ಟಿಕೆಟ್ ತಗೊಳ್ಳಲ್ಲ ನಾನು, ಕೆಳಗಡೆ ಇಳಿಸಿತ್ತೀರಾ? ಇಳಿಸಿ! ಕಂಡಕ್ಟರ್ ಜೊತೆ ವೃದ್ದೆಯ ವಾಗ್ವಾದ, ಹೈರಾಣಾದ ಕಂಡಕ್ಟರ್!

Free Travel For Women: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿ, ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿದ್ದು, ಮೇ 20ರಂದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ(Free Travel For Women) ಭಾರೀ ಸದ್ದು ಮಾಡುತ್ತಿದೆ. ಹೌದು ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯ ಕಾಂಗ್ರೆಸ್, ರಾಜ್ಯದ ಮಹಿಳೆಯರು ಬಿಎಂಟಿಸಿಯ ನಾನ್ ಎಸಿ ಬಸ್‌ಗಳು ಮತ್ತು ಯಾವುದೇ ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ರಾಜ್ಯದ ಯಾವುದೇ ಸ್ಥಳದಲ್ಲಿ ಉಚಿತ ಬಸ್ ಪ್ರಯಾಣ ಪಡೆಯಬಹುದು ಎಂದು ಘೋಷಿಸಿದ್ದು, ಈ ಯೋಜನೆ ಅನುಷ್ಠಾನದ ಬಗ್ಗೆ ಹಲವು ಪ್ರಶ್ನೆಗಳು ಮೂಡತೊಡಗಿವೆ. ಇದರ ಬೆನ್ನಲೇ ಇದೀಗ ಕೆಲವೊಂದು ಕಡೆ ಮಹಿಳೆಯರು ಯೋಜನೆ ಅಧಿಕೃತ ಅನುಷ್ಠಾನಕ್ಕೂ ಮುನ್ನವೇ ತಾವು ಬಸ್ ಟಿಕೆಟ್ ತಗೊಳೋದಿಲ್ಲ ಎಲ್ಲ ಉಚಿತ ಅಂತ ಹೇಳಿದ್ದಾರಲ್ಲ ನಾವು ತಗೋಳಲ್ಲ ಅಂದ್ರೆ ತಗೊಳದೇ ಇಲ್ಲ ಅದೇನ್ ಮಾಡ್ಕೋತಿರೋ ಮಾಡ್ಕೊಳ್ಳಿ ಅಂತ ಪಾಪ ಬಡಪಾಯಿ ಕಂಡಕ್ಟರ್ ಗೆ ಪೀಕಲಾಟ ಶುರುವಾಗುವಂತೆ ಮಾಡಿದ್ದಾರೆ.

WhatsApp Group Join Now
Telegram Group Join Now

ಹೌದು ಸರ್ಕಾರ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದ್ದು, ರೂಪುರೇಷೆಗಳ ಸಿದ್ದಪಡಿಸಲು ಆಯಾ ಇಲಾಖೆಗಳಿಗೆ ಆದೇಶವನ್ನ ಹೊರಡಿಸಿದೆ. ಅದರಂತೆ ಬಿಎಂಟಿಸಿಯಲ್ಲಿ ಪ್ರತೀನಿತ್ಯ ಸುಮಾರು 35 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಅಂದಾಜಿನ ಪ್ರಕಾರ, ದೈನಂದಿನ ಪ್ರಯಾಣಿಕರಲ್ಲಿ ಸುಮಾರು ಶೇ.40ರಷ್ಟು ಪ್ರಯಾಣಿಕರು ಮಹಿಳೆಯರೇ ಇರುತ್ತಾರೆ. ಹೀಗಾಗಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಪ್ರತಿ ವರ್ಷ ಸರ್ಕಾರಕ್ಕೆ ಸರಿಸುಮಾರು 1,000 ಕೋಟಿ ರೂಪಾಯಿಗಳಷ್ಟು ವೆಚ್ಚವಾಗಬಹುದು, ಅಲ್ಲದೆ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವೇ ಅಥವಾ ಷರತ್ತುಗಳಿವೆಯೇ? ಉಚಿತ ಪ್ರಯಾಣವನ್ನು ಕೆಲವು ಕಿಲೋಮೀಟರ್‌ಗಳಿಗೆ ನಿರ್ಬಂಧಿಸಲಾಗುತ್ತದೆಯೇ ಅಥವಾ ಮಹಿಳೆಯರು ರಾಜ್ಯದಾದ್ಯಂತ ಮುಕ್ತವಾಗಿ ಪ್ರಯಾಣಿಸಬಹುದೇ? ಈ ರೀತಿ ಸಾಕಷ್ಟು ಪ್ರಶ್ನೆಗಳಿದ್ದು, ಉಚಿತ ಬಸ್ ಪ್ರಯಾಣದ ಅರ್ಹತೆಯ ಬಗ್ಗೆ ರಾಜ್ಯ ಸರ್ಕಾರ ಇನ್ನೂ ಯಾವುದೇ ಸ್ಪಷ್ಟತೆ ನೀಡಿಲ್ಲ. ಹೀಗಿರುವಾಗ ಕೆಲವೊಂದು ಭಾಗಗಳಲ್ಲಿ ಈಗಾಗಲೇ ಮಹಿಳೆಯರು ಉಚಿತ ಪ್ರಯಾಣ ಮಾಡೋಕೆ ಶುರು ಮಾಡಿಬಿಟ್ಟಿದ್ದಾರೆ.

