ಮಹಿಳೆಯರಿಗೆ ಸಿಗಲಿದೆ ಉಚಿತ ಹೊಲಿಗೆ ಯಂತ್ರ; ಅರ್ಜಿ ಸಲ್ಲಿಸೋದು ಹೇಗೆ? ಏನೆಲ್ಲಾ ದಾಖಲೆಗಳು ಬೇಕು?

ಭಾರತ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರವು ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುತ್ತದೆ. ಈ ಯೋಜನೆಯು ಭಾರತದಾದ್ಯಂತ, ಭಾರತದ ಪ್ರತಿಯೊಂದು ರಾಜ್ಯಕ್ಕೂ ರವಾನೆಯಾಗುತ್ತದೆ. ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ 2023ರ ಅನ್ವಯ ಅರ್ಹ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು. ಇನ್ನು ಸಮಾಜದಲ್ಲಿ ಮಹಿಳೆಯರನ್ನು ಸಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಅಂತಹ ಸರಳ ಯೋಜನೆಗಳು ಶೂನ್ಯ ಬಂಡವಾಳದಲ್ಲಿ ಅಥವಾ ಕಡಿಮೆ ಬಂಡವಾಳದಲ್ಲಿ ಆರಂಭಿಸುವಂಥದ್ದಾಗಿದೆ. ಇದರಿಂದ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಅಂಥಾ ಯೋಜನೆಯಲ್ಲೊಂದು ಉಚಿತ ಹೊಲಿಗೆ ಯಂತ್ರ ಯೋಜನೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರವು ಸಹ ಈ ಯೋಜನೆಯನ್ನು ಮಹಿಳೆಯರಿಗೆ ನಡೆಸುತ್ತಿದೆ.

WhatsApp Group Join Now
Telegram Group Join Now

ಉಚಿತ ಹೊಲಿಗೆ ಯಂತ್ರದ ಯೋಜನೆಯ ಪ್ರಕಾರ, ಕರ್ನಾಟಕ ಸರ್ಕಾರವು ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುತ್ತದೆ. ಈ ಯೋಜನೆಯ ಮುಖ್ಯ ಗುರಿ ಮಹಿಳೆಯರನ್ನು ಸ್ವತಂತ್ರ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ. ಪ್ರತಿಯೊಬ್ಬರ ಕುಟುಂಬದಲ್ಲೂ ಆದಾಯವನ್ನು ಗಳಿಸುವ ಒಬ್ಬ ವ್ಯಕ್ತಿ ಇರುತ್ತಾರೆ. ಆದ್ರೆ ಕೋವಿಡ್‌ನ ನಂತರ ಪರಿಸ್ಥಿತಿ ಬದಲಾಗಿದೆ. ಹೀಗಿರುವಾಗ ಸಾಧ್ಯವಾದಷ್ಟೂ ಕುಟುಂಬದ ಎಲ್ಲಾ ಸದಸ್ಯರು ಏನಾದರೂ ಕೆಲಸ ಮಾಡುವುದು ಮತ್ತು ಪರಸ್ಪರ ಸಹಾಯ ಮಾಡುವುದು ಬಹಳ ಮುಖ್ಯ. ಹೀಗಿರುವಾಗ ಮನೆಯಲ್ಲಿರುವ ಮಹಿಳೆಯರಿಗೆ ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ ನೆರವಿಗೆ ಬರುತ್ತದೆ. ಹೀಗಾಗಿ ಈ ಯೋಜನೆಗೆ ಈಗ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು ಉದ್ಯಮ ಮಾಡುವ ಮಹಿಳೆಯರಿಗೆ ಮತ್ತು ಗ್ರಾಮೀಣ ಕುಶಲಕರ್ಮಿ, ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರವು ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನಿಸಿದೆ. 2023 – 24ನೇ ಸಾಲಿನಲ್ಲಿ ರಾಟಿ ಉದ್ಯಮ ಮಾಡುವ ಮಹಿಳೆಯರಿಗೆ ಮತ್ತು ಗ್ರಾಮೀಣ ಕುಶಲಕರ್ಮಿ, ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸಲು ಸರ್ಕಾರವು ಉಚಿತ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನಿಸಿದೆ. ಈ ಒಂದು ಯೋಜನೆಯಿಂದ, ಹೊಲಿಗೆ ಕೌಶಲ್ಯ ಹೊಂದಿದ್ದು ಆರ್ಥಿಕ ಸಮಸ್ಯೆಯಿಂದ ಹೊಲಿಗೆ ಯಂತ್ರ ಖರೀದಿಸಲು ಆಗದಿರುವವರಿಗೆ ಇದು ಉತ್ತಮ ಯೋಜನೆಯಾಗಿದ್ದು, ಇದರ ಸದುಪಯೋಗವನ್ನು ಪಡೆಸಿಕೊಳ್ಳಬಹುದಾಗಿದೆ. ಇನ್ನು ಮಹಿಳೆಯರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು, ಅರ್ಜಿದಾರರು ಕರ್ನಾಟಕದ ಖಾಯಂ ಪ್ರಜೆಯಾಗಿರಬೇಕು. ಜೊತೆ ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು, ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು.

