ವಿದ್ಯಾರ್ಥಿ ಜೀವನದಲ್ಲಿ ಕಾಲೇಜ್ ಫೀಸ್ ಗಿಂತ ಹಾಸ್ಟೆಲ್ ಫೀಸ್ ಜಾಸ್ತಿ ಇರುತ್ತದೆ. ಸಾಮಾನ್ಯ ಮತ್ತು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಫೀಸ್ ಹೊರೆ ಆಗುತ್ತದೆ. ಅದೇ ಕಾರಣದಿಂದ ಎಷ್ಟೋ ಜನರು ಓದುವ ಕನಸನ್ನು ಕೈ ಬಿಡುತ್ತಾರೆ. ಆದರೆ ಉಚಿತವಾಗಿ ಬಡ ವರ್ಗದವರಿಗೆ ಉಚಿತ ಹಾಸ್ಟೆಲ್ ಲಭ್ಯ ವಿದೆ. ಹೆಚ್ಚಿನ ಮಾಹಿತಿ ತಿಳಿಯಲಿ ಈ ಲೇಖನವನ್ನು ಓದಿ.
ಉಚಿತ ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಮಾಹಿತಿ?: ಬೆಂಗಳೂರಿನ ವೀರಶೈವ ಅಭಿವೃದ್ದಿ ಸಂಸ್ಥೆಯಲ್ಲಿ ವೀರಶೈವ ಬಡ ವಿದ್ಯಾರ್ಥಿಗಳಿಗೆ ಎಂದೇ ಉಚಿತವಾಗಿ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಂಸ್ಥೆ ತಿಳಿಸಿದೆ.
ಉಚಿತ ಹಾಸ್ಟೆಲ್ ಗೆ ಪ್ರವೇಶ ಆರಂಭ ಆಗಿದೆ ;- ವೀರಶೈವ ಅಭಿವೃದ್ದಿ ಸಂಸ್ಥೆಯಲ್ಲಿ ಉಚಿತ ಹಾಸ್ಟೆಲ್ ಪಡೆಯಲು ಈಗಾಗಲೇ ಅರ್ಜಿ ಆಹ್ವಾನ ಮಾಡಿದ್ದು ಪ್ರವೇಶ ಆರಂಭ ಆಗಿದೆ. ಪಿಯುಸಿ, ಡಿಪ್ಲೊಮಾ ಅಥವಾ ಯಾವುದೇ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಬಗ್ಗೆ ಮಾಹಿತಿ:-
ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ನಡೆಸುವ ನಾಗರಭಾವಿಯ ಎಂ.ಬಸವಯ್ಯ ಕಾಲೇಜಿನಲ್ಲಿ ವೀರಶೈವ ಧರ್ಮದ ಪಿಯುಸಿ ಕಾಮರ್ಸ್ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಹಾಗೂ ಬೇರೆ ಯಾವುದೇ ಸಂಸ್ಥೆಯಲ್ಲಿ ಡಿಪ್ಲೊಮಾ, ಪದವಿ ತರಗತಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಇದೆ ಬರುವ ಮೇ 31 2024 ರ ಒಳಗೆ ಅರ್ಜಿ ಪಡೆದುದೊಂದು ಜೂನ್ 5 2024 ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ವೈದ್ಯಕೀಯ ಅಥವಾ ತಾಂತ್ರಿಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ 5 ವರ್ಷದ ಎಲ್‌ಎಲ್‌ಬಿ ಹಾಗೂ ನರ್ಸಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಜೂನ್ 30 2024 ರ ಒಳಗಾಗಿ ಅರ್ಜಿ ಪಡೆದುಕೊಂಡು ಜುಲೈ 05 2024 ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿಯನ್ನು ಪಡೆಯುವುದು ಹೇಗೆ?: ಉಚಿತ ಹಾಸ್ಟೆಲ್ ಗೆ ನೀವು ಅರ್ಜಿಯನ್ನು ಪಡೆಯಲು ಕಾರ್ಯದರ್ಶಿಗಳು, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಎಸ್‌ಜೆಎಂ ಟವರ್ಸ್, ನಂ.18/1, ಕಲ್ಯಾಣ ಸಮುಚ್ಚಯ, 2ನೇ ಮಹಡಿ, 6ನೇ ಅಡ್ಡರಸ್ತೆ, ಗಾಂಧಿನಗರ, ಬೆಂಗಳೂರು ಈ ವಿಳಾಸಕ್ಕೆ ಭೇಟಿ ನೀಡಿ ಅರ್ಜಿಯನ್ನು ಪಡೆಯಬಹುದು.
ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿದೆ ಉಚಿತ ಹಾಸ್ಟೆಲ್ ವ್ಯವಸ್ಥೆ :- ಉಚಿತ ಹಾಸ್ಟೆಲ್ ವ್ಯವಸ್ಥೆಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಅನುಕೂಲ ಆಗಲಿದೆ. ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಲಿದೆ. ಬೆಂಗಳೂರಿನಲ್ಲಿ ಯಾವುದೇ ಹಾಸ್ಟೆಲ್ ಗೆ 5,000 ದಿಂದ 10,000 ದ ವರೆಗೆ ಹಾಸ್ಟೆಲ್ ಫೀಸ್ ಇರುತ್ತದೆ. ದೂರದ ಊರಿನಿಂದ ಬರುವ ಆರ್ಥಿಕವಾಗಿ ಹಿಂದುಳಿದ ವೀರಶೈವ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಸಂಸ್ಥೆ ನೀಡಿರುವ ಫಿಸಿಲಿಟಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬಹುದು. ಬೆಂಗಳೂರಿನ ಮಹಾನಗರದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಇದು ಅನುಕೂಲ ಆಗುತ್ತದೆ ಜೊತೆಗೆ ಶಿಕ್ಷಣದಿಂದ ವಂಚಿತರಾಗುವುದು ತಪ್ಪುತ್ತದೆ.
ಹೆಚ್ಚಿನ ಮಾಹಿತಿ ಪಡೆಯಲು ನೀವು ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಕಚೇರಿಗೆ ನೇರವಾಗಿ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ಸತತ ಪರಿಶ್ರಮದಿಂದ IFS ನಲ್ಲಿ ರಾಷ್ಟ್ರಕ್ಕೆ 7 ನೇ ಸ್ಥಾನಗಳಿಸಿದ ಕನ್ನಡತಿ ವೈ.ಎಸ್.ಕಾವ್ಯ.
ಇದನ್ನೂ ಓದಿ: ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಭಾರಿ ಬದಲಾವಣೆ! ಹೊಸ ನಿಯಮಗಳನ್ನು