ಸ್ವಂತ ಮನೆ ಇಲ್ಲದವರಿಗೆ ಸಿಹಿಸುದ್ದಿ ರಾಜ್ಯ ಸರ್ಕಾರದಿಂದ; ಬಡವರಿಗೆ ಸಿಗಲಿದೆ 36 ಸಾವಿರ ಮನೆ ಹಂಚಿಕೆ ಭಾಗ್ಯ..

Free Housing Scheme in Karnataka

ಬಡವರ ಕನಸಿನ ಮನೆಯನ್ನು ನನಸು ಮಾಡುವ ಧ್ಯೇಯ ಇಟ್ಟುಕೊಂಡು ಸರ್ಕಾರ ಉಚಿತವಾಗಿ ಮನೆ ನೀಡುವ ಯೋಜನೆ ರೂಪಿಸಿತ್ತು . ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಬಡ ವರ್ಗದ ಜನರಿಗೆ ನಿವೇಶನವನ್ನು ನೀಡಲು ಸರ್ಕಾರ ಈಗಾಗಲೇ ಸ್ಥಳವನ್ನು ಗುರುತಿಸಿ ಮನೆಗಳ ನಿರ್ಮಾಣ ಕಾಮಗಾರಿ ಆರಂಭ ಮಾಡಿತು. ಈಗ 36,000 ಮನೆಗಳ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿ ಇದ್ದು, ಅದನ್ನು ಇದೆ ಬರುವ ಫೆಬ್ರುವರಿ 20 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.

WhatsApp Group Join Now
Telegram Group Join Now

ನಿವೇಶನಗಳ ನಿರ್ಮಾಣ ಕಾರ್ಯವನ್ನು ಪರಿಶೀಲನೆ ಮಾಡಿದ ಸಚಿವ ಜಮೀರ್ ಅಹಮದ್ ಖಾನ್ :- ಬಡವರಿಗೆ ಒಳ್ಳೆಯ ಗುಣಮಟ್ಟದ ಮನೆಗಳ ನಿರ್ಮಾಣ ಕಾರ್ಯ ಆಗಬೇಕು ಎಂಬ ಉದ್ದೇಶದಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯು(Slum Development Board) 36 ಸಾವಿರ ಮನೆಗಳನ್ನು ನಿರ್ಮಾಣ ಮಾಡುತ್ತಿದೆ. ಈ ಮನೆಗಳು ಹೆಚ್ಚಿನ ಗುಣಮಟ್ಟದಿಂದ ಇರಬೇಕು. ಹಾಗೂ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ವಸತಿ ಸಚಿವ ಆಗಿರುವ ಜಮೀರ್ ಅಹ್ಮದ್ ಖಾನ್ (Housing Minister Jameer Ahmed Khan) ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗೂ ಸ್ಥಳಕ್ಕೆ ಭೇಟಿ ನೀಡಿ ಫೆಬ್ರವರಿ 20 ರ ಒಳಗೆ ಮನೆಗಳಿಗೆ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಒಳಚರಂಡಿ ಸಂಪರ್ಕಜಾಗುಬ್ ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಕಾರ್ಯ ಪೂರ್ಣಗೊಂಡಿರಬೇಕು ಯಾವುದೇ ಕಾರಣದಿಂದ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕಳಪೆ ಗುಣಮಟ್ಟದ ಕಾಮಗಾರಿ ಕಂಡುಬಂದರೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಉತ್ತಮ ಗುಣಮಟ್ಟದ ಜೀವನವನ್ನು ಬಡ ವರ್ಗದವರಿಗೆ ನೀಡಬೇಕು. ಎಲ್ಲ ವರ್ಗದ ಜನರಂತೆ ಅವರು ಸುಖ ಜೀವನ ನಡೆಸಬೇಕು ಎಂದು ಉಚಿತ ವಸತಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಅಂತಹ ಮನೆ ನಿರ್ಮಾಣದ ಕಾರ್ಯದಲ್ಲಿ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದಲ್ಲಿ ಅಥವಾ ಮನೆಯ ಹಸ್ತಾಂತರಿಸುವ ಸಮಯದಲ್ಲಿ ಹಾಗೂ ಬಿಲ್ ಪಾವತಿ ವೇಳೆ ಗುತ್ತಿಗೆದಾರರು ತೊಂದರೆಗಳನ್ನು ನೀಡಿದರೆ ಫಲಾನುಭವಿಗಳು ಹಿರಿಯ ಅಧಿಕಾರಿಗಳಿಗೆ ಅಥವಾ ಸಚಿವರ ಬಳಿ ದೂರು ನೀಡಬೇಕು.. ಈ ರೀತಿಯ ತಪ್ಪುಗಳು ಕಂಡುಬಂದರೆ ಅಂತಹ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗುವುದು. ಹಾಗೂ ಯಾವುದೇ ಅಧಿಕಾರಿಗಳು ನಿರ್ಲಕ್ಷ ಮಾಡಿದರೆ ಅವರನ್ನು ಆ ಕೂಡಲೇ ಅಮಾನತು ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ವಸತಿ ಸಚಿವ ಆಗಿರುವ ಜಮೀರ್ ಅಹ್ಮದ್ ಖಾನ್ ನೀಡಿದ್ದಾರೆ.

ಇದನ್ನೂ ಓದಿ: 25,000ಗಳ ರಿಯಾಯಿತಿಯನ್ನು ಹೊಂದಿರುವ Ola electric ಸ್ಕೂಟರ್ ನ ವಿವಿಧ ರೂಪಾಂತರದ ಬೆಲೆ ಎಷ್ಟು?

ಉಚಿತ ವಸತಿ ಯೋಜನೆಯ ಪಡೆಯಲು ನಿಯಮಗಳು ಏನು

  • ಅರ್ಜಿ ಸಲ್ಲಿಸಲು ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
  • ಕುಟುಂಬ ಸದಸ್ಯರ ಒಟ್ಟು ವಾರ್ಷಿಕ ಆದಾಯವು 32,000ಕ್ಕಿಂತಲೂ ಕಡಿಮೆ ಇರಬೇಕು.
  • ಕುಟುಂಬದ ಸದಸ್ಯರ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಅಥವಾ ನಿವೇಶನ ಇರಬಾರದು
  • ಮನೆ ಬಾಡಿಗೆ ನೀಡುವ ಬಗ್ಗೆ ಅಥವಾ ಮನೆ ಇಲ್ಲದಿರುವ ಬಗ್ಗೆ ಮಾಹಿತಿಯನ್ನು ನೀಡಬೇಕು.
  • ಈ ಯೋಜನೆಗೆ ಅರ್ಜಿ ಸಲ್ಲಿಸುವ ಮನೆಯ ಸದಸ್ಯರು ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿ ಹೊಂದಿರಬಾರದು.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.

ಇದನ್ನೂ ಓದಿ: ಇನ್ಮುಂದೆ ಆನ್ಲೈನ್ ನಲ್ಲಿ ಮದುವೆ ರಿಜಿಸ್ಟ್ರೇಷನ್ ಮಾಡಿಸಬಹುದು. ಹೊಸ ಸೌಲಭ್ಯವನ್ನು ಜನತೆಗೆ ನೀಡಿದ ರಾಜ್ಯ ಸರಕಾರ