Mukesh ambani: 2016 ಹಿಂದೆ ಇಂಟರ್ನೆಟ್ ತುಂಬಾ ಕಾಸ್ಟ್ಲಿ ಆಗಿತ್ತು. ಎಷ್ಟೆಂದರೆ 1GB ಇಂಟರ್ನೆಟ್ ಡಾಟಾ 250 ರೂಪಾಯಿತ್ತು ಆದರೆ ಮುಕೇಶ್ ಅಂಬಾನಿಯವರು ಜಿಯೋ ಸಿಮ್ ಲಾಂಚ್ ಮಾಡಿ ಫ್ರೀಯಾಗಿ ಇಂಟರ್ನೆಟ್ ಯನ್ನು ಕೊಟ್ಟ ಮೇಲೆ ಬೇರೆ ಟೆಲಿಕಾಂ ಕಂಪನಿಯ ಕಥೆ ಮುಗಿದು ಹೋಯಿತ್ತು.ಭಾರತದಲ್ಲಿ ಮೊದಲು 21 ಟೆಲಿಕಾಂ ಕಂಪನಿಗಳು ಇದ್ದವು. ಆದರೆ ಜಿಯೋ ಸಿಮ್ ಲಾಂಚ್ ಆದ ಮೇಲೆ ಭಾರತದಲ್ಲಿ ಕೇವಲ ಮೂರು ಟೆಲಿಕಾಂ ಕಂಪನಿಗಳು ಉಳಿದುಕೊಂಡವು. ಭಾರತದಲ್ಲಿ ಜಿಯೋ ಈಗ ನಂಬರ್ 1 ಸ್ಥಾನದಲ್ಲಿದೆ.
ಇದೇ ರೀತಿಯಲ್ಲಿ ಭಾರತದಲ್ಲಿ netflix, amazon prime video, hotstar,sonyliv ಇನ್ನೂ ಹಲವಾರು ott Platform ಗಳಿವೆ, ಇದರಲ್ಲಿ ಜಿಯೋ ಸಿನಿಮಾ ಕೂಡ ಒಂದು ಈ ಜಿಯೋ ಸಿನಿಮಾವನ್ನು ಮುಂದೆ ತರಲು ಮುಖೇಶ್ ಅಂಬಾನಿಯವರು ಒಂದು ಮಾಸ್ಟರ್ ಪ್ಲಾನ್ ಅನ್ನು ಮಾಡಿದ್ದಾರೆ.ಹೌದು ಮುಕೇಶ್ ಅಂಬಾನಿಯವರು 23,758 ಕೋಟಿ ಖರ್ಚು ಮಾಡಿ ಫ್ರೀ ಆಗಿ ಜಿಯೋ ಸಿನಿಮಾದಲ್ಲಿ ಐಪಿಎಲ್ ಅನ್ನು ಎಲ್ಲರಿಗೂ ತೋರಿಸುತ್ತಿದ್ದಾರೆ.ಈ ಫ್ರೀ ಐಪಿಎಲ್ ಹಿಂದೆ ಒಂದು ದೊಡ್ಡ ಮಾಸ್ಟರ್ ಪ್ಲಾನ್ ಇದೆ. Viacom 18 ಕಡೆಯಿಂದ ಮುಖೇಶ್ ಅಂಬಾನಿಯವರು 23,758 ಕೋಟಿ ಖರ್ಚು ಮಾಡಿ ಐಪಿಎಲ್ ರೈಟ್ಸ್ ಯನ್ನು ಖರೀದಿ ಮಾಡಿದ್ದಾರೆ.Viacom 18 ಎಂಬುವುದು Network 18 ಕಂಪನಿಯಲ್ಲಿ ಇರುವ ಒಂದು ಸಂಸ್ಥೆ. Network 18 ನಲ್ಲಿ ಒಟ್ಟು 50 ಚಾನೆಲ್ಸ್ ಇವೆ. ಅದರಲ್ಲಿ ಇದು ಕೂಡ ಒಂದು. ಇದರಲ್ಲಿ ವಿಚಿತ್ರ ಅಂದ್ರೆ Network 18 ಕಂಪನಿಯು ಮುಕೇಶ್ ಅಂಬಾನಿ ಅವರದ್ದೇ.
ಫ್ರೀಯಾಗಿ ತೋರಿಸುತ್ತಿರುವುದರಿಂದ ಮುಖೇಶ್ ಅಂಬಾನಿಯವರಿಗೆ ಆಗುತ್ತಿರುವ ಲಾಭವೇನು?