ಇನ್ನು ಮಹಿಳೆಯರು ದುಡಿಯುವ ವರ್ಗದಲ್ಲಿ ಕೆಲಸ ಮಾಡಲು ಸಮರ್ಥರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿಯಲ್ಲಿ ಮಹಿಳೆಯರ ಕನಿಷ್ಠ ವಯಸ್ಸು 20 ಇರಬೇಕು. ಇನ್ನು ಗರಿಷ್ಠ ವಯಸ್ಸು 49ರೊಳಗಿರಬೇಕು. ಅಲ್ದೇ ಅಭ್ಯರ್ಥಿಯು ಟೈಲರಿಂಗ್‌ನಲ್ಲಿ ಪ್ರತಿಭೆಯನ್ನ ಹೊಂದಿರಬೇಕು. ಹೀಗಾಗಿ ಈ ಅರ್ಹತಾ ಮಾನದಂಡಗಳ ಅಡಿಯಲ್ಲಿ ಬರುವ ಮಹಿಳೆಯರು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನ ಸಿಗಲಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು?

ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಪಡೆಯಲು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲಾತಿಗಳು ಅವಶ್ಯಕವಾಗಿವೆ.

  • ಪಾಸ್ ಪೋರ್ಟ್ ಸೈಜ್ ಫೋಟೋ.
  • ಜಾತಿ ಪ್ರಮಾಣ ಪತ್ರ.
  • ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ.
  • ರೇಷನ್ ಕಾರ್ಡ್.
  • ಕುಶಲಕರ್ಮಿ ಗುರುತಿನ ಚೀಟಿ.
  • ಇನ್ನು ಅರ್ಜಿ ಸಲ್ಲಿಸಲು ಬಯಸುವವರು ಅಂಗವಿಕಲರಾಗಿದ್ದರೆ, ಅಂಗವೈಕಲ್ಯವನ್ನ ಸಾಬೀತುಪಡಿಸುವ ಪ್ರಮಾಣಪತ್ರ.
  • ಮೊಬೈಲ್ ಸಂಖ್ಯೆ.

ಮೇಲಿನ ದಾಖಲೆಗಳನ್ನು ನೀವು ಹೊಂದಿದ್ದರೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಹೌದು ಯೋಜನೆಯ ಅಧಿಕೃತ ವೆಬ್‌ಸೈಟ್‌ National Portal of India ಗೆ ಭೇಟಿ ನೀಡಿ. https://www.india.gov.in/ ಪುಟವನ್ನ ತೆರೆಯಿರಿ. ಈಗ ಉಚಿತ ಹೊಲಿಗೆ ಯಂತ್ರ ಯೋಜನೆ ಕರ್ನಾಟಕದ ಲಿಂಕ್ ಆನ್ ಲೈನ್ ಅರ್ಜಿ ನಮೂನೆ ಇರುತ್ತದೆ. ಆ ಲಿಂಕ್ ಕ್ಲಿಕ್ ಮಾಡಿ. ಅದರ ನಂತರ ಅರ್ಜಿ ನಮೂನೆ ಪರದೆಯ ಮೇಲೆ ತೆರೆಯುತ್ತದೆ. ಅರ್ಜಿ ನಮೂನೆಯ ಕೆಳಗಿರುವ ಡೌನ್ ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮತ್ತು ಎಲ್ಲಾ ಫಾರ್ಮ್‌ಗಳನ್ನು ಭರ್ತಿ ಮಾಡಿ. ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯಂತಹ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಇಲ್ಲಿ ನಮೂದಿಸಬೇಕು.

ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿಬೇಕಾಗುತ್ತದೆ ಇಷ್ಟದ್ದಲ್ಲಿ ಯಶಶ್ವಿಯಾಗಿ ನೀವು ಅರ್ಜಿ ಸಲ್ಲಿಸಿದಂತಾಗುತ್ತದೆ. ಇನ್ನು ಸದ್ಯಕ್ಕೆ ಕೆಲವು ಜಿಲ್ಲೆಗಳಿಂದ ಮಾತ್ರ ಅರ್ಜಿ ಆಹ್ವಾನಿಸಿದ್ದು, ಚಿಕ್ಕಮಗಳೂರು, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಅರ್ಹ ಫಲಾನುಭವಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಂತ ಹೇಳಲಾಗಿದೆ.

ಇದನ್ನೂ ಓದಿ: ಎಲ್. ಪಿ. ಜಿ. ಸಿಲಿಂಡರ್ ಉಚಿತವಾಗಿ ನೀಡಲಿದ ಕೇಂದ್ರ; ಯಾರಿಗೆಲ್ಲ ಉಚಿತ ಸಿಲಿಂಡರ್ ಸಿಗುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

ಇದನ್ನೂ ಓದಿ: ಕೇವಲ 27 ನಿಮಿಷದ ಚಾರ್ಜ್ ಗೆ 720 ಮೈಲೇಜ್ ಕೊಡುವ ಭರ್ಜರಿ ಬೇಡಿಕೆಯೊಂದಿಗೆ ಹೊಸ ಕಿಯಾ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಮಿಂಚಲಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram