ಸರ್ಕಾರಿ ಇಲಾಖೆಗಳಲ್ಲಿ ಎಲ್ಲ ದತ್ತಾಂಶಗಳು ಈಗ ಆನ್ಲೈನ್ ನಲ್ಲಿ ಲಭ್ಯ ಇರುತ್ತದೆ. ಹಿಂದೆ ಪಟ್ಟಿಯಲ್ಲಿ ದತ್ತಾಂಶಗಳನ್ನು ಶೇಖರಿಸಿ ಇಡುತ್ತಿದ್ದರು. ಆದರೆ ಈಗ ಎಲ್ಲವನ್ನು ಇಂಟರ್ನೆಟ್ ಗೆ ಹಾಕಬೇಕು. ಅಂಗನವಾಡಿ ಶಿಕ್ಷರಿಗೆ ಮಕ್ಕಳಿಗೆ ಪಾಠ ಹೇಳುವುದರ ಜೊತೆಗೆ ಅವರ ವ್ಯಾಪ್ತಿಗೆ ಬರುವ ಊರುಗಳಲ್ಲಿ ಇರುವ ಗರ್ಭಿಣಿಯರ ಸಂಖ್ಯೆ ಹುಟ್ಟಿದ ಮಗುವಿನ ವಿವರ, ಅವರಿಗೆ ಪ್ರತಿ ತಿಂಗಳು ಪೌಷ್ಠಿಕ ಆಹಾರ ನೀಡುವುದು ಹಾಗೂ ಗರ್ಭಿಣಿ ಮತ್ತು ಬಾಣಂತಿಯ ಆರೋಗ್ಯದ ಬಗ್ಗೆ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಬೇಕು. ಹಿಂದೆ ಇದನ್ನು ಪ್ರತಿ ತಿಂಗಳು ನೋಟ್ಬುಕ್ ನಲ್ಲಿ ಸರಿಯಾದ ಕ್ರಮದಲ್ಲಿ ಬರೆದು ಇಡುತ್ತಿದ್ದರು. ಆದರೆ ಈಗ ಬರೆಯುವುದರ ಜೊತೆ ಜೊತೆಗೆ ಎಲ್ಲಾ ವಿವರಗಳನ್ನು ಅಪ್ಲಿಕೇಶನ್ ಮೂಲಕ ಇಲಾಖೆಗೆ ಮಾಹಿತಿ ನೀಡಬೇಕು. ಆದರಿಂದ ಎಲ್ಲಾ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಮೇಲ್ವಿಚಾರಕರಿಗೆ ಸ್ಮಾರ್ಟ್ ಫೋನ್ ಅಗತ್ಯ ಇದೆ. ಆದರೆ ಎಲ್ಲರಿಗೂ ಕೊಂಡುಕೊಳ್ಳುವ ಶಕ್ತಿ ಇರುವುದಿಲ್ಲ. ಆದರಿಂದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಬಂದ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಚಿವ ಸಂಪುಟದಲ್ಲಿ ಅನುಮೋದನೆ ಆದ ಮೊತ್ತ ಏಷ್ಟು?: ಪೋಷಣೆ ಅಭಿಯಾನದ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಮೇಲ್ವಿಚಾರಕರಿಗೆ 75,938 ಸ್ಮಾರ್ಟ್ ಫೋನ್ ಗಳು ಸರ್ಕಾರ ಅನುಮೋದನೆ ಮಾಡಿದೆ. ಇಷ್ಟು ಸ್ಮಾರ್ಟ್ಫೋನ್ ಗಳ ಖರೀದಿಗೆ 89.69 ಕೋಟಿ ರೂಪಾಯಿ ಬಿಡುಗಡೆಗೆ ಒಪ್ಪಿಗೆ ಸಿಕ್ಕಿದೆ. Gem ಪೋರ್ಟಲ್ ಮೂಲಕ ಟೆಂಡರ್ ಕರೆದು ಸ್ಮಾರ್ಟ್ಫೋನ್ ಖರೀದಿಸಲು ನಿರ್ಧರಿಸಿದೆ. ಒಂದು ಸ್ಮಾರ್ಟ್ ಫೋನ್ ಗೆ 11,800 ರೂಪಾಯಿ ಬೇಕಾಗುತ್ತದೆ. 2023-2024 ನೇ ಸಾಲಿನಲ್ಲಿ 89.69 ಕೋಟಿ ರೂಪಾಯಿ ಗೆ ಅನುಮೋದನೆ ಸಿಕ್ಕಿದೆ.