ಫ್ರೀಯಾಗಿ ಐಪಿಎಲ್ ಅನ್ನು ಜಿಯೋ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ ಇದರಿಂದ ಜಿಯೋ ಸಿನಿಮಾವನ್ನು ಹೆಚ್ಚು ಜನ ಡೌನ್ಲೋಡ್ ಮಾಡಿಕೊಳ್ಳುತ್ತಾರೆ.ಮೊದಲು 1 ಕೋಟಿ 50 ಲಕ್ಷದಷ್ಟು ಜನ ಮಾತ್ರ ಫೋನ್ನಲ್ಲಿ ಐಪಿಎಲ್ ಅನ್ನು ನೋಡುತ್ತಿದ್ದರು.ಆದರೆ ಈಗ ಫ್ರೀಯಾಗಿ ಇರುವುದರಿಂದ ನಾಲ್ಕರಿಂದ ಐದು ಕೋಟಿ ಜನ ಮೊಬೈಲ್ ನಲ್ಲಿ ಐಪಿಎಲ್ ಅನ್ನು ನೋಡುತ್ತಿದ್ದಾರೆ.ott Platform ಗಳಾದ netflix, amazon prime video, hotstar, ಗಳು 70% audience ಹೊಂದಿವೆ. ಆದರೆ ಜಿಯೋ ಸಿನಿಮವು ಕೇವಲ 7% ಆಡಿಯನ್ಸ್ ಯನ್ನು ಮಾತ್ರ ಹೊಂದಿದೆ.
ಆದರೆ ಫ್ರೀ ಐಪಿಎಲ್ ನಿಂದ ಜಿಯೋ ಸಿನಿಮಾ ಮೊದಲ ಸ್ಥಾನಕ್ಕೆ ಬರುವ ಅವಕಾಶವೂ ಇದೆ.ಮತ್ತು ಜಿಯೋ ಸಿನಿಮಾ ದಲ್ಲಿ ಐಪಿಎಲ್ ನೋಡುವಾಗ ಮಧ್ಯದಲ್ಲಿ Ads(Advertisement) ಗಳನ್ನು ಕೊಡುತ್ತಾರೆ ಇದರಿಂದ ಕೂಡ ಮುಖೇಶ್ ಅಂಬಾನಿ ಅವರಿಗೆ ದುಡ್ಡು ಸಿಗುತ್ತದೆ.ಭಾರತದಲ್ಲಿ 60% ಜನ ವಾಸಿಸುತ್ತಾರೆ ಗ್ರಾಮದ ಜನರು ಹೆಚ್ಚಾಗಿ ಕೀಪ್ಯಾಡ್ ಗಳನ್ನು ಉಪಯೋಗಿಸುತ್ತಾರೆ. ಅದರಲ್ಲೂ ಈಗ ಹೆಚ್ಚಾಗಿ ಜಿಯೋ ಕೀಪ್ಯಾಡ್ ಉಪಯೋಗಿಸುತ್ತಾರೆ.ಈ ಜಿಯೋ ಕೀಪ್ಯಾಡ್ ನಲ್ಲಿ ಜಿಯೋ ಸಿನಿಮಾ ಕೂಡ Available ಇರುತ್ತದೆ.
ಇದರಿಂದ ಗ್ರಾಮದ ಜನರು ಕೂಡ ಜಿಯೋ ಸಿನಿಮಾದ ಮೂಲಕ ಐಪಿಎಲ್ ಅನ್ನು ವೀಕ್ಷಿಸಬಹುದಾಗಿದೆ. ಇದರಿಂದ ಐಪಿಎಲ್ ನೋಡುವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತದೆ.ಮತ್ತು ಜಿಯೋ ಸಿನಿಮಾದ ಡೌನ್ಲೋಡ್ ಕೂಡ ಹೆಚ್ಚಾಗುತ್ತದೆ. ಹಾಗೂ ಜಿಯೋ ಕೀಪ್ಯಾಡ್ Sells ಕೂಡ ಹೆಚ್ಚಾಗುತ್ತದೆ.ಮುಕೇಶ್ ಅಂಬಾನಿಯವರ ಕಂಪನಿಯ ಇನ್ನು ಹೆಚ್ಚು ಪ್ರಾಡಕ್ಟ್ ಗಳಿವೆ. ಈ Product ಳನ್ನು ಜಿಯೋ ಸಿನಿಮಾದಲ್ಲಿ ತೋರಿಸುವ Advertisement ಮೂಲಕ ಹೆಚ್ಚು ಹೆಚ್ಚು ಮಾರ್ಕೆಟಿಂಗ್ ಮಾಡಬಹುದು.ಮತ್ತೊಂದು ಲಾಭವೇನೆಂದರೆ ಜಿಯೋ ರಿಚಾರ್ಜ್ ಹೌದು ನಾವು ಜಿಯೋ ಸಿನಿಮಾದಲ್ಲಿ ಐಪಿಎಲ್ ಅನ್ನು 360p quality ಯಲ್ಲಿ ನೋಡಲು 1.5 GB ಡಾಟಾ ಬೇಕಾಗುತ್ತದೆ. ಇದೇ ಐಪಿಎಲ್ ಅನ್ನು 1080p quality ಯಲ್ಲಿ ನೋಡಲು 12 GB ಡಾಟಾ ಬೇಕಾಗುತ್ತದೆ. ಅದರಲ್ಲೂ ಜಿಯೋ ಸಿಮ್ ಅನ್ನು ಬಳಸುವವರು ಹೆಚ್ಚು ರಿಚಾರ್ಜ್ ಮಾಡಿಕೊಳ್ಳುವುದರಿಂದ ಜಿಯೋಗೂ ಹೆಚ್ಚು ಲಾಭವಾಗುತ್ತದೆ.