ಇದನ್ನೂ ಓದಿ: ಕೂಲಿ ಮಾಡ್ತಿದ್ದ ಮಹಿಳೆ ಇಂದು ಬಿಜೆಪಿ ಶಾಸಕ. ಓಡಾಡಲು ಕಾರಿಲ್ಲ, ಇರೋದಕ್ಕೆ ಐಷಾರಾಮಿ ಮನೆಯಿಲ್ಲ

ಸರ್ಕಾರ ನಮಗೆ ಆದೇಶ ಕೊಟ್ಟಿಲ್ಲ ಅಂದ್ರು ಕೇಳ್ತಿಲ್ಲ ಜನ!ಗೌರಂಟಿಗಳಿಗೆ ಫಿಕ್ಸ್ ಆಗಿದ್ಯಾ ಕರುನಾಡು

ಹೌದು ಈಗಾಗ್ಲೇ ರಾಜ್ಯದ ಕೆಲ ಭಾಗಗಳಲ್ಲಿ ಸರ್ಕಾರಿ ಬಸ್ ನಲ್ಲಿ ಸಂಚಾರಿಸುತ್ತಿರುವ ಮಹಿಳೆಯರು ಇದೀಗ ಟಿಕೆಟ್ ತಗೊಳೋದಿಲ್ಲ ಅಂತ ಪಟ್ಟು ಹಿಡಿದುಕುಳಿತ್ತಿದ್ದು ಇದೀಗ ಬಸ್ ಕಂಡಕ್ಟರ್ ಗಳು ಪಜೀತಿಗೆ ಸಿಲುಕಿದ್ದಾರೆ. ಇದೀಗ ವೃದ್ದೆಯೊಬ್ಬರು ಕಂಡಕ್ಟರ್ ಜೊತೆಗೆ ವಾಗವಾದಕ್ಕಿಳಿದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. ಹೌದು ಈ ಹಿಂದೆ ಕರೆಂಟ್ ಬಿಲ್ ಕಟ್ಟಲ್ಲ ಅಂತ ಹೇಳುತ್ತಾ ಕೆಲ ಮಹಿಳೆಯರು ಸೌಂಡ್ ಮಾಡಿದ್ರು. ಇದೀಗ 5ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಬಸ್ ಪ್ರಯಾಣದ(Free Travel For Women) ಯೋಜನೆಯು ಅಷ್ಟೆ ಸುದ್ದಿಯಾಗಿ ಸದ್ದು ಮಾಡ್ತಿದೆ. ರಾಜ್ಯದ್ಯಂತ ಸಾಕಷ್ಟು ಕಡೆ ಸರ್ಕಾರಿ ಬಸ್ ಗಳಲ್ಲಿ ಟಿಕೆಟ್ ತೆಗೆದುಕೊಳ್ಳದೆ ಮತ್ತೆ ಸದ್ದು ಮಾಡ್ತಿದ್ದಾರೆ.