ಪೋಷ್ ಟ್ರ್ಯಾಕ್ ಅಳವಡಿಸಲು ಸ್ಮಾರ್ಟ್ ಫೋನ್: ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸಿಗಬೇಕು ಹಾಗೂ ವಿಕಲ ಚೇತನರಿಗೆ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸರ್ಕಾರದ ಮುಂದಿನ ಮೂರು ವರುಷಗಳ ಗುರಿ ಆಗಿದೆ. ಗರ್ಭಿಣಿಯರಿಗೆ ಮತ್ತು ಮಗುವಿಗೆ ಸರಿಯಾದ ಸಮಯದಲ್ಲಿ ಬೇಕಾಗುವ ಪೌಷ್ಟಿಕ ಆಹಾರ ಸಿಗಬೇಕು. ಹಾಗೂ ಆರು ವರುಷದ ತನಕ ಮಕ್ಕಳಿಗೆ ಪ್ರತಿ ತಿಂಗಳು ಅಕ್ಕಿ ಬೇಳೆ ಸಿರಿಧಾನ್ಯಗಳನ್ನು ಸರ್ಕಾರ ನೀಡುತ್ತಿದೆ. ಹಾಗೂ ಮಕ್ಕಳ ತೂಕ ಮತ್ತು ಆರೋಗ್ಯದ ಬಗ್ಗೆ ಪೋಷ್ ಟ್ರ್ಯಾಕ್ ಅಳವಡಿಸಲು ಸ್ಮಾರ್ಟ್ ಫೋನ್ ನೀಡುತ್ತದೆ ಸರ್ಕಾರ.
ಇದನ್ನೂ ಓದಿ: ಪಿಎಫ್ ಖಾತೆಗೆ ಹೆಚ್ಚಿನ ಹಣ ಹೂಡಿಕೆ ಮಾಡುವ ವಿಧಾನ ಮತ್ತು ವಿಪಿಎಫ್ ಖಾತೆಯ ಬಗ್ಗೆ ಮಾಹಿತಿ
ಕರ್ನಾಟಕದ 6 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕೊನೆಯ ದಿನಾಂಕ ಫೆಬ್ರುವರಿ 15.
ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ಬೆಳಗಾವಿ, ಬೀದರ್, ಹಾವೇರಿ, ತುಮಕೂರು ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಹತ್ತನೇ ತರಗತಿ, ಪಿಯುಸಿ, ಅಥವಾ ಡಿಪ್ಲೊಮಾ ಓದಿದವರು ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ವಯ್ಯಸಿನ ಮಿತಿ 18 ರಿಂದ 35 ವರ್ಷ. ಜಾಬ್ ಗೆ ಅಪ್ಲೈ ಮಾಡಲು ಯಾವುದೇ ಫೀಸ್ ಕಟ್ಟುವ ಅವಶ್ಯಕತೆ ಇಲ್ಲ. ವೆಬ್ಸೈಟ್ ಗೆ ಹೋಗಿ ಜಿಲ್ಲೆಯ ಹೆಸರನ್ನು ಆಯ್ಕೆ ಮಾಡಿ ಶಿಶು ಅಭಿವೃದ್ಧಿ ಯೋಜನೆ option ಕ್ಲಿಕ್ ಮಾಡಿ, ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆಯ ಮೇಲೆ ಕ್ಲಿಕ್ ಮಾಡಿ ನೀವು ಉದ್ಯೋಗಕ್ಕೆ ಅರ್ಜಿ ಹಾಕುವ ಜಿಲ್ಲೆ ಮತ್ತು ಅಂಗನವಾಡಿ ಕೇಂದ್ರದ ಹೆಸರನ್ನು ಸೆಲೆಕ್ಟ್ ಮಾಡಿ ನಿಮ್ಮ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಫೆಬ್ರುವರಿ 15, 2024 ಕೊನೆಯ ದಿನವಾಗಿದೆ.
ಇದನ್ನೂ ಓದಿ: ಐದು ಬಗೆಯ ನಗದು ವ್ಯವಹಾರಗಳಿಗೆ ಆದಾಯ ತೆರಿಗೆ ಇಂದ ಬರುತ್ತದೆ ನೋಟಿಸ್