ಇದನ್ನು ಓದಿ : ಅಳಿಯನನ್ನೇ ದೇವೇಗೌಡ್ರು ಅನುಮಾನಿಸಿದ್ರು ಯಾಕೆ!?
ಜಿಯೋ ಸಿನಿಮಾದಿಂದ ಇತರ OTT Platform ಗಳಿಗೆ ಆಗುವ ನಷ್ಟವೇನು?
ಮೊದಲೇ ಹೇಳಿದಂತೆ Ott Platform ನಲ್ಲಿ ಹೆಚ್ಚು ಆಡಿಯನ್ಸ್ ಹೊಂದಿರುವ OTT Platform ಗಳುnetflix, amazon prime video, hotstar.ಈಗ ಐಪಿಎಲ್ ಕಾರಣದಿಂದ ಹೆಚ್ಚು ಜಿಯೋ ಸಿನಿಮಾವನ್ನು ಡೌನ್ಲೋಡ್ ಮಾಡಿಕೊಂಡು ನೋಡಲು ಪ್ರಾರಂಭಿಸುತ್ತಾರೆ.ಆಗ netflix, amazon prime video ಮತ್ತು hotstar ಗಿಂತ ಹೆಚ್ಚು ಆಡಿಯನ್ಸ್ ಅನ್ನು ಜಿಯೋ ಸಿನಿಮಾ ಆಕರ್ಷಿಸುತ್ತದೆ.ಇದರಿಂದ ಜಿಯೋ ಸಿನಿಮಾ ott Platform ನಲ್ಲಿ ಮೊದಲ ಸ್ಥಾನಕ್ಕೆ ಬರಬಹುದು. ಇಲ್ಲಿ ಮುಕೇಶ್ ಅಂಬಾನಿಯವರು ಮಾಡಿರುವುದು ಒಂದು ಸಿಂಪಲ್ ಸ್ಟಾರ್ಟರ್ಜಿ.
ಹೌದು ಅದೇನೆಂದರೆ ಮೊದಲು ಎರಡು ಮೂರು ವರ್ಷ ಐಪಿಎಲ್ ಅನ್ನು ಫ್ರೀಯಾಗಿ ನೀಡಿ ನಂತರ ಜನರನ್ನು ಅದಕ್ಕೆ ಆಡಿಟ್ ಮಾಡಿ ನಂತರ ಜಿಯೋ ಸಿನಿಮಾದ Membership ಯನ್ನು ಹೆಚ್ಚಿಸುವುದು ಇದರಿಂದ ಹೆಚ್ಚು ಹಣವನ್ನು ಜಿಯೋ ಸಿನಿಮಾದಿಂದ ಸಂಪಾದಿಸಬಹುದು.ಈ ಸ್ಟಾರ್ಟರ್ಜಿಯನ್ನು ಮೊದಲು ಅವರು ಜಿಯೋ ಸಿನಿಮಾವನ್ನು ಲಾಂಚ್ ಮಾಡಿದಾಗ ಉಪಯೋಗಿಸಿದ್ದರು ಮತ್ತು ಅದರಲ್ಲಿ ಅವರು ಗೆದ್ದಿದ್ದರು ಈಗ ಅದೇ ಸ್ಟಾರ್ಟರ್ಜಿಯನ್ನು ಜಿಯೋ ಸಿನಿಮಾದಲ್ಲೂ ಕೂಡ ಉಪಯೋಗಿಸುತ್ತಿದ್ದಾರೆ ಇದರಿಂದ ಜಿಯೋ ಸಿನಿಮಾ ಎಲ್ಲಾ OTT Platform ಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.
ಇದನ್ನು ಓದಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.