ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ.

Free Sewing Machine Scheme

ಇಂದು ಮಹಿಳೆಯು ಸಹ ಸ್ವಾವಲಂಬನೆಯ ಜೀವನವನ್ನು ಬದುಕುತ್ತಾ ಇದ್ದರೆ. ಪುರುಷರಂತಂತೆಯೇ ಮಹಿಳೆಯು ಮನೆಯಿಂದ ಆಚೆಗೆ ದುಡಿದು ಮನೆಯನ್ನು ಸಾಗಿಸುತ್ತಾ ಇದ್ದಾಳೆ. ಮನೆಯಲ್ಲಿಯೇ ಕುಳಿತು ಸಹ ನೀವು ಈಗ ನಿಮ್ಮದೇ ಸ್ವಂತ ಉದ್ಯಮ ಆರಂಭ ಮಾಡಲು ಹಲವಾರು ಆಪ್ಷನ್ ಗಳು ಇವೆ. ಮನೆಯಲ್ಲಿಯೇ ಕುಳಿತು ಬಟ್ಟೆ ಸ್ಟಿಚ್ ಮಾಡಿ ಹಣ ಸಂಪಾದನೆ ಮಾಡಬೇಕು ಎಂದುಕೊಂಡ ಮಹಿಳೆಯರಿಗೆ ಕೇಂದ್ರ ಸರ್ಕಾರ ಉಚಿತ ಹೊಲಿಗೆ ಯಂತ್ರ ನೀಡುವ ವಿಚಾರ ಎಲ್ಲಾರಿಗೂ ಗೊತ್ತೇ ಇದೇ. ಲೋಕಸಭಾ ಚುನಾವಣೆಯ ಬಳಿಕ ಉಚಿತ ಹೊಲಿಗೆ ಯಂತ್ರ ನೀಡುವ ಯೋಜನೆಯನ್ನು ಮುಂದುವರೆಸುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಬಡವರಿಗೆ ಅವರ ಆರ್ಥಿಕ ಸ್ಥಿತಿ ಹೆಚ್ಚಿಸಲು ನೆರವಾಗಿರುವ ಈ ಯೋಜನೆಯನ್ನು ಈಗಲೂ ಸಹ ಸರ್ಕಾರ ನೀಡುತ್ತಿದೆ. ಹಾಗಾದರೆ ಇನ್ನೇಕೆ ತಡ ನೀವು ಸಹ ಮನೆಯಲ್ಲಿ ಹೊಲಿಗೆಯಂತ್ರ ಪಡೆಯಬೇಕು ಎಂದಾದರೆ ಅರ್ಜಿ ಸಲ್ಲಿಸಿ.

WhatsApp Group Join Now
Telegram Group Join Now

ಯಾರು ಈ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಬಹುದು :- ಕೇಂದ್ರ ಸರ್ಕಾರದ ಈ ಯೋಜನೆಯು ನಮ್ಮ ರಾಜ್ಯದಲ್ಲಿಯೂ ಚಾಲ್ತಿಯಲ್ಲಿ ಇದೆ. ರಾಜ್ಯದ ಬಡ ಕುಟುಂಬದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಲು ಮಹಿಳೆಯರ ವಯಸ್ಸು ಕನಿಷ್ಠ 20 ಹಾಗೂ ಗರಿಷ್ಠ 40 ಆಗಿರಬೇಕು. ಕಾರ್ಮಿಕ ವರ್ಗಕ್ಕೆ ಸೇರಿದ ಮಹಿಳೆಯರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಿಂದ ಉಚಿತವಾಗಿ ಹೊಲಿಗೆ ಯಂತ್ರ ಪಡೆಯದೆ ಇದ್ದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 78000 ರೂಪಾಯಿ ಸಬ್ಸಿಡಿ ಪಡೆಯಿರಿ.

ಮಹಿಳೆಯರು ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನೀವು ಹತ್ತಿರದ ಜಿಲ್ಲಾ ಉದ್ಯಮ ಕೇಂದ್ರ ಅಥವಾ ಪಂಚಾಯಿತಿಯಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು https://pmvishwakarma.gov.in/ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ನಂತರ ಉಚಿತವಾಗಿ ಹೊಲಿಗೆ ಯಂತ್ರ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಎಂಬ ಬಟನ್ ಕ್ಲಿಕ್ ಮಾಡಬೇಕು. ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ತಪ್ಪಿಲ್ಲದಂತೆ ಫಿಲ್ ಮಾಡಬೇಕು. ಹಾಗೂ ಯಾವುದಾದರೂ ದಾಖಲಾತಿ ಸ್ಕ್ಯಾನ್ ಕಾಪಿ ಕೇಳಿದರೆ ಸ್ಕ್ಯಾನ್ ಮಾಡಿ ಲಗತ್ತಿಸಿ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನು ಪೂರ್ಣವಾಗಿ ಪರಿಶೀಲನೆ ಮಾಡಿ ನಿಮಗೆ ಉಚಿತ ಎಲೆಕ್ಟಿಕ್ ಮೆಷಿನ್ ತೆಗೆದುಕೊಳ್ಳಲು ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಜಮಾ ಆಗುವ ಮೊತ್ತ ಎಷ್ಟು?: ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸದ ಬಳಿಕ ನಿಮ್ಮ ಅರ್ಜಿ ಪರಿಶೀಲನೆ ಮಾಡಿ ನಿಮ್ಮ ಖಾತೆಗೆ 15000 ರೂಪಾಯಿ ಜಮಾ ಮಾಡಲಾಗುತ್ತದೆ.

ನೀಡಬೇಕಾದ ದಾಖಲೆಗಳು ಹಾಗೂ ಮಾಹಿತಿಗಳು:-

  • ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ನಿಮ್ಮ ಪಾಸ್ ಪೋರ್ಟ್ ಸೈಜ್ ಫೋಟೋ ಜೊತೆಗೆ ಆದಾಯ ಪ್ರಮಾಣಪತ್ರ ನೀಡಬೇಕು.
  • ಕಾರ್ಮಿಕ ಕುಟುಂಬಕ್ಕೆ ಸೇರಿದವರು ಕಾರ್ಮಿಕ ಕಾರ್ಡ್ ನೀಡಬೇಕು.
  • ಜೊತೆಗೆ ನಿಮ್ಮ ಮೊಬೈಲ್ ನಂಬರ್ ನೀಡಬೇಕು.
  • ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ ಲಗತ್ತಿಸಬೇಕು.
  • ವಿಳಾಸ ಪುರಾವೆಗಾಗಿ ನಿಮ್ಮ ರೇಷನ್ ಕಾರ್ಡ್ ಅಥವಾ ಗುರುತಿನ ಚೀಟಿ ನೀಡಬೇಕು.
  • ವಿಧವೆಯರು ವಿಧವಾ ಪ್ರಮಾಣ ಪತ್ರ ನೀಡಬೇಕು.
  • ಅಂಗವಿಕಲರ ಅದರ ಪ್ರಮಾಣ ಪತ್ರ ಸಲ್ಲಿಸಬೇಕು.

ಇದನ್ನೂ ಓದಿ: ಬಿಪಿಎಲ್ ಕಾರ್ಡ್ ವಿತರಣೆ ಮುಂದೂಡಿದ ರಾಜ್ಯ ಸರ್ಕಾರ. ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಅಡ್ಡಿ.

Leave a Reply

Your email address will not be published. Required fields are marked *