ಸಿಲಿಂಡರ್ ಮತ್ತು ಎರಡು 5 ಕೆ.ಜಿ ಸಿಲಿಂಡರ್, ಒಂದು ರೆಗ್ಯುಲೇಟರ್, ಒಂದು ಸುರಕ್ಷಾ ಹೋಸ್, ಡಿ.ಜಿ.ಸಿ.ಸಿ ಬುಕ್‍ಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಇನ್ನು ಇದುವರೆಗೂ ಎಲ್.ಪಿ.ಜಿ(LPG) ಅನಿಲ ಸಂಪರ್ಕಗಳನ್ನು ಹೊಂದಿರದ ಕುಟುಂಬದ ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಎಲ್.ಪಿ.ಜಿ ವಿತರಕ ಕಂಪನಿಗೆ ಭೇಟಿ ನೀಡಿ ಸೌಲಭ್ಯವನ್ನು ಪಡೆಯಬಹುದು ಮತ್ತು ಕ್ಯೂ.ಆರ್.ಕೋಡ್ ಮೂಲಕ ಯೋಜನೆ ಮಾಹಿತಿ ಪಡೆಯಬಹುದಾಗಿದೆ.

WhatsApp Group Join Now
Telegram Group Join Now

ಇನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ(PM Ujjwala Scheme) ಲಾಭ ಪಡೆಯಲು ಎಲ್‌ಪಿಜಿ ವಿತರಣಾ ಏಜೆನ್ಸಿಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಆಫ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ ಅರ್ಜಿದಾರರು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://www.pmuy.gov.in ಗೆ ಹೋಗಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಈ ಫಾರ್ಮ್ ಅನ್ನು ಹತ್ತಿರದ ಎಲ್‌ಪಿಜಿ ಕೇಂದ್ರದಲ್ಲಿ ಸಲ್ಲಿಸಬೇಕು. ಜೊತೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್‌ ಸಂಪರ್ಕ ಒದಗಿಸುವ ಗುರಿ ಹೊಂದಾಲಾಗಿತ್ತು. ಇದೀಗ ಈ ಯೋಜನೆಯನ್ನು ಮತ್ತೆ ವಿಸ್ತರಿಸಲಾಗಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ಕೇವಲ 27 ನಿಮಿಷದ ಚಾರ್ಜ್ ಗೆ 720 ಮೈಲೇಜ್ ಕೊಡುವ ಭರ್ಜರಿ ಬೇಡಿಕೆಯೊಂದಿಗೆ ಹೊಸ ಕಿಯಾ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಮಿಂಚಲಿದೆ. 

ಎಲ್. ಪಿ. ಜಿ. ಸಿಲಿಂಡರ್ ಉಚಿತವಾಗಿ ನೀಡಲಿದ ಕೇಂದ್ರ

ಇನ್ನು ಉಜ್ವಲ 2.0(Ujjwala 2.0) ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ಸುಮಾರು 1 ಕೋಟಿ ಗ್ಯಾಸ್ ಸಂಪರ್ಕಗಳನ್ನು ಬಡವರಿಗೆ ಉಚಿತ ರೀಫಿಲ್ ಮತ್ತು ಸ್ಟೌವ್ ಜೊತೆಗೆ ವಿತರಿಸುತ್ತದೆ. ಈ ವರ್ಷದ ವಾರ್ಷಿಕ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರಲ್ಲಿ 1 ಕೋಟಿ ಹೊಸ ಫಲಾನುಭವಿಗಳಿಗೆ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು. ಇನ್ನು ಈ ಯೋಜನೆಯಡಿ 8 ಕೋಟಿ ಫಲಾನುಭವಿಗಳು ಈಗಾಗಲೇ ಪ್ರಯೋಜನ ಪಡೆದಿದ್ದಾರೆ. ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬಗಳ ಮಹಿಳಾ ಸಬಲೀಕರಣದ ಉದ್ದೇಶದಿಂದ ಉಚಿತ ಎಲ್.ಪಿ.ಜಿ ವಿತರಣೆ ಮಾಡಲಾಗುತ್ತದೆ.