ಹೌದು ಈಗ ವೈರಲ್ ಆಗಿರುವ ವಿಡಿಯೋ ಉತ್ತರ ಕರ್ನಾಟಕ ಭಾಗದ್ದು ಅನ್ನಿಸುತ್ತದೆ. ಈ ವಿಡಿಯೋದಲ್ಲಿ ಮಹಿಳೆ ಟಿಕೆಟ್ ತಗೊಳೋದಿಲ್ಲ ಅಂತ ಹೇಳೋದ್ರಲ್ಲಿ ಮೂಲಕ ವಿಡಿಯೋ ಆರಂಭ ಆಗುತ್ತೆ ಆಗ ಕಂಡಕ್ಟರ್ ಯಾಕ್ ತಗೋಳಲ್ಲ ಟಿಕೆಟ್ ತಗೋಬೇಕಲ್ಲ ಅಂದ್ರೆ, ಫ್ರೀ ಅಂತ ಹೇಳಿದಾರಲ್ಲ ಅಂತಾರೆ ಅದಿಕ್ಕೆ ಯಾರ್ ಹೇಳಿದ್ದಾರೆ ಅಂತ ಕಂಡಕ್ಟರ್ ಪ್ರಶ್ನೆ ಮಾಡ್ದಾಗ ಆ ವೃದ್ದೆ ಸಿದ್ದರಾಮಯ್ಯ ಹೇಳಿದಾನಲ್ಲ ಎಲ್ಲ ಫ್ರೀ ಫ್ರೀ ಅಂತ ಗ್ಯಾರಂಟಿ ಕಾರ್ಡ್ ನನ್ನತ್ರ ಇದೆ ಅದಿಕ್ಕೆ ನಾನು ತಗೋಳಲ್ಲ ಅಂತಾರೆ. ಆಗ ಕಂಡಕ್ಟರ್ ಪಾಪ ಮನವೊಲಿಸೋ ಪ್ರಯತ್ನ ಮಾಡ್ತಾರೆ ಆದ್ರೆ ಆ ವೃದ್ದೆ ಒಪ್ಪೋದೆ ಇಲ್ಲ. ಇನ್ನು ನಮಗೆ ಆದೇಶ ಬಂದಿಲ್ಲ ಅಂದ್ರು ಅದು ನಮಗೆ ಗೊತ್ತಿಲ್ಲ ರೀ ನಾನು ಟಿಕೆಟ್ ತಗೋಳಲ್ಲ ಅಂತಾರೆ ವೃದ್ದೆ. ಇಲ್ಲ ತಾಯಿ ಅವ್ರು ನಮ್ ಇಲಾಖೆಯವರಿಗೆ ಆದೇಶ ಕೊಡ್ತಾರೆ, ಆಮೇಲೆ ನಮ್ಮ ಮೇಲಿನವರು ನಮಗೆ ಹೇಳ್ತಾರೆ ಆಮೇಲೆ ಫ್ರೀ ನಾ ಇಲ್ವಾ ಅಂತ ಗೊತ್ತಾಗುತ್ತೆ ಅಲ್ಲಿವರೆಗೂ ಟಿಕೆಟ್ ತಗೋಬೇಕು ಈಗ ಸರ್ಕಾರ ರಚನೆ ಆಗಿದೆ ಇನ್ನು ಆದೇಶ ಬಂದಿಲ್ಲ ಅಂದ್ರು ಕೂಡ ವೃದ್ದೆ ಹಠ ಬಿಡದೆ ವಾದ ಮುಂದುವರೆಸುತ್ತಾರೆ. ಆಗ ಕಳೆಗಡೆ ಇಳಿಸಲ್ಲ ಅಂತ ಕೇಳುದ್ರೆ ಅಯ್ತು ಇಳಿಸು ಮಾರಾಯ ಇಳ್ಕೊಂಡು ಹೋಗ್ತೀನಿ ಅಂತ ಮೊಂಡ ವಾದವನ್ನೇ ಮಾಡ ತೊಡಗುತ್ತಾರೆ. ಕೊನೆಗೆ ಕಂಡಕ್ಟರ್ ಟಿಕೆಟ್ ಕೊಡ್ದೆ ಸುಮ್ಮನ್ನಾಗುವಂತಾಗಿದೆ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿಗೂ ಮೊದಲೇ ನೀಡಿದ್ದ ಗ್ಯಾರಂಟಿಗಳಲ್ಲಿ 200ಯುನಿಟ್ ವಿದ್ಯುತ್ ಹಾಗೂ ಉಚಿತ ಬಸ್ ಪ್ರಯಾಣ ಸಾಕಷ್ಟು ಸೌಂಡ್ ಮಾಡ್ತಿರೋದಂತೂ ಸುಳ್ಳಲ್ಲ. ಈ 2ಯೋಜನೆಗಳಿಗೆ ಮತ್ತಷ್ಟು ಷರತ್ತುಗಳು ಅನ್ವಯವಾದ್ರೂ ಕೂಡ ನಮ್ ಜನ ಕೇಳೋ ಸ್ಥಿತಿಯಲ್ಲಂತು ಇಲ್ಲ. ಈ ಯೋಜನೆಯ ಉದ್ದೇಶ ಮತ್ತು ಅದ್ರಿಂದ ಸಿಗೋ ಲಾಭಗಳು ಎಲ್ಲಿಗೆ ಹೋಗುತ್ತೋ ಗೊತ್ತಿಲ್ಲ ಆದ್ರೆ ನಮ್ಮ ಜನ ಮಾತ್ರ ಫ್ರೀ ಯಾಗಿ ಸಿಗುತ್ತೆ ಅನ್ನೋದಂತೂ ಕರ್ನಾಟಕದದ್ಯಂತ ಎಲ್ಲರ ಮನಸ್ಸನ್ನ ಮುಟ್ಟಿದೆ. ಇದರ ಅನುಷ್ಠಾನದ ಸವಾಲು ಈಗ ನೂತನ ಕಾಂಗ್ರೆಸ್ ಸರ್ಕಾರದ ಮುಂದಿದೆ.

ಇದನ್ನೂ ಓದಿ: ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ಹವಾ! ಕನ್ನಡದ ಕಂಪು ಎಲ್ಲೆಲ್ಲೂ ಹರಡಿಸುತ್ತಿರುವ ಯೂಟ್ಯೂಬರ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram