ಇನ್ನೂ ಮುಂದೆ ಮಾರುಕಟ್ಟೆಯಲ್ಲಿ ರಾರಾಜಿಸಲಿದೆ ಗಂಧದಗುಡಿ ಅಗರಬತ್ತಿ; ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್..

Gandhadagudi Agarbatti

ಗಂಧದಗುಡಿ ಎನ್ನುವ ಹೆಸರೇ ಕನ್ನಡಿಗರಿಗೆ ಒಂದು ರೀತಿಯ ಭಾವನೆ. ಡಾಕ್ಟರ್ ರಾಜಕುಮಾರ್ ಅವರ ನಟನೆಯ ಅಧ್ಬುತ ಚಿತ್ರ ಗಂಧದಗುಡಿ . ನಂತರ ಶಿವರಾಜಕುಮಾರ್ ಅವರು ಸಹ ಇದೆ ಹೆಸರಿನ ಚಿತ್ರ ಮಾಡಿದರು. ಇದರ ಜೊತೆಗೆ ಅಪ್ಪು ಅವರ ಕೊನೆಯ ಚಿತ್ರ ಸಹ ಗಂಧದಗುಡಿ. ಹೆಸರಿಗೆ ತಕ್ಕಂತೆ ಪರಿಸರದ ಬಗ್ಗೆ ಇರುವ ಸುಂದರ ಚಿತ್ರ. ಪುನೀತ್ ಅವರ ನೆನಪಿಗೆ ಅವರ ಅಭಿಮಾನಿಗಳ ಮನೆಯಲ್ಲಿ ಇನ್ನು ಮುಂದೆ ಗಂಧದಗುಡಿ ಅಗರಬತ್ತಿ ಮನೆಯಲ್ಲಿ ಪರಿಮಳದ ನೀಡುತ್ತದೆ.

WhatsApp Group Join Now
Telegram Group Join Now

PRK ಸಂಸ್ಥೆಯಿಂದ ಅಗರಬತ್ತಿ ಬಿಡುಗಡೆ.:- ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಪುನೀತ್ ರಾಜಕುಮಾರ್ ಅವರು ಆರಂಭಿಸಿದ ಸಂಸ್ಥೆ PRK. ಈಗಾಗಲೇ ಹಲವಾರು ನಟ ನಟಿಯರು ಹಾಗೂ ಸಹ ಕಲಾವಿದರು ಈ ಸಂಸ್ಥೆಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಹಲವಾರು ಜನರಿಗೆ ಸಹಾಯ ಹಸ್ತ ಚಾಚುವಲ್ಲಿ PRK ಮನೆ ಮಾತಾಗಿದೆ. ಈಗ ಇದರ ಜೊತೆಗೆ ಗಂಧದ ಗುಡಿ ಅಗರಬಟ್ಟಿಯನ್ನು ಸಹ PRK ಸಂಸ್ಥೆಯ ಒಡತಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡಿದ್ದಾರೆ.

ಪುನೀತ್ ರಾಜಕುಮಾರ್ ಅವರ ನಿರ್ಧಾರವನ್ನು ಈಗ ಅವರ ಪತ್ನಿ ನೆರವೇರಿಸಿದ್ದಾರೆ :- ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗಲೇ ಅರಗಬತ್ತಿ ಉದ್ದಿಮೆಯನ್ನು ಆರಂಭ ಮಾಡುವ ಬಗ್ಗೆ ಚರ್ಚೆ ಆಗಿತ್ತು. ಆದರೆ ನಂತರ ನಡೆದ ಕಹಿ ಘಟನೆಯಿಂದ ಉದ್ಯಮ ಆರಂಭ ಆಗಿರಲಿಲ್ಲ. ಆದರೆ ಈಗ ಪುನೀತ್ ಅವರ ಆಸೆಯನ್ನು ಅಶ್ವಿನಿ ಅವರು ನೆರವೇರಿಸಲು ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ರಾಜೇಶ್ ಎನ್ನುವವರ ಸಲಹೆಯನ್ನು ಒಪ್ಪಿದ ಅಶ್ವಿನಿ ಪುನೀತ್ :- ರಾಜೇಶ್ ಎನ್ನುವರು ಈಗ ಮತ್ತೆ ಗಂಧದಗುಡಿ ಅಗರಬತ್ತಿಯ ಬಗ್ಗೆ ಪ್ರಸ್ತಾಪ ಮಾಡಿದ್ದರಿಂದ ಪುನೀತ್ ಅವರು ಈ ಉದ್ಯಮಕ್ಕೆ ಒಪ್ಪಿದ್ದ ಕಾರಣದಿಂದ ಅಶ್ವಿನಿ ಅವರು ಉದ್ಯಮವನ್ನು ಆರಂಭಿಸಿದ್ದಾರೆ.

ರಾಜಕುಮಾರ್ ಅವರ ಹುಟ್ಟಿದ ಹಬ್ಬದ ಶುಭದಿನದಂದು ಟ್ವೀಟ್ ಮೂಲಕ ಉದ್ಯಮದ ಬಗ್ಗೆ ತಿಳಿಸಿದ ಅಶ್ವಿನಿ ಪುನೀತ್ :- ಏಪ್ರಿಲ್ 24 2024 ರಂದು ಡಾ.ರಾಜಕುಮಾರ್ ಅವರ 95ನೇ ಜನ್ಮ ದಿನಾಚರಣೆ ಅಂಗವಾಗಿ ಅಭಿಮಾನಿಗಳಿದೆ ‘ಅಪ್ಪು’ ಹೆಸರಿನಲ್ಲಿ ಹೊಸ ಉದ್ಯಮ ಆರಂಭಿಸಿರುವುದಾಗಿ ತಿಳಿಸಿದರು. ಡಾ.ರಾಜಕುಮಾರ್ ಅವರ ಜನ್ಮ ದಿನ ಮತ್ತು ‘ಗಂಧದಗುಡಿ’ ಸುವರ್ಣ ಮಹೋತ್ಸವ ಸವಿ ನೆನಪಿಗಾಗಿ‘ಅಪ್ಪು ಗಂಧದಗುಡಿ ಅಗರಬತ್ತಿ’ ಉದ್ಯಮವನ್ನು ಆರಂಭಿಸಿದ್ದಾರೆ . ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಶ್ವಿನಿ ಪುನೀತ್ ಅವರು ಹೇಳಿಕೊಂಡಿದ್ದಾರೆ.

ಅಗರಬತ್ತಿ ಕವರ್ ಮೇಲೆ ಇದೆ ಪುನೀತ್ ಅವರ ಫೋಟೋ:-

ಪುನೀತ್ ರಾಜಕುಮಾರ್ ಅವರ ಕನಸಿನ ಕೂಸು ಆಗಿದ್ದರಿಂದ ಅಗರಬತ್ತಿ ಕವರ್ ಮೇಲೆ ಪುನೀತ್ ಅವರು ಭಾರತೀಯ ಉಡುಗೆಯಲ್ಲಿ ಇರುವ ಫೋಟೋ ಹಾಗೂ ಪರಿಸರಕ್ಕೆ ಮಾರಕ ಆಗದೆ ಇರುವ ಅಗರಬತ್ತಿ ಎಂಬುದನ್ನು ಸಾರುವ ಮರ ಗಿಡಗಳ ಫೋಟೋ ಹಾಗೂ appus ಗಂಧದಗುಡಿ ಎಂದು ಬರೆದಿದೆ.

ಹಲವಾರು ಸಿನಿಮಾಗಳನ್ನು ನೀಡಿದ PRK :- ಈಗಾಗಲೇ ಹಲವಾರು ಸಿನಿಮಾಗಳನ್ನು PRK ನೀಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಫಿಲ್ಮ್ ಜೊತೆಗೆ ಈಗಿನ ಟ್ರೆಂಡ್ ಪ್ರಕಾರ OTT ಸಿನಿಮಾಗಳನ್ನು ಸಹ PRK ನೀಡಿದೆ. ಇತ್ತೀಚಿಗಷ್ಟೇ ‘ಆಚಾರ್ & ಕೋ’ ಸಿನಿಮಾವನ್ನು ರಿಲೀಸ್ ಮಾಡಿದ್ರು. ಇನ್ನಷ್ಟು ಒಳ್ಳೊಳ್ಳೆ ಕಥೆಯ ಆಧಾರಿತ ಚಿತ್ರಗಳನ್ನು PRK ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ ಯಾವ ಯೋಜನೆಯಲ್ಲಿ ಮಹಿಳೆಯರು ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಬಡ್ಡಿ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.