ಇನ್ನು ಈ ಒಂದು ಯೋಜನೆಯ ಲಾಭ ಪಡೆಯಲು ಬಯಸುವ, ಅರ್ಜಿದಾರರು ಮಹಿಳೆಯೇ ಆಗಿರಬೇಕು ಮಹಿಳೆಯ ವಯಸ್ಸು 18ಕ್ಕಿಂತ ಹೆಚ್ಚಿರಬೇಕು, ಬಿಪಿಎಲ್ ಕುಟುಂಬದವರಾಗಿರಬೇಕು ಬಿಪಿಎಲ್ ಕಾರ್ಡ್(BPL Card) ಮತ್ತು ರೇಷನ್ ಕಾರ್ಡ್(Ration Card) ಹೊಂದಿರಬೇಕು. ಅಲ್ದೇ ಅರ್ಜಿದಾರರ ಕುಟುಂಬದ ಯಾವೊಬ್ಬ ಸದಸ್ಯರ ಹೆಸರಿನಲ್ಲಿಯೂ ಎಲ್‌ಪಿಜಿ ಕನೆಕ್ಷನ್ ಇರಬಾರದು. ಇದರ ಜೊತೆಗೆ ಪಿಎಂಯುವೈ ಉಜ್ವಲ 2.0 ಯೋಜನೆಯ ಸೌಲಭ್ಯ ಪಡೆಯಲು ಕೆಲವು ಪ್ರಮುಖ ದಾಖಲೆಗಳ ಅಗತ್ಯವಿದೆ. ಆಧಾರ್‌ ಕಾರ್ಡ್‌, ಪಡಿತರ ಚೀಟಿ, ವಿಳಾಸದ ಪುರಾವೆ ಹಾಗೂ ಬ್ಯಾಂಕ್‌ ಪಾಸ್‌ಪುಸ್ತಕದ ಪ್ರತಿಯನ್ನು ಸಲ್ಲಿಸಬೇಕು. ಆದರೆ, ವಲಸಿಗರು ಈ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿ ಅಥವಾ ವಿಳಾಸ ಪುರಾವೆ ಸಲ್ಲಿಸುವ ಅಗತ್ಯವಿಲ್ಲ. ಇವರು ಕುಟುಂಬ ಮತ್ತು ವಿಳಾಸದ ಪುರಾವೆಯನ್ನು ಸ್ವಯಂ ಘೋಷಣೆ ಮಾಡಿಕೊಳ್ಳಬಹುದು ಅಂತ ಕೂಡ ತಿಳಿಸಿದೆ.

ಮಹಿಳೆಯ ಆರೋಗ್ಯ ದೃಷ್ಟಿಯಿಂದ ಹಾಗೂ ಅವರನ್ನು ಹೊಗೆಯಿಂದ ದೂರ ಇಡುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಯಿತು. ಹೆಚ್ಚಾಗಿ ಮಹಿಳೆಯರು ಸೌದೆ ಉಪಯೋಗಿಸುವುದರಿಂದ ಅರಣ್ಯ ಸಂರಕ್ಷಣೆಯ ದೃಷ್ಟಿಯಲ್ಲಿ ಈ ಯೋಜನೆ ಸಹಾಯಕಾರಿಯಾಗಿದೆ. ಇನ್ನು ಶುದ್ಧ ಪರಿಸರ ಹಾಗೂ ಮಹಿಳೆಯರನ್ನು ಉಸಿರಾಟದ ತೊಂದರೆಯಿಂದ ಮುಕ್ತರಾಗಿಸಲು ಈ ಯೋಜನೆ ಸಹಾಯಕಾರಿಗಲಿದೆ. ಗ್ರಾಮೀಣ ಪ್ರದೇಶ ಹಾಗೂ ಬಡವರ್ಗದ ಹೆಣ್ಣು ಮಕ್ಕಳಿಗೆ ಉಚಿತ ಸಿಲೆಂಡರ್ ನೀಡುವುದರ ಮೂಲಕ ಕೆಲಸಗಳನ್ನು ಸುಲಭಗೊಳಿಸುತ್ತದೆ.

ಈ ಯೋಜನೆಯ ಲಾಭ ಪಡೆಯಲು ಬಯಸುವವರು ಅಂದ್ರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯಲು ಎಲ್‌ಪಿಜಿ ವಿತರಣಾ ಏಜೆನ್ಸಿಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಆಫ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ ಅರ್ಜಿದಾರರು ಅಧಿಕೃತ ವೆಬ್‌ಸೈಟ್ pmujjwalayojana.com ಗೆ ಹೋಗಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಈ ಫಾರ್ಮ್ ಅನ್ನು ಹತ್ತಿರದ ಎಲ್‌ಪಿಜಿ ಕೇಂದ್ರದಲ್ಲಿ ಸಲ್ಲಿಸಬೇಕು.

ಇದನ್ನೂ ಓದಿ: ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಬರಲಿದೆ ಹಣ; 15ